ಮಂದಿರ-ಮಸೀದಿ : ಶರಣರ ಸಾಮರಸ್ಯ ಸಂ‘ದೇಶ’
ಐಕ್ಯತೆ ಮೂಲಕ ಜಗತ್ತಿಗೆ ಮಾದರಿಯಾದ ಭಾರತ ದೇಶ ಮತ್ತೊಮ್ಮೆ ತನ್ನತನ ತೋರುವ ಕಾಲ ಬಂದಿದೆ. ಈಗ ಪ್ರತಿ ಪ್ರಜೆಯೂ ಎಚ್ಚೆತ್ತುಕೊಳ್ಳಬೇಕಿದೆ. ಪರ-ವಿರೋಧ ಎಂಬ ಮಾತುಗಳನ್ನ ಬಿಟ್ಟು ಕೋರ್ಟ್ ನೀಡುವ ತೀರ್ಪನ್ನು ಗೌರವಪೂರ್ವಕವಾಗಿ ಸ್ವೀಕರಿಸಬೇಕಿದೆ.
ಒಂದ್ ಕವಿತೆ ಹೇಳ್ರಿ ಮೇಸ್ಟ್ರೇ… ಪ್ಲೀಸ್…
ಊಹೂಂ, ನೀವು ಕವಿತೆ ಹೇಳದ ದಿನವೇ ಗೊತ್ತಿಲ್ಲಬಿಡಿ. ಆ ಪುಟಾಣಿ ಗಾತ್ರದ ಕವಿತೆಗಳಂತೂ ವ್ಹಾ…ವ್ಹಾ… ಅದೊಂದು ದಿನ ನಿಮ್ಮ ಕೊಠಡಿಗೆ ಬಂದಿದ್ದ ನನಗೆ ತೀವ್ರ ಅಚ್ಚರಿ, ನೀವು ತರಗತಿಯಲ್ಲಿ ಹೇಳುತ್ತಿದ್ದ ಮುಕ್ಕಾಲು ಪಾಲು ಕವಿತೆಗಳು ನಿಮ್ಮವೇ ಎಂಬುದು ನನಗೆ ಗೊತ್ತಾಗಿಹೋಗಿತ್ತು.
ಉಳ್ಳವರು, ಇರದವರು ಎಲ್ಲರನು ನೋಡುತ್ತಾ……..
ಇಂತಿಪ್ಪ ಸಮಯದಲ್ಲಿ, ಮರಕಡಿಯುವವನು, ನಂಜಮ್ಮ, ತುಕ್ರ, ಜಾತಿ ಎಂದು ಯಾವುದೋ ಅಸ್ಮೃತಿ ಗೋಚರಿಸಿದಂತಾಗಿ, ಎರಡಕ್ಷರ ಬರೆಯೋಣವೆಂದು ಅಂದುಕೊಳ್ಳುವಾಗ ನವೋದಯ, ನವ್ಯ, ಪ್ರಗತಿಶೀಲ, ಬಂಡಾಯಗಳು ಅಟ್ಟಿಸಿಕೊಂಡು ಬಂದಂತಾಯಿತು.
ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
ಹೀಗೆ ಉದ್ದಾನುದ್ದ ಬರೆದು ಗೋಳಗುಮ್ಮಟದ ಬಗ್ಗೆ ನಾವು ಉಬ್ಬಬಹುದು. ಬೀಗಬಹುದು. ಗುಂಜ಼ಿನ ಒಳಹೊರಗೆ ನಿಂತು ಅದರೆದುರು ಮಿಕ್ಕಿದ್ದೆಲ್ಲ ಕೀಳೆಂದುಕೊಂಡು, ಎಷ್ಟು ಹೇಳಿದರೂ ಸಾಲದೆನ್ನುವುದೊಂದು ನಿಸ್ಸೀಮ ಕುಬ್ಜತೆಯಲ್ಲಿ ಸಣ್ಣಗಾಗಿ, ತಣ್ಣಗಾಗಿ ಹಾಗೇ ಮೂಕವಾಗಿ ವಿಸ್ಮಯಿಸಬಹುದು.
ಬೀಳುವ ವಿಮಾನಗಳ ಕುರಿತು ಪ್ಯಾಪಿಲಾನ್
ವಿಮಾನವೆಂಬುದು ಕನಸೆಂಬುದನ್ನೂ, ಅದು ಯಾವ ದಿಕ್ಕಿಗೆ ಮೂತಿ ತಿರುಗಿಸಿ ನಿಂತಿದೆಯೋ ಆ ದೇಶ, ಆ ವಿಮಾನದಲ್ಲಿ ಕೂತವರೆಲ್ಲರ ಅಂತಿಮ ಪ್ರಸ್ಥಾನವೆನ್ನುವುದನ್ನೂ, ಮತ್ತು ವಿಮಾನವೆನ್ನುವುದು ಅಂತಿಮವಾಗಿ ಶ್ರೀಮಂತರ, ಶ್ರೀಮಂತಿಕೆ ಹುಡುಕಿಕೊಂಡು ಹೊರಟವರ ವಾಹನವೆಂಬುದನ್ನೂ- ನಾನು ತಿರಸ್ಕರಿಸುತ್ತೇನೆ.
ನೆಟ್ಟಲ್ಲಿ ಕಮೆಂಟು ಎರಡು ಮಂಡೆಯ ಹಾವು ಕಾಣೋ
ವಿಷೇಶಣ, ಕ್ರಿಯಾ, ಕರ್ತೃ ಪದಗಳನ್ನು ಜೋಡಿಸುವ ಕ್ರಮದಲ್ಲಿಯೇ ಬದುಕನ್ನು ಜೋಡಿಸಬಲ್ಲ ಸಾಹಿತ್ಯ, ಕಾವ್ಯಗಳ “ಸ್ಟಕ್ಚರ್”ಗಳು- ಯಾರು ಬೇಕಾದರೂ ಮಾಡಬಲ್ಲ, ಹಣಬರದ ದರಿದ್ರವಾಗಿವೆ. ಹಾಗಾಗಿ- ನಮಗೆಲ್ಲ ಸಾಹಿತ್ಯ “ಅರ್ಥ”ವಾಗಿಬಿಡಬೇಕು. ಏನಿದೆ ಅದರಲ್ಲಿ? ಪದಗಳ ಹೊರತು.
`!?#$%^&*@@??!’: ಗೆಳೆಯರೇ ಇದೇನೆಂದು ದಯವಿಟ್ಟು ಗಳಹುವಿರಾ!
ನಿಮ್ಮ ದೂರದ ಸಂಬಂಧಿಕರಾದ (ಹಾಗೆಂದು ಅವರೇ ಹೇಳಿಕೊಂಡ) ಎಲ್ಲೈಸಿ ಏಜೆಂಟರು ನಿಮ್ಮ ಮನೆಗೆ ಬಂದು ನಿಮ್ಮ ಚಹಾ ಕುಡಿದು, ನಿಮ್ಮದೇ ಹಣ ಪಡೆದು, ಬಿಳೀ ಹಾಳೆಯ ಮೇಲೆ ನಿಮ್ಮ ಸಹಿ ಮಾಡಿಸಿಕೊಂಡಿದ್ದು ಎಷ್ಟು ಸಾರಿ?
ಬಡಪಾಯಿಗಳಿಗೆ ಕೆಲವು ಡೆಮಾಕ್ರಸಿ ಪಾಠಗಳು: ಹೃಷಿಕೇಶ್ ಬರಹ
ಇದನ್ನು ಪಾಲಿಸದ ಪಕ್ಷದ, ಅಥವಾ ಪಕ್ಷಕ್ಕೆ ಬೆಂಬಲ ನೀಡಿದ ಪಕ್ಷೇತರ ಶಾಸಕರ ಮೇಲೆ ಶಿಸ್ತು ಕ್ರಮ ಕೈಕೊಳ್ಳಿ ಎಂದು ವಿಪ್ ಸಾಹೇಬರು ಸ್ಪೀಕರ್ ಸಾಹೇಬರಿಗೆ ದೂರಬಹುದು. ಅವರು ಅದನ್ನು ಕೇಳಬಹುದು, ಕೇಳಿದರೂ ಕೇಳದಂತೆ ಇರಲೂಬಹುದು.
ಕಷ್ಟಜೀವಿಗಳಾಗಿದ್ದ ನನ್ನ ಜನರು: ತಿರುಮಲೇಶ್ ಬರಹ
ಮಂಗಳೂರಿನಲ್ಲಿ ನಡೆದ ಈ ದುರಂತ ಹೆಚ್ಚು ದಾರುಣವಾಗುವುದು ಇವರಲ್ಲಿ ಬಹುಮಂದಿ ಇಂಥ ಸಾಹಸಿ ಜನರೇ ಎನ್ನುವುದು. ದುಡಿದು ಹಣ ಸಂಪಾದನೆ ಮಾಡಲೆಂದು ದುಬೈಗೆ ಹೋಗಿ ಅಲ್ಲಿನ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿ ಬಹುಶಃ ವಾರ್ಷಿಕ ರಜೆಯಲ್ಲಿ ಊರಿಗೆ ಮರಳುತ್ತಿದ್ದವರು.









