ಭಾರತಕ್ಕೆ ಹತ್ತಿರವಾದ ಅಮೇರಿಕ: ಎಂ.ವಿ. ಶಶಿಭೂಷಣ ರಾಜು ಅಂಕಣ
ಭಾರತೀಯರ ಹಣ, ಅಂತಸ್ತು, ಜಾತಿ ತೋರಿಕೆ ಇಂತವುಗಳಿಂದ ದೂರಸರಿಯಲು ಅವರು ಬಯಸುತ್ತಾರೆ. ಕೆಲ ಭಾರತೀಯರದು ಸಂಕುಚಿತ ಮನೋಭಾವ, ಕೆಲವರು ಅತಿಯಾಗಿ ಹಚ್ಚಿಕೊಳ್ಳಲು ಹವಣಿಸಿ, ಕೊನೆಗೆ ವ್ಯಯಕ್ತಿಕ ವಿಷಯಗಳನ್ನು ಕೆದುಕುತ್ತಾರೆ, ಇಂತವುಗಳಿಂದ ತಪ್ಪಿಸಿಕೊಳ್ಳಲು ಬಂದಂತಹ ಕೆಲವರಿಗೆ ಇದರಿಂದ ಮುಜುಗರವಾಗುತ್ತದೆ. ಇದಲ್ಲದೆ ಭಾರತೀಯರನ್ನು ಹಚ್ಚಿಕೊಂಡಷ್ಟೂ ಸಾಮಾಜಿಕ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ ಎಂದು ಅವರು ಭಾವಿಸುತ್ತಾರೆ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
ಯೂತ್ ಕ್ರೈಂ ಸುಧಾರಣೆಯತ್ತ: ವಿನತೆ ಶರ್ಮ ಅಂಕಣ
ನಾವು ಮುಖ್ಯವಾಗಿ ಯೂತ್ ಕ್ರೈಂ ವಿಷಯವನ್ನು ಅಪರಾಧ-ಕೇಂದ್ರಿತ ನಿಲುವಿನಿಂದ ನೋಡುವ ನಮ್ಮ ದೃಷ್ಟಿಕೋನವನ್ನು ಬದಲಿಸಿಕೊಂಡು ಅದನ್ನು ಪರಿಹಾರ-ಕೇಂದ್ರಿತ ದೃಷ್ಟಿಯಿಂದ ನೋಡಬೇಕು. ಆಗ ನಮ್ಮ ಗಮನ ಸಮಸ್ಯೆಗಿಂತಲೂ ಹೆಚ್ಚು ಒಟ್ಟಾರೆ ಸಮಗ್ರ ಪರಿಸ್ಥಿತಿಯನ್ನು ನೋಡುವ, ಅದನ್ನು ವಿಶ್ಲೇಷಿಸುವ ಸುಧಾರಣಾ ಹಾದಿಯತ್ತ ಹೊರಳುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”ನಿಮ್ಮ ಓದಿಗೆ
ಕೊಡಲೀಯ ಕಂಡರೆ ಮರವೆಲ್ಲ ನಡುಗೀದೊ: ಸುಧಾ ಆಡುಕಳ ಅಂಕಣ
ಹಲಸಿನ ಹಣ್ಣಾದ ದಿನವಂತೂ ಅವರಿಗೆ ಅನ್ನವೇ ಸೇರದು. ಚಕ್ಕೆಯೋ, ಬೊಕ್ಕೆಯೋ ಯಾವುದಾದರೂ ಸರಿಯೆ, ಸಕ್ಕರೆಯಂತೆ ಸಿಹಿಯಾಗಿರುವ ಹಣ್ಣಿನಿಂದ ಹೊಟ್ಟೆ ತುಂಬಿತೆಂದರೆ ದಿನವಿಡೀ ಬೇರೇನೂ ಬೇಕೆನಿಸದು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಒಂಭತ್ತನೆಯ ಕಂತು ನಿಮ್ಮ ಓದಿಗೆ
ಅಮೇರಿಕಾ ಜೀವನ ತತ್ವ: ಎಂ.ವಿ ಶಶಿಭೂಷಣ ರಾಜು ಅಂಕಣ
ಅಮೇರಿಕಾದಲ್ಲಿ ಹಣಕ್ಕೆ ಮಹತ್ವ ಹೆಚ್ಚಿದೆ. ಎಲ್ಲವೂ ದುಬಾರಿ. ಹೋಟೆಲ್‌ನಲ್ಲಿ ಸ್ನೇಹಿತರು ತಿಂಡಿಗೋ, ಊಟಕ್ಕೋ ಹೋದರೆ ಬಿಲ್ಲನ್ನು ಎಲ್ಲರೂ ಹಂಚಿಕೊಳ್ಳುತ್ತಾರೆ, ಒಬ್ಬರೇ ಕೊಡಲು ಬಿಡುವುದಿಲ್ಲ. ಯಾವುದೇ ಪ್ರದೇಶಕ್ಕೆ ಹೋದಾಗ, ಪ್ರವಾಸಕ್ಕೆ ಹೋದಾಗ ಖರ್ಚನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ. ಯಾರದಾದರೂ ಮನೆಗೆ ಹೋದಾಗ ಏನಾದರೂ ಉಡುಗೊರೆ ತೆಗೆದುಕೊಂಡು ಹೋಗುತ್ತಾರೆ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
ಹರಿಸಲಾರದ ಸಮುದ್ರವಿದೆ ಅವನಲ್ಲೂ..: ಆಶಾ ಜಗದೀಶ್ ಅಂಕಣ
ಇಷ್ಟೆಲ್ಲ ಗೊಂದಲ, ಪ್ರಶ್ನೆಗಳ ನಡುವೆಯೂ ನಾನೇಕೆ ಪತಿಪೂಜೆ ಮಾಡುತ್ತೇನೆ ಎಂದರೆ ಅದು ಧಾರ್ಮಿಕ ಕಟ್ಟಳೆಯಲ್ಲ ಅದು ಹೃದಯದ ನಿವೇದನೆ. ನನ್ನವನೆದುರು ನನ್ನ ಪ್ರೀತಿಯನ್ನು ತೋರಿಸಿಕೊಳ್ಳುವ ಒಂದು ವಿಧಾನ. ನಾವು ಹೆಣ್ಣುಮಕ್ಕಳಿಗೆ ಇಂತಹ ಹಲವಾರು ದಾರಿಗಳಿವೆ. ನಾವು ಯಾವುದನ್ನೂ ಮುಚ್ಚಿಟ್ಟುಕೊಳ್ಳಲಾರೆವು. ಕೋಪ, ಅಸಹನೆ, ನೋವು, ನಗು, ಅಳು… ಎಲ್ಲವನ್ನೂ ತೋರಿಸಿಕೊಂಡುಬಿಡುತ್ತೇವೆ. ಆದರೆ ಗಂಡಿಗೆ ಹಾಗಲ್ಲ. ಅವನು ತನ್ನ ನೋವನ್ನಾಗಲೀ, ಅಳುವನ್ನಾಗಲೀ, ಕಣ್ಣೀರನ್ನಾಗಲೀ ತೋರಿಸುವಂತೆಯೇ ಇಲ್ಲ.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಬರಹ ನಿಮ್ಮ ಓದಿಗೆ
ಯೂತ್ ಕ್ರೈಂ ಕತೆಗಳು: ವಿನತೆ ಶರ್ಮ ಅಂಕಣ
ಎಷ್ಟೋ ಬಾರಿ ಪೊಲೀಸರು ಈ ಮಕ್ಕಳಿಗೆ ಎಚ್ಚರಿಕೆ ಕೊಟ್ಟು ಕಳಿಸುತ್ತಾರೆ. ಕೆಲವೊಮ್ಮೆ ದೊಡ್ಡ ಮಕ್ಕಳು ಯೂತ್ ಜಸ್ಟಿಸ್ ಮುಖಾಮುಖಿ ಸಭೆಗಳಲ್ಲಿ ಸಲಹೆ, ಬುದ್ಧಿವಾದಗಳನ್ನು ಪಡೆದು ಹೋಗುತ್ತಾರೆ. ಕೆಲವರಿಗೆ ಅಪರಾಧ ಮಾಡುವುದು ತಮಾಷೆಯಾದರೆ ಇನ್ನೂ ಕೆಲವು ಮಕ್ಕಳಿಗೆ ಅದು ಉದ್ದೇಶಪೂರ್ವಕವಾದ ನಡವಳಿಕೆ ಆಗಿರುತ್ತದೆ ಎಂದು ಸಮಾಜ ಕಾರ್ಯಕರ್ತರು, ಆಪ್ತಸಮಾಲೋಚನಾ ತಜ್ಞರು ಹೇಳುತ್ತಾರೆ. ಚಿಂತಿಸುವ ವಿಷಯವೆಂದರೆ ಅವರಲ್ಲಿ ಅನೇಕರು ಪದೇಪದೇ ಅದೇ ರೀತಿಯ ಅಪರಾಧಗಳನ್ನು ಮಾಡುತ್ತಾ ಇರುತ್ತಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ನೀಲಿ ನೋಡಿದ ಕಾಡು: ಸುಧಾ ಆಡುಕಳ ಅಂಕಣ
ಒಮ್ಮೆ ಅವನೂ, ನೀಲಿಯ ತಂದೆಯೂ ಅಂಟುವಾಳದ ಕಾಯಿಗಳನ್ನು ಹುಡುಕುತ್ತ ಕಾಡಿನಲ್ಲಿ ಬಹುದೂರದವರೆಗೆ ಸಾಗಿದರಂತೆ. ಚೀಲಗಟ್ಟಲೆ ಕಾಯಿಗಳನ್ನು ಕೊಯ್ದು ಮೂಟೆಗಟ್ಟಿ ದಣಿವಾರಿಸಿಕೊಳ್ಳಲೆಂದು ಮರವೊಂದರ ಬೇರಿನ ಮೇಲೆ ಕುಳಿತು ಕವಳ ತಿನ್ನತೊಡಗಿದರಂತೆ. ಸುಮಾರು ಹೊತ್ತಿಗೆ ನೋಡಿದರೆ ಅವರು ಕುಳಿತಿದ್ದ ಬೇರು ನಿಧಾನಕ್ಕೆ ಚಲಿಸಲು ಪ್ರಾರಂಭವಾಯಿತಂತೆ. ಅರೆ! ಇದೇನಿದು? ಎಂದು ಎದ್ದು ದೂರ ನಿಂತರೆ ಮರದ ಬೇರೆಂದು ಅವರು ಕುಳಿತದ್ದು ಮಾದೊಡ್ಡ ಹೆಬ್ಬಾವಿನ ಮೇಲಂತೆ!
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಎಂಟನೆಯ ಕಂತು ನಿಮ್ಮ ಓದಿಗೆ
ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗಳು: ಎಂ.ವಿ ಶಶಿಭೂಷಣ ರಾಜು ಅಂಕಣ
ಹೀಗೆ ಹೊತ್ತಿಲ್ಲದ ಹೊತ್ತಿನಲ್ಲಿ ಕೆಲಸಮಾಡುವುದರಿಂದ, ಓಡಾಡಲು ಸ್ವಂತ ವಾಹನ ಇಲ್ಲದಿರುವುದರಿಂದ, ರೈಲು, ಬಸ್ಸುಗಳಲ್ಲಿ ಅಥವಾ ನಡೆದು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಬೇಕಾಗಿರುವುದರಿಂದ, ಕೆಲವು ಅನಾಹುತಗಳಿಗೆ ತೆರೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಇದೇ ಹೆಚ್ಚಿನ ಅನಾಹುತಗಳಿಗೆ ಕಾರಣ. ಇದು ಭಾರತೀಯ ವಿದ್ಯಾರ್ಥಿಗಳೇ ಅಲ್ಲ, ಎಲ್ಲಾ ದೇಶಗಳ ವಿದ್ಯಾರ್ಥಿಗಳಿಗೂ ಜರುಗುತ್ತದೆ.
ಎಂ.ವಿ. ಶಶಿಭೂಷಣ ರಾಜು ಅಂಕಣ
ಮಹಿಳಾ ದೌರ್ಜನ್ಯದ ಸುತ್ತ…: ವಿನತೆ ಶರ್ಮ ಅಂಕಣ
ಒಬ್ಬ ಮಹಿಳೆ ತನ್ನ ಗಂಡನಿಂದಲೊ, ಜೀವನ ಸಂಗಾತಿಯಿಂದಲೊ ಅಥವಾ ಆ ರೀತಿಯ ಸಂಬಂಧವು ಕೊನೆಯಾಗಿ ಬೇರ್ಪಟ್ಟ ಮೇಲೂ ಅವರಿಂದ ಹಿಂಸೆಗೊಳಗಾಗಿ ಸಾಯುವುದು ಬಹಳ ದುಃಖಕರ ವಿಷಯ. ಒಂದು ಮುಂದುವರೆದ ಸಮಾಜವೆಂದು ಕರೆಸಿಕೊಳ್ಳುವ ಪಾಶ್ಚಾತ್ಯ ದೇಶವಾದ, ಕೇವಲ ೨೬ ಮಿಲಿಯನ್ ಜನರಿರುವ ಈ ದೇಶದಲ್ಲಿ ಕೌಟುಂಬಿಕ ಹಿಂಸೆ ಹಿನ್ನೆಲೆಯಲ್ಲಿ ಹೆಂಗಸೊಬ್ಬಳನ್ನು ಸಾಯಿಸುವುದು ಅವಮಾನವನ್ನುಂಟು ಮಾಡುವ ವಿಷಯ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”