ಉಲ್ಟಾಪಲ್ಟಾ ಆದ ನನ್ನ ಪ್ಲಾನು! : ಎಚ್. ಗೋಪಾಲಕೃಷ್ಣ ಸರಣಿ
ಅವರು ಎಲೆಕ್ಟ್ರಿಕ್ ಕಾಂಟ್ರಾಕ್ಟ್ ಮಾಡ್ತಾ ಇದ್ದರು, ಪಾರ್ಟ್ ಟೈಮ್ ಆಗಿ. ನೀನೂ ಇದನ್ನೇ ಮಾಡು, ದುಡ್ಡು ಚೆನ್ನಾಗಿ ಸಿಗುತ್ತೆ, ಹೇಗಿದ್ದರೂ ನಿಮ್ಮದು ಹೊಸಾ ಏರಿಯ, ಬೇಕಾದಷ್ಟು ಜನ ಮನೆ ಕಟ್ಟುತ್ತಾರೆ, ನೀನೇ ಕಾಂಟ್ರಾಕ್ಟ್ ಮಾಡಬಹುದು ಅಂತ ಹುರಿದುಂಬಿಸಿ ಏಣಿ ಹತ್ತಿಸಿದ್ದ. ಪಾರ್ಟ್ ಟೈಮ್ ಕೆಲಸ, ಅದೂ ಚೆನ್ನಾಗಿ ದುಡ್ಡು ಮಾಡಬಹುದು ಅನ್ನುವ ಹಾಗಿದ್ದರೆ ಒಂದು ಕೈ ನೋಡೇ ಬಿಡೋಣ ಅನ್ನುವ ಉತ್ಸಾಹ ತುಂಬಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ
ಮಳೆ ಜಿನುಗಿಗೆ ಅರಳುವ ಜೀವನಪ್ರೀತಿ: ಭವ್ಯ ಟಿ.ಎಸ್. ಸರಣಿ
ಮಳೆಗಾಲ ಮಲೆನಾಡಿನ ವಸುಂಧರೆಯನ್ನು ಸಿಂಗರಿಸಿದೆ. ಮಂಜು ಆವರಿಸಿದ ಬೆಟ್ಟ ಗುಡ್ಡಗಳು, ಮಳೆಯಲ್ಲಿ ಮಾತ್ರ ಗೋಚರಿಸುವ ಸೀತಾಳೆಯಂತಹ ವನಸುಮಗಳು, ಬಗೆಬಗೆಯ ಅಣಬೆಗಳು, ದಾರಿಯುದ್ದಕ್ಕೂ ಮನಸೆಳೆಯುವ ಸಣ್ಣ ಸಣ್ಣ ಜಲಪಾತಗಳು, ತುಂಬಿ ಹರಿಯುವ ನದಿ ತೊರೆಗಳು ಮಲೆನಾಡನ್ನು ಭೂ ಲೋಕ ಸ್ವರ್ಗವಾಗಿಸಿವೆ. ದೂರದೂರುಗಳಿಂದ ಪ್ರವಾಸಿಗರು ಮಳೆಗಾಲದಲ್ಲಿ ಮಲೆನಾಡಿನ ದೃಶ್ಯ ವೈಭವ ಸವಿಯಲು ಬರುತ್ತಿದ್ದಾರೆ. ಅನೇಕ ರೆಸಾರ್ಟ್‌ಗಳು, ಹೋಂ ಸ್ಟೇಗಳು ತಲೆಎತ್ತಿವೆ. ಮಲೆನಾಡು ತನ್ನ ಮೊದಲ ನೀರವ, ನಿರ್ಜನ ಭವ್ಯತೆಯನ್ನು ಕಳೆದುಕೊಳ್ಳುವ ಭೀತಿಯೂ ಇದೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ
ಗಯಾನಾ ದೇಶದ ಕವಿ ಮಾರ್ಟಿನ್ ಕಾರ್ಟರ್: ಎಸ್. ಜಯಶ್ರೀನಿವಾಸ ರಾವ್ ಸರಣಿ
ಕಾರ್ಟರ್ ತನ್ನ ಕವಿತೆಗಳಲ್ಲಿ, ಸರಳವಾದ, ಸ್ಪಷ್ಟವಾದ ಶೈಲಿಯನ್ನು ಇಷ್ಟಪಡುತ್ತಾರೆ. ದೀರ್ಘವಾದ ಸಂಕೀರ್ಣ ಕವಿತೆಗಳಿಗಿಂತ ಸರಳವಾದ ಕವಿತೆಗಳನ್ನು ಬರೆಯುವುದು ಹೆಚ್ಚು ಕಷ್ಟ ಎಂದು ಅವರ ಅಭಿಪ್ರಾಯ. ಸರಿಯಾಗಿರುವುದು ಮುಖ್ಯ. “ಇದು ಇದಕ್ಕೆ ಸರಿ ಅಥವಾ ಅದಕ್ಕೆ ಸರಿ ಎಂಬ ಪ್ರಶ್ನೆಯಲ್ಲ, ಅದು ಸರಿಯಾಗಿದೆ ಅಂತ ಅನಿಸಬೇಕು, ಅಷ್ಟೆ. ಕೆಲವೊಮ್ಮೆ ನಿಮಗೆ ಕವಿತೆಗಳ ಪುಸ್ತಕವೊಂದು ಸಿಗುತ್ತದೆ, ಅದರಲ್ಲಿ ಒಂದು ಕವಿತೆಯು ಕವಿ ಹೇಳುತ್ತಿರುವ ವಿಷಯಕ್ಕೆ ಸಂಪೂರ್ಣವಾಗಿ ಸರಿಯಾಗಿರಬಹುದು…
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಗಯಾನಾ (Guyana) ದೇಶದ ಖ್ಯಾತ ಕವಿ ಮಾರ್ಟಿನ್ ಕಾರ್ಟರ್-ರವರ (Martin Carter, 1927-1997) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ನನ್ನ ಪುಟ್ಟ ಶಾಲೆ: ರೂಪಾ ರವೀಂದ್ರ ಜೋಶಿ ಸರಣಿ
ನಮ್ಮ ಗುರ್ಜಿ ಎಲ್ಲರ ಕೈ ಮೇಲೆ ಕಿತ್ತಳೆ ತೊಳೆ ಆಕಾರದ ಪೆಪ್ಪರಮಿಠಾಯಿ ಇಡುತ್ತಿದ್ದಂತೇ, ಅದು ಬುಳಕ್ಕನೆ ಬಾಯಿಗಿಳಿದು ಬಿಡುತ್ತಿತ್ತು. ನಾವೆಲ್ಲ ಅದನ್ನು ಕಡಿಯದೇ ದವಡೆಯಲ್ಲಿ ಅದುಮಿಟ್ಟುಕೊಂಡು ಮೆಲ್ಲಗೆ ರಸ ಹೀರಿ, ಹೀರಿ ಚಪ್ಪರಿಸುತ್ತಿದ್ದೆವು. ಅದು ಖಾಲಿಯಾಗುವ ತನಕ ಮಾತು ಕತೆ ಎಲ್ಲ ಬಂದ್… ನಮ್ಮಿಡೀ ದಿನದ ಸಂಭ್ರಮ, ಸಂತೋಷ ಆ ಪುಟ್ಟ ಮಿಠಾಯಿಗೋಸ್ಕರವೇ ಇರುತ್ತಿತ್ತೊ ಗೊತ್ತಿಲ್ಲ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ
ಗೌರವ ಹೆಚ್ಚಿಸುವ ಬಟ್ಟೆ; ಚೆನ್ನಾಗಿಲ್ಲದಿರೆ ಆಗಬಹುದು ಬದುಕು ಮೂರಾಬಟ್ಟೆ!!: ಬಸವನಗೌಡ ಹೆಬ್ಬಳಗೆರೆ ಸರಣಿ
ನಮ್ಮ ವ್ಯಕ್ತಿತ್ವ, ಗುಣ ಮುಖ್ಯವೇ ಹೊರತು, ಹೊರಗೆ ಧರಿಸಿರುವ ದಿರಿಸಲ್ಲ ಎಂದು ಹೇಳುವ ಮಾತು ಕೇವಲ ಹೇಳಲಿಕ್ಕೆ ಮಾತ್ರ ಚೆಂದ ಅಷ್ಟೇ. ಇಂದಿನ ಯುಗದಲ್ಲಿ ಬಾಹ್ಯ ಆಕರ್ಷಣೆಯೇ ಮುಖ್ಯ!! ಆಸ್ತಿಯಾಗಿ ಕಚ್ಚೆ ಹರಿವೆಯಷ್ಟು ಹೊಲ ಇಲ್ದಿದ್ರೂ ಒಳ್ಳೇ ಮನೆ, ಕಾರು ಇದ್ದರೆ ಸಂಬಂಧ ಮಾಡೋಕೆ ಜನರು ಬರ್ತಾರೆ!! ಇಲ್ದಿದ್ರೆ ಅವರ ಕಥೆ ಅಷ್ಟೇ!! ಆದರೂ ಬ್ರಿಟಿಷರಿಂದ ‘ಅರೆ ಬೆತ್ತಲೆ ಫಕೀರ’ ಎಂದು ಕರೆಸಿಕೊಂಡು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಇಂದಿಗೂ ಜನಮಾನಸದಲ್ಲಿ ಉಳಿದಿರುವ ಮಹಾತ್ಮ ಗಾಂಧೀಜಿಯವರು ಧರಿಸುತ್ತಿದ್ದುದು ಸಾಮಾನ್ಯ ಅರೆಬರೆ ಉಡುಪನ್ನೇ!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ
ಮನುಷ್ಯ ಮೃಗವಾಗುತ್ತಿರುವನೆ?: ಸುಮಾವೀಣಾ ಸರಣಿ
ವಾಹನಗಳ ವಿಚಾರಕ್ಕೆ ಬಂದಾಗ ಗಾಳಿ ಇದ್ದರೆ ಗಾಲಿ ಓಡಲು ಸಾಧ್ಯ ಅಲ್ವೆ! ಸ್ವಲ್ಪ ಗಾಳಿ ಹೆಚ್ಚಾದರೂ ವಾಹನಗಳಾಗಲಿ, ಮನುಷ್ಯನಾಗಲಿ ಇರುವುದಿಲ್ಲ. ಗಾಳಿ ಹೆಚ್ಚಾಗಿ ಸೈಕಲ್ ಬರ್ಸ್ಟ್ ಆಯಿತು. ಅದೇ ಗಾಳಿ ಇಲ್ಲದೆ ಹೋದರೆ ಅದು ಓಡುವುದೇ ಇಲ್ಲ ಪಂಚರ್ ಆಗುತ್ತದೆ. ಅಂತೆಯೇ ಮಾನವ ಉಸಿರುಗಟ್ಟಿ ಸಾಯುತ್ತಾನೆ. ಹೌದು! ಮಾನವನ ಬದುಕು ಉಸಿರು ಹೋದಾಗ ‘ಸತ್ತರು’, ‘ಅದು’, ‘ಇದು’, ‘ಶವ’ ಎಂಬುದಾಗಿ ಮಾತನಾಡುತ್ತಾರೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಇಪ್ಪತ್ತೊಂದನೆಯ ಬರಹ ನಿಮ್ಮ ಓದಿಗೆ
ಟು ಡು ಲಿಸ್ಟ್ ಹಾಗೂ ರದ್ದಿ ಹಾಳೆಯ ಕತೆಗಳು….: ಎಚ್. ಗೋಪಾಲಕೃಷ್ಣ ಸರಣಿ
ನನ್ನ ಅನುಭವಗಳನ್ನು ಕೊಂಚ, ಕೊಂಚ ಏನೂ ತುಂಬಾ ಹೆಚ್ಚಾಗಿಯೇ ಉತ್ಪ್ರೇಕ್ಷಿಸಿ ಬುರುಡೆ ಅಂದರೆ ಸಖತ್ ಬುರುಡೆ ಬಿಡುತ್ತಿದ್ದೆ. ಈ ಬುರುಡೆಯಲ್ಲಿ ಬಹಳ ಮುಖ್ಯವಾಗಿ ಬ್ಯಾಂಕ್ ಡೈರೆಕ್ಟರ್ ಜತೆ ಇಂಟರ್ವ್ಯೂ ಮಾಡಿಸಿಕೊಂಡು ಸಾಲವನ್ನು ಮೂವತ್ತು ಸಾವಿರದಿಂದ ಮೂವತ್ತ ಮೂರು ಸಾವಿರ ಹೆಚ್ಚಿಸಿದ್ದು, ಬೇವಿನ ಮರದ ಹಳೇ ಬಾಗಿಲು ಕೊಂಡು ಟೋಪಿ ಬಿದ್ದದ್ದು, ಕುಬೇರಪ್ಪ ಹಳದಿ ಇಂಗಿನ ಬ್ಯಾಗ್‌ನಲ್ಲಿ ಕೇಜಿ ಅಷ್ಟು ಚಿನ್ನ ತುಂಬಿಕೊಂಡು ಯಶವಂತ ಪುರಕ್ಕೆ ನಡೆದುಕೊಂಡು ಹೋಗಿ ಚಿನ್ನ ಮಾರಿದ್ದೂ, ನನ್ನ ಹತ್ತಿರ ಊಹೂಂ ನನ್ನ ಹತ್ತಿರ ಅಲ್ಲ, ನನ್ನಾಕೆ ಹತ್ತಿರ ಮುಕ್ಕಾಲು ಗ್ರಾಮ್‌ನ ತಾಳಿ ಇರೋದು…. ಇವೆಲ್ಲಾ ಸೇರಿರುತ್ತಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ
ಪ್ರಕೃತಿಯೇ ದೈವವೆನ್ನುವ ದೈಯ್ಯದ ಹರಕೆ: ಭವ್ಯ ಟಿ.ಎಸ್. ಸರಣಿ
ರಮಣೀಯವಾದ ಹಚ್ಚಹಸಿರಿನ ಮಲೆನಾಡಿನ ಒಂಟಿ ಮನೆಗಳ ಅಕ್ಕಪಕ್ಕದ ದರುಗು ಗುಡಿಸುವ ಹಡ್ಡೆಗಳ ಬನದೊಳಗೆ ಇರುವ ಮರದ ಬುಡಗಳೇ ಈ ದೈಯ್ಯಗಳ ಆವಾಸಸ್ಥಾನ. ಪ್ರಕೃತಿ, ಮರ-ಗಿಡಗಳಲ್ಲಿ ದೈವತ್ವವನ್ನು ಕಾಣುವ ಮಲೆಯ ಜನರ ಭಕ್ತಿ, ಶ್ರದ್ಧೆಗಳಿಗೆ ಈ ದೈಯ್ಯಗಳು ಪಾತ್ರವಾಗಿವೆ. ದೈಯ್ಯದ ಮರಗಳೆಂಬ ಭಯ, ಭಕ್ತಿಯಿಂದ ಈ ಮರಗಳನ್ನು ಯಾರೂ ಕಡಿಯುವುದಿಲ್ಲ. ಇದರಿಂದ ಪ್ರಕೃತಿಯ ಸಂರಕ್ಷಣೆಯೂ ಆಗುತ್ತಿದೆ. ಊರು ತೊರೆದು ಬೇರೆ ಬೇರೆ ಊರಿಗೆ ಹೋಗಿ ನೆಲೆಸಿರುವ ಜನರು ಪುನಃ ಊರಿಗೆ ಬರುವುದು, ಬಂಧು ಬಾಂಧವರೊಡನೆ ಬೆರೆಯಲು ಇದೊಂದು ಸುದಿನ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿಯಲ್ಲಿ ದೇವರ ಹರಕೆ ಸಲ್ಲಿಸುವುದರ ಕುರಿತ ಬರಹ ನಿಮ್ಮ ಓದಿಗೆ
ಬಾವೋಬಾಬ್ ಗುಲಾಬ್ ಸೆನೆಗಲ್: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ
ಇಪ್ಪತ್ತನೇ ಶತಮಾನದ ಕೊನೆಯಲ್ಲಿ ಬರ ಬಂದದ್ದರಿಂದಾಗಿ ಕೃಷಿ ಉತ್ಪಾದನೆ ಕುಂಠಿತಗೊಂಡಿತ್ತು. ಮಾಲಿ ಪ್ರದೇಶದ ಮನಾಂತಲಿ ಅಣೆಕಟ್ಟಿನ ನೀರನ್ನು ಬಳಸಿಕೊಂಡ ಕಾರಣ ಈ ಸಮಸ್ಯೆ ಸ್ವಲ್ಪಮಟ್ಟಿಗೆ ನಿವಾರಣೆಯಾಯಿತು. ಸೆನೆಗಲ್‌ನ ಹವಾಮಾನ ಜಾನುವಾರುಗಳ ಸಾಕಣೆಗೆ ಪೂರಕವಾಗಿದೆ. ಸವನ್ನಾ ವಿಧದ ಸಸ್ಯವರ್ಗ ಇರುವುದರಿಂದಾಗಿ ಜಾನುವಾರುಗಳ ಆಹಾರಕ್ಕೆ ಯಾವುದೇ ತೊಂದರೆಯಿಲ್ಲ. ದನ, ಮೇಕೆ, ಕುರಿ, ಕುದುರೆ, ಒಂಟೆ, ಕತ್ತೆ, ಹಂದಿ ಮೊದಲಾದ ಪ್ರಾಣಿಗಳನ್ನು ಸಾಕುತ್ತಾರೆ ಸೆನೆಗಲ್ ಜನರು.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಸೆನೆಗಲ್ ದೇಶದ ಕುರಿತ ಬರಹ ನಿಮ್ಮ ಓದಿಗೆ
						








