ಮಹಾರಾಜಾ ಕಾಲೇಜಿನ ಮಧುರ ನೆನಪು ……: ಮೂರ್ತಿ ದೇರಾಜೆ ಬರಹ
ಮೈಸೂರಿಗೆ ಬಂದು ಮಹಾರಾಜಾ ಕಾಲೇಜು ನೋಡಿ ನಾವು ಮಾತ್ರ ಅಲ್ಲ…. ನನ್ನ ಅಪ್ಪನೂ ಕಂಗಾಲು. ಕಾಲೇಜು ಕಛೇರಿಯಲ್ಲಿ, “ಮಾರ್ಕ್ಸ್ ಎಷ್ಟಿದೆ…? ಬೇಕಾದ ಸಬ್ಜೆಕ್ಟ್ ಅಷ್ಟು ಸುಲಭದಲ್ಲೆಲ್ಲಾ ಸಿಗಲ್ಲ….” ಅಂತೆಲ್ಲ ಸ್ವಲ್ಪ ಹೆಚ್ಚೇ ಹೆದರಿಸಿದರೂ…… ಸೀಟಂತೂ ಸಿಕ್ಕಿತು. ನಮ್ಮ ಪೂರ್ವಜನ್ಮದ ಪುಣ್ಯ ಅಂತ ಭಾವಿಸಿದ್ದೆವು…… ಆಗ ನಮಗೇನು ಗೊತ್ತು….!! ವರ್ಷ ಕಳೆಯುವಾಗ ಗೊತ್ತಾಯ್ತು, ಇಲ್ಲಿ ಮಾರ್ಕ್ಸ್ ವಿಷಯ ಬಿಡಿ…. ! ೪-೫ ಭಾರಿ ಫೈಲ್ ಆದವರಿಗೂ ಎಡ್ಮಿಶನ್ ಕಷ್ಟವಿಲ್ಲ ಅಂತ.
ಮೈಸೂರಿನ ಮಹಾರಾಜಾ ಕಾಲೇಜು ದಿನಗಳ ಕುರಿತು ಮೂರ್ತಿ ದೇರಾಜೆ ಬರಹ ನಿಮ್ಮ ಓದಿಗೆ
ಕಾಡು ಮತ್ತು ಕಾಡಬೆಳುದಿಂಗಳು… ಶ್ರೀಧರ ಪತ್ತಾರ ಬರಹ
ನೀರವ ರಾತ್ರಿಗಳಲ್ಲಿ ನನ್ನಲ್ಲಿ ಆಗಾಗ ಒಂಟಿತನ ಹೆಡೆಯಾಡಿಸುವುದೂ ಉಂಟು. ಮಾತುಗಳು ಜಾರಿ ನನ್ನನ್ನು ಮೌನ ಕವಚಿಕೊಂಡಾಗ ಸಹಜವಾಗಿಯೇ ಮುಗಿಲು ದಿಟ್ಟಿಸುತ್ತೇನೆ. ಅಂತೆಯೇ ಈಗೀಗ ಚಂದ್ರನನ್ನು ದಿಟ್ಟಿಸುತ್ತಾ ಚುಕ್ಕಿಗಳೆಣಿಸುವ ಅಭ್ಯಾಸ ಶುರುವಾಗಿದೆ ನನಗೆ. ಆಗ ಚಂದಿರನ ಮೊಗದಲ್ಲಿ ಪ್ರತಿಫಲಿಸುವ ಅವಳಂತದೇ ನಗು ಕಾಣುತ್ತದೆ. ನಗೆಯುಕ್ಕಿಸುತ್ತಿರುವುದು ಚಂದ್ರನೋ ಇಲ್ಲ ಅವಳೋ… ಹೀಗೂ ಒಮ್ಮೊಮ್ಮೆ ಗೊಂದಲವಾಗುವುದು.
ಶ್ರೀಧರ ಪತ್ತಾರ ಬರಹ ನಿಮ್ಮ ಓದಿಗೆ
ಕಾವ್ಯಕುತೂಹಲ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರಹ
ಕೆಲವು ಸಾಲುಗಳು ಹುಟ್ಟಿಸುವ ಬೆರಗು ಮಾತ್ರ ಸಾಕು ಒಂದೀಡಿ ಕವಿತೆಯನ್ನು ಓದಲು. ಬಿಡಿಬಿಡಿಯಾಗಿ ಎದೆಹೊಕ್ಕುವ ಸಾಲುಗಳು ಮತ್ತೆಂದೋ ಯಾವುದೋ ಅನುಭವದಲ್ಲಿ ಯಾರದ್ದೋ ಸಾನಿಧ್ಯದಲ್ಲಿ ಪೂರ್ಣಗೊಳ್ಳುತ್ತವೆ. ಅವಳಲ್ಲಿ ಬಿಡಿಬಿಡಿಯಾಗಿದ್ದ ಹೂಗಳು ಅವನು ಸಿಕ್ಕಿದಾಗ ಮಾಲೆಯಾಗುವ ಸೋಜಿಗದಂತೆ! ಬಿಡಿಸಲಾಗದ ಅಚ್ಚರಿ ಇದು. ಅಚ್ಚರಿಯೇ ಪ್ರೇಮ. ಅದೇ ಕವಿತೆ.
ಕಾವ್ಯದ ಕುರಿತು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರಹ ನಿಮ್ಮ ಓದಿಗೆ
ಎಂದೊ ಯಾರಿಗೊ ತೋರಿದ ಮಮತೆ..ವಾತ್ಸಲ್ಯ..: ಗೊರೂರು ಶಿವೇಶ್ ಬರಹ
ಎಲ್ಲವನ್ನು ತೊರೆದು ಬಂದ ವ್ಯಕ್ತಿಗೆ ಹುಟ್ಟಿದ ಊರನ್ನು, ಶಿಕ್ಷಕನೊಬ್ಬನಿಗೆ ಬಿಟ್ಟು ಬಂದ ಶಾಲೆಯನ್ನು ಮರು ಭೇಟಿಯಾಗುವ ಕ್ಷಣಗಳು ಬಹಳಷ್ಟು ಸಂದರ್ಭದಲ್ಲಿ ಖುಷಿ ನೀಡುವ ಸಂಗತಿಯಾಗಿರುವುದಿಲ್ಲ. ಮೇಯಳಗನ್ ಚಿತ್ರದ ನಾಯಕನಿಗೂ ಅದೇ ಹೆದರಿಕೆ. ಬದಲಾದ ಸಂದರ್ಭ ಬದಲಾದ ಪರಿಸ್ಥಿತಿ ಅಲ್ಲಿನ ಜನ ಗುರುತಿಸುತ್ತಾರೋ ಇಲ್ಲವೋ? ಎಂಬುದು ನನ್ನನ್ನು ಕಾಡಿದ್ದಿದೆ. ಅಲ್ಲಿನ ಘಟನೆಗಳು, ಊರಿನ, ಗೆಳೆಯರ ಸ್ಥಿತಿ ಮನಸ್ಸಿಗೆ ಅಹಿತವನ್ನು ಇಲ್ಲವೇ ವಿಷಾದದ ಪರಿಸ್ಥಿತಿಗೆ ದೂಡಿದರೆ ಹೀಗೆ ಏನೇನೋ ಯೋಚನೆ ಬರುವುದುಂಟು.
ತಮಿಳಿನ “ಮೇಯಳಗನ್” ಚಲನಚಿತ್ರದ ಕುರಿತು ಗೊರೂರು ಶಿವೇಶ್ ಬರಹ
ಮುಂದಿನ ಭಾನುವಾರ: ಡಾ ಖಂಡಿಗೆ ಮಹಾಲಿಂಗ ಭಟ್ ಅನುವಾದಿಸಿದ ಆರ್ ಕೆ ನಾರಾಯಣ್ ಬರಹ
ಅವನಿಗೆ ಬೇಕೆಂದಿದ್ದ ಒಂದು ಮೊಳೆ, ತಂತಿ ಅಥವಾ ಮುಂದೆ ಉಪಯೋಗಿಸಲು ಇರಿಸಿದ್ದ ಸರಿಗೆ ಪ್ರಾಮುಖ್ಯವಾದ ಚಿಲಕ ಅಥವಾ ಇನ್ನೇನಾದರೂ ಸದಾ ಸಿಗದಿರುವುದು ಮತ್ತು ಇದು ಅವನಿಗೆ ಸಿಟ್ಟು ಬರಿಸುತ್ತದೆ. ಅವನಿಗೆ ಹಲವಾರು ಜನ ಮಕ್ಕಳಿದ್ದಾರೆ ಮತ್ತು ನಾಶಗಳು ಅವರ ಅನುಪಾತಕ್ಕೆ (ಪ್ರಮಾಣಕ್ಕೆ) ಸರಿಯಾಗಿ ಇವೆ. ಇದು ಈ ಸಿಟ್ಟುಗೊಳ್ಳುವ ಮನುಷ್ಯನಿಗೆ ಸುಲಭದಲ್ಲಿ ನಿಭಾಯಿಸಲು ಕಷ್ಟವಾಗುತ್ತದೆ.
“ಭಾನುವಾರ”ದ ಕುರಿತು ಆರ್ ಕೆ ನಾರಾಯಣ್ ಬರಹವನ್ನು ಡಾ ಖಂಡಿಗೆ ಮಹಾಲಿಂಗ ಭಟ್ ಕನ್ನಡಕ್ಕೆ ಅನುವಾದಿಸಿದ್ದು, ನಿಮ್ಮ ಓದಿಗೆ ಇಲ್ಲಿದೆ
‘ನಾವು ಪಟಾಕಿ ಅಂಗಡಿ ಇಟ್ಟಿದ್ದು’: ಗೊರೂರು ಶಿವೇಶ್ ಬರಹ
ಸಂಜೆಯಾಗುವಷ್ಟರಲ್ಲಿ ಆಟಂಬಾಂಬ್, ಆನೆ ಪಟಾಕಿ, ಲಕ್ಷ್ಮಿಪಟಾಕಿಯಂಥ ಭಯಂಕರ ಸದ್ದುಮಾಡುವ ಪಟಾಕಿಗಳನ್ನುಳಿದು ಉಳಿದ ಪಟಾಕಿಗಳೆಲ್ಲವೂ ಖಾಲಿಯಾಗಿದ್ದವು. ಸಂಜೆ, ರಾತ್ರಿಗೆ ತಿರುಗುತ್ತಿದ್ದಂತೆ ತಮ್ಮಲ್ಲಿದ್ದ ಪಟಾಕಿ ಹೊಡೆದು ತೃಪ್ತರಾಗದ ಜನ ಹೆಚ್ಚಿನ ಪಟಾಕಿಕೊಳ್ಳಲು ಬಂದು ಇಲ್ಲದೆ ನಿರಾಶರಾಗಿ ಮರಳಿದರು. ಬೆಳಿಗ್ಗೆ ತಾನೇ ‘ಲಾಸಾದ್ರೆ ಏನು ಗತಿ?’ ಎಂದು ಚಿಂತಿರಾಗಿದ್ದ ಅಣ್ಣ ಈಗ ‘ಇನ್ನಷ್ಟು ಪಟಾಕಿ ಇದ್ದಿದ್ರೆ ಒಳ್ಳೆ ವ್ಯಾಪಾರ ಆಗ್ತಿತ್ತು’ ಅನ್ನತೊಡಗಿದರು. ಆಶ್ಚರ್ಯಚಕಿತರಾಗಿ ಅವರ ಮುಖ ನೋಡುತ್ತಿದ್ದಂತೆ ‘ವ್ಯಾಪಾರ ಅಂದ್ರೆ ಹೀಗೆ, ಪ್ರತಿ ದಿನ ಲಾಭ ಸಿಗೋಲ್ಲ, ಯಾವೊತ್ತೊ ಒಂದು ದಿನ ಹೀಗೆ ಕಚ್ಗೊಳ್ಳುತ್ತೆ’ ಎಂದು ವ್ಯಾಪಾರದ ಮರ್ಮ ತೆರೆದಿಟ್ಟರು.
ಗೊರೂರು ಶಿವೇಶ್ ಬರಹ ನಿಮ್ಮ ಓದಿಗೆ
ಹಬ್ಬದ ಮುಖ ತೊಳೆದು ಬಿಂದಿ ಇಡುವ ‘ಅವಳು’: ಸದಾಶಿವ ಸೊರಟೂರು ಬರಹ
ನಾನಿನ್ನು ಎದ್ದು ಆಕಳಿಸುತ್ತಾ ಕೂತಿರುವಾಗ ಈ ಹೆಣ್ಣು ಮಕ್ಕಳಿಗೆ ಏನಾಗಿದೆ? ಈ ಬದುಕು ಎಂದೂ ಕೂಡ ನಮಗೆ ಸುಸ್ತನ್ನೇ ದಯಪಾಲಿಸಿಯೇ ಇಲ್ಲವೇನೊ ಎನ್ನುವಂತೆ ಯಾಕಿಷ್ಟು ಕಳೆಕಳೆಯಾಗಿದ್ದಾರೆ. ಒಬ್ಬೊಬ್ಬರು ಒಂದೊಂದು ಹಬ್ಬದಂತೆ ಓಡಾಡುತ್ತಿದ್ದಾರೆ. ಈ ಹಬ್ಬದ ದಿನ ಒಬ್ಬೊಬ್ಬ ಹೆಣ್ಣು ಮಗಳು ನಡೆದಾಡುವ ಒಂದೊಂದು ತೇರೇನೊ ಅನಿಸುತ್ತದೆ. ಈ ಹಬ್ಬವನ್ನು, ಹಬ್ಬದ ಸಂಭ್ರಮವನ್ನು ಹೆಣ್ಣು ಮಕ್ಕಳು ವಶಪಡಿಸಿಕೊಂಡರಾ?
ಏನೆಲ್ಲದರ ನಡುವೆ ಬದುಕನ್ನೂ, ಆಗಾಗ ಬರುವ ಹಬ್ಬಗಳನ್ನೂ ಸಮನಾಗಿ ತೂಗಿಸಿಕೊಂಡು ಹೋಗುವ ಹೆಣ್ಣುಮಕ್ಕಳ ಕುರಿತು ಸದಾಶಿವ ಸೊರಟೂರು ಬರಹ ನಿಮ್ಮ ಓದಿಗೆ
ಕನ್ನಡಿಗರ ಕೈಯಲ್ಲಿರಲಿ ಒಂದು ಕನ್ನಡ ಪುಸ್ತಕ….
ಕನ್ನಡ ಭಾಷೆಯನ್ನು ಬಳಸುವುದೂ ಹಾಗೂ ಕನ್ನಡ ಕೃತಿಗಳನ್ನು ಓದುವುದೂ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ, ಕನ್ನಡ ಭಾಷೆಗೆ ಹಾಗೂ ಅದರ ಓದಿಗೆ ಕನ್ನಡಿಗರನ್ನು ಸೆಳೆಯಲು “ವೀರಲೋಕ” ಪ್ರಕಾಶನದ ಸಂಸ್ಥೆ ಹಲವು ವಿಶಿಷ್ಠ ಪ್ರಯತ್ನಗಳನ್ನು ಮಾಡುತ್ತಿದ್ದು, ಅದರ ಭಾಗವಾಗಿ ನವೆಂಬರ್ ೧೫,೧೬, ಮತ್ತು ೧೭ರಂದು ಬೆಂಗಳೂರಿನಲ್ಲಿ “ಪುಸ್ತಕ ಸಂತೆ”ಯನ್ನು ಆಯೋಜಿಸಿದೆ. ಇದರ ಕುರಿತು ವೀರಲೋಕದ ಪ್ರಕಾಶಕರಾದ ವೀರಕಪುತ್ರ ಶ್ರೀನಿವಾಸ್ ಅವರೊಂದಿಗೆ ರೂಪಶ್ರೀ ಕಲ್ಲಿಗನೂರ್ ನಡೆಸಿದ ಸಂದರ್ಶನ ನಿಮ್ಮ ಓದಿಗೆ…
ಹಾಸ್ಯದ ಹೊಂಬಿಸಿಲು ಹಳಿಸುತ್ತಿದೆಯೇ?: ಡಾ. ರಾಜೇಂದ್ರಕುಮಾರ್ ಮುದ್ನಾಳ್ ಬರಹ
ಮಾತು ‘ಮನೆ’ ಕಟ್ಟಬೇಕು, ಮಾತು ಮೌನವಾಗಬೇಕು. ಮಾತು ‘ಮಮತೆ’ಯಾಗಬೇಕು ಮಾತು ‘ಹಾಸ್ಯದ ಮನ್ವಂತರ ‘ಸೃಷ್ಟಿಸಬೇಕು. ಡಿವಿಜಿ ಹೇಳುವಂತೆ ‘ನಗು ನಗುವ ಕಣ್ಣುಗಳಿಗೆ ಹೊಗೆಯ ನೂದಲು ಬೇಡ ‘ಎಂಬ ಮಾತು ನೆನಪಿಸಿಕೊಳ್ಳಬೇಕು. ಹಾಸ್ಯ ‘ವಿಕಾಸ’ ವಾಗಬೇಕೇ ವಿನಹ ಕಸದ ಬುಟ್ಟಿಯಾಗಬಾರದಲ್ಲವೇ? ನಗುವಿನ ಕನಸುಗಳ ಮನೆಯಲ್ಲಿ ಕಲ್ಲು ಬೀಳದೆ ಕಲ್ಲು ಕೂಡ ಕರಗುವಂತ ನಗುವನ್ನು ಸೃಷ್ಟಿಸುವಂತಹ ನಗೆ ಹಬ್ಬ ನಮ್ಮದಾಗಬೇಕು.
ಹಾಸ್ಯ ಕಾರ್ಯಕ್ರಮಗಳ ಗುಣಮಟ್ಟದ ಕುರಿತು ಡಾ. ರಾಜೇಂದ್ರಕುಮಾರ್ ಮುದ್ನಾಳ್ ಬರಹ










