ಯಕ್ಷಗಾನವೂ ಜಾನಪದವೂ ಶಾಸ್ತ್ರೀಯವೂ
ಮೀಮಾಂಸೆಯ ಕ್ಷೇತ್ರ ‘ಶಾಸ್ತ್ರೀಯ’ ಕಲೆಗಳ ಸಾಮಾಜಿಕತೆಯನ್ನೂ ತೋರಿಸಿದೆ. ವೈಯಕ್ತಿಕತೆಯ ಹುಸಿಕಲ್ಪನೆಯನ್ನು ಬಲಪಡಿಸುವುದು, ರಾಷ್ಟ್ರವನ್ನು ಪ್ರತಿನಿಧಿಸುವುದು ಮತ್ತು ಇತರೆ ಕಲೆಗಳಿಂದ ಬೇರ್ಪಡಿಸಿಕೊಂಡು ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವುದು ಇವೆಲ್ಲವೂ ಅದರ ಕೆಲಸವೇ. ‘ಜಾನಪದ’ ಕಲೆಯನ್ನು ಅದರ ಸಾಮಾಜಿಕ ಉಪಯುಕ್ತತೆಗಾಗಿ ನೋಡುವುದು, ‘ಶಾಸ್ತ್ರೀಯ’ವನ್ನು ‘ಶುದ್ಧ ಸೌಂದರ್ಯದ’ ಪರಿಕಲ್ಪನೆಯಲ್ಲಿ ಮಾತ್ರ ನೋಡುವುದು ಕಲಾ ಅಧ್ಯಯನದ ಒಂದು ಮಿತಿಯೇ ಹೌದು. -ಕೃತಿ ಆರ್ ಪುರಪ್ಪೇಮನೆ ಬರಹ
ಕಂಬಾರರ ಕಾವ್ಯ: ಪರಂಪರೆಯ ಸಮೃದ್ಧಿ ಮತ್ತು ಆಧುನಿಕತೆಯ ಬರಡುತನ
ಕಾಲದೇಶಗಳನ್ನು ಅಖಂಡವಾಗಿ ಗ್ರಹಿಸುವ ಮನೋಧರ್ಮದಿಂದಲೇ ಕಂಬಾರರ ಬರಹದಲ್ಲಿ ಸಾಮುದಾಯಿಕ ಅನುಭವಗಳು ಸಮೃದ್ಧವಾಗಿವೆ ಮೇಲ್ನೋಟಕ್ಕೆ ನವ್ಯ ಕಾವ್ಯದಿಂದ ಬಹಳ ಭಿನ್ನವಾಗಿ ಕಾಣುವ ಕಂಬಾರರ ಕಾವ್ಯ ಆಳದಲ್ಲಿ ನವ್ಯಕಾವ್ಯದ ಪ್ರಮುಖ ಕಾಳಜಿಗಳನ್ನು ಇತ್ತೀಚಿನವರೆಗೆಯೂ ಪೂರ್ಣವಾಗಿ ಬಿಟ್ಟುಕೊಟ್ಟಂತೆ ಕಾಣುವುದಿಲ್ಲ. ಆದರೆ ನವ್ಯಕಾವ್ಯವು ಹುಡುಕಾಟದಲ್ಲಿದ್ದ ಅಸ್ತಿತ್ವದ ಪ್ರಶ್ನೆಗಳು, ವ್ಯಕ್ತಿತ್ವದ ಒಳಗಿನ ಬಿರುಕುಗಳನ್ನು ಸಮುದಾಯಗಳ, ಜನಪದ ನಂಬಿಕೆಗಳ ವಿಶಾಲಭಿತ್ತಿಯಲ್ಲಿ ಪರೀಕ್ಷಿಸಲು ತೊಡಗಿದ್ದರಿಂದ ಕಂಬಾರರ ಕಾವ್ಯಕ್ಕೆ ದೊಡ್ಡ ಹರಹು ಒದಗಿಬಂದಿದೆ. ಎಸ್. ಸಿರಾಜ್ ಅಹಮದ್ ಅಂಕಣ..
ಜೀವನದ ʼರಂಗ ನೇಪಥ್ಯʼದಿಂದ ಮರೆಯಾದ ಗುಡಿಹಳ್ಳಿ
ಹಿಂದೊಮ್ಮೆ ಗುಡಿಹಳ್ಳಿ ಸರ್ ಅವರ ಬಳಿ ಮಾತಾಡುವಾಗ ತಮಗೆ ಹುಷಾರಿಲ್ಲ ಅಂತ ಅವರು ಹೇಳಿದದ್ದು ನೆನಪಿಗೆ ಬಂತು. ಆದರೆ ಅದು ಸಾವಿನ ರೂಪದಲ್ಲಿ ಕೂತಿದೆ ಎನ್ನುವ ಕಲ್ಪನೆ ನನ್ನಲ್ಲಿ ಇರಲಿಲ್ಲ. ನನ್ನೊಂದಿಗೆ ಮಾತಾಡುವಾಗಲೇ ಅವರ ಧ್ವನಿ ಕ್ಷೀಣಿಸಿದಂತೆ ಅನಿಸುತ್ತಿತ್ತು. ಹೀಗೇ ಏನೋ ವಯೋಮಾನ ಸಹಜವಾಗಿ ಖಾಯಿಲೆ ಅಡರಿ ಕೊಂಡಿರುತ್ತದೆ… ಕಾಲಕ್ರಮದಲ್ಲಿ ಸುಧಾರಿಸುತ್ತದೆ ಅಂದುಕೊಂಡಿದ್ದೆ. ಆದರೆ ಇದು ಅವರ ಚಿತ್ರವನ್ನು ಸಂಪೂರ್ಣ ಕಲಕಿ ಬಿಡಬಹುದು ಎಂಬ ಅಂದಾಜೂ ಇರಲಿಲ್ಲ. ಎನ್.ಸಿ. ಮಹೇಶ್ ಬರೆಯುವ ‘ರಂಗ ವಠಾರ’ ಅಂಕಣ
ಕವಿಶೈಲದ ಹುಲಿಯೂ ದೂರದ ಕುದುರೆಮುಖವೂ
ಭಯವನ್ನು ಅನಾಮತ್ತಾಗಿ ಎತ್ತಿ ಬೆನ್ನ ಹಿಂದಕ್ಕೆ ಬಿಸಾಡಿ, ಕವಿಶೈಲದ ಕಲ್ಲುಬೆಂಚುಗಳ ಬಳಿ ನಿಂತು ಕಣಿವೆಯ ಕಡೆಗೆ ಕಣ್ಣು ಹಾಯಿಸಿದರೆ, ಅಸ್ಪಷ್ಟ ಬೆಳಕುಗಳಲ್ಲಿ ಕಂಡೂ ಕಾಣದಂತಿದ್ದ ದಟ್ಟ ಕಾಡು. ಬೆಳಗ್ಗೆ ಕಂಡಿದ್ದ ನೋಟದ ಅಂದಾಜಿನ ಮೇರೆಗೆ ಮೆಲ್ಲಗೆ ಗೆರೆಗಳನ್ನು ಒಂದೊಂದಾಗಿ ಜೋಡಿಸಿಕೊಳ್ಳುತ್ತ ಹೋದಂತೆ ರೋಮಾಂಚನ. ಅಷ್ಟೊಂದು ಅಗಾಧ ಕಾಡನ್ನು ಕತ್ತಲಲ್ಲಿ ಕಣ್ತುಂಬಿಕೊಳ್ಳುವುದೊಂದು ಅದ್ಭುತ ಪುಳಕ. ನಿಮ್ಮ ಕಂಗಳು ಬರೀ ಕಂಗಳಾಗಿಯಷ್ಟೇ ಉಳಿಯದಂಥ ಜಾದೂ ಅದು.
ಸಹ್ಯಾದ್ರಿ ನಾಗರಾಜ್ ಬರೆಯುವ ‘ಸೊಗದೆ’ ಅಂಕಣ
ಕನಸಿಗಿದೆ ಘನತೆ ಎನ್ನುತ ಕಾಡುವ ವಸಂತ
ಬೇರೆಬೇರೆ ದೇಶಗಳಿಂದ ತಂದಿಟ್ಟು ಬೆಳೆದ ಸಸ್ಯಸಂಪತ್ತಿಗೆ ಹೋಲಿಸಿದರೆ ಆಸ್ಟ್ರೇಲಿಯಾದ ಸ್ವಾಭಾವಿಕ, ದೇಶೀಯ ಹೂಗಳು ಇಲ್ಲಿ ಹೆಚ್ಚಾಗಿ ಜನಜನಿತವಾಗಿಲ್ಲ. ಕಾರಣ ನಿಮಗೆ ಹೊಳೆದಿರಬಹುದು. ಸಮಾಜವು ವಸಾಹತುಶಾಹಿ ಆಡಳಿತದಲ್ಲಿ ಇಲ್ಲಿನ ಎಲ್ಲವನ್ನೂ ಇಲ್ಲವಾಗಿಸುವ ಮನೋಭಾವವನ್ನಿಟ್ಟುಕೊಂಡು ದೇಶೀಯ ಹೂಹಣ್ಣುಗಳನ್ನು ಮೂಲೆಗೊತ್ತಿತ್ತು. ಕಳೆದೆರಡು ದಶಕಗಳಲ್ಲಿ ಬದಲಾವಣೆ ಗಾಳಿಗೆ ಶಕ್ತಿಬಂದಿದೆ. ಈಗ ಸರಕಾರಗಳು ಮತ್ತು ತೋಟಗಾರಿಕೆ ಸಮುದಾಯಗಳು ದೇಶೀಯ…”
ಸರಿ ತಪ್ಪುಗಳ ನಡುವೆ ರೇಖೆ ಎಳೆಯುವ ಮೊದಲು
ಒಬ್ಬರಿಗೆ ಸರಿ ಎನ್ನಿಸಿದ್ದು ಇನ್ನೊಬ್ಬರಿಗೆ ತಪ್ಪಾಗುವ ಈ ಚಮತ್ಕಾರವನ್ನು ಲೇಖಕರು ಆನೆ ಮತ್ತು ಮಾವುತನ ಉಪಮೆ ಬಳಸಿ ವಿಶ್ಲೇಷಿಸುತ್ತಾರೆ. ಅಷ್ಟು ದೊಡ್ಡ ಆನೆಯ ಮುಂದೆ ಮಾವುತ ಕಾಣುವುದೇ ಇಲ್ಲ. ಆದರೆ ಕೈಯಲ್ಲಿರುವ ಪುಟ್ಟದಾದ ಅಂಕುಶವನ್ನು ಉಪಯೋಗಿಸಿಕೊಂಡು ಅಂಥ ಬೃಹತ್ ಆಸೆಯನ್ನು ಅವನು ಪಳಗಿಸಬಲ್ಲ. ಹಾಗೆಯೇ ನಮ್ಮ ಯೋಚನೆಗಳನ್ನು ಕೂಡ ನಮ್ಮ ಅಂತರ್ದೃಷ್ಟಿಯೇ ಪಳಗಿಸುತ್ತದೆ, ಅದು ಕಣ್ಣಿಗೆ ಕಾಣಿಸದಿದ್ದರೂ ಬಹಳ ಪ್ರಭಾವಶಾಲಿಯಾದುದು ಎನ್ನುತ್ತಾರೆ.
ಪಯಣಪ್ರಿಯರ ನಾಡಿನ ಕೆಲವು ಮಾತುಗಳು
ನಾನು ಚಿಕ್ಕವನಿದ್ದಾಗ, ‘ಕುಟುಂಬ ಸಮೇತ ಹಾಲಿಡೆʼಗಳೇನಿದ್ದರೂ ತೀರ್ಥಯಾತ್ರೆಗಳೇ! ನಮ್ಮ ನಮ್ಮ ಮನೆಯ ದೇವರುಗಳ ಮತ್ತು ನಂಬಿಕೆಗಳ ಪ್ರಕಾರ ನಮ್ಮ ಹಾಲಿಡೆಯ ಗಮ್ಯಸ್ಥಾನಗಳು ನಿಗದಿಯಾಗಿರುತ್ತಿದ್ದವು. ತುಳಸಿಗೇರಿ, ಯಲಗೂರ, ಬಸವನ ಬಾಗೇವಾಡಿಗಳೇ ಕುಟುಂಬ ಸಮೇತ ಪ್ರಯಾಣದ ‘ಡೇಟ್ರಿಪ್ʼ ಜಾಗಗಳು. ಅವನ್ನು ಬಿಟ್ಟರೆ, ಮಂತ್ರಾಲಯ, ತಿರುಪತಿ, ಧರ್ಮಸ್ಥಳ ಅಥವಾ ಶೃಂಗೇರಿಗಳಿಗೆ ಬಸ್ಸಿನಲ್ಲಿ ಪಯಣಿಸಿ, ಅಲ್ಲಿಯ ಧರ್ಮಛತ್ರಗಳಲ್ಲೇ ತಂಗಿದ್ದು ದೇವರ ದರ್ಶನ ಮಾಡಿ…”
ಬೀಳುವವರನ್ನು ಕೈಹಿಡಿಯಬೇಕಾದವರು ಯಾರು?
ಅಸಹಾಯಕರು, ನಿರ್ಗತಿಕರು, ಬಡವರು ಹಾಗು ಅವಕಾಶ ವಂಚಿತರು ಪ್ರಪಂಚದ ಯಾವುದೇ ದೇಶದಲ್ಲಿದ್ದರೂ ಅವರು ಶಾಪಗ್ರಸ್ತರೆ. ಎಲ್ಲೋ ಕೆಲವರಿಗೆ ನೆರವು ಸಿಗುತ್ತದೆ, ಎಲ್ಲೋ ಕೆಲವು ನಿರ್ಗತಿಕರು ಸೆಟೆದು ನಿಲ್ಲುತ್ತಾರೆ, ಎಲ್ಲೋ ಕೆಲವು ಬಡವರು ತಿರುಗಿ ಬೀಳುತ್ತಾರೆ, ಕೆಲವರಿಗಷ್ಟೇ ಅವಕಾಶ ಸಿಗುತ್ತದೆ, ಆದರೆ ಉಳಿದವರಿಗೆ ದಾರಿ ಎಲ್ಲಿ. ಹಣವಂತರ ಜಗತ್ತಿನಲ್ಲಿ, ಮೋಸಗಾರರ ವಂಚನೆಯಲ್ಲಿ ಮುಗ್ಧರಿಗೆ ಮತ್ತು ನ್ಯಾಯವಂತರಿಗೆ ಸೋಲು ಕಟ್ಟಿಟ್ಟ ಬುತ್ತಿ. ಸಣ್ಣ ಹೋರಾಟ ನಡೆದರೆ ಅವರನ್ನು ಮಟ್ಟ ಹಾಕಲು ತುದಿಗಾಲಲ್ಲಿ ನಿಂತಿರುತ್ತದೆ ಈ ಜಗತ್ತು. ಪ್ರಶಾಂತ್ ಬೀಚಿ ಅಂಕಣ
ಅರ್ಥಲೋಕದ ಬೆರಗುಗಳ ಅನಾವರಣ
ಈ ಕಾದಂಬರಿಯ ಕಥನ ಶೈಲಿ ಸರಳವಾಗಿಲ್ಲ; ಯಾಕೆಂದರೆ, ಇಕೋ ತಾನು ಪ್ರಸ್ತುತ ಪಡಿಸುತ್ತಿರುವುದು ಮಧ್ಯಯುಗೀಯ ಅಧಿಕೃತ ಹಸ್ತಪ್ರತಿಯೆಂಬ ಕಲ್ಪನೆ ಓದುಗರಲ್ಲಿ ಮೂಡಿಸಲಿಕ್ಕಾಗಿ ಪ್ರಯತ್ನಿಸಿದ್ದಾನೆ. ಮಧ್ಯಯುಗದ ಐತಿಹಾಸಿಕ ವಿವರಗಳು, ಅಂದಿನ ಸಮಕಾಲೀನ ಚರ್ಚೆಗಳು, ಆವಿಷ್ಕಾರಗಳು, ಚರ್ಚು ಮತ್ತದರ ಆಂತರಿಕ ವಿವಾದಗಳು, ಇತ್ಯಾದಿ ಅನೇಕ ವಿವರಗಳನ್ನು ಬಳಸಿಕೊಳ್ಳಲಾಗಿದೆ. ಹಾಗೆಯೇ ಅನೇಕ ಸಮಕಾಲೀನ ವಿದ್ವಾಂಸರು, ಅನೇಕ ಭಾಷೆಗಳಲ್ಲಿರುವ ಅವರ ಬರಹಗಳನ್ನು, ಅನೇಕ ಪುರಾತನ ಉದ್ಧರಣಗಳನ್ನು ಉಲ್ಲೇಖಿಸಲಾಗಿದೆ.
ಉಂಬರ್ಟೋ ಇಕೋ ಬರೆದ “ದ ನೇಮ್ ಆಫ್ ದ ರೋಸ್”ಕಾದಂಬರಿಯ ಕುರಿತು ಬರೆದಿದ್ದಾರೆ ಕಮಲಾಕರ ಕಡವೆ









