ಅವ್ವನ ಹನುಮ

ಅಂದು
ಆಂಜನೇಯ
ದಕ್ಷಿಣಾಭಿಮುಖಿಯಾದರೂ
ಕರುಣಾಮಯಿಯಾಗಿದ್ದ
ನನ್ನ ತಾಯಿಯಂತಹ
ಮುಸಲ್ಮಾನರಿಗೂ ವರ
ನೀಡುವಷ್ಟು,

ಅರ್ಧ ನಿಮೀಲಿತ
ಕಣ್ಣುಗಳಲ್ಲಿ ಕರುಣೆ
ತುಂಬಿಕೊಳ್ಳುವಷ್ಟು
ಗುಡಿಯ ಒಳ- ಹೊರಗೆ
ಸುಣ್ಣದ ಬಿಳಿ ಛಾಯೆ
ಮನಸುಗಳ ಶುಭ್ರಗೊಳಿಸುವಷ್ಟು
ದೇವರೆಂದರೆ ಹಾಗೆಯೇ ಅಲ್ಲವೇ?

ಇಂದು
ನಮಾಜ್ ಮಾಡದ
ಅಮ್ಮ
ಹನುಮ ತನ್ನ ಮೇಲೆ
ಮುನಿಸಿದ್ದಾನೆನ್ನುವಳು
ಊರೂರುಗಳ
ಕಾಯ್ವ
ನನ್ನ ಹನುಮ
ಹನುಮಪ್ಪನಾಗಬೇಕೆನ್ನುತ್ತಿದ್ದಾಳೆ