ರವೀಂದ್ರಕುಮಾರ್ ಈವರೆಗಿನ ಕಾವ್ಯದ ಕುರಿತು ವಾಸುದೇವ್ ನಾಡಿಗ್ ಬರಹ
“ಕವಿತೆಗಳ ಕುರಿತ ಚರ್ಚೆಯೇ ಹಾಗೆ. ವೃಥಾ ತಲೆಚಚ್ಚಿಕೊಳ್ಳುತ್ತೇವೆ. ಕವಿತೆಯ ಶರೀರ ಆತ್ಮ ರಸ ರೀತಿ ಶೈಲಿ ದನಿ ಔಚಿತ್ಯ ಅಂತ. ಆದರೆ ನಿಜವಾದ ಕವನ ಅಲ್ಲೆಲ್ಲೋ ಮರೆಯಲ್ಲಿ ನಿಂತು ಮುಗುಳ್ನಗುತ್ತಿರುತ್ತದೆ. ಯಾರ ಕೈಗೂ ತಾನು ಸಿಗದೇ ಕಣ್ಣು ಮಿಟುಕಿಸುವ ತುಂಟ ಶಾಮನ ಹಾಗೆ. ಕೈಗೂ ಸಿಗದೇ ಕಣ್ಣಿಗೂ ಸಿಗದೇ ನುಣುಚಿಕೊಳ್ಳುವ ಮಾಯಾಂಗನೆ ಹಾಗೆ. ಕವಿತೆಯ ಸ್ವರೂಪ ಮತ್ತು ವ್ಯಾಕಪತೆ ಕುರಿತ…”
ಕೇಶವಿನ್ಯಾಸ: ಕೆ. ವಿ. ತಿರುಮಲೇಶ್ ಬರಹ
“ಆಗ ನಮ್ಮೂರಿನಲ್ಲಿ ಕ್ಷೌರದ ಅಂಗಡಿ ಇರಲಿಲ್ಲ. ಕ್ಷೌರಿಕರಿದ್ದರು. ಕ್ಷೌರ ಮಾಡಿಸಿಕೊಳ್ಳಬೇಕಾದವರು ಒಂದೋ ಕ್ಷೌರಿಕರ ‘ಕೊಟ್ಟಿಗೆ’ಗೆ ಹೋಗಬೇಕಾಗಿತ್ತು, ಇಲ್ಲವೇ ಅವರಿಗೆ ಹೇಳಿಕಳಿಸಬೇಕಾಗಿತ್ತು. ಹಳ್ಳಿಗಳಲ್ಲಿ ಕ್ಷೌರಿಕರಿಗೆ ಪಾರಂಪರ್ಯವಾಗಿ ನಿಗದಿಯಾದ ಗಡಿಗಳಿದ್ದುವು; ಆ ಗಡಿಯೊಳಗೇ ಅವರು ತಂತಮ್ಮ ಕಾರ್ಯ ನಿರ್ವಹಿಸುತ್ತಿದ್ದುದು. ಅವರು ಕೇವಲ ವೃತ್ತಿಯಿಂದಲೇ ಜೀವನ ಸಾಗಿಸುತ್ತಿದ್ದವರೂ ಅಲ್ಲ; ಅವರಿಗೆ ಅಲ್ಪ ಸ್ವಲ್ಪ ಹೊಲ ಮನೆಗಳೂ ಇದ್ದುವು. ಕ್ಷೌರಿಕರು ಹೆಚ್ಚಾಗಿ ಹಳ್ಳಿಯಲ್ಲಿ ತಮ್ಮ ಸಲಕರಣೆ ಚೀಲಗಳನ್ನು ಕಂಕುಳಲ್ಲಿರಿಸಿಕೊಂಡು ರೌಂಡ್ ಸುತ್ತುತ್ತಿದ್ದರು.”
ಶೃಂಗಾರ ಸಾರ ವರ್ಣನ-ಭಾಗ 2: ಆರ್. ದಿಲೀಪ್ ಕುಮಾರ್ ಲೇಖನ
“ಪಂಪ ಭಾರತದಲ್ಲಿನ ಒಂದು ಸಂದರ್ಭದಲ್ಲಿ ಬಂದಿರುವ ಶೃಂಗಾರ ರಸವನ್ನು ನೋಡುವುದಕ್ಕಿಂತ ಮುಂಚಿತವಾಗಿ ಆದಿಪುರಾಣದಂತಹಾ ಆಗಮಿಕ ಕಾವ್ಯದ ಪ್ರಾರಂಭದಲ್ಲಿ ತನ್ನ ಬಗೆಗೆ ಹೇಳಿಕೊಳ್ಳುವ ಎರಡು ಕಂದ ಪದ್ಯಗಳು ಬಹಳ ಮುಖ್ಯ ಅನಿಸುತ್ತದೆ. ಕವಿ ರಸಿಕನಾಗದ ಹೊರತು ಕಾವ್ಯ ರಸಾನ್ವಿತವಾಗಲಾರದೆಂಬ ಮೀಮಾಂಸಕರ ಮತದಂತೆ, ಪಂಪನು ವೈರಾಗ್ಯೋದಯವೇ ಪ್ರಮುಖವಾದ ವಸ್ತುವಾದ ಕಾವ್ಯದಲ್ಲಿ…”
ಯಕ್ಷಗಾನದ ಮಟ್ಟು ಮತ್ತು ರೂಪಕದ ಸಾದೃಶ್ಯ: ನಾರಾಯಣ ಯಾಜಿ ಬರಹ
“ಯಕ್ಷಗಾನವನ್ನು ಪ್ರಸ್ತುತ ಸಂದರ್ಭದಲ್ಲಿ ಬಯಲಾಟದ ರಂಗಕಲೆ ಮತ್ತು ಕೂಟ ಪದ್ಧತಿಯ ತಾಳಮದ್ದಲೆಯಾಗಿ ದ್ವಿಮುಖ ಸಂಪ್ರದಾಯದಲ್ಲಿ ನೋಡಬಹುದು. ತನ್ನದೇ ಆದ ಪರಂಪರೆಯ ಬಣ್ಣ, ವೇಷಗಳ ಸೊಗಸು, ನೃತ್ಯ, ಮುಖವರ್ಣಿಕೆ, ಪರಂಪರೆಯಿಂದ ಬಂದ ಅದ್ಭುತವಾದ ನಡೆ, ರಂಗದಮೇಲೆ ತೋರುವ ಅಲೌಕಿಕತೆ ಒಂಡು ಕಡೆಯಾದರೆ; ಇವಾವವೂ ಇಲ್ಲದೆ ಕೇವಲ ಪದ್ಯ ಹಾಗೂ ಅರ್ಥಗಾರಿಕೆಯ ಸೊಗಸು…”
ಅರುಂಧತಿ ಸುಬ್ರಮಣ್ಯಂ ಕಾವ್ಯದ ಧಾತು ಧೋರಣೆಗಳು: ಆರ್ ವಿಜಯರಾಘವನ್ ಲೇಖನ
“ನನ್ನ ಪ್ರಕ್ರಿಯೆಯ ಸ್ವರೂಪ ತುಂಬಾ ಸರಳವಾಗಿದೆ, ಆದರೆ ಕಾವ್ಯ ನಿರ್ಮಿತಿಯ ಒತ್ತಾಯ ಬದಲಾಗುತ್ತದೆ. ಇದು ಸಾಮಾನ್ಯವಾಗಿ ಒಂದು ಸಾಲು ಅಥವಾ ಒಂದು ಕಾವ್ಯಚಿತ್ರದೊಂದಿಗೆ ಪ್ರಾರಂಭವಾಗುತ್ತದೆ. ಇತರ ಸಮಯಗಳಲ್ಲಿ ಖಾಲಿ ಪುಟದ ಸುತ್ತ ಪರಿಭ್ರಮಿಸುತ್ತಾ ಇಡೀ ಒಂದು ದಿನವನ್ನು ಕಳೆಯುವ ಅವಶ್ಯಕತೆಯಿದೆ. ಇದು ಪದಗಳು ಮತ್ತು ಭಾವನೆಗಳನ್ನು ನನ್ನ ಮಿದುಳಿನಲ್ಲಿ ಆವರ್ತನದಲ್ಲಿ ಸುತ್ತುವಂತೆ ಮಾಡುತ್ತದೆ”
ಫಿಯಟ್ ಲಕ್ಸ್…. ಬೆಳಕಾಗಲಿ: ಕೆ.ವಿ. ತಿರುಮಲೇಶ್ ಲೇಖನ
“ಈಗ ಈ ಚಿಮಿಣಿ ಕೈದೀಪಕ್ಕೆ ಬಂದರೆ, ಇದು ಬಹೂಪಯೋಗಿಯಾಗಿದ್ದರೂ, ಇದಕ್ಕೆ ಕೆಲವು ಮಿತಿಗಳೂ ಇದ್ದುವು. ಇದು ಗಾಳಿಗೆ ನಿಲ್ಲುವುದಿಲ್ಲವಾದ ಕಾರಣ, ಮನೆಯ ಹೊರಗೆ ಉಪಯೋಗವಿಲ್ಲ; ಮನೆಯೊಳಗೂ ಗಾಳಿ ಹೆಚ್ಚು ಬಂದರೆ ಇದು ಇದೀಗ ನಂದೀತು ಎನ್ನುವ ಆತಂಕ ಉಂಟುಮಾಡುತ್ತ ಇರುತ್ತದೆ. ಹತ್ತಿರ ಇರಿಸಿ ಪುಸ್ತಕ ಓದಲು ಪರವಾಯಿಲ್ಲ. ರಾತ್ರಿ ಊಟದ ಸಮಯ ನಾವು ಚಿಮಿಣಿಯ ತೂಗುದೀಪವನ್ನು ಉಪಯೋಗಿಸುತ್ತಿದ್ದೆವು.”
ಶೃಂಗಾರ ಸಾರ ವರ್ಣನ: ಆರ್. ದಿಲೀಪ್ ಕುಮಾರ್ ಲೇಖನ
“ಕಾವ್ಯ ಕೃತಿಗಳು ಬದುಕಿನ ಕ್ಷಣಗಳನ್ನು ಅನುಸರಿಸಿ ಕಟ್ಟಿದ್ದಾದ್ದರಿಂದ ಇವು ಚಿತ್ತವೃತ್ತಿಯನ್ನು ತನ್ಮಯತೆಯಿಂದ, ಆನಂದದಿಂದ, ನೋಡುಗ ಮತ್ತು ಓದುಗನಲ್ಲಿ ನೆಲೆ ನಿಲ್ಲುತ್ತದೆ. ಇದನ್ನೇ ಮೀಮಾಂಸಕರು ‘ರಸ’ವೆಂದು ಕರೆದಿದ್ದಾರೆ. ರಸ ಅನ್ನುವುದಕ್ಕೆ ಸೋಮರಸ, ಹಾಲು, ನೀರು ಎಂಬ ಅರ್ಥಗಳು ಇದ್ದರೂ ಅಧ್ಯಾತ್ಮಿಕ ಅರ್ಥದಲ್ಲಿ ‘ಆತ್ಮ ಸಾಕ್ಷಾತ್ಕಾರ’ ಅನ್ನುವುದನ್ನು ತಿಳಿಸುತ್ತದೆ.”
ಮತ್ತೆ ಮತ್ತೆ ನೆನಪಾಗುವ ದೊಡ್ಡಪ್ಪ: ನದೀಮ್ ಸನದಿ ಬರಹ
“ಹಿಂದಿನ ವಾರವಷ್ಟೆ ತಮ್ಮ ಅನುಭವಗಳನ್ನು ಬರೆದು ದಾಖಲಿಸಿದ “ಅಂತರಂಗದ ಅಲೆ” ಪುಸ್ತಕವನ್ನು ನನಗೆ ಕಳಿಸಿದ್ದರು. ಬಹುಶಃ ಅದು ದೊಡ್ಡಪ್ಪನ ಕೊನೆಯ ಪುಸ್ತಕ. ಸಂಕಲನ ತಲುಪಿದ ಒಂದೆರಡು ದಿನಗಳಲ್ಲಿ ಓದಿ ಅವರಜೊತೆ ಚರ್ಚಿಸಿದ್ದೆ. ಕೆಲ ವರ್ಷಗಳ ಕೆಳಗೆ ದೊಡ್ಡಪ್ಪನಿಗೆ ಹೃದಯಾಘಾತವಾದಾಗ ಚೇಂಜ್ ಗಾಗಿ ಕೆಲದಿನ ನಮ್ಮ ಮನೆಯಲ್ಲಿ ಉಳಿದುಕೊಂಡಿದ್ದರು. ಹುಟ್ಟೂರಿನಲ್ಲಿ ಸ್ವಲ್ಪ ಸಮಯ ಕಳೆಯಲು ಸಿಕ್ಕ ಖುಷಿ ಅವರದಾದರೆ…”
ಸನಾದಲ್ಲಿ ಬರೆದ ಕೆಲವು ಅಪೂರ್ಣ ಟಿಪ್ಪಣಿಗಳು: ಕೆ. ವಿ. ತಿರುಮಲೇಶ್ ಬರಹ
“ಪ್ರಜಾಪ್ರಭುತ್ವವನ್ನು ಟೀಕಿಸುವವರಿಗೆ ಬೇರೆ ಯಾವ ಪದ್ಧತಿ ಯಾವ ಉತ್ತಮ ಕಾರಣಕ್ಕೆ ಬೇಕೋ ತಿಳಿಯುವುದಿಲ್ಲ. ಪ್ರಜಾಪ್ರಭುತ್ವವೊಂದನ್ನು ಬಿಟ್ಟು ಇನ್ನುಳಿದ ಯಾವುದೇ ರಾಜಕೀಯ ವ್ಯವಸ್ಥೆಯೂ ಇವರಿಗೆ ಒಪ್ಪಿಗೆಯೇ? ಪ್ರಜಾಪ್ರಭುತ್ವವೆಂದರೆ ಯಾಕೆ ಇವರಿಗೆ ಇಷ್ಟೊಂದು ಹೆದರಿಕೆ? ಹಾಂ! ಯಾಕೆಂದರೆ ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ, ವಿಮರ್ಶಿಸುವ ಸ್ವಾತಂತ್ರ್ಯವಿದೆ. ಇದು ಇವರಿಗೆ ಸಹ್ಯವಲ್ಲ”









