ಅಭಿಷೇಕ್ ವೈ.ಎಸ್. ಹೊಸ ಅಂಕಣ “ಕಾವ್ಯದ ಹೊಸ ಕಾಲ” ಆರಂಭ
ಕನ್ನಡದ ವಿಶಿಷ್ಟ ಸಾಹಿತ್ಯ ಪ್ರಕಾರವಾದ ‘ವಚನ ಸಾಹಿತ್ಯ’ ಕವಯತ್ರಿಯಮೇಲೆ ಗಾಢ ಪ್ರಭಾವವನ್ನು ಬೀರಿವೆ ಎನ್ನುವುದು ಕೆಲ ಕವಿತೆಗಳಿಂದಲೇ ತಿಳಿಯುತ್ತದೆ. ಅಲ್ಲಮ, ಬಸವಾದಿ ಶರಣರ ನೆರಳಿನ ಛಾಯೆಯಿದೆ. ಅದರಲ್ಲೂ ಅಕ್ಕಮಹಾದೇವಿಯವರ ವಚನಗಳು ಹೆಚ್ಚು ಪ್ರಭಾವಿಸಿವೆ.
ಅಭಿಷೇಕ್ ವೈ.ಎಸ್. ಬರೆಯುವ ಹೊಸ ಅಂಕಣ “ಕಾವ್ಯದ ಹೊಸ ಕಾಲ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ
ಚುರುಮುರಿ, ಕೋಸಂಬರಿಯಾದ ‘ಆಸ್ಟ್ರೇಲಿಯಾ ಪತ್ರ’
ದೇಶವಿಡೀ ಇನ್ನೇನು ಬರಲಿರುವ ಕ್ರಿಸ್ಮಸ್ ಹಬ್ಬದ ಮೋಡಿಗೆ ಸಿಲುಕಿ ಸಜ್ಜಾಗುತ್ತಿದೆ. ಬಣ್ಣಬಣ್ಣಗಳ ಅಲಂಕಾರಗಳು, ಕ್ರಿಸ್ಮಸ್ ಮಾರ್ಕೆಟ್, ಜನಸಂದಣಿ, ನಗರ ಕೇಂದ್ರದಲ್ಲಿರುವ ಬೃಹತ್ ಅಲಂಕೃತ ಕ್ರಿಸ್ಮಸ್ ಮರ ಎಲ್ಲವೂ ಜನರನ್ನು ಕುಣಿದಾಡಿಸುತ್ತಿವೆ. ಕ್ರಿಸ್ಮಸ್ ದಿನದ ವಿಶೇಷ ಆಹಾರವಾದ ಟರ್ಕಿ ಕೋಳಿ ಮತ್ತು ಸಾಮನ್ ಮೀನು ಮಿಂಚಿನ ವೇಗದಲ್ಲಿ ಮಾರಾಟವಾಗುತ್ತಿವೆ.
ಡಾ. ವಿನತೆ ಶರ್ಮ ಬರೆಯುವ ‘ಆಸ್ಟ್ರೇಲಿಯಾ ಪತ್ರ’
ನಿರ್ಜೀವವೊಂದು ಉಸಿರು ಪಡೆದುಕೊಳ್ಳುವ ಪರಿ…..
ಭೂಮಿಯ ಗರ್ಭಕ್ಕಿಳಿದ ಬೀಜಗಳು ಮೊಳಕೆಯೊಡೆದು ಸಸಿಯಾಗಿ, ಹೂಬಿಟ್ಟು ನೂರಾರು ಕಾಯಿಗಳಾಗಿ, ಹಣ್ಣಾಗಿ, ತೆನೆಗಳಾಗಿ ಹಸಿದ ಹೊಟ್ಟೆಗಳನ್ನು ತಣಿಸುವುದು ಇದೆಯಲ್ಲ, ಇದಕ್ಕಿಂತ ಸೃಜನಾತ್ಮಕವಾದದ್ದು ಪ್ರಪಂಚದಲ್ಲಿ ಬೇರೆ ಯಾವುದೂ ನನ್ನ ಕಣ್ಣಿಗೆ ಕಾಣುವುದಿಲ್ಲ. ಈ ಮಣ್ಣಿನ ಅಂತಃಕರಣವಾದರೂ ಎಂತಹದ್ದು?
ಇಸ್ಮಾಯಿಲ್ ತಳಕಲ್ ಬರೆಯುವ “ತಳಕಲ್ ಡೈರಿ”ಯಲ್ಲಿ ಹೊಸ ಬರಹ
ಡಾನ್ ಬ್ರಾಡ್ಮನ್, ಸಚಿನ್ ಟೆಂಡೂಲ್ಕರ್ ಮತ್ತು ಶೇನ್ ವಾರ್ನ್
ಡಾನ್ ಬ್ರಾಡ್ಮನ್ ಎಂತಹ ಬ್ಯಾಟ್ಸ್ಮನ್ ಆಗಿದ್ದರೆಂದರೆ ಅವರನ್ನು ಔಟ್ ಮಾಡುವುದಕ್ಕೆ ದೇವರೇ, ಅಥವ ನಮ್ಮ ಭಾಷೆಯಲ್ಲಿ ಹೇಳಬೇಕೆಂದರೆ ಬ್ರಹ್ಮನೇ ಬರಬೇಕು ಅನ್ನುವ ಹಾಗೆ ಆಗಿತ್ತು. ಇದನ್ನು ಹೇಗಾದರೂ ಮುರಿಯಬೇಕು ಎಂದು ಇಂಗ್ಲೆಂಡ್ ತಂಡ ಒಂದು ತೀರ್ಮಾನಕ್ಕೆ ಬಂದು 1934ರಲ್ಲಿ ತಂಡದ ನಾಯಕ ಜಾರ್ಡಿನ್ ಒಂದು ಪ್ಲಾನ್ ಹಾಕಿದರು.
ಇ.ಆರ್. ರಾಮಚಂದ್ರನ್ ಬರೆಯುವ ಅಂಕಣ
ಸರಿರಾತ್ರಿಯಲಿ.. ಹುಳ ಹುಪ್ಪಟೆಗಳ ಸಂಗದಲಿ…
ಮನೆಗೆ ಒಂದು ಗಂಡು ಬೇಕು ಅನ್ನುವ ಮೋಹ ಜನರಿಗೆ ಇನ್ನೂ ಕಡಿಮೆಯಾಗಿಲ್ಲ. ವಯಸ್ಸಾದ ಮೇಲೆ ನೋಡಿಕೊಳ್ಳುತ್ತಾರೆ ಎಂಬ ಭ್ರಮೆ ಹಳ್ಳಿಯಲ್ಲಿ ಇನ್ನೂ ಇದೆ. ಎಷ್ಟೋ ವಯಸ್ಸಾದವರನ್ನು ಒಂದೋ ಹೊರ ಹಾಕಿದ್ದಾರೆ ಇಲ್ಲವೇ ಮಕ್ಕಳೇ ಹಳ್ಳಿ ಬಿಟ್ಟು ದೂರ ಇದ್ದಾರೆ. ಇದು ಗಂಡು ಹಡೆದವರ ಭಾಗ್ಯ! ಹಾಗಂತ ಎಲ್ಲ ಗಂಡು ಮಕ್ಕಳು ಹಾಗಿಲ್ಲ ಬಿಡಿ. ಹೆಣ್ಣು ಕರುಳಿನ ಗಂಡು ಹುಡುಗರು ಇನ್ನೂ ಇರುವುದಕ್ಕೆ ಮಳೆ ಬೆಳೆ ಆಗುತ್ತಿರುವುದು!
ಗುರುಪ್ರಸಾದ್ ಕುರ್ತಕೋಟಿ ಅಂಕಣ
ಸಂಗೀತ ಸಂಜೆಗಳ ಇಬ್ಬಗೆಯ ಸುಧೆ
ಆಸ್ಟ್ರೇಲಿಯಾದ ಎಂದೆಂದಿಗೂ ತಿಳಿಯಾಗಿಲ್ಲದ ಇಬ್ಬಗೆಯೆಂದರೆ ಆಸ್ಟ್ರೇಲಿಯನ್ ಅಬೊರಿಜಿನಲ್ ಜನಜೀವನದ ಮುಖ್ಯಭಾಗವಾದ ಸಂಗೀತ ಮತ್ತು ಆಸ್ಟ್ರೇಲಿಯಕ್ಕೆ ಬರಮಾಡಿಕೊಂಡ ಪಾಶ್ಚಾತ್ಯ ಸಂಗೀತ. ಅಬೊರಿಜಿನಲ್ ಜನರನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ವಸಾಹತುಶಾಹಿಗಳು ಪ್ರಯತ್ನಿಸಿದರೂ ಇಪ್ಪತ್ತನೇ ಶತಮಾನದಲ್ಲಿ ಅಬೊರಿಜಿನಲ್ ಸಂಗೀತ, ನೃತ್ಯ ಮತ್ತು ಚಿತ್ರಕಲೆಗೆ ಗಮನ ಕೊಟ್ಟು, ಅವುಗಳಲ್ಲಿರುವ ವಿಶೇಷಣಗಳನ್ನು ಗುರುತಿಸಿದರು.
ಡಾ. ವಿನತೆ ಶರ್ಮ ಅಂಕಣ
ಎಲ್ಲರೊಳಗೊಂದಾಗುವ ಕಲೆಯ ಕಲಿಯುತಾ….
ನೀವು ಯಾರೊಂದಿಗೆ ಮಾತಾಡದಿದ್ದರೂ ಪರವಾಗಿಲ್ಲ. ಚೆನ್ನಾಗಿ ಓದಿ ಒಳ್ಳೆಯ ಪದವಿ ಪಡೆಯಬೇಕು. ಊರ ಉಸಾಬರಿಗೆ ತಲೆಕೊಡುವುದು ಬಿಟ್ಟು ನಿನ್ನ ಜೀವನ ನೀನು ನೋಡಿಕೋ. ಅವರ ಮನೆಯಲ್ಲಿ ಸಾವಾಗಿದ್ದರೆ ಏನಂತೆ? ನಿನ್ನದೆಷ್ಟೋ ಅಷ್ಟರಲ್ಲಿರು. ಯಾವುದಕ್ಕೂ ಮುನ್ನುಗ್ಗಿ ತಲೆಕೊಡಬೇಡ. ಅಂಟಿಯೂ ಅಂಟದಂತೆ ಇರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಹೆಚ್ಚು ಮಾತಿಲ್ಲದೆ ನಾಜೂಕಾಗಿ ಪರಿಸ್ಥಿತಿಯಿಂದ ಬಿಡಿಸಿಕೊಳ್ಳಬೇಕು.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣದಲ್ಲಿ ಹೊಸ ಬರಹ
ಆ ಹುಡುಗಿ ಹಾಗೆಯೇ ಮರಳಿ ಹೋಗಿದ್ದಳು
ಭಿಕ್ಷುಕರೆಂದರೆ ಯಾಕೆ ನಮ್ಮ ಮನಸ್ಸಿಗೆ ತಂಗಳನ್ನವೇ ಬರಬೇಕು ಅಂತ ಪ್ರಶ್ನಿಸಿಕೊಂಡಿದ್ದೇನೆ. ಯಾವುದೋ ಕಾರಣ, ಅಸಹಾಯಕತೆ, ಮತ್ಯಾವುದೋ ಅನಿವಾರ್ಯತೆಯ ಪರಿಸ್ಥಿತಿಗಳು ಅವರನ್ನು ಭಿಕ್ಷೆಗೆ ಹಚ್ಚಿರಬಹುದು. ಆದರೆ ಅವರಿಗೂ ನಮ್ಮಂತೆಯೇ ಎಲ್ಲ ಸವಿಯನ್ನೂ ಸವಿಯಬೇಕೆನ್ನುವ ಆಸೆಗಳೂ ಇರುತ್ತವೆ. ಆ ಆಸೆಗಳನ್ನು, ಅಭಿಲಾಷೆಗಳನ್ನು ನಾವು ಅರ್ಥ ಮಾಡಿಕೊಂಡರೆ ಆ ಮುಗ್ಧ ಮುಖಗಳಲ್ಲಿ ಒಂದಿಷ್ಟಾದರೂ ಮಂದಹಾಸ ಮೂಡಿಸಬಹುದಲ್ಲವೇ? ದೈಹಿಕ ಸಾಮರ್ಥ್ಯವಿದ್ದೂ, ಶಕ್ತರಾಗಿದ್ದೂ ಭಿಕ್ಷೆ ಬೇಡುತ್ತಿದ್ದರೆ ಅದನ್ನು ವಿರೋಧಿಸೋಣ.
ಇಸ್ಮಾಯಿಲ್ ತಳಕಲ್ ಬರಹ
ಬೆಂಕಿಯ ಮಳೆ
ಉಮಾ ಅವರಿದ್ದ ಓಣಿಯ ಬಳಿ ಹೋಗಿ ಒಬ್ಬ ಹೆಂಗಸನ್ನು ‘ಇಲ್ಲಿ ಉಮಾ ಅನ್ನೋರ ಮನೆ ಎಲ್ಲಿ ಬರತ್ತೆ?’ ಅಂತ ಕೇಳಿದೆ. ಅದಕ್ಕವರು ‘ಓಹ್, ಶಾಹೀನಾ ಬೇಗಂ ಮನೆನಾ? ಬನ್ನಿ ಬನ್ನಿ. ನಮ್ಮ ಮನೆ ಪಕ್ಕದ ಮನೆನೇ ಶಾಹೀನಕ್ಕನದು. ನನ್ನ ಹೆಸರು ನಾಗವೇಣಿ. ಅಕಿ ನನ್ನ ಗೆಣತಿ ಅದಾಳೆ.’ ಎನ್ನುತ್ತಾ ನನ್ನನ್ನ ಹಿಂಬಾಲಿಸಿ ಎಂಬುವಂತೆ ಮುಂದೆ ಮುಂದೆ ನಡೆದಳು. ಸ್ವಲ್ಪ ಹೊತ್ತು ನಡೆದ ಮೇಲೆ ಒಂದು ಪುಟ್ಟ ಜನತಾ ಮನೆಯಂತಿದ್ದ ಮನೆಯ ಮುಂದೆ ನಿಂತು ‘ಶಾಹೀನಕ್ಕ, ನಿನ್ನ ನೋಡೋಕೆ ಯಾರೋ ಬಂದಾರೆ…’ ಎಂದು ಕೂಗಿದಳು. ದಾದಾಪೀರ್ ಜೈಮನ್ ಬರೆಯುವ ಅಂಕಣ










