ಮಾನವೀಯತೆಗಾಗಿಯೇ ಜೀವ ತೇದವರ ನೆನೆಯುತ್ತಾ…
‘ವರ್ಣ’ ಅಪ್ಪಟ ದಲಿತ ಜಗತ್ತಿನ ಪ್ರಾತಿನಿಧಿಕ ಕವಿತೆ. ಕವಿ ಸುಮ್ಮನೆ ಎಲೆಮರೆಯ ಕಾಯಿಯಂತಿದ್ದರೂ ಬಿಡದೆ ಪ್ರಚೋದಿಸಿ ಅಖಾಡಕ್ಕೆ ಕರೆದು ಕೊನೆಗೆ ಮಣ್ಣುಮುಕ್ಕುವ ಉಢಾಳರಿಗೆ ಎಚ್ಚರಿಕೆಯಂತಿದೆ ಈ ಕವಿತೆ. “ಹಸಿರು, ಕೆಂಪು, ಕಪ್ಪು, ಬಣ್ಣಗಳೊಳಗೆ ಕರಗಿಹೋದ ದಲಿತರ ನೆತ್ತರು ಮತ್ತು ಬೆವರು ಉಳ್ಳವರನ್ನು ಉಸಿರುಗಟ್ಟಿ ಸಾಯಿಸಿದರೆ ಆಶ್ಚರ್ಯಪಡಬೇಕಿಲ್ಲ”. ‘ಹಸಿವು’ ಕವಿತೆ ಅವ್ವನ ಉದಾರತನವನ್ನೂ ಆಕೆಯ ಸಂಸ್ಕಾರವನ್ನೂ ದರ್ಶಿಸಿ ದಂಗುಬಡಿಸುತ್ತದೆ. ಹಸಿವು ಎಂದು ಬಂದವರಿಗೆ ತನ್ನ ಪಾಲಿನ ತಟ್ಟೆಯಲ್ಲಿದ್ದ ಹಿಟ್ಟನ್ನು ಕೊಟ್ಟುಬಿಡುತ್ತಾಳೆ. ಅಭಿಷೇಕ್ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣ
ಸಾಂಘಿಕವಾದ ಕ್ರಿಸ್ಮಸ್ ಸೀಸನ್ ಶುಭಾಶಯಗಳು
ಬಹುಶಃ ಪ್ರಪಂಚದಾದ್ಯಂತ ಕೋಟ್ಯಾಂತರ ಮಕ್ಕಳು ಎದುರು ನೋಡುವ, ಹಾಗೆ ಗಪ್ ಚಿಪ್ ಆಗಿ ಚಿಮಿಣಿಯಲ್ಲಿ ಸಾಂಟಾ ಬಂದು ಕೊಡುವ ಉಡುಗೊರೆಗಾಗಿ ಕಾಯುವ ಯಾವೊಂದು ಮಗುವಿಗೂ ನಿರಾಸೆಯಾಗದ ಸಂದರ್ಭ ಈ ಕ್ರಿಸ್ಮಸ್ ಸೀಸನ್. ಇದು ‘giving’ ಸೀಸನ್. ಅಂದರೆ ನಾವು ಮನಃಪೂರ್ವಕವಾಗಿ ಕೈಲಾದಷ್ಟು ದಾನ ಮಾಡುವ ಕಾಲ. ನಾವು ಕೊಡುವ ದಾನವು ಹಣದಿಂದ ಹಿಡಿದು ಬಟ್ಟೆ, ಉಡುಗೆತೊಡುಗೆ, ಮನೆವಸ್ತುಗಳು, ಪೀಠೋಪಕರಣಗಳು, ಪುಸ್ತಕಗಳು, ಆಹಾರ ಪದಾರ್ಥ, ಎಂಬಂತೆ ನಾನಾತರಹವಾಗಿ ನಾವು ದಾನವೀಯಬಹುದು.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”
ರೈತನ ಮಿತ್ರ ಎರೆಹುಳು ಆದರೆ ಅದರ ವೈರಿ…?
ಮಾನವನ ಪ್ರಕೃತಿಯ ಮೇಲಿನ ದಬ್ಬಾಳಿಕೆಗೆ ಇದೊಂದು ಸಣ್ಣ ಉದಾಹರಣೆ ಅಷ್ಟೆ. ಟ್ರಾಕ್ಟರ್ನಂತಹ ಯಂತ್ರ ಎಲ್ಲರಂತೆಯೇ ಜೀವಿಸುವ ಹಕ್ಕಿರುವ ಹಾವಿನ ಜೀವಕ್ಕೆ ಕುತ್ತು ತಂದಿತ್ತು. ಹಾವು ಕಣ್ಣಿಗೆ ಕಾಣುವ ಜೀವ. ಇನ್ನೂ ಸೂಕ್ಷ್ಮವಾಗಿರುವ ಕಣ್ಣಿಗೆ ಕಾಣದ ಎಷ್ಟೋ ಜೀವಗಳು ಮಣ್ಣಿನಲ್ಲಿ ಬೆರೆತು ವಾಸ ಮಾಡುತ್ತವೆ. ಅವುಗಳನ್ನೆಲ್ಲ ಬುಡಮೇಲು ಮಾಡಿ ಕತ್ತರಿಸಿ ಹಾಕಲು ನಮಗೆ ಹಕ್ಕಿದೆಯೆ? ಅಲ್ಲೊಂದು ನಮಗರಿವಿಲ್ಲದೆ ಉಸಿರಾಡುತ್ತಿರುವ ಜಗತ್ತು ಇದೆ. ಅವುಗಳಿಂದ ನಮ್ಮ ಗಿಡ ಮರಗಳಿಗೆ ಪೋಷಣೆಯೂ ನಿರಂತರವಾಗಿ ಸಿಗುತ್ತಿದೆ.
ಗುರುಪ್ರಸಾದ್ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣ
ಅಂಗೈ ಗೆರೆಗಳಾಗುವುದಿಲ್ಲ ಭವಿಷ್ಯದ ಹೆದ್ದಾರಿಗಳು
ನನಗೆ ನನ್ನ ಭವಿಷ್ಯದ ಬಗ್ಗೆ ತಿಳಿಯುವ ಕುತೂಹಲವುಂಟಾಗಿ ನನ್ನ ಅಂಗೈಯನ್ನು ಅವನ ಮುಂದೆ ಮಾಡಿದೆ. ಆ ಭವಿಷ್ಯಗಾರ ಇಡಿ ನನ್ನ ಅಂಗೈ ಜಾಲಾಡಿ ‘ನಿನ್ನ ವಿದ್ಯಾಭ್ಯಾಸ ಇಲ್ಲಿಗೆ ಕೊನೆ ಆಗತೈತಿ. ಇನ್ ಮುಂದಾ ಓದಾಕ ಹೋಗಬ್ಯಾಡ. ಓದಿದ್ರೂ ತಲಿಗೆ ಹತ್ತಾಂಗಿಲ್ಲ. ಈ ಲಾರಿನ ನಿನಗ ಗತಿ ಆಗ್ತೇತಿ’ ಅಂತ ಹೇಳಿ ಇಳಿದು ಹೋಗಿಬಿಟ್ಟ. ಅಂಗೈ ಮೇಲಿನ ಭವಿಷ್ಯ ನಿಜಾನೋ ಸುಳ್ಳೋ ಒಂದು ತಿಳಿಯದ ವಯಸ್ಸದು. ಯಾರಾದ್ರೂ ಏನಾದ್ರೂ ಹೇಳಿಬಿಟ್ಟರೆ ನಂಬಿಬಿಡುವ ಮುಗ್ಧತೆಯೋ ದಡ್ಡತನವೋ ಆಗ ನನ್ನಲ್ಲಿತ್ತು. ಇಸ್ಮಾಯಿಲ್ ತಳಕಲ್ ಅಂಕಣ
ಯಕ್ಷಗಾನ ಸಂಘಟಕರ ಸಂದರ್ಶನ…
ನಿಜವಾಗಿ ಹೇಳೊದಂದ್ರೆ ನಮಗೆ ಯಕ್ಷಗಾನದ ಮೇಲಿರೊ ಪ್ರೀತಿನೆ ಯಕ್ಷಗಾನ ಮಾಡಿಸೋಕೆ ಇರೊ ಕಾರಣ. ಇಲ್ಲಿ ಪ್ರತಿ ದಿನ ಒಂದಿಪ್ಪತ್ತು ಜನ ಇಲ್ಲಿ ಸೇರ್ತೇವಲ್ಲ, 365 ದಿನನೂ ಯಕ್ಷಗಾನದ ಏನಾದ್ರು ಒಂದು ಸುದ್ದಿ ಮಾತಾಡೇ ಆಡ್ತಿವಿ. ಮಳೆಗಾಲದಲ್ಲಿ ತಾಳಮದ್ದಲೆ ನೋಡ್ತಿವಿ. ಇಲ್ಲಿ ಈ ತರ ಅರ್ಥ ಹೇಳಿದರು. ಅಲ್ಲೊಂದು ಆಟ ನೋಡಿಕೊಂಡು ಬಂದೆ, ಹಿಂಗಾಯಿತು, ಹಂಗಾಯಿತು ಅಂತ ಏನೊ ಒಂದು ಮಾತು ಇರತ್ತೆ.
“ಯಕ್ಷಾರ್ಥ ಚಿಂತಾಮಣಿ” ಅಂಕಣದಲ್ಲಿ ಕೃತಿ ಆರ್ ಪುರಪ್ಪೇಮನೆ ಬರಹ
ಕೊಳ್ಳುವ ಭರದಲ್ಲಿ ವಿವೇಕವೇ ಕಳೆದುಹೋದರೆ!
ಮುವ್ವತ್ತರ ಸುಮಾರಿಗೆ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ. ಕಂಡಿದ್ದನ್ನೆಲ್ಲಾ ಕೊಳ್ಳುವ ಶಕ್ತಿ ನೀಡುವ ಖುಷಿ, ಸವಿಯಾದ ನೆನಪಿನ ಘಮ ಹೊತ್ತ ಅರಿವೆಗಳು ನೀಡುವ ಹಿತಾನುಭವಕ್ಕೆ ಸಾಟಿಯಾಗಬಲ್ಲದೆ? ಕೊಳ್ಳುತ್ತೇನೆಂಬುದು ನಮ್ಮ ಅಹಂಕಾರವನ್ನು ತಣಿಸಬಹುದು. ಆದರೆ ಅಕ್ಕರೆಯ ಸಕ್ಕರೆಯಾಗಬಹುದೆ? ಅರವತ್ತರ ಸುಮಾರಿಗೆ ಈ ಮಟ್ಟಗಿನ ಸರಳತೆ ರೂಢಿಸಿಕೊಳ್ಳೋಣ ಅನ್ನುವಂತಿಲ್ಲ. ಇದು ಖಂಡಿತ ವೈರಾಗ್ಯದ ದಾರಿಯಲ್ಲ. ವಿವೇಚನೆಯ ಹಾದಿ.
ಎಸ್ ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣ
ಕ್ರಿಕೆಟ್ನ ‘ಲಿಟಲ್ ಮಾಸ್ಟರ್ಸ್’ – 1
ವೆಸ್ಟ್ ಇಂಡೀಸ್ಗೆ ಹೋಗಿ ಅವರು ಅಲ್ಲೂ ಸುಮ್ಮನೆ ಕೂರಲಿಲ್ಲ! ಪ್ರಪ್ರಥಮವಾಗಿ ಟೆಸ್ಟ್ಗೆ ಇಳಿದ ಸುನಿಲ್ರ ಆರ್ಭಟ ಎಷ್ಟರ ಮಟ್ಟಿಗೆ ಇತ್ತೆಂದರೆ ಅವರು ಮಾಡಿದ ಭಾರತದ ದಾಖಲೆ ಇನ್ನೂ ಯಾರೂ ಮುರಿದಿಲ್ಲ! ಐದರಲ್ಲಿ, ನಾಲ್ಕು ಟೆಸ್ಟ್ ಅಡಿದ ಸುನಿಲ್ ಗವಾಸ್ಕರ್ ಮೊಟ್ಟ ಮೊದಲನೇಯ ಸರಣಿಯಲ್ಲಿ 774ರನ್ ಹೊಡೆದು ಇಂದಿಗೂ ಆ ವಿಶ್ವದಾಖಲೆ ಜೀವಂತವಾಗಿ ಉಳಿದಿದೆ!
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಸುನಿಲ್ ಗವಾಸ್ಕರ್ ಆಟದ ಕುರಿತ ಬರಹ ನಿಮ್ಮ ಓದಿಗೆ
ಇಂಟರ್ನೆಟ್ ಸೃಷ್ಟಿಸುತ್ತಿರುವ ಆಧುನಿಕ ಪುರಾಣಗಳು
ಭೂಲೋಕದಲ್ಲಿರುವ ಬೆರಗು ಹುಟ್ಟಿಸುವ ಎಲ್ಲ ಕೆಲಸಗಳನ್ನು ಅನ್ಯಲೋಕದ ಜೀವಿಗಳು ಬಂದು ಮಾಡಿದ್ದಾರೆ ಅಂತ ಎಲ್ಲವನ್ನೂ ಏಲಿಯನ್ ಟೆಕ್ನಾಲಜಿಗೆ ಒಪ್ಪಿಸುವ ಅಸಂಬದ್ಧತೆ ಈಗ ಎಲ್ಲಾ ಕಡೆಗಳಲ್ಲಿ ಢಾಳಾಗಿ ಕಾಣಿಸುತ್ತಿದೆ. ಅದು ಎಷ್ಟರ ಮಟ್ಟಿಗೆ ಜನರನ್ನು ನಂಬಿಸಿದೆ ಅಂದರೆ ಇತ್ತೀಚೆಗೆ ಒಬ್ಬರು ನನ್ನೊಂದಿಗೆ ಯಾರಾದರೂ ಮನುಷ್ಯರು ಅಷ್ಟು ಚೆನ್ನಾಗಿ ಕೆತ್ತಲು ಸಾಧ್ಯವೇ ಇಲ್ಲ ಅಂತ ವಾದಿಸುತ್ತಿದ್ದರು. ಅವರಿಗೆ ಈಗಲೂ ಕೆತ್ತನೆ ಮಾಡುವ ಸ್ಥಪತಿಗಳಿರುವುದು ತಿಳಿದಂತಿಲ್ಲ.
ಗಿರಿಜಾ ರೈಕ್ವ ಬರೆಯುವ ‘ದೇವಸನ್ನಿಧಿ’ ಅಂಕಣದಲ್ಲಿ ಹೊಸ ಬರಹ
ಅಭಿಷೇಕ್ ವೈ.ಎಸ್. ಹೊಸ ಅಂಕಣ “ಕಾವ್ಯದ ಹೊಸ ಕಾಲ” ಆರಂಭ
ಕನ್ನಡದ ವಿಶಿಷ್ಟ ಸಾಹಿತ್ಯ ಪ್ರಕಾರವಾದ ‘ವಚನ ಸಾಹಿತ್ಯ’ ಕವಯತ್ರಿಯಮೇಲೆ ಗಾಢ ಪ್ರಭಾವವನ್ನು ಬೀರಿವೆ ಎನ್ನುವುದು ಕೆಲ ಕವಿತೆಗಳಿಂದಲೇ ತಿಳಿಯುತ್ತದೆ. ಅಲ್ಲಮ, ಬಸವಾದಿ ಶರಣರ ನೆರಳಿನ ಛಾಯೆಯಿದೆ. ಅದರಲ್ಲೂ ಅಕ್ಕಮಹಾದೇವಿಯವರ ವಚನಗಳು ಹೆಚ್ಚು ಪ್ರಭಾವಿಸಿವೆ.
ಅಭಿಷೇಕ್ ವೈ.ಎಸ್. ಬರೆಯುವ ಹೊಸ ಅಂಕಣ “ಕಾವ್ಯದ ಹೊಸ ಕಾಲ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ








