Advertisement

ಸಂಪಿಗೆ ಸ್ಪೆಷಲ್

ಒಂದು ನೆಲನೆಲ್ಲಿಯ ಕತೆ

ಒಂದು ನೆಲನೆಲ್ಲಿಯ ಕತೆ

“ಸಂಸ್ಕರಿಸಿ ಪೊಟ್ಟಣವಾಗಿಸಿದ ಆಹಾರದಲ್ಲಿ ಒಪ್ಪಿತ ಮಟ್ಟದಲ್ಲಿ ಪ್ರಿಸರ್ವೇಟಿವ್, ಎಸ್ಸೆನ್ಸ್ ಅಥವಾ ರಾಸಾಯನಿಕ ಬಣ್ಣ ಇರುತ್ತದೆ. ಒಟ್ಟಿನಲ್ಲಿ ಹತ್ತಾರು ವಿಧಗಳಲ್ಲಿ ಇವುಗಳೆಲ್ಲ ನಮ್ಮ ದೇಹವನ್ನು ಸೇರಿ ಘಾಸಿ ಮಾಡುತ್ತವೆ ಎಂಬ ಅಧ್ಯಯನಗಳನ್ನು ಓದುತ್ತ ನಾವು ಜಾಗೃತರಾಗಬೇಕು ಎಂದುಕೊಳ್ಳುತ್ತೇವೆ. ಸಾವಯವ ಬದುಕನ್ನು ಬಾಳಬೇಕು ಎಂದುಕೊಳ್ಳುತ್ತೇವೆ. ಆದರೆ ಮತ್ತೊಂದೆಡೆ ಬಹಳ ಸೌಜನ್ಯ ಮತ್ತು ಸಭ್ಯತೆಯಿಂದಲೇ ನಾವು ಗಿಡಗಳ ಮೇಲೆ ದಾಳಿ ಮಾಡುತ್ತೇವೆ.”

read more
ಜಾವಳಿ ನಾಟ್ಯಬಂಧದ ಅನಾವರಣ…

ಜಾವಳಿ ನಾಟ್ಯಬಂಧದ ಅನಾವರಣ…

‘ಜಾವಳಿಯ ಪರಿಕಲ್ಪನೆಯು ಅಭಿನಯ ಪ್ರಧಾನವಾಗಿರುವುದಕ್ಕೆ ಇದೊಂದು ನಾಟ್ಯ ಬಂಧ. ಜಾವಳಿಯ ವಸ್ತು “ಶೃಂಗಾರ” ಮಧುರಭಾವ. ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಜಾವಳಿಗಳು ರಚಿತವಾಗಿವೆ. ಅವುಗಳ ವೈವಿಧ್ಯತೆಯೂ ರಮ್ಯಮನೋಹರವಾಗಿವೆ. ನೃತ್ಯಕ್ಷೇತ್ರದಲ್ಲಿ ಶೃಂಗಾರವೆಂದರೆ ಪರಿಪೂರ್ಣ ಅರ್ಪಣೆಯಲ್ಲದೆ ಮತ್ತೇನೂ ಅಲ್ಲ. ಅಷ್ಟೇ ಅಲ್ಲ. ನಾಯಕ-ನಾಯಕೀ ಭಾವವೇ ಜಾವಳಿಯ ಕೇಂದ್ರ ಬಿಂದು…’

read more
ಅಪ್ಪನೆಂಬ ಆಲದ ಮರದ ನೆರಳಿನಲ್ಲಿ ಆಶ್ರಯಿತ ಹಕ್ಕಿಗಳು….

ಅಪ್ಪನೆಂಬ ಆಲದ ಮರದ ನೆರಳಿನಲ್ಲಿ ಆಶ್ರಯಿತ ಹಕ್ಕಿಗಳು….

“ಅಪ್ಪಾಜಿ ತನಗಿಂತ ಹತ್ತು ವರ್ಷ ಚಿಕ್ಕವರಿದ್ದ ಮಕ್ಕಳಂತಿದ್ದ ಚಿಕ್ಕಪ್ಪಂದಿರು ಹೊತ್ತಿನ ಊಟಕ್ಕಾಗಿ ಇತರರ ಹೊಲಗಳಲ್ಲಿ ಕೆಲಸ ಮಾಡಿ ಹೆಬ್ಬೆರಳು ಕಿತ್ತು ರಕ್ತ ಸೋರಿಕೊಳ್ಳುವುದನ್ನು ನೋಡಿ ಮಧ್ಯ ರಾತ್ರಿ ಎದ್ದು ತನ್ನ ಜವಾಬ್ದಾರಿ ನೆನೆಯುತ್ತಿದ್ದನಾ. ಮೊದಲ ಚಿಕ್ಕಪ್ಪ ಬೇಗ ಮದುವೆಯಾಗಿ ಮಕ್ಕಳಿಗೆ ಊಟಕ್ಕೆ ನೀಡಲಾರದೇ ಹೆಣಗುತ್ತಿದ್ದುದು ಬಾದಿಸಿತ್ತಾ. ನಮ್ಮಜ್ಜಿ ಅಪ್ಪನ ತಮ್ಮಂದಿರಿಗೆ ಬಡಿಸಲು ಇಲ್ಲದಾಗ ಒದ್ದಾಡಿದ್ದು ಅಪ್ಪನ ಕಣ್ರೆಪ್ಪೆ ನೋಯಿಸಿತ್ತಾ. ಅಪ್ಪನ ಅಕ್ಕ ತಂಗಿಯರ ಬಗ್ಗೆ ಯೋಚಿಸಿ ಅಜ್ಜಿ ದಂಗಾಗಿದ್ದು ಅಪ್ಪನ ಕರಳು ಕರೆದಿತ್ತಾ.”
ಮಂಜುಳ ಡಿ ಬರೆದ ಲಹರಿ ನಿಮ್ಮ ಓದಿಗೆ

read more
ಹಳ್ಳಿ ಮೇಷ್ಟರ ಕಾವ್ಯದ ಸೋಜಿಗ: ಸುಚೊ ಕುರಿತು ನಾದಾ ಬರಹ

ಹಳ್ಳಿ ಮೇಷ್ಟರ ಕಾವ್ಯದ ಸೋಜಿಗ: ಸುಚೊ ಕುರಿತು ನಾದಾ ಬರಹ

“ಒಂದು ಎಳವೆಯಿಂದಲೆ ಅವರು ನಡೆಸಿಕೊಂಡು ಬಂದ ಓದು. ಮಾಸ್ತಿ, ಅಡಿಗ, ಹಾಮಾ ನಾಯಕರಂಥವರ ಮುಂದೆ ನಿಂತು ಮಾತನಾಡಬೇಕಿದ್ದರೆ ಅವರನ್ನು ಚೆನ್ನಾಗಿಯೇ ಓದಿರಬೇಕು. ಓದಿರಲೇಬೇಕು. ಚೊಕ್ಕಾಡಿಯವರು ತಮ್ಮ ತಂದೆಯವರಿಂದ ಬಂದ ‘ಮನೆಮನೆಗೆ ಪುಸ್ತಕ ಮಾರಾಟ’ದ ಉಪ ಉದ್ಯೋಗವನ್ನು ನಿಭಾಯಿಸುತ್ತಿದ್ದುದರಿಂದ ಮಾರಾಟಕ್ಕೆಂದು ತರಿಸುತ್ತಿದ್ದ ಪುಸ್ತಕಗಳನ್ನು ಮೊದಲು ತಾವು ಓದಿ ಬಳಿಕ ಮಿಕ್ಕವರಿಗೆ ಓದಿಸುತ್ತಿದ್ದರು ಎಂದರೆ ಅಚ್ಚರಿ ಪಡಬೇಕಿಲ್ಲ. ಹಳ್ಳಿಯಲ್ಲಿ ಕುಳಿತು ಅವರು…”

read more
ಸ್ವಾಭಿಮಾನಕ್ಕೆ ಅಂತಸ್ತಿನ ಗಡಿರೇಖೆಗಳುಂಟೆ!

ಸ್ವಾಭಿಮಾನಕ್ಕೆ ಅಂತಸ್ತಿನ ಗಡಿರೇಖೆಗಳುಂಟೆ!

“ಆಕೆಯದ್ದು ವಿಚಿತ್ರ ಸ್ವಭಾವ. ಅಮ್ಮ ಹೇಳಿರುತ್ತಿದ್ದ ಸಮಯಕ್ಕೆ ಯಾವತ್ತೂ ಬಂದಿದ್ದು ನನಗೆ ನೆನಪಿಲ್ಲ. ತನಗೆ ಬಿಡುವಾದಾಗಲೇ ಆಕೆ ಕೆಲಸಕ್ಕೆ ಬರೋದು. ಹಾಗಂತ ಕಡಿಮೆ ದುಡ್ಡಿಗೆ, ಚೌಕಾಸಿಗೆ ಬರುವ ಹೆಂಗಸೂ ಆಕೆಯಲ್ಲ. ಹಾಗೇನಾದ್ರೂ ಕೇಳಿದ್ರೆ ‘ಆಯ್ತು, ಎಲ್ಡು ಬಟ್ಟೆ ಕಮ್ಮಿ ಒಕ್ಕೊಡ್ತೀನಿ.. ಸುಮ್ಮನಿರ್ತಾರಾ…ʼ ಅಂತ ಸೀದಾ ಕೇಳಿಬಿಡುವವಳು. ಹಾಗಾಗಿ ಅವಳ ಈ ಸ್ವಭಾವ ಸಹಿಸಿಕೊಳ್ಳುವವರು ಅಥವಾ ಅನಿವಾರ್ಯವಿದ್ದವರು ಮಾತ್ರವೇ ಅವಳನ್ನು ಕೆಲಸಕ್ಕೆ ಕರೆಯುತ್ತಿದ್ದರು. …”

read more
ಅನುಭಾವ ಅಂಬುಧಿಯಲ್ಲಿ ಮಿಂದವಳು…: ಅಕ್ಕಮಹಾದೇವಿ ಜಯಂತಿ ಸಂದರ್ಭದಲ್ಲಿ ಪ್ರಜ್ಞಾ ಮತ್ತಿಹಳ್ಳಿ ಬರಹ

ಅನುಭಾವ ಅಂಬುಧಿಯಲ್ಲಿ ಮಿಂದವಳು…: ಅಕ್ಕಮಹಾದೇವಿ ಜಯಂತಿ ಸಂದರ್ಭದಲ್ಲಿ ಪ್ರಜ್ಞಾ ಮತ್ತಿಹಳ್ಳಿ ಬರಹ

“ನಾವೆಲ್ಲರೂ ಲೌಕಿಕದ ಸಕಲ ಭೋಗ ಸಂಗತಿಗಳನ್ನೂ ಇನ್ನಿಲ್ಲದಂತೆ ಹಪಹಪಿಸಿ ಕೊಂಡು ಸುಖಿಸುತ್ತಿದ್ದೇವೆ. ಪ್ರತಿಯೊಂದರಲ್ಲಿಯೂ ಐಷಾರಾಮಿ ವಸ್ತುಗಳನ್ನು ಅಪೇಕ್ಷಿಸುತ್ತೇವೆ. ಈ ಭೋಗ ಸಂಸ್ಕೃತಿಯಿಂದಾಗಿ ಪ್ರಕೃತಿಯಲ್ಲಿ ಲೋಹ-ಅದಿರು-ಗಿಡ-ಮರ-ನದಿ-ಸಮುದ್ರ ಎಲ್ಲವೂ ಅತಿಯಾಗಿ ಬಳಸಲ್ಪಟ್ಟು ಶೋಷಣೆಗೆ ಗುರಿಯಾಗಿವೆ. ಸರಳ ಬದುಕಿಗೆ ಮೊರೆ ಹೋದವರೂ ಕೂಡ ಹೇಳಿದಷ್ಟು ಸುಲಭವಾಗಿ ತಮ್ಮ ಸನ್ಯಾಸವನ್ನು ಆಚರಣೆಗೆ ತರಲಾರರು. ಅಕ್ಕ ಸನ್ಯಾಸವೆಂದರೆ ಹೇಗಿರಬೇಕೆಂದು ತುಂಬಾ ಸರಳವಾದ ಶಬ್ದಗಳಲ್ಲಿ ವಿವರಿಸುತ್ತಾಳೆ.”
ಅಕ್ಕಮಹಾದೇವಿ ಜಯಂತಿಯ ಸಂದರ್ಭದಲ್ಲಿ ಪ್ರಜ್ಞಾ ಮತ್ತಿಹಳ್ಳಿ ಬರಹ

read more
ಗುರಿ ಮುಟ್ಟದ ಆಮೆ ಕನ್ನಡ ಸಾಹಿತ್ಯ ಪರಿಷತ್ತು

ಗುರಿ ಮುಟ್ಟದ ಆಮೆ ಕನ್ನಡ ಸಾಹಿತ್ಯ ಪರಿಷತ್ತು

ಕನ್ನಡ ಸಾಹಿತ್ಯ ಪರಿಷತ್ ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತದೆಯೇ, ಇಲ್ಲವೇ ಎಂಬ ಬಗ್ಗೆ ಆಗಾಗ ಚರ್ಚೆಗಳನ್ನು ಕೇಳುತ್ತೇವೆ. ಆದರೆ ಅದು ಚುನಾವಣೆಯ ಸಮೀಪಿಸುತ್ತಿದ್ದಂತೆಯೇ ಈ ಚರ್ಚೆಗೆ ಮತ್ತಷ್ಟು ಬಿರುಸು ದೊರೆಯುತ್ತದೆ. ಪ್ರಸ್ತುತ ನಿಗದಿಯಾದಂತೆ, ಮೇ 9ರಂದು ಕನ್ನಡ ಸಾಹಿತ್ಯ ಪರಿಷತ್ ನ ಚುನಾವಣೆ ನಡೆಯಲಿದೆ. 100 ವರ್ಷಗಳನ್ನು ದಾಟಿ ಬಂದ ಸಂಸ್ಥೆಯು ಯಾವೆಲ್ಲ ಕನ್ನಡಪರ ಚಳವಳಿಗಳಲ್ಲಿ ಸಕ್ರಿಯವಾಗಿತ್ತು ಎಂಬ ಪ್ರಶ್ನೆಯೊಂದನ್ನು‌ ..” ಮುಂದಿಟ್ಟುಕೊಂಡು, ಹಿರಿಯ ಲೇಖಕರಾದ  ಅಗ್ರಹಾರ ಕೃಷ್ಣಮೂರ್ತಿ

read more
ಸಂತೃಪ್ತಿಯ ಬಾಳನ್ನು ಸವಿಸವಿದು ಉಂಡವರು

ಸಂತೃಪ್ತಿಯ ಬಾಳನ್ನು ಸವಿಸವಿದು ಉಂಡವರು

“ದೀರ್ಘಾಯುಷ್ಯ ಬೇಕೆಂದು ಬಯಸುವುದು, ದೇವರನ್ನು ಬೇಡಿಕೊಳ್ಳುವುದು ಸುಲಭ. ಆದರೆ ನಿಜಕ್ಕೂ ದೀರ್ಘಾಯುಷ್ಯವನ್ನು ಸಮೃದ್ಧವಾಗಿ ಹೇಗೆ ಬಾಳುವುದು ಎಂಬ ಪ್ರಶ್ನೆಗೆ ಉತ್ತರವಾಗಿ ಇದ್ದವರು ಪ್ರೊ. ಜಿ. ವೆಂಕಟಸುಬ್ಬಯ್ಯ. 108 ವರ್ಷಗಳ ಸಮೃದ್ಧ ಬದುಕು ನಡೆಸಿ ಇಂದು(ಏಪ್ರಿಲ್ 19) ಬೆಳಿಗ್ಗೆ ಅವರು ಇಹಲೋಕ ಪಯಣ ಮುಗಿಸಿದರು. ನಿಘಂಟು ತಜ್ಞ, ಭಾಷಾ ತಜ್ಞ, ಸಂಶೋಧಕ ಎಂದೇ ಗುರುತಿಸಿಕೊಂಡ ಅವರು ಎರಡು ಶತಮಾನಗಳಲ್ಲಿ ತುಂಬು ಜೀವನ ಸಾಗಿಸಿದರು. ಅವರ ಪತ್ನಿಯೂ ಅಷ್ಟೇ…”

read more
ಸಮುದ್ರಕ್ಕೆ ಅಂಟದಿರಲಿ ಸೋಂಕು

ಸಮುದ್ರಕ್ಕೆ ಅಂಟದಿರಲಿ ಸೋಂಕು

“ಸಮುದ್ರವೆಂದರೆ ಯಾಕೋ ಸಸಾರ. ಬೇಕಾದಷ್ಟು ಜಲರಾಶಿ ಇದೆಯಲ್ಲ ಎಂಬ ಉದಾಸೀನ. ಉಪ್ಪು ನೀರಿನಿಂದ ಪ್ರಯೋಜನವಿಲ್ಲ ಎಂಬ ನಿರ್ಲಕ್ಷ್ಯ. ಆದರೆ ಈ ಉಪ್ಪುನೀರಿನ ರಾಶಿಯು ಅಪಾರ ಪ್ರಮಾಣದ ಜೀವಸಂಕುಲದ ಮಡಿಲು. ಅದು ಭೂಮಿಯನ್ನು ಅಮ್ಮನಂತೆ ಆಲಂಗಿಸಿ, ಕಾಪಾಡುತ್ತದೆ. ಸಮುದ್ರದ ಸೆರಗಿನಲ್ಲೇ ಮನುಕುಲವು ಬೆಚ್ಚನೆ ಬಾಳು ಸಾಗಿಸುತ್ತಿದೆ.”
ಹಾಗಿದ್ದರೆ ಸಮುದ್ರದ ಆರೋಗ್ಯ ಈಗ ಹೇಗಿದೆ ಎಂಬ ಬಗ್ಗೆ ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಪುಟ್ಟ ವಿಶ್ಲೇಷಣೆ ಇಲ್ಲಿದೆ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ