ಕಪ್ಪುಹಲಗೆಯ ಮೇಲಿನ ಬಣ್ಣದ ಅಕ್ಷರಗಳು…: ಆಶಾ ಜಗದೀಶ್ ಪ್ರಬಂಧ
ಒಮ್ಮೆ ಸೀರಿಯಸ್ಸಾಗಿ ನೋಟ್ಸ್ ಕರೆಕ್ಷನ್ ಮಾಡುತ್ತಾ ಕುಳಿತಿದ್ದೆ. ಆಗ ಇದ್ದಕ್ಕಿದ್ದಂತೆ ಜಗದೀಶ, ಜೋರು ಧ್ವನಿಯಲ್ಲಿ ಟೇಬಲ್ ಬಡಿಯುತ್ತಾ “ಚೆಲ್ಲಿದರೂ ಮಲ್ಲಿಗೆಯಾ… ಬಾಣಾಸೂರೇರೀ ಮ್ಯಾಲೆ…” ಅಂತ ಹಾಡತೊಡಗಿದ. ತಲೆ ಎತ್ತಿ ನೋಡಿದರೆ, ಅವ ಈ ಲೋಕದಲ್ಲಂತು ಇರಲಿಲ್ಲ. ಇದ್ದಕ್ಕಿದ್ದಂತೆ ಅವ ಪೆಚ್ಚಾದ. ಮಕ್ಕಳೆಲ್ಲ ಗೊಳ್ ಎಂದು ನಗತೊಡಗಿದರು. ಬಹುಶಃ ಬೇರೆಯ ಹೊತ್ತಾಗಿದ್ದರೆ ನಾನೂ ಅವನೊಂದಿಗೆ ಸೇರಿ ಯುಗಳ ಗೀತೆ ಹಾಡುತ್ತಿದ್ದೆನೇನೋ.
ಶಾಲಾ ಮಕ್ಕಳ ಜೊತೆಗಿನ ಅನುಭವದ ಕುರಿತು ಆಶಾ ಜಗದೀಶ್ ಪ್ರಬಂಧ ನಿಮ್ಮ ಓದಿಗೆ
ಜೀವಕ್ಕೊಂದು ಜೀವ…. : ರೂಪಶ್ರೀ ಕಲ್ಲಿಗನೂರ್ ಬರಹ
ಈಗ ಆಂಟಿ ಮಿಕ್ಕಿಯನ್ನು ವಾಕಿಂಗಿಗೆ ಕರೆದುಕೊಂಡು ಹೋಗುವುದಿಲ್ಲ. ಅಂಕಲ್ ಸಮಯ ಮಾಡಿಕೊಂಡು ಬೇಗ ಬಂದು ಆ ಕೆಲಸವನ್ನು ತಾವೇ ಮಾಡುತ್ತಾರೆ. ಆದರೆ ಚಂದೂ ಆಂಟಿಯ ಪ್ರೀತಿಯಿಂದ ಮಾತ್ರ ಮಿಕ್ಕಿಗೆ ರಿಯಾಯಿತಿ ದೊರೆತಿಲ್ಲ… ಯಾಕೆಂದರೆ ನಾಯಿಗಾಗಲೀ, ಮನುಷ್ಯನಿಗಾಗಲಿ ಯಾವತ್ತೂ ಯಾರದ್ದಾದರೂ ಸಾಂಗತ್ಯ ಬೇಕೆಬೇಕು. ಈಗ ವಯಸ್ಸಾದ ಕಾಲಕ್ಕೆ ಆಂಟಿಯೊಟ್ಟಿಗೆ ಬಹುತೇಕ ಇರುವುದು ಆ ನಾಯಿಯೆ. ಆದರೆ ಈಗ ಆ ನಾಯಿಗೂ ವಯಸ್ಸಾಗುತ್ತಿದೆ ಎನ್ನುವಾಗ, ಅವರ ಕಣ್ಣಲ್ಲಿ ತೆಳುವಾಗಿ ನೀರ ಪರದೆ ಕಾಣುತ್ತದೆ.
ರೂಪಶ್ರೀ ಕಲ್ಲಿಗನೂರ್ ಬರಹ ನಿಮ್ಮ ಓದಿಗೆ
ಗುಣ ಕೆಡಿಸಿದ ಹಣ!: ಶರಣಗೌಡ ಪಾಟೀಲ ಬರೆದ ಪ್ರಬಂಧ
ನಿವೃತ್ತಿ ನಂತರವೂ ಇವನು ಸುಮ್ಮನೆ ಕೂಡದೆ ನಿರಂತರ ಕೆಲಸ ಕಾರ್ಯದಲ್ಲಿ ಮಗ್ನನಾಗಿರುತಿದ್ದ. ಮುಂಜಾನೆ ಊಟ ಮುಗಿಸಿಕೊಂಡು ನಡು ಊರ ಕಟ್ಟೆ ಕಡೆ ಬಂದು ಸಮವಯಸ್ಕರ ಜೊತೆ ಮಳೆ ಬೆಳೆ ಊರು ಕೇರಿ ದೇಶಾವರಿ ಚರ್ಚೆ ಮಾಡುತಿದ್ದ. ಪಕ್ಕದ ಹೋಟಲಿನಿಂದ ಚಹಾ ತರಿಸಿ ತಾನೂ ಕುಡಿದು ಅವರಿಗು ಕುಡಿಸಿ ಖುಷಿ ಪಡುತಿದ್ದ. ಆಗಾಗ ಹೊಲ ಗದ್ದೆಗೂ ಹೋಗಿ ಆಳುಗಳಿಗೆ ಸಲಹೆ ಸೂಚನೆ ಕೊಡುತ್ತಿದ್ದ. ಇವನ ಕ್ರಿಯಾಶೀಲತೆ ನೋಡಿ ಅನೇಕರು ಆಶ್ಚರ್ಯ ಹೊರಹಾಕಿ “ಕುಬೇರಪ್ಪ ನಿವೃತ್ತನಾದರು ಸುಮ್ಮನೆ ಕೂಡೋದಿಲ್ಲ ಏನಾದರು ಮಾಡ್ತಿರ್ತಾನೆ ಶ್ರಮಜೀವಿ” ಅಂತ ವರ್ಣನೆ ಮಾಡುತ್ತಿದ್ದರು.
ಶರಣಗೌಡ ಬಿ. ಪಾಟೀಲ, ತಿಳಗೂಳ ಬರೆದ ಪ್ರಬಂಧ
“ನನ್ನ ಚಲಿಸದ ಕಾಲುಗಳನ್ನು ಹೊತ್ತ ಈ ಭೂಮಿಗೆ..”: ವಿಕ್ರಂ ಹತ್ವಾರ್ ಬರಹ
ಹೀಗೆ ಎಲ್ಲದಕ್ಕು ಕವಿಯ ಎಲ್ಲ ನಿವೇದನೆಯೂ ಕೊನೆಗೆ ‘ಕೇಳು ಓ ನನ್ನ ಹುಂಬ ಪ್ರಾಣವೇ ನಾನಿನ್ನೂ ನಿನ್ನನ್ನು ಚಕಿತಗೊಳಿಸುವುದಿದೆ’ ಎಂದು ಸವಾಲು ಎಸೆಯುತ್ತದೆ. ಅದು ಸ್ಪರ್ಧೆಯಲ್ಲ. ಅಲ್ಲಿ ಗೆಲ್ಲಬೇಕೆಂಬ ಅಥವ ಗೆದ್ದೇ ಗೆಲ್ಲುವೆ ಎನ್ನುವ ಠೇಂಕಾರವಿಲ್ಲ. ಪ್ರಾಣದ ಕೆನ್ನೆ ಚಿವುಟಿ ಕಣ್ಣು ಹೊಡೆದು ಅಣಕಿಸಿದಂತಿದೆ. ಇಂಥ ವಿರಳಾತಿ ವಿರಳ ಕವಿತೆಗಳ ಗುಚ್ಛವೇ ಅವಳ ಬಳಿ ಇತ್ತು…. ಪ್ರಕಟಿಸೋಣ ಅಂದೆ..
ನಾಗಶ್ರೀ ಶ್ರೀರಕ್ಷ ಕವಿತೆಗಳ ಕುರಿತು ವಿಕ್ರಂ ಹತ್ವಾರ್ ಬರಹ
ಯಾರು ಕುರುಡರು?: ಮಹಮ್ಮದ್ ರಫೀಕ್ ಕೊಟ್ಟೂರು ಬರಹ
ಅಂಧರಾಗಿದ್ದರಿಂದ ಬಹುಶಃ ಅವರಿಗೆ ಕನ್ ಫ್ಯೂಸ್ ಆಗಿರಬಹುದು ಎಂದು ‘ಅಲ್ಲ ಸರ್ ಗೇಟ್ ಈ ಕಡೆ ಇದೆ ನೀವು ವಿರುದ್ಧ ದಿಕ್ಕಿನಲ್ಲಿ ಕೈ ತೋರುತ್ತಿದ್ದೀರಲ್ಲʼ ಎಂದೆ. ಆಗ ಅವರು ನಕ್ಕು ತಮ್ಮ ಕೈಯಲ್ಲಿನ ವಾಕಿಂಗ್ ಸ್ಟಿಕ್ ಓಪನ್ ಮಾಡಿ ಬನ್ನಿ ನನ್ನ ಹಿಂದೆ ಎಂದು ಮುಂದೆ ನಡೆದರು. ನಾನು ಆ ಅಂಧ ವ್ಯಕ್ತಿಯನ್ನು ಅನಿವಾರ್ಯವಾಗಿ ಅಪನಂಬಿಕೆಯಿಂದ ಹಿಂಬಾಲಿಸತೊಡಗಿದೆ. ಎದುರಿನ ರೂಮುಗಳ ಎಡಕ್ಕೆ ನಮ್ಮ ಕಣ್ಣಿಗೆ ಮರೆಯಲ್ಲಿದ್ದ ದಿಕ್ಕಿನಲ್ಲಿ ತಿರುಗಿದಾಗ ಅವರು ಮಾತನಾಡುತ್ತಿದ್ದ ಗೇಟ್ ಕಂಡಿತು.
ಮಹಮ್ಮದ್ ರಫೀಕ್ ಕೊಟ್ಟೂರು ಬರಹ ನಿಮ್ಮ ಓದಿಗೆ
ಸೀಟಿ ಬಾಬು ಮತ್ತು ಇತರ ಪರಿಚಿತರು: ವಿನೋದಕುಮಾರ್ ಕುಲಕರ್ಣಿ ಬರಹ
ನಾವು ಚಿಕ್ಕವರಿದ್ದಾಗ ನಮ್ಮನ್ನು ಮಗ್ಗಿ ಬರುತ್ತವೊ ಇಲ್ಲವೋ ಎಂದು ಪರೀಕ್ಷಿಸಲು ಕೇಳುತ್ತಿದ್ದ ಹಾಗೆ ‘ಎರಡ ಒಂಬತ್ಳೆ’, ‘ನಾಲ್ಕ್ ಐದ್ಳೆ’, ‘ಹನ್ನೆರಡ ಎರಡ್ಲೆ’ ಎಷ್ಟು ಎಂದು ಕೇಳುತ್ತಿದ್ದ ಹಾಗೆ ಕೇಳಬೇಕಿತ್ತು. ಹಾಗೆ ನಾವು ಕೇಳಿದ್ದೆ ಕಂಪ್ಯೂಟರಿನ ಸಂಗ್ರಹ ಮಾಹಿತಿ ನೀಡುವ ಉತ್ತರದಂತೆ ಪಟಾಪಟ್ ಎಂದು ಉತ್ತರಿಸಿ ಬಿಡುತ್ತಿದ್ದ. ಅಲ್ಲದೆ ಕೇಳುವ ಪ್ರಶ್ನೆಯು ಒಬ್ಬರ ಬಾಯಿಂದಲೇ ಬರುತ್ತಿದ್ದುದಾಗಿರಲಿಲ್ಲ.
ವಿನೋದಕುಮಾರ್ ಕುಲಕರ್ಣಿ ಬರಹ ನಿಮ್ಮ ಓದಿಗೆ
ಉಕದ ಹಾಗಿದ್ದ ನಾನು, ದಕದ ಹಾಗಿದ್ದ ಅವನು: ನಾಗಶ್ರೀ ಶ್ರೀರಕ್ಷ ಬರಹ
ಇರುಳ ಬೆಳಕಲ್ಲಿ ನಾವು ಅದೆಷ್ಟೋ ಗುಟ್ಟಿನ ಕತೆಗಳನ್ನು ಹೇಳಿಕೊಳ್ಳುತ್ತಿದ್ದೆವು. ಬೆಳಕೆಂದರೆ ಅದು ಒಂದಷ್ಟು ನಕ್ಷತ್ರಗಳನ್ನು ಕಟ್ಟಿಕೊಂಡು ಚಂದ್ರನು ರಾಜನಂತೆ ಬೆಳಗುತ್ತಿದ್ದ, ಇರುಳೆಂದರೆ ಅವನನ್ನೂ ಮೀರಿ ತೂರುವ ಹಾಗೆ ಇರುವ ಮಯಮಯ ಮುಗ್ದ ಇರುಳು. ನಾವೆಂದರೆ ಅಲ್ಲಿ ಗಂಡು ಹೆಣ್ಣು ಇದಾವುದೂ ಆಗಿರಲಿಲ್ಲ.
ಬರಹಗಾರ್ತಿ ನಾಗಶ್ರೀ ಶ್ರೀರಕ್ಷ ತೀರಿಕೊಂಡು ಇಂದಿಗೆ ಐದು ವರ್ಷಗಳು ಕಳೆದವು. ಕೆಂಡಸಂಪಿಗೆಯ ಸಹಾಯಕ ಸಂಪಾದಕಿಯೂ ಆಗಿದ್ದ ಅವರ ನೆನಪಿನಲ್ಲಿ ಅವರದ್ದೊಂದು ಬರಹ ನಿಮ್ಮ ಓದಿಗೆ
ಆಡುವವನ ಕೈ ಚಳಕದಲಿ ಎಲ್ಲ ಅಡಗಿದೆ…: ವಿಶ್ವನಾಥ ಎನ್ ನೇರಳಕಟ್ಟೆ ಬರಹ
ಆರ್ಟ್ಸ್ ಗೇಮ್‌ಗಳು ಗೇಮಿಂಗ್ ಪ್ರಕಾರಗಳಲ್ಲಿ ವಿಶಿಷ್ಟವಾದವು. ಆಟದ ವಿಶಿಷ್ಟತೆ ಇಲ್ಲಿ ಮುಖ್ಯವಾಗುವುದಿಲ್ಲ. ಕಲೆಯೇ ಪ್ರಮುಖ. ನೋಡುವುದಕ್ಕೆ ಆಕರ್ಷಕವಾಗಿರುವ, ಬಹಳ ಕ್ರಿಯೇಟಿವ್ ಆಗಿರುವ ಗೇಮ್‌ಗಳಿವು. ವಿಡಿಯೋ ಗೇಮ್ಸ್ ಮೂಲಕ ನಮ್ಮ ಆಸಕ್ತಿಯ ಕೆಲವು ವಿಷಯಗಳನ್ನು ಕಲಿತುಕೊಳ್ಳುವುದಕ್ಕೆ ಸಾಧ್ಯವಿದೆ. ಇವುಗಳು ಶೈಕ್ಷಣಿಕ ಗೇಮ್‌ಗಳು. ಭಾಷೆ, ಗಣಿತ, ಟೈಪಿಂಗ್ ಕುರಿತಾದ ಸರಳ ಗೇಮ್‌ಗಳು ಇದಕ್ಕೆ ಉದಾಹರಣೆಗಳು. ವ್ಯಾಯಾಮದಂತಹ ಚಟುವಟಿಕೆ ಮಾಡಲು ಅವಕಾಶ ಮಾಡಿಕೊಡುವ ಗೇಮ್‌ಗಳನ್ನು ಎಕ್ಸರ್ ಗೇಮ್ ಎನ್ನಲಾಗುತ್ತದೆ.
ವಿಶ್ವನಾಥ ಎನ್ ನೇರಳಕಟ್ಟೆ ಬರಹ
ಗೋಧಿ ಹುಗ್ಗಿ ಗಂಗಯ್ಯ: ಮಂಜಯ್ಯ ದೇವರಮನಿ ಲಲಿತ ಪ್ರಬಂಧ
ಅವರಿಗೆ ಯಾರಾದರೂ ಎದುರಾಡಿದರೆ ಅವರ ಮದುವೆ ಮಾಡುವ ಬದಲು ತಿಥಿ ಮಾಡಿಬಿಡುತ್ತಿದ್ದ. ಏನಾದರೂ ಒಂದು ನವ ಹೇಳಿ ಯಾವ ಹೆಣ್ಣು ಹತ್ತದಂತೆ ಮಾಡಿ… ಮದುವೆ ಬದಲಿಗೆ ತಿಥಿ ಮಾಡಿ ಬಿಡುತ್ತಿದ್ದ. ಹಾಗಾಗಿ ಗಂಗಯ್ಯನನ್ನು ಎದುರು ಹಾಕಿಕೊಳ್ಳಲು ಊರಲ್ಲಿ ಯಾರಾದರೂ ಹೆದರುತ್ತಿದ್ದರು. ಈವಯ್ಯನ ಸುದ್ದಿ ಬೇಡ ಎಂದು ಸುಮ್ಮನಾಗುತ್ತಿದ್ದರು. ಮದುವೆಯಾಗದ ಅದೆಷ್ಟೋ ಹೆಣ್ಣು ಗಂಡಗಳನ್ನು ಗಂಟು ಹಾಕಿ ಶಾದಿಭಾಗ್ಯ ಕರುಣಿಸಿದ ರೂವಾರಿ ನಮ್ಮ ಗಂಗಯ್ಯ.
ಮಂಜಯ್ಯ ದೇವರಮನಿ ಬರೆದ ಲಲಿತ ಪ್ರಬಂಧ ನಿಮ್ಮ ಓದಿಗೆ









