ಬಿಸಿಲುಕೋಲು – ಮಾತು, ಸ್ಪರ್ಶ, ಓದು, ಕಲಿಕೆ ಮತ್ತು ಬದುಕು
ನಿಸರ್ಗದ ಬಗ್ಗೆ, ಪರಿಸರದ ಬಗ್ಗೆ, ನಮ್ಮ ಇವತ್ತಿನ ಜೀವನದ ಬಗ್ಗೆ ಏನೇನೂ ಗೊತ್ತಿಲ್ಲದ ಮಕ್ಕಳ ಸಂಖ್ಯೆ ಬಹಳ ದೊಡ್ಡದಿದೆ. ಮನೆಯಲ್ಲಿರುವ ಹೊತ್ತಿನಲ್ಲಿ ಒಬ್ಬ ಬಾಲಕನ ದಿನ ಹೇಗೆ ಹೋಗುತ್ತದೆ ನೋಡಿ. ಕಂಪ್ಯೂಟರಿನಲ್ಲಿ ಅದೇನೇನೋ ಮೌನದಾಟ.
ಕೆ ಟಿ ಗಟ್ಟಿ ಬರೆಯುವ ಬಿಸಿಲುಕೋಲು- ಶನಿವಾರವೂ ಯಾಕೆ ಭಾನುವಾರವಾಗಬಾರದು?
ಅಮೆರಿಕದಲ್ಲಿ, ಇಂಗ್ಲೆಂಡಿನಲ್ಲಿ, ನಮ್ಮ ಕೇಂದ್ರ ಸರಕಾರದ ಆಫೀಸುಗಳಲ್ಲಿ ವಾರದಲ್ಲಿ ಐದು ದಿನ ಕೆಲಸ. ‘ವೀಕ್ ಎಂಡ್’ ಎನ್ನುವುದು ಎರಡು ದಿನ. ಇದರಿಂದಾಗಿ ನಾನಾ ವಿಧ ಆಫೀಸು ಕಚೇರಿ ಕಾರ್ಯಾಲಯಗಳಲ್ಲಿ ಕೆಲಸ ಮಾಡುವವರಿಗೆ ತಮ್ಮ ಮಕ್ಕಳ ಜೊತೆಯಿರಲು ಎರಡು ದಿನ ಸಿಗುತ್ತದೆ.
ಕೆ.ಟಿ ಗಟ್ಟಿ ಬರೆಯುವ ಬಿಸಿಲುಕೋಲು -ಭೂಮಿಯ ದುಃಖಗಳ ಲೆಕ್ಕಾಚಾರ
ಈ ಆತಂಕಕ್ಕೆ ಕಾರಣ? ಮುಂಬಯಿಯಲ್ಲಿ ಮತ್ತೆ ಮತ್ತೆ ಉಂಟಾಗುತ್ತಿರುವ ‘ಜಲಪ್ರಳಯ’ವೆ? ಬೆಂಗಳೂರಿನಲ್ಲಿ ಆಗಾಗ ಸಂಭವಿಸುವ ಮೇಘಸ್ಫೋಟಗಳೆ? ಸಮುದ್ರ ತನ್ನ ನಿಲ್ಲದ ಕೊರೆತಕ್ಕೆ ಹೊಸ ಹೊಸ ಕಿನಾರೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದೆ?
ತರೀಕೆರೆ ಏರಿಯಾ – ಚುನಾವಣೆಯಲ್ಲಿ ರೊಕ್ಕದ ಕೊಳಚೆ
ಗೃಹಿಣಿಯರು ಜೀವನದಲ್ಲಿ ಮೊದಲ ಸಲ ಕಂಡಿರುವ ಮೈನಿಂಗಿನ ಬಣ್ಣ ಎರೆದುಕೊಂಡು ಬಂದಂತಹ ಕೆಂಗರಿಗರಿ ಸಾವಿರದ ನೋಟನ್ನು ಮುರಿಸಲು ಮನಸ್ಸಾಗದೆ ಟ್ರಂಕಿನಲ್ಲಿ ಭದ್ರಪಡಿಸಿದರು. ಆದರೆ ಕೆಲವು ಮತದಾರ ಪ್ರಭುಗಳು ಮಾತ್ರ ಆ ನೋಟುಗಳ ಜಂಬವನ್ನು ಸರಿಯಾಗಿ ಇಳಿಸಿದರು.
ತರೀಕೆರೆ ಏರಿಯಾ – ಧಮಾ ಧಂ ಕರಡಿ ಖಲಂದರ್
ಕರ್ನಾಟಕದ ಪ್ರಾಚೀನ ಪಟ್ಟಣಗಳಲ್ಲಿ ಒಂದಾದ ಕೊಪ್ಪಳದಿಂದ ೩ ಕಿಮಿ. ದೂರದಲ್ಲಿ ಕಲ್ಲುಗುಡ್ಡದ ಸಂದಿಯೊಳಗೆ ಮಂಗಳಾಪುರ ಅಡಗಿಕೊಂಡಿದೆ. ಊರಸುತ್ತ ಕೆಂಪುಕಾರುವ ಮಸಾರಿ ಹೊಲಗಳು. ಅವುಗಳಲ್ಲಿ ಸೊಕ್ಕಿನಿಂತ ಶೇಂಗಾ, ಗೋವಿನಜೋಳ, ಸುರೇಪಾನದ ಬೆಳೆಗಳು.
ತರೀಕರೆ ಏರಿಯಾ- ಮಹಿಳೆ ಮತ್ತು ರಾಜಕಾರಣ
ಆದರೆ ಭಾರತದ ಮಹಿಳೆಯರು ಸಾರ್ವಜನಿಕ ಬದುಕಿಗೆ ಅದರಲ್ಲೂ ರಾಜಕಾರಣಕ್ಕೆ ಪ್ರವೇಶ ಪಡೆಯುತ್ತಿರುವ ಒಂದು ರೀತಿ ಮಾತ್ರ ವಿಚಿತ್ರವಾಗಿದೆ. ಸಾಮಾನ್ಯವಾಗಿ ಗಂಡ ಇಲ್ಲವೇ ಅಪ್ಪ ಸತ್ತ ಬಳಿಕ ಅವರ ಪ್ರತಿನಿಧಿಯಾಗಿ ಅವರ ಪ್ರವೇಶವಾಗುತ್ತಿದೆ.
ತರೀಕೆರೆ ಏರಿಯಾ – ಚಿಟ್ಟೆಗಳ ಕಲಾವಿದೆ
ನಾವು ಬನವಾಸಿ ಮುಗಿಸಿ, ಕೊಡಚಾದ್ರಿಯನ್ನು ಅಪರಾತ್ರಿಯಲ್ಲಿ ಹತ್ತಿಳಿದು, ಕರಾವಳಿಯನ್ನು ಜಾಲಾಡಿ, ಕುಶಾಲನಗರದ ಬಳಿಯಿರುವ ಬೈಲುಕುಪ್ಪೆಗೆಂದು ಬರುತ್ತಿದ್ದೆವು. ಬೈಲುಕುಪ್ಪೆಯು ಟಿಬೆಟ್ಟಿನ ತಾಂತ್ರಿಕ ಬುದ್ಧಿಸಂ ಕೇಂದ್ರಗಳಲ್ಲಿ ಒಂದು.
ತರೀಕೆರೆ ಏರಿಯಾ – ಒಡೆದ ವಾಡೆಗಳಲ್ಲಿ ಲೋಕ ಜ್ಞಾನ
ಕುಂಬಾರರು ಒಂದು ದೊಡ್ಡ ಮಣ್ಣಿನ ಗುಡ್ಡದಿಂದಲೇ ವಾಡೆಗಳನ್ನು ಮಾಡುತ್ತಾರೆ. ಅಷ್ಟು ದೊಡ್ಡ ಮಣ್ಣಿನ ಮುದ್ದೆಯನ್ನು ಹೇಗೆ ಕುಲಾಲ ಚಕ್ರದ ಮೇಲಿಟ್ಟು ಆಡಿಸುತ್ತಾರೆ, ಒಳಗೆ ಕೈಯಿಟ್ಟು ಹಲಗೆಯಿಂದ ಹೇಗೆ ತಟ್ಟುತ್ತಾರೆ, ಆವಿಗೆಯಲ್ಲಿಟ್ಟು ಹೇಗೆ ಬೇಯಿಸುತ್ತಾರೆ -ನನಗಿನ್ನೂ ಸೋಜಿಗ.
ತರೀಕೆರೆ ಏರಿಯಾ- ಬಿಟ್ಟೇನೆಂದೊಡೆ ಬಿಡದೀ ಬೆಟ್ಟದ ಮಾಯೆ
ಮುಂದೆ ನಾನು ಓದಲು ಶಿವಮೊಗ್ಗೆಗೆ ಹೋದೆ. ಸಹ್ಯಾದ್ರಿ ಕಾಲೇಜಿನ ತರಗತಿಗಳಿಂದ ಕಿಟಕಿಗಳಿಂದಲೇ ಪಡುವಣದಲ್ಲಿ ಮಲೆನಾಡಿನ ಬೆಟ್ಟಗಳು ಕಾಣುತ್ತಿದ್ದವು. ನಂತರ ಮೈಸೂರಿಗೆ ಹೋದೆ. ಅಲ್ಲೂ ಹಾಸ್ಟೆಲ್ ಕೋಣೆಯಿಂದ ಚಾಮುಂಡಿ ಬೆಟ್ಟ ಕಾಣುತ್ತಿತ್ತು.










