ಕಾಣದ ಮುಳ್ಳನ್ನು ಕಾಣದ ಮುಳ್ಳಿಂದ…..: ಎಲ್.ಜಿ.ಮೀರಾ ಅಂಕಣ
“ನೀಲಿ… ಈ ನರಕಸಮ ರೋಗ ಯಾರಿಗಿರುತ್ತೋ ಅವರನ್ನು ಹಚ್ಚಿಕೊಂಡವರಿಗೂ ಒಂದು ಭಯಾನಕ ಅಸ್ವಸ್ಥತೆ ಉಂಟಾಗುತ್ತೆ ಕಣೇ. ಅದೇ ಆಗ್ಲೇ ಹೇಳಿದ್ನಲ್ಲಾ ಯಾತನಾಬಂಧ ಅಂತ, ಅದೇ ಕಣೆ ನಂಗೆ ಆಗಿದ್ದು. ಇದು ಹೇಗೆ ಅಂದ್ರೆ ನಾವು ಮಾಡ್ತಿರೋದು ನಮಗೆ ಅಪಾಯಕರ ಅಂತ ಗೊತ್ತಿದ್ರೂ ಮನಸ್ಸು ಅದನ್ನೇ ಮತ್ತೆ ಮತ್ತೆ ಮಾಡುವಂತೆ ನಮ್ಮನ್ನ ಬಲವಂತಿಸುತ್ತೆ!”.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಎಂಟನೆಯ ಬರಹ
ನೀಲಿ ಜಗತ್ತು: ಸುಧಾ ಆಡುಕಳ ಅಂಕಣ
“ಇಕಾ, ನೀನು ಇದನ್ನೊಂದು ಸಲ ಓದು. ಬರೀ ನಿನ್ನ ಶಾಲೆ ಪುಸ್ತಕ ಓದಿ ಹಾಳಾಗಬೇಡ. ಇದನ್ನು ಓದಿದ್ರೆ ನಿಂಗೂ ಮಾನ, ಮರ್ಯಾದೆ ಎಲ್ಲ ಮರೆತುಹೋಗ್ತದೆ.” ಎನ್ನುತ್ತಾ ಹೆಣ್ಣು ಗಂಡುಗಳೆರಡು ವಿಚಿತ್ರ ಭಂಗಿಯಲ್ಲಿರುವ ಪುಸ್ತಕವನ್ನು ಅವಳೆಡೆಗೆ ಹಿಡಿದ. ಅದನ್ನು ನೋಡಿದ್ದೇ ನೀಲಿಯ ಎದೆಯಲ್ಲಿ ನಡುಕ ಪ್ರಾರಂಭವಾಗಿ ಇದ್ದೆನೋ ಬಿದ್ದೆನೋ ಎಂದು ಮನೆಯೆಡೆಗೆ ಓಡತೊಡಗಿದಳು. ಆನಂದನ ಅಮ್ಮನಿಗೆ ಇವೆಲ್ಲವನ್ನೂ ಹೇಳಬೇಕೆಂದು ಎಷ್ಟೋ ಸಲ ಅಂದುಕೊಂಡಳಾದರೂ ಮಗನನ್ನು ದನಕ್ಕೆ ಬಡಿಯುವಂತೆ ಬಡಿಯುವ ಅವಳು ಇಂಥ ಸುದ್ದಿ ಕೇಳಿದರೆ ಅವನನ್ನು ಕೊಂದೇಬಿಟ್ಟಾಳೆಂದು ಸುಮ್ಮನಾದಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ
ಕೀವೀ ನಾಡಲ್ಲಿ ಕ್ಯಾಂಪರ್ ವ್ಯಾನ್ ಸುತ್ತಾಟ: ವಿನತೆ ಶರ್ಮ ಅಂಕಣ
ಈಚೀಚೆಗೆ ಕ್ಯಾಂಪರ್ ವ್ಯಾನ್ ಬಾಡಿಗೆಗೆ ತೆಗೆದುಕೊಂಡು ಪ್ರವಾಸ ಮಾಡುವ ಭಾರತೀಯರು/ಏಷ್ಯನ್ನರು ಹೆಚ್ಚಾಗುತ್ತಿದ್ದಾರೆ. ನಾನು ಕೇಳಿದಂತೆ ಹೀಗೆ ಕ್ಯಾಂಪರ್ ವ್ಯಾನ್ ಬಾಡಿಗೆಗೆ ಪಡೆದು ಪ್ರವಾಸ ಮಾಡುವ ಭಾರತೀಯರು ಒಳ್ಳೆ ಸಿದ್ಧತೆ ಮಾಡಿಕೊಂಡಿರುತ್ತಾರೆ. ಪ್ರತಿದಿನವೂ ಅಡುಗೆ ಮಾಡಲು ಬೇಕಾಗುವ ದಿನಸಿ ಸಾಮಗ್ರಿಯಿಂದ ಹಿಡಿದು ದಿನನಿತ್ಯದ ಕಾರ್ಯಕ್ರಮದ ವೇಳಾಪಟ್ಟಿಯನ್ನೂ ಹೊಂದಿಸಿಕೊಂಡಿರುತ್ತಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಮಾಡೆಲಿಂಗ್ ಕ್ಷೇತ್ರದೆಡೆಗೆ ಒಂದು ಸ್ತ್ರೀನೋಟ: ಡಾ.ಎಲ್.ಜಿ.ಮೀರಾ ಅಂಕಣ
ಶೇವಿಂಗ್ ಬ್ಲೇಡ್ನಿಂದ ಹಿಡಿದು ದುಬಾರಿ ಕಾರುಗಳ ತನಕ ನೂರಾರು ಉತ್ಪನ್ನಗಳ ಮಾರಾಟಕ್ಕೆ ಹೆಣ್ಣಿನ `ಸುಂದರ’ ದೇಹದ ಪ್ರದರ್ಶನ ಅನಿವಾರ್ಯವಾಗಿಬಿಟ್ಟಿದೆ. ಈ ನಡುವೆ ಜಾಹೀರಾತುಗಳು ವಿದ್ಯಾವಂತ ಹಾಗೂ ತನ್ನ ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಸ್ತ್ರೀಯನ್ನು ಆಗೀಗ ತೋರಿಸುತ್ತವಾದರೂ ಸೌಂದರ್ಯದ ಸೀಮಿತ ಕಲ್ಪನೆಯನ್ನೇ ಇವು ಮುಂದು ಮಾಡುತ್ತವೆ ಎಂಬುದು ಸತ್ಯ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಏಳನೆಯ ಬರಹ
ಲಕ್ಕೀ ನಂಬರ್ 55: ಸುಧಾ ಆಡುಕಳ ಅಂಕಣ
ಓಸಿಯೆಂಬುದು ಹೊಳೆಸಾಲಿನ ದಿನದ ಮಾತುಕತೆಯ ಭಾಗವಾಗಿಹೋಯಿತು. ಪಡ್ಡೆ ಹುಡುಗರು ಹಣ ಕಟ್ಟುವುದನ್ನು ನೋಡಿ ಕೆಲವು ವಯಸ್ಸಾದ ಗಂಡಸರು ರೂಪಾಯಿ, ಎರಡು ರೂಪಾಯಿಗಳನ್ನು ತಮ್ಮ ಹೆಂಡತಿಯರ ಕಣ್ತಪ್ಪಿಸಿ ಕಟ್ಟತೊಡಗಿದರು. ಆದರೆ ನಿಧಾನವಾಗಿ ಅವರಿಗೆಲ್ಲ ತಮ್ಮ ಹೆಂಗಸರೂ ಕೂಡ ಕವಳದ ಸಂಚಿಯಲ್ಲಿ ಬಚ್ಚಿಟ್ಟ ನಾಲ್ಕಾಣೆ, ಎಂಟಾಣೆಯನ್ನು ತಮಗೆ ಗೊತ್ತಿಲ್ಲದೇ ಕಟ್ಟುತ್ತಿರುವ ಸತ್ಯ ತಿಳಿಯಿತು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಇಪ್ಪತ್ತೆರಡನೆಯ ಕಂತು ನಿಮ್ಮ ಓದಿಗೆ
ಮುಖ್ಯಮಂತ್ರಿಯ ಹೆಜ್ಜೆಯಲ್ಲಿ ತಂದೆಯಿರಲಿ: ಡಾ. ವಿನತೆ ಶರ್ಮಾ ಅಂಕಣ
ಆಸ್ಟ್ರೇಲಿಯಾದಲ್ಲಿ ಬಿಳಿ ಆಸ್ಟ್ರೇಲಿಯನ್ನರು ರಾಜಕಾರಣಿಗಳನ್ನು ಕರೆದು ಕುರ್ಚಿ ಹಾಕುವುದಿಲ್ಲ. ‘ನಮ್ಮಂತೆಯೇ ನೀವು,’ ಎನ್ನುವ ಮನೋಭಾವ. ಅದಕ್ಕೂ ಮಿಗಿಲಾಗಿ, ಯಾವುದೇ ಹಿಂಜರಿಕೆಯಿಲ್ಲದೆ, ‘ನಾವು ಆರಿಸಿದ್ದರಿಂದ ನೀನು ಆ ಸ್ಥಾನಲ್ಲಿದ್ದೀಯ, ಕೊಟ್ಟಿರುವ ಕೆಲಸ ಸರಿಯಾಗಿ ಮಾಡು,’ ಅನ್ನುವುದನ್ನು ಮನದಟ್ಟು ಮಾಡಿಸುತ್ತಾರೆ. ಏನಾದರೂ ದೋಷಾರೋಪಗಳಿದ್ದರೆ ಜನರು ಪ್ರಧಾನಮಂತ್ರಿಯಿಂದ ಹಿಡಿದು ಸಣ್ಣಪುಟ್ಟ ಮಂತ್ರಿಗಳವರೆಗೂ ಅವರನ್ನ ನೇರವಾಗಿ ಪ್ರಶ್ನಿಸುತ್ತಾರೆ. ಅವಶ್ಯವಿದ್ದರೆ ಖಂಡಿಸುತ್ತಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಹೆಣ್ಣ ಕಣ್ಣಿನ ನೋಟದಿಂದ ಕಲಾ ಚಿಂತನೆ: ಎಲ್.ಜಿ.ಮೀರಾ ಅಂಕಣ
ದೇವದಾಸಿ ಪದ್ಧತಿಗೂ ತಮಿಳುನಾಡು ಮತ್ತು ಕರ್ನಾಟಕಗಳ ಶಾಸ್ತ್ರೀಯ ನೃತ್ಯಕಲೆಯಾದ ಭರತನಾಟ್ಯಕ್ಕೂ ಇರುವ ಸಂಬಂಧವನ್ನು ನೋಡುವಾಗ ಈ ಮಾತು ಸ್ಪಷ್ಟವಾಗುತ್ತದೆ. ರಂಗಭೋಗ, ಅಂಗಭೋಗಗಳಿಗಾಗಿ ದೇವದಾಸಿಯರನ್ನು ಬಳಸಿಕೊಳ್ಳುವುದು, ಹಾಡು ಕುಣಿತಗಳನ್ನು ದೇವದಾಸಿಯರಿಗೆ, ಕಲಾವಂತೆಯರಿಗೆ, ಪಾತರವದವರಿಗೆ ಸೀಮಿತವಾದ ವಿಷಯವೆಂಬಂತೆ ನೋಡುವುದು 19ನೇ ಶತಮಾನಕ್ಕಿಂತ ಮುಂಚೆ ನಮ್ಮ ಸಮಾಜದಲ್ಲಿ ಒಪ್ಪಿತವಾದ ವಿಷಯವೇ ಆಗಿತ್ತು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಆರನೆಯ ಬರಹ
ಗೋಕುಲವ ತೊರೆದ ಗೋಪಾಲಕರು: ಸುಧಾ ಆಡುಕಳ ಅಂಕಣ
ಸಂಸಾರ ತಾಪತ್ರಯದಲ್ಲಿ ಸಿಲುಕಿದವರಿಗೆ ಮುಂಚಿತವಾಗಿ ಸಾವಿರದ ಲೆಕ್ಕದಲ್ಲಿ ಹಣವನ್ನು ನೀಡುವ ಅವನು ಸಮಯ ನೋಡಿ ಮನೆಯಲ್ಲಿರುವ ಹುಡುಗರನ್ನು ಕೆಲಸಕ್ಕೆಂದು ಪೇಟೆಗೆ ಕರೆದುಕೊಂಡು ಹೋಗತೊಡಗಿದ. ಭಾಷೆ, ಬಸ್ಸು ಏನೊಂದೂ ತಿಳಿಯದ ಪುಟ್ಟ ಮಕ್ಕಳು ನಗರದ ಮೂಲೆಯಲ್ಲಿರುವ ಯಾವುದೋ ಹೋಟೆಲಿನಲ್ಲಿ ತಟ್ಟೆ, ಲೋಟ ತೊಳೆಯುತ್ತ, ಪೆಟ್ಟು ಕೊಟ್ಟರೆ ತಿನ್ನುತ್ತ, ಕಾರಿಡಾರಿನ ಮೂಲೆಯಲ್ಲಿಯೇ ಮಲಗುತ್ತ ದಿನಕಳೆಯತೊಡಗಿದರು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಇಪ್ಪತ್ತೊಂದನೆಯ ಕಂತು ನಿಮ್ಮ ಓದಿಗೆ
ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಯೋಣ: ಡಾ. ವಿನತೆ ಶರ್ಮಾ ಅಂಕಣ
ಹೋದ ವಾರ ಕ್ವೀನ್ಸ್ಲ್ಯಾಂಡ್ ರಾಜ್ಯದಲ್ಲಿ ಚುನಾವಣೆ ನಡೆದು ಆಗ ಆಡಳಿತ ನಡೆಸುತ್ತಿದ್ದ ಲೇಬರ್ ಪಕ್ಷ ಸೋತು, ಬಹುಮತ ಪಡೆದ ಲಿಬೆರಲ್ ಪಕ್ಷ ಅಧಿಕಾರಕ್ಕೆ ಬಂತು. ಹೊಸದಾಗಿ ತಮ್ಮ ಸರಕಾರವನ್ನು ರಚಿಸುತ್ತಾ, ಸಂಪುಟ ಸಚಿವರನ್ನು ಆಯ್ಕೆ ಮಾಡಿದ್ದ ಹೊಸ ಮುಖ್ಯಮಂತ್ರಿ ಡೇವಿಡ್ ಕ್ರಿಸ್ಟಫಲಿ ನಿನ್ನೆ ನಡೆದ ಸಮಾರಂಭದಲ್ಲಿ ಹಾಜರಿದ್ದರು. ಜೊತೆಗೆ ಒಂದಿಬ್ಬರು ಮಂತ್ರಿಗಳು, ಕೇಂದ್ರ ವಿರೋಧಪಕ್ಷದ ನಾಯಕರು, ನಗರಪಾಲಿಕೆ ಮೇಯರ್, ಎಂಪಿಗಳು ಎಂಬಂತೆ ರಾಜಕಾರಣಿಗಳ ದೊಡ್ಡ ತಂಡವೇ ಬಂದಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
						








