ತಾಯಿಗೆ ಮಾಬಲ ತಂದೆಗೆ ಈಶ್ವರ: ಹಿರಿಯ ಜೀವದ ಬಾಲ್ಯದ ಪುಟಗಳು
ನೀರ್ಕಜೆ ಮಹಾಬಲೇಶ್ವರ ಭಟ್ಟರು ನಿನ್ನೆಯ ಇರುಳು ತಮ್ಮ ತೊಂಬತ್ತೊಂದನೆಯ ಪ್ರಾಯದಲ್ಲಿ ತೀರಿಹೋದರು. ಇಳಿವಯಸಿನಲ್ಲೂ ಓಶೋ, ಹಿಮಾಲಯ, ಕಾಂಗ್ರೆಸ್, ಕನ್ನಡ ಸಾಹಿತ್ಯ ಎಂದೆಲ್ಲ ಚುರುಕಾಗಿ ಓಡಾಡಿಕೊಂಡಿದ್ದ ಅವರ ಆತ್ಮಕಥೆ ‘ಅವತಾರ’ದ ಕೆಲವು ಪುಟಗಳು ಇಲ್ಲಿವೆ
ಎಪ್ಪತ್ತೊಂಬತ್ತರ ಚೊಕ್ಕಾಡಿಯವರ ಜೊತೆ ಮೂವರು ಕಿರಿಯರ ವಾಟ್ಸಾಪ್ ಮಾತುಕತೆ
”ಬರೆವಣಿಗೆ ಒಂದು ರೀತಿಯಲ್ಲಿ ನನಗೆ ಅಡಗುದಾಣ.ನನಗೆ ನನ್ನ ಬರೆವಣಿಗೆಯ ಬಗ್ಗೆ ಯಾವ ಭ್ರಮೆಯೂ ಇಲ್ಲ. ಹಾಗಾಗಿಯೇ ನನಗೆ ಬರೆದಷ್ಟರ ಬಗ್ಗೆ ತೃಪ್ತಿಯಿದೆ. ಇನ್ನಷ್ಟು ಚೆನ್ನಾಗಿ ಬರೆಯಬೇಕಿತ್ತು ಎನ್ನುವ ಅತೃಪ್ತಿಯೂ ಇದೆ. ಹಾಗೆಂದು ನನ್ನ ಸ್ವಾಭಿಮಾನವನ್ನು ನಾನು ಎಂದೂ ಬಿಟ್ಟು ಕೊಟ್ಟಿಲ್ಲ. “
ಹೀಗಿದ್ರು ನಮ್ ಕೈಲಾಸಂ:ಇ.ಆರ್.ರಾಮಚಂದ್ರನ್ ಬರೆವ ನೆನಪುಚಿತ್ರ
ಮಹಾರಾಜಕುಮಾರ ಎಡ್ವರ್ಡ ಇವರ ಜೊತೆಯಲ್ಲಿ ಫುಟ್ ಬಾಲ್ ಆಡುತ್ತಿದ್ದ. ಪ್ರೇಮಿಗಾಗಿ ಸಿಂಹಾಸನವನ್ನೇ ತೊರೆದ ವ್ಯಕ್ತಿ ಇತಿಹಾಸದಲ್ಲೇ ಮೊದಲ ವ್ಯಕ್ತಿ ಆಗಿರಬೇಕು ಎಡ್ವರ್ಡ! ಕೈಲಾಸಂ ಗೋಲಿಯಾಗಿದ್ದರು.
ದೇವರಂತಹ ಮನುಷ್ಯ ವೈಕಂ ಮಹಮದ್ ಬಷೀರ್
ಬಶೀರ್ ಹೇಳಿದರು. ‘ಇಲ್ಲಿನ ಒಬ್ಬ ಕುಖ್ಯಾತ ಕಳ್ಳ ಇಲ್ಲಿಗೆ ಆಗಾಗ ಬರುತ್ತಾನೆ. ನನ್ನನ್ನು ಗುರು ಎನ್ನುತ್ತಾನೆ. ಕಾಲಿಗೆ ಬಿದ್ದು ಒಂದು ರೂಪಾಯಿ ಕೇಳುತ್ತಾನೆ. ಕೊಟ್ಟ ನಂತರ ಹೋಗುತ್ತಾನೆ. ಒಬ್ಬ ಶಾಲೆಗೆ ಹೋಗುವ ಹುಡುಗ ಅರೆ ಹುಚ್ಚ. ಗಾಂಜಾ ಸೇವಿಸುತ್ತಾನೆ’
ಅಭಿನೇತ್ರಿ ಶಾಂತಾ ಹುಬಳೀಕರ ಅವರ ಮರಾಠಿ ಆತ್ಮಚರಿತ್ರೆಯ ಕೆಲವು ಹಾಳೆಗಳು
ನಮ್ಮ ಸಂರಕ್ಷಣೆಯ ಬಗ್ಗೆ ಬಹಳ ಕಾಳಜಿ ಇದ್ದರೂ ಅನ್ನ ನೀರಿಲ್ಲದೆ ಮೊಮ್ಮಕ್ಕಳು ಸಾಯುವುದಕ್ಕಿಂತ ಜೋಪಾನ ಮಾಡಲು ಯಾರಿಗಾದರೂ ಕೊಟ್ಟರೆ ಅವುಗಳನ್ನು ನೋಡಲು ಮುಂದೆ ಸಾಧ್ಯವಾದೀತೆಂಬ ವಿಚಾರ ನಮ್ಮಜ್ಜಿಯ ಮನದಲ್ಲಿ ಸುಳಿದುಹೋಯಿತು
ತನ್ನಂತಿರುವವರ ಒಳಿತಿಗೇ ಬದುಕಿದ್ದ ವಿಶಿಷ್ಟ ಚೇತನ ಜಾವೇದ್ ಅಬಿದಿ
”ಅಂಗವೈಕಲ್ಯವು ಬರೇ ಆರೋಗ್ಯ ಸಮಸ್ಯೆಯಲ್ಲ, ಅದು ಅಭಿವೃದ್ಧಿ ಮತ್ತು ಮಾನವ ಹಕ್ಕುಗಳ ಸಮಸ್ಯೆಯೂ ಹೌದೆಂದು ವಾದಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದವರು. ತಾನು ನಂಬಿದ ತಾನು ಆಡಿದ ತಾನು ಯೋಚಿಸಿದ ಧೋರಣೆಗಳನ್ನು ಮಾರ್ಗಗಳನ್ನು ಸ್ವತಃ ಆಚರಿಸಿ ಅನುಷ್ಠಾನಿಸಿ ತೋರಿಸಿದವರು.
ಚೀರದೇ, ಅಲಂಕಾರ ತೋರದೇ ಬರೆಯುತ್ತಿದ್ದ ಗಿರಡ್ಡಿ
ಶುಕ್ರವಾರ ಸಂಜೆ ಧಾರವಾಡದಲ್ಲಿ ನಿಧನರಾದ ಕನ್ನಡದ ಹಿರಿಯ ವಿಮರ್ಶಕ, ಕಥೆಗಾರ, ಅಧ್ಯಾಪಕ ಡಾ. ಗಿರಡ್ಡಿ ಗೋವಿಂದರಾಜ ಅವರ ಕುರಿತು ಕನ್ನಡದ ಇನ್ನೊಬ್ಬ ವಿಮರ್ಶಕ ಡಾ. ಎಚ್.ಎಸ್.ರಾಘವೇಂದ್ರರಾವ್ ಅವರು ಬರೆದಿದ್ದ ಸಾಲುಗಳು.
ಹರಿದ ಅಂಗಿಯ ಮುದುಕ ತೋಡಿದ ಏಳು ಪುಣ್ಯದ ಕೆರೆಗಳು
ಹತ್ತಿರ ಹತ್ತಿರ ಎಂಬತ್ತು ವರ್ಷ ದಾಟಿರುವ ಹಳ್ಳಿಗಾಡಿನ ಈ ಬಡ ವೃದ್ಧ ಕಳೆದ ನಲವತ್ತು ವರ್ಷಗಳಿಂದ ಆಡು ಕುರಿ ಸಾಕಿ, ಅವುಗಳನ್ನು ಮಾರಿದ ಕಾಸಿಗೆ ಇನ್ನೊಂದಿಷ್ಟು ಕಾಸು ಕೂಡಿಸಿ, ಅದರ ಮೇಲೂ ಸಾಲ ಸೋಲ ಮಾಡಿ ತನ್ನ ಗ್ರಾಮದ ಹಿಂದಿರುವ ಕುಂದೂರು ಬೆಟ್ಟದ ಪಾದದಲ್ಲಿ ಏಳು ಕೆರೆಗಳನ್ನು ತೋಡಿದ್ದಾರೆ.
ಹಾರಿಹೋದ ಹಿಂದೂಸ್ತಾನದ ಹಕ್ಕಿ
ಅಮೆರಿಕಾದ ‘ಕನ್ನಡ ಸಾಹಿತ್ಯ ರಂಗ’ದ ಸ್ಥಾಪಕ ಸದಸ್ಯರಲ್ಲೊಬ್ಬರೂ, ಅದರ ಅಧ್ಯಕ್ಷರೂ ಆಗಿದ್ದ ಕನ್ನಡದ ಹಿರಿಯ ಬರಹಗಾರ ಶ್ರೀ ಎಚ್.ವೈ. ರಾಜಗೋಪಾಲ್ ಅವರು ಇಂದು ಬೆಳಗ್ಗಿನ ಹೊತ್ತು ಅಮೇರಿಕಾದ ಪೆನ್ಸಿಲ್ವೇನಿಯದಲ್ಲಿ ತೀರಿ ಹೋಗಿದ್ದಾರೆ.ಅವರ ಅಗಲಿಕೆಯ ಈ ಹೊತ್ತಲ್ಲಿ ಕೆಂಡಸಂಪಿಗೆಗಾಗಿ ಅವರು ಅನುವಾದಿಸಿದ್ದ ರೂಮಿಯ ಕಥೆಯೊಂದನ್ನು ಮತ್ತೆ ಪ್ರಕಟಿಸುತ್ತಿದ್ದೇವೆ.









