ಸುಂದರಿಗೇನು ಕಷ್ಟ-ಸುಖಗಳಿರುವುದಿಲ್ಲವೇ?
ಇರುವ ಚೆಂದವನ್ನು ಕಾಪಾಡಿಕೊಳ್ಳಬೇಕೆಂಬ ಒತ್ತಡ ಸೃಷ್ಟಿಸುವ ತಾಕಲಾಟ ಬಲ್ಲೆ. ಒಂದೇ ಘಟ್ಟದಲ್ಲಿ ಹೆಚ್ಚು ಕಾಲ ಇರಲಾಗದು. ನಿಧಾನಕ್ಕೆ ಈ ಜತನ ಮಾಡುವ ಉಸಾಬರಿ ಸಾಕೆನ್ನಿಸಿತು. ಹೊರಗೆ ‘ಕಾಣುವ’ ಚೆಂದಕ್ಕಿಂತ ನಾನು ಬೇರೆ ಅನ್ನಿಸಿತು. ಎಷ್ಟೇ ಕಷ್ಟಪಟ್ಟರೂ ಕಾಲನ ಹೊಡೆತ ತನ್ನ ಕೆಲಸ ಮಾಡಿಯೇ ತೀರುತ್ತದೆ. ಕಾಲದೊಂದಿಗೆ ಹೋರಾಡುವುದಕ್ಕಿಂತ ನನ್ನ ವ್ಯಕ್ತಿತ್ವ, ಪ್ರತಿಭೆ, ಬುದ್ಧಿ, ಮನಸ್ಸಿನ ಜೊತೆ ಗುದ್ದಾಡುತ್ತಾ ಬೆಳೆಯುವುದರಲ್ಲಿ ಬದುಕಿನ ಸೌಂದರ್ಯವಿದೆ. ಈ ಸಮಯ ಮತ್ತೆ ಬರಲಾರದು. ಈ ಅವಕಾಶ ಮತ್ತೆ ಸಿಗಲಾರದು. ಹಠಕ್ಕೆ ಬಿದ್ದಂತೆ ಸಂಗೀತ ಮುಂದುವರೆಸಿದೆ.
ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣ
ಅವಳನ್ನು ಅನ್ಯಗ್ರದ ಏಲಿಯನ್ಳಂತೆ ನೋಡತೊಡಗಿದ್ದರು
ಆಧುನಿಕತೆಯ ಬಣ್ಣ ಅಷ್ಟೊಂದು ಮೆತ್ತಿಕೊಂಡಿರದಿದ್ದ ನಮ್ಮ ಕಾಲೇಜಿಗೆ ಆಗ ಒಂದು ಹುಡುಗಿ ಜೀನ್ಸ್ ತೊಟ್ಟು ಬಂದಿರುವುದೇ ದೊಡ್ಡ ವಿಷಯ ಆಗಿಹೋಯಿತು. ಅಂದು ಅವಳನ್ನು ಯಾವುದೋ ಅನ್ಯಗ್ರಹವೊಂದರಿಂದ ಬಂದಿಳಿದ ಏಲಿಯನ್ಳಂತೆ ಎಲ್ಲಾ ಹುಡುಗರು ಅವಳನ್ನೆ ದಿಟ್ಟಿಸತೊಡಗಿದ್ದರು. ಅವಳ ಆ ಬಟ್ಟೆ ಕಂಡು ಆಡಿಕೊಂಡು ನಗುವುದು ಕೊಂಕು ಮಾತನಾಡುವುದು ಶುರು ಮಾಡಿದ್ದರು. ಹುಡುಗರ ವರ್ತನೆ ಎಷ್ಟು ಅತಿರೇಕಕ್ಕೆ ಹೋಯಿತೆಂದರೆ ಆ ಹುಡುಗಿ ತಾನೇನೋ ಮಹಾಪರಾಧ ಮಾಡಿ ಸಿಕ್ಕಿಬಿದ್ದಳೇನೋ ಎನ್ನುವ ಮನೋಭಾವನೆಯಲ್ಲಿ ಕಾಲೇಜು ಮುಗಿಯುವವರೆಗೂ ತಲೆ ತಗ್ಗಿಸಿಕೊಂಡೆ ಕೂಡಬೇಕಾಯಿತು.
ಇಸ್ಮಾಯಿಲ್ ತಳಕಲ್ ಅಂಕಣ
ಆಳದ ದನಿ ತುಂಬಾ ಕ್ಷೀಣವಾಗಿರುತ್ತೆ..
ಪುಣ್ಯ ಕೊನೆಯ ಬಾರಿ ಮಾತನಾಡಿದ್ದು ಇದೆ ಒಂದು ವಾರದ ಕೆಳಗೆ. ಅವನ ಶಾಲಾ ವಾರ್ಷಿಕೋತ್ಸವದಲ್ಲಿ… ಈ ರಗಳೆಗಳೆಲ್ಲ ಶುರುವಾದದ್ದು ಸುರಭಿಯಿಂದಲೇ ಎನ್ನಬೇಕು. ಆರನೇ ತರಗತಿ ಓದುತ್ತಿದ್ದ ಸುರಭಿ, ಒಂದು ದಿನ ಶಾಲೆಯಿಂದ ಬಂದದ್ದೆ ಜೋರಾಗಿ ಅಳತೊಡಗಿದಳು. ‘ಅಣ್ಣ ಹುಡುಗಿ ತರ ಆಡ್ತಾನೆ ಅಂತ ಎಲ್ಲರು ನಂಗೆ ಹೆಣ್ಣಿಗನ ತಂಗಿ ಅಂತ ಆಡ್ಕತಾರೆ…ಕಾಡಿಸ್ತಾರೆ. ನಾಳೆಯಿಂದ ಶಾಲೆಗೇ ಹೋಗಲ್ಲ!’ ಎಂದು ರಂಪ ಮಾಡತೊಡಗಿದ್ದಳು. ಅಂದಿನಿಂದಲೇ ಪ್ರತಾಪ್ ಇವನನ್ನ ಸರಿ ಮಾಡಲು ಶುರುಮಾಡಿದ್ದು… ಪುಣ್ಯನ ದನಿ ಹುಡುಗಿಯ ದನಿಯನ್ನು ಹೋಲುತ್ತಿತ್ತು. ದಾದಾಪೀರ್ ಜೈಮನ್ ಬರೆಯುವ ʻಜಂಕ್ಷನ್ ಪಾಯಿಂಟ್ʼ ಅಂಕಣದ ಹೊಸ ಬರಹ
ʻನಿಧಾನವೇ ಪ್ರಧಾನವೆಂಬುದು ನನ್ನ ವಿಧಾನʼ
ಕ್ರಮೇಣ ನಮಗೆ ಊರು ಪರಿಚಯವಾಗತೊಡಗಿತ್ತು. ಅದು ತುಂಬಾ ಮುಖ್ಯ. ಯಾವ ಊರಿನಲ್ಲಿ ನಾವು ಬೆಳೆಯಲು ಬಯಸುತ್ತೇವೋ ಅಲ್ಲಿನ ಜನರ ಜೊತೆಗೆ ಬೆಳೆಯಬೇಕೆ ವಿನಹ ನಮ್ಮಷ್ಟಕ್ಕೆ ನಾವು ಇರಲು ಸಾಧ್ಯವಿಲ್ಲ. ಇದೆ ರೀತಿ ನಾವು ನಮ್ಮ ಹೊಲದ ಬಳಿಯ ಜನರಿಗೂ ಹತ್ತಿರವಾಗಬೇಕಿತ್ತು. ಅದು ಇನ್ನೂ ಸಾಧ್ಯವಾಗಿರಲಿಲ್ಲ. ನಮಗಿನ್ನೂ ಅಲ್ಲೊಂದು ಮನೆ ಸಿಕ್ಕಿರಲಿಲ್ಲ. ಆದರೆ ಅದಕ್ಕಿಂತ ಮೊದಲು ಶಂಭುಲಿಂಗ ಹೆಗಡೆ ಅವರು ನಮಗೆ ಸಿಕ್ಕಿದ್ದು ತುಂಬಾ ಅನುಕೂಲ ಆಗಿತ್ತು. ಅವರು ನಮಗೆ ಬೇಕಾದ ಮೂಲಭೂತ ಸೌಕರ್ಯಗಳನ್ನೆಲ್ಲ ಚಿಟಿಕೆ ಹೊಡೆದಂತೆ ಕೊಡಿಸಿದ್ದರು.
ಗುರುಪ್ರಸಾದ ಕುರ್ತಕೋಟಿ ಬರೆಯುವ ‘ಗ್ರಾಮ ಡ್ರಾಮಾಯಣ’ ಅಂಕಣದಲ್ಲಿ ಹೊಸ ಬರಹ
ಒಣಎಲೆ ಗೊಬ್ಬರದ ಕಿರು ಕಥೆಗಳು
ಸುಮಾರು ಹತ್ತು ಎಕರೆ ಪ್ರದೇಶದಲ್ಲಿರುವ ನಗರಪಾಲಿಕೆ ಮರುಬಳಕೆ ಘಟಕದ ಒಂದು ಭಾಗದಲ್ಲಿ ಒಣ ಎಲೆಗೊಬ್ಬರ ವಿತರಣೆ ವ್ಯವಸ್ಥೆಯಿದೆ. ವಾರಾಂತ್ಯದಲ್ಲಿ ಮಧ್ಯಾಹ್ನ ಹನ್ನೆರಡರ ನಂತರ ಹೋದಾಗ ಕಂಡಿದ್ದು ಒಂದೆಡೆ ಒಂದಷ್ಟು ಜನರು ತಾವು ತಂದ ತ್ಯಾಜ್ಯ ಮತ್ತು ಹಸಿರು ಗಿಡಮರಗಳ ಭಾಗಗಳನ್ನು ಸುರಿಯುತ್ತಿದ್ದರು. ಬೆಳಗಿನ ಸಮಯದಲ್ಲಿ ಅಲ್ಲಿ ಹೋಗಲು ಸಾರ್ವಜನಿಕರಿಗೆ ಅನುಮತಿಯಿಲ್ಲ. ಆಗ ನಗರಪಾಲಿಕೆಯ ಯಂತ್ರಗಳು ಈ ಗಿಡಮರ ಭಾಗಗಳನ್ನು ಕತ್ತರಿಸಿ, ಅರೆದು ಅವನ್ನು ಒಯ್ದು ಒಂದು ಮೂಲೆಯಲ್ಲಿ ರಾಶಿ ಮಾಡುತ್ತಿರುತ್ತವೆ. ಡಾ. ವಿನತೆ ಶರ್ಮ ಅಂಕಣ
ಕಾಡುವ ಕತೆಗಳ ರೂವಾರಿ….
ಆ ಕಾಲಘಟ್ಟ ಬಂಗಾಳದ ಮಟ್ಟಿಗೆ ಅದೊಂಥರಾ ವಿಚಿತ್ರ ಪರಿಸ್ಥಿತಿ. ಅತ್ಯಂತ ವಿದ್ಯಾವಂತ, ಬುದ್ಧಿವಂತರಾದ ಜನಸಮುದಾಯ. ಆದರೆ ಅಷ್ಟೇ ಕರ್ಮಠ ಆಚರಣೆಗಳಿಂದ ಜರ್ಜರಿತವಾಗುತ್ತಾ ಇದ್ದ ಸಮುದಾಯ. ಅತ್ತ ಶ್ರೀಮಂತ ಜಮೀನುದಾರರು ಮತ್ತು ಬಡ ಕೂಲಿ ಕಾರ್ಮಿಕರು ಹಾಗೂ ಗೇಣಿದಾರರು. ಧನಾತ್ಮಕ ಮತ್ತು ಋಣಾತ್ಮಕ ಎರಡೂ ಅಂಶಗಳಲ್ಲಿ ಅತಿರೇಕದ ತುದಿಗಳಲ್ಲಿದ್ದ ಸಮಾಜ. ಇದನ್ನು ಸುಧಾರಿಸಲು ದೊಡ್ಡ ಸಂಖ್ಯೆಯಲ್ಲೇ ಹುಟ್ಟಿಬಂದ ಸುಧಾರಣಾವಾದಿಗಳು. ಆಂಗ್ಲ ಶಿಕ್ಷಣದಿಂದ ಬಹಳ ಕ್ಷಿಪ್ರವಾಗಿ ಪ್ರಸರಣಗೊಂಡ ಪಾಶ್ಚಾತ್ಯ ಜ್ಞಾನ. ಆಂಗ್ಲರು ಕೂಡಾ ಪ್ರಭಾವಿತಗೊಳ್ಳುವಷ್ಟರ ಮಟ್ಟಿಗಿನ ಬುದ್ಧಿಮತ್ತೆ.
ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ
ನಾವಿದ್ದ ಅಪಾರ್ಟ್ಮೆಂಟಿನ ಮನೆಯನ್ನು ಸ್ವಚ್ಛ ಮಾಡಲು ಬರುತ್ತಿದ್ದ ಹದಿನೈದೋ ಹದಿನಾರೋ ಪ್ರಾಯದ ಬೆಂಗಾಲಿ ಹುಡುಗಿಯ ಬದುಕುವ ದರ್ದಿಗೆ ನಾನು ಬೆರಗಾಗಿದ್ದೆ. ಮಾತನಾಡಿಸಿದರೆ ಏನೊಂದೂ ಮಾತನಾಡದ, ಏನಾದರೂ ಪ್ರಶ್ನೆ ಕೇಳಿದರೆ ಸುಮ್ಮನೆ ನಕ್ಕುಬಿಡುತ್ತಿದ್ದ ಆ ಹುಡುಗಿ ತನ್ನ ತಾಯಿಯ ಜೊತೆಗೆ ಇಬ್ಬರು ತಂಗಿಯರನ್ನೂ ಬಂಗಾಳದ ಯಾವುದೋ ಹಳ್ಳಿಯಿಂದ ಕರೆದುಕೊಂಡು ಬಂದು ತಾನೊಬ್ಬಳೇ ದುಡಿಯುತ್ತಾ ಅವರನ್ನೆಲ್ಲಾ ಸಾಕುತ್ತಿದ್ದ ಪರಿ ನನ್ನಲ್ಲಿ ಸೋಜಿಗ ಹುಟ್ಟಿಸುತ್ತಿತ್ತು. ಮುಂಬೈಯಂತಹ ನಗರಗಳಲ್ಲಿ ಒಂಟಿ ಮಹಿಳೆಯರು ಒಂಟಿ ಹುಡುಗಿಯರು ಜೀವ ಕೈಯಲ್ಲಿ ಹಿಡಿದೆ ದುಡಿಯುತ್ತಿರುತ್ತಾರೆ.
ʻತಳಕಲ್ ಡೈರಿʼಯಲ್ಲಿ ಮುಂಬೈ ಮಹಾನಗರಿಯ ಬೆರಗಿನ ದಿನಗಳನ್ನು ಹಂಚಿಕೊಂಡಿದ್ದಾರೆ ಇಸ್ಮಾಯಿಲ್ ತಳಕಲ್
ಬೋರ್ವೆಲ್ ಮತ್ತು ʻನೀರʼಕ್ಷರಿಗಳು
ಕಡೆಗೊಮ್ಮೆ ಬೋರ್ ಕೊರೆಸುವ ಮನಸ್ಸು ಮಾಡಿದೆವು. ನೀರಿನ ಸೆಲೆಯನ್ನು ಕಂಡು ಹಿಡಿಯುವುದು ಅತ್ಯಂತ ಕ್ಲಿಷ್ಟವಾದ ಕೆಲಸ. ಮೇಲೆ ನಿಂತುಕೊಂಡು ಭೂಮಿಯಲ್ಲಿ ಇಷ್ಟು ಆಳದಲ್ಲಿ ನೀರು ಸಿಗುತ್ತದೆ ಅಂತ ಹೇಳುವುದು ಸುಲಭ ಅಲ್ಲ. ಆದರೆ ಹಾಗೆ ಹೇಳುತ್ತೇವೆ ಅಂತ ತೆಂಗಿನಕಾಯಿ ಸರ್ಕಸ್ ಮಾಡಿ ಜನರನ್ನು ಯಾಮಾರಿಸುವ ತುಂಬಾ ಜನರು ಹುಟ್ಟಿಕೊಂಡಿದ್ದಾರೆ. ತೆಂಗಿನಕಾಯಿ ಅಲುಗಾಡಿಸಿ ಒಂದು ಪಾಯಿಂಟ್ ತೋರಿಸಿ ಅಲ್ಲಿ ನೀರು ಬರದಿದ್ದರೆ ಅರ್ಧ ದುಡ್ಡು ವಾಪಸ್ಸು ಅಂತ ಹೇಳುವವರೂ ಇದ್ದಾರೆ. ಹತ್ತಿದರೆ ಅವರಿಗೆ ಲಾಟರಿ. ಇಲ್ಲದಿದ್ದರೆ ಅವರಿಗೆ ಅರ್ಧ ದುಡ್ಡು. ಗುರುಪ್ರಸಾದ ಕುರ್ತಕೋಟಿ ಬರೆಯುವ ‘ಗ್ರಾಮ ಡ್ರಾಮಾಯಣ’ ಅಂಕಣ
ಹೆಸರಿಲ್ಲದ ಬಂಧಗಳ ಬಾಹುಗಳಲ್ಲಿ…
ಕೆಲವು ಕೆಟ್ಟ ಸನ್ನಿವೇಶಗಳಲ್ಲಿ ಈ ಪ್ರಪಂಚವೇ ನಮ್ಮ ವಿರುದ್ಧ ನಿಂತಿದೆಯೇನೋ ಎನ್ನಿಸುವ ಹೊತ್ತಿನಲ್ಲಿ ಇಂತಹ ಹಚ್ಚನೆಯ ಹಿತವನ್ನು ಸವರಿದ ಸಂದರ್ಭಗಳನ್ನು ಮೆಲುಕು ಹಾಕಬೇಕು. ಬಹುಶಃ ಈ ಪ್ರಪಂಚ ನಡೆಯುತ್ತಿರುವುದೇ ಇಂತಹ ಅಜ್ಞಾತ ಕೈಗಳ ಅಭಯದಿಂದ. ಪ್ರತಿದಿನವೂ ಸಿಗುವ ಅವಕಾಶ ಇರುವ, ಸಂಬಂಧಗಳಿಂದ ಅಂಟಿಕೊಂಡ, ಸ್ನೇಹ-ವ್ಯವಹಾರ-ವಿಶ್ವಾಸ- ಪರಿಚಯದ ಮುಸುಕು ಹೊದ್ದ ದಿನನಿತ್ಯದ ಕೊಡು-ಕೊಳ್ಳುವಿಕೆಗೆ ಒಂದು ತೂಕವಾದರೆ, ಮತ್ತೊಮ್ಮೆ ಸಿಗುವ ಸಾಧ್ಯತೆಯೇ ಕ್ಷೀಣವಾಗಿರುವ ಅಪ್ಪಟ ಮನುಷ್ಯಸಂಬಂಧವಾಗಿ ಎದುರಾಗುವ ಉಪಕಾರಗಳದ್ದು ಮತ್ತೊಂದು ವಜನು.










