Advertisement

ಸರಣಿ

ಕಪ್ಪು ಸುರಂಗಗಳು ಮತ್ತು ಕಾರ್ಮಿಕರ ಭವಣೆಗಳು: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಕಪ್ಪು ಸುರಂಗಗಳು ಮತ್ತು ಕಾರ್ಮಿಕರ ಭವಣೆಗಳು: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಮೊದಲನೇ ದಿನ ಕೆಲಸ ಮುಗಿಸಿದ ಮಣಿ ಸಂಪೂರ್ಣವಾಗಿ ಬೆವರಿನಿಂದ ಒದ್ದೆಯಾಗಿಹೋಗಿದ್ದ. ನಂತರ ಪಂಜರದ ಮೂಲಕ ನೆಲದ ಮೇಲಕ್ಕೆ ಬರುವಷ್ಟರಲ್ಲಿ ಸುಸ್ತಾದರೂ ಹೊಸ ಜಗತ್ತಿಗೆ ಬಂದಂತೆ ಆಹ್ಲಾದಕರವಾಗಿ ಕಾಣುತ್ತಿತ್ತು. ಈ ಗಣಿ ಕೆಲಸವನ್ನು ಖಂಡಿತ ಮಾಡಬಾರದು. ಓದು ಮುಂದುವರಿಸಿ ಡಿಗ್ರಿ ಮುಗಿಸಿ ಬೇರೆ ಯಾವುದಾದರು ಸರ್ಕಾರಿ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳಬೇಕು ಎಂದುಕೊಳ್ಳುತ್ತ ಸೈಕಲ್ ತುಳಿಯುತ್ತಾ ಮನೆ ಕಡೆಗೆ ಹೊರಟ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ

read more
ಮರ್ಫಿ: ಸಮಯವೆಂಬ ಭ್ರಮೆಯ ಬರ್ಫಿ: ರಾಮ್ ಪ್ರಕಾಶ್ ರೈ ಕೆ ಸರಣಿ

ಮರ್ಫಿ: ಸಮಯವೆಂಬ ಭ್ರಮೆಯ ಬರ್ಫಿ: ರಾಮ್ ಪ್ರಕಾಶ್ ರೈ ಕೆ ಸರಣಿ

ಅವಳ ಕಡಲಿನ ಪೂರಾ ಅವನದೇ ನಾವೆಗಳು. ಕಡುಗತ್ತಲಲ್ಲಿ ಬೀಳುವ ಕನಸುಗಳಿಗೆ ಆತನೇ ಕಂದೀಲು. ಇಂತಹ ಪ್ರೇಮದ ಪರಿಯ ವಿವರಣೆ ಆಕೆ ನೀಡುವುದು ಸ್ವತಃ ಆತನ ಮಗನಿಗೆ. ಆದರೆ ಡೇವಿಡ್‌ಗೆ ಎರಡು ಕಹಿ ಗುಳಿಗೆಗಳು ನೆನಪಿದೆ. ಒಂದು ತನ್ನ ಹೆತ್ತವ್ವ ಜನನಿಯಲ್ಲ ಎಂದು. ಮತ್ತು ತನ್ನ ತಂದೆ ಅನಿರೀಕ್ಷಿತ ಅಪಘಾತವೊಂದರಲ್ಲಿ ನಿಧನ ಹೊಂದಿದ್ದಾರೆಂದು.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಕನ್ನಡದ ‘ಮರ್ಫಿ’ ಸಿನಿಮಾದ ವಿಶ್ಲೇಷಣೆ

read more
ಕತೆ ಕಟ್ಟುವ ಕಲೆಗಾರರು: ಸುಮಾ ಸತೀಶ್ ಸರಣಿ

ಕತೆ ಕಟ್ಟುವ ಕಲೆಗಾರರು: ಸುಮಾ ಸತೀಶ್ ಸರಣಿ

ಆಗೆಲ್ಲಾ ಯರಗುಂಟೇಗೆ ಊರಿನ ತಂಕ ಬಸ್ಸಿರಲಿಲ್ಲ. ಒಂದೋ ಎರಡೊ ಕಿಲೋಮೀಟರ್ ನಡೆದು ಹೋಗಬೇಕಿತ್ತು. ಇನ್ನೂ ಕತೆ‌ ಮುಗಿದಿಲ್ಲ, ಯಾಸೆಟ್ಗೆ ಅತ್ಲಾಗೆ ನಡಿಯಮ್ಮಿ, ಮನೆತಂಕ ಬರ್ತೀನಿ ಅಂತ ಅದೇ ಅವತಾರದಲ್ಲಿ ಮಗಳ‌ಮನೆ ತಂಕಾನೂ ಹೋಗಿದೆ. ಬೀಗರು ಇವ್ರ ಅವತಾರ ನೋಡಿ, ನಕ್ಕಂಡು ಇವತ್ತಿದ್ದು ನಾಳೆ ಹೋಗಿ ಅಂದ್ರಂತೆ. ಈ ಅಜ್ಜಿ, ಹೂ ನನ್ ಕತೆ ಇನ್ನೂ ಮುಗಿದಿಲ್ಲ ಅಂತ ಕತೆ ಪೂರ್ತಿ ಹೇಳಿದ್ದಾದ ಮೇಲೆ ಬೇರೆ ಸೀರೆ ಉಟ್ಕಂಡು ವಾಪಸ್ ಬಂತಂತೆ. ಇದ್ನ ಹೇಳ್ಕಂಡು‌ ನಮ್ಮತ್ತೆದೀರೆಲ್ಲಾ ನಗಾಡ್ತಿದ್ರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ

read more
ಮೌಲ್ಯಗಳಿರುವುದು ಪಾಲಿಸಲೇ ಹೊರತು, ಬರೀ ಬೋಧಿಸಲಿಕ್ಕಲ್ಲ!!: ಬಸವನಗೌಡ ಹೆಬ್ಬಳಗೆರೆ ಸರಣಿ

ಮೌಲ್ಯಗಳಿರುವುದು ಪಾಲಿಸಲೇ ಹೊರತು, ಬರೀ ಬೋಧಿಸಲಿಕ್ಕಲ್ಲ!!: ಬಸವನಗೌಡ ಹೆಬ್ಬಳಗೆರೆ ಸರಣಿ

ಬಹುತೇಕರು ಮಕ್ಕಳಿಗೆ ತಮ್ಮ ಮಗುವಿನ ಆಸಕ್ತಿಯ ಕ್ಷೇತ್ರ ಯಾವುದು? ಎಂಬುದನ್ನೇ ಗುರುತಿಸಿಯೇ ಇರುವುದಿಲ್ಲ. ತಾವು ಏನನ್ನು ಅಂದುಕೊಂಡಿರುತ್ತಾರೋ ಅದನ್ನು ಸಾಧಿಸಲು ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ. ಟಿವಿ ಮಾಧ್ಯಮಗಳಲ್ಲಿ ಬರುವ ಸ್ಪರ್ಧೆಗಳಲ್ಲಿ ತಮ್ಮ ಮಗುವೂ ಭಾಗವಹಿಸಬೇಕು, ಬೇಗ ಫೇಮಸ್ ಆಗಬೇಕು ಎಂದು ಕೆಲವರು ತಮ್ಮ ಮಗುವಿಗೆ ಇಷ್ಟವಿದೆಯೋ ಇಲ್ಲವೋ ಎಂದು ಕೇಳದೇ ಸಿಕ್ಕ ಸಿಕ್ಕ ಕ್ಲಾಸ್‌ಗಳಿಗೆಲ್ಲಾ ಸೇರಿಸುತ್ತಾರೆ. ಜೊತೆಗೆ ಮಣಭಾರದ ಪುಸ್ತಕ, ಟ್ಯೂಷನ್! ಆ ಕೋಚಿಂಗ್, ಈ ಕೋಚಿಂಗ್ ಅಂತಾ ಮಕ್ಕಳ ಬಾಲ್ಯ ಇದರಲ್ಲೇ ಕಳೆದುಹೋಗುತ್ತೆ!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

read more
ಮೊಗ್ಗಿನ ಜಡೆಯ ಹುಡುಗಿಯರು…: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಮೊಗ್ಗಿನ ಜಡೆಯ ಹುಡುಗಿಯರು…: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಎದುರಿಗೆ ಸಿಕ್ಕಿದವರಿಗೆಲ್ಲ ಮಣಿ ತನ್ನ ಕೆಲಸದ ಬಗ್ಗೆ ಹೇಳಿಕೊಂಡ. ಕಮ್ಯೂನಿಟಿ ಹಾಲ್ ಒಳಕ್ಕೆ ಹೋಗಿ ಅಲ್ಲಿ ಇರುವವರಿಗೆಲ್ಲ ಹೇಳಿದ. ಮಣಿಗೆ ಏನು ಮಾಡಬೇಕೊ ಯಾರಿಗೆಲ್ಲ ಹೇಳಬೇಕೊ ಒಂದೂ ಅರ್ಥವಾಗಲಿಲ್ಲ. ಅವನ ಖುಷಿಗೆ ಪಾರವೇ ಇರಲಿಲ್ಲ. ಸೆಲ್ವಿಗೆ ಹೇಳುವುದು ಹೇಗೆ? ಆಲೋಚಿಸತೊಡಗಿದ. ರಾತ್ರಿ ಅವರ ಕಾಲೋನಿಗೆ ಹೋಗುವುದು ಸರಿಯಲ್ಲ. ನಾಳೆ ಹೇಳಿದರೆ ಆಯಿತು ಎಂದುಕೊಂಡ. ಕೊನೆಗೆ ಎಲ್ಲಾ ಸುತ್ತಿಕೊಂಡು ಬಂದು ಕತ್ತಲಲ್ಲಿ ಕಲ್ಲು ಬಂಡೆಯ ಮೇಲೆ ಸೀನ ಮತ್ತು ಮಣಿ ಕುಳಿತುಕೊಂಡರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಹನ್ನೊಂದನೆಯ ಕಂತು ನಿಮ್ಮ ಓದಿಗೆ

read more
ಕಂಕುಳಲ್ಲಿ ಕತೆ ಪುಸ್ತಕ, ಎದೆಯಲ್ಲಿ ಕಥಾಸಾಗರ: ಸುಮಾ ಸತೀಶ್‌ ಸರಣಿ

ಕಂಕುಳಲ್ಲಿ ಕತೆ ಪುಸ್ತಕ, ಎದೆಯಲ್ಲಿ ಕಥಾಸಾಗರ: ಸುಮಾ ಸತೀಶ್‌ ಸರಣಿ

ಅಂಗೆ ನೋಡಿದ್ರೆ ನಮ್ಮ‌ ನಾಗೂ ಅತ್ತೆಗೆ ಅಕ್ಷರಾನೇ ತಲೆಗೆ ಹತ್ತಲಿಲ್ಲ.‌ ಕೊನೆಗೆ ಅವರಿಗೆ ಸಂಗೀತ ಕಲಿಸಲು ಹಾರ್ಮೋನಿಯಂ ಮೇಷ್ಟ್ರನ್ನ ಕರೆಸಿದ್ರು. ಆ ಮೇಷ್ಟ್ರು ಮೊದಲು ಕಾಗುಣಿತ ತಿದ್ದಿಸಿ ಆಮೇಲೆ ಸಂಗೀತ ಹೇಳಿಕೊಟ್ಟಿದ್ದರು. ನಮ್ಮತ್ತೆಯ ಅಲ್ಪಪ್ರಾಣ ಮಹಾಪ್ರಾಣಗಳಿಗೆ ಜೀವ ತುಂಬಿದರು ಮೇಷ್ಟ್ರು. ಮೊದಲೇ ಕಲ್ಪನಾ ಚತುರೆ ಅತ್ತೆ. ಅಕ್ಷರಾನೂ ಬಂದ ಮೇಲೆ ಕತೆ ಬರೇಯೋಕೆ ಶುರು ಮಾಡಿದ್ರು. ಇಷ್ಟೇ ಅಲ್ಲ, ಅಕ್ಕಂದಿರ ಮಕ್ಕಳನ್ನು ಬಳಿ ಕೂರಿಸಿಕೊಂಡು ಸ್ವಾರಸ್ಯಕರವಾಗಿ ಕತೆ ಕಟ್ಟಿ ಹೇಳುವ ಕಲೆ ಇವರಲ್ಲಿ ಸೊಗಸಾಗಿತ್ತು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ

read more
ನಾಗರಿಕತೆಯಿಂದ ಅನಾಗರಿಕತೆಯೆಡೆಗೆ ಇರಾಕ್: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ನಾಗರಿಕತೆಯಿಂದ ಅನಾಗರಿಕತೆಯೆಡೆಗೆ ಇರಾಕ್: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

2003ರಲ್ಲಿ ಇರಾಕ್ ಯುದ್ಧದ ಮೂಲಕ ಈ ನಿರ್ದಯಿಯ ಆಡಳಿತ ಕೊನೆಗೊಂಡಾಗಲೇ ಇರಾಕ್‌ನ ಜನತೆ ನಿರಾಳತೆಯ ನಿಟ್ಟುಸಿರು ಬಿಟ್ಟದ್ದು. ಇರಾಕ್‌ನಲ್ಲಿ ರಾಜಕೀಯ ಸಂಕೀರ್ಣತೆ ಇರುವುದರ ಜೊತೆಗೆ ರಾಜಕೀಯ ವಿಡಂಬನೆಯೂ ಇದೆ. ಅಲ್ಲಿನ ಜನರು ತಮಾಷೆಯ ಮೂಲಕವೇ ರಾಜಕಾರಣಿಗಳಿಗೆ ಚುರುಕು ಮುಟ್ಟಿಸುತ್ತಾರೆ. ಆಡಳಿತ ವ್ಯವಸ್ಥೆಯ ಅಸಮರ್ಥತೆಯಿಂದಾಗಿ ದಿನನಿತ್ಯದ ಜೀವನದಲ್ಲಿ ಉಂಟಾಗುವ ಏರಿಳಿತಗಳನ್ನು ನಿಭಾಯಿಸಬೇಕಾದರೆ ಇಂತಹ ಹಾಸ್ಯಪ್ರವೃತ್ತಿ ಇರಬೇಕಾಗುತ್ತದೆ ಎನ್ನುವುದು ನಿಜ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ

read more
ಧೀಮಂತ ಪತ್ರಕರ್ತ ಐ.ಕೆ. ಜಾಗೀರದಾರ್: ರಂಜಾನ್ ದರ್ಗಾ ಸರಣಿ

ಧೀಮಂತ ಪತ್ರಕರ್ತ ಐ.ಕೆ. ಜಾಗೀರದಾರ್: ರಂಜಾನ್ ದರ್ಗಾ ಸರಣಿ

ಅವರೆಲ್ಲ ಕುಳಿತ ಕುರ್ಚಿ, ಪ್ಲೇಟು ಮತ್ತು ಆಹಾರದಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ. ಅದು ನಾಲ್ಕು ಮಾಸ್ಟರ್ ಬೆಡ್ ರೂಂ ಮನೆಯಾಗಿತ್ತು. ಎಲ್ಲ ಕೋಣೆಗಳನ್ನು ತೋರಿಸಿದರು. ಅವೆಲ್ಲ ಒಂದೇ ಸೈಜಿನ ಕೋಣೆಗಳು. ಪಲ್ಲಂಗ, ಬೆಡ್, ಹೊದಿಕೆ ಹೀಗೆ ಯಾವುದರಲ್ಲೂ ವ್ಯತ್ಯಾಸ ಇರಲಿಲ್ಲ. ಒಂದು ಇಬ್ಬರು ಮಕ್ಕಳ ಕೋಣೆ, ಇನ್ನೊಂದು ಅವರ ಕೋಣೆ, ಮತ್ತೊಂದು ಮನೆಗೆಲಸದ ಹೆಣ್ಣುಮಗಳ ಕೋಣೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 96ನೇ ಕಂತು ನಿಮ್ಮ ಓದಿಗೆ

read more
ಮರೆವೆಂಬ ಮಾರ್ಜಾಲ, ಪರಿಸ್ಥಿತಿಯೆಂಬ ಮೂಷಿಕ…: ರಾಮ್ ಪ್ರಕಾಶ್ ರೈ ಕೆ ಸರಣಿ

ಮರೆವೆಂಬ ಮಾರ್ಜಾಲ, ಪರಿಸ್ಥಿತಿಯೆಂಬ ಮೂಷಿಕ…: ರಾಮ್ ಪ್ರಕಾಶ್ ರೈ ಕೆ ಸರಣಿ

ಲೋಕದ ಕಣ್ಣಿಗೆ ಚಚ್ಚೂ ನಾಪತ್ತೆಯಾದ ಪಟ್ಟಿಯಲ್ಲೇ ಇರಬೇಕಿದೆ. ಏಕೆಂದರೆ ಉಳಿದ ಜೀವಗಳ ಉಸಿರು ಬಂಧನದ ಬೇಗೆಗೆ ಬಿದ್ದು ಸುಡಬಾರದೆಂದರೆ ಆ ಘಟನೆಯನ್ನು ಮರೆಯಲೇ ಬೇಕಿದೆ. ಹೀಗೆ ದಿನ ಕಳೆದಾಗ ಮತ್ತೆ ಅಪ್ಪು ಪಿಳ್ಳೆ ಎಲ್ಲವನ್ನೂ ಮರೆತು ಹೋಗುತ್ತಾರೆ. ಮರಳಿ ತನಿಖೆ, ಮತ್ತದೇ ಕಹಿಯ ಅಂತ್ಯ ಎಲ್ಲವೂ ಮೋಟಾರಿನ ಚಕ್ರದಂತೆ ಮತ್ತದೇ ಆರಂಭ ಅದೇ ಅಂತ್ಯ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಮಲಯಾಳಂನ ‘ಕಿಷ್ಕಿಂದಾ ಕಾಂಡಮ್’ ಸಿನಿಮಾದ ವಿಶ್ಲೇಷಣೆ

read more

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ