ಬಂದಾಗಿನಿಂದ ಸತ್ಯವತಿ, ರತ್ನಮ್ಮ ನನ್ನನ್ನು ಹಿಡಿದುಕೊಂಡು ನೇತಾಡುತ್ತಿದ್ದಾರೆ. ಮದ್ರಾಸ್ನಲ್ಲಿರುವ ವೊಯ್ಯಿಯನ್ನು ನೆನಪಿಸಿಕೊಂಡ ಮಾತ್ರಕ್ಕೆ ನನ್ನ ಮನಸು ಪರವಶ ವಾಗುತ್ತಿತ್ತು. ನಾನು ದೈವವನ್ನು ಕಾಂಕ್ಷೆ ಮಾಡಿದಷ್ಟೂ ಕಾಲ, ಎಲ್ಲದಕ್ಕಿಂತ ಆತನೇ ವಾಂಚನಿಯ ನನಗೆ ಆತನೇ ಶರಣ್ಯ. ಆ ಈಶ್ವರನ ಕುರಿತು ಯಾವಾಗ ಅನುಮಾನಗಳು ಮೂಡಿದವೊ, ಅಂದಿನಿಂದ ಸ್ತ್ರೀಯೇ ನನ್ನ ದೈವವಾಯಿತು. ಆಕೆಯಲ್ಲಿಯೆ ನನ್ನ ಜೀವನಕ್ಕೆ ಸಾಫಲ್ಯ. ಅದಕ್ಕಿಂತ ಈ ಲೋಕದಲ್ಲಿ ಬಯಸುವಂತಹದು ಏನೂ ಇಲ್ಲ. ಇದಕ್ಕಿಂತ ಯಾವುದೂ ತೃಪ್ತಿ ಕೊಡುವುದಿಲ್ಲ.
ತೆಲುಗು ಬರಹಗಾರ “ಚಲಂ” ಅವರ ಆತ್ಮಕತೆಯನ್ನು ಕನ್ನಡದ ಕವಿ ಲಕ್ಕೂರು ಆನಂದ್ ಕನ್ನಡಕ್ಕೆ ತಂದಿದ್ದು ಅದರ ಕೆಲವು ಪುಟಗಳು ನಿಮ್ಮ ಓದಿಗೆ ಇಲ್ಲಿವೆ.
ಮದ್ರಾಸಿನ ಬೀದಿಗಳ ಗುಂಟ ಇಬ್ಬರೂ ತಿರುಗುತ್ತಿದ್ದೇವೆ. ಆ ಜೂನ್ ತಿಂಗಳಿನಲ್ಲಿ ಸೂರ್ಯನು ಕಿಡಿಕಾರುತ್ತಿದ್ದಾನೆ. ಈಗ ನನಗೆ ಉದ್ಯೋಗ ಸಿಕ್ಕಿರುವುದರಿಂದ ನನ್ನ ಜೇಬಿನಲ್ಲಿ ಸ್ವಲ್ಪ ಹಣವಿದೆ. ಆದರೆ ಜಟಕಾ ಬಂಡಿಹತ್ತಿ ತಿರುಗುವಷ್ಟಿಲ್ಲ. ಆಗ ಮದ್ರಾಸಿನಲ್ಲಿ ಹೊರತು, ತೆಲುಗು ದೇಶದಲ್ಲಿ ಎಲ್ಲಿಯೂ ಮಹಿಳೆಯರ hostels ಇಲ್ಲ. ಯಾವ school ಆದರೂ ವೊಯ್ಯಿಯನ್ನು ಸೇರಿಸಿಕೊಂಡು ಸವಲತ್ತು ಕೊಡುವ hostel ಕಾಣಿಸುತ್ತವೆಯಾ ಎಂದು ಹುಡುಕುತ್ತಾ ತಿರುಗುತ್ತಿದ್ದೇವೆ. ದರಗಳು, ಮರ್ಯಾದೆಗಳು, ವಿದ್ಯೆಯ ಮಟ್ಟವು ಏನನ್ನು ತಿಳಿಯದವರು. ನಮ್ಮ ಧೂಳು ತುಂಬಿದ ಮುಖಗಳು, ಮಾಸಿ ಹೋದ ಬಟ್ಟೆಗಳನ್ನು ನೋಡಿದರೇನೆ ಯಾರಿಗೂ ನಂಬಿಕೆ ಬರುತ್ತಿಲ್ಲ. ನಮ್ಮ ದೇಹಿ ಮುಖಗಳನ್ನು ನೋಡಿ ಒಬ್ಬ ಕ್ರಿಶ್ಚಿಯನ್ ಆತ. “Can I be of any help” ಎಂದ. ಅದೇನು ಅದೃಷ್ಟವೂ ಏನೋ, ಕಾರಣವಿಲ್ಲದೆ ಸಹಾಯ ಮಾಡುತ್ತೇವೆಯೆಂದು ಯಾರು ಬಂದರೂ ಅವರು ಕ್ರಿಶ್ಚಿಯನ್ನರೇ. ಹಿಂದುಗಳು ಕಲ್ಪಿಸಿದ ಈಶ್ವರನೆಂದು ಹೇಳುವುದಕ್ಕೆ ನಾನು ನಂಬಿಕೆ ಪಡುತ್ತೇನೆ. ಆದರೂ ಮೊದಲು ಈಶ್ವರನ ಹೆಸರೆತ್ತಿದ್ದು ಯಹೂದಿಯರಂತೆ. ನಗುತ್ತ ನನ್ನ ಸ್ನೇಹ ಬಯಸಿ ನನ್ನ ಹತ್ತಿರಕ್ಕೆ ಸೇರಿದವರೆಲ್ಲಾ ಮುಸ್ಲಿಂರೇ. ನಾನು ಯಾರೋ ತಿಳಿಯದೆ ಇಷ್ಟರಲ್ಲಿ ಏನೂ ಹೋಗುತ್ತದೆಯೆಂದು ಕಲ್ಲೊಂದನ್ನು ನನ್ನ ಮೇಲೆ ಎಸೆದವರೆಲ್ಲಾ ಹಿಂದುಗಳೆ, ಅದರಲ್ಲೂ ಮುಖ್ಯವಾಗಿ ಬ್ರಾಹ್ಮಣರೇ.
ನಮ್ಮ ಹೊಸ ಮಿತ್ರನೊಂದಿಗೆ ನಮ್ಮ ಸಮಸ್ಯೆಯನ್ನು ನಿವೇದಿಸಿಕೊಂಡೆವು. ಎರಡು ಮೂರು ಪ್ರಶ್ನೆಗಳನ್ನು ಕೇಳಿದ. ನಮ್ಮ ಬದುಕುಗಳ ದರಿದ್ರವನ್ನು ಗ್ರಹಿಸಿದ. ಕುಲವಿಲ್ಲದವರು ಆ ನಿಮಿಷದಲ್ಲಿ ದೇವರು ಎಷ್ಟು ಹತ್ತಿರದಲ್ಲಿದ್ದಾನೋ ನಮಗೆ ಗೊತ್ತಿಲ್ಲ.
“ರಾಯಪುರ Girls High School ನಲ್ಲಿ Try ಮಾಡಿದಿರಾ?” ಎಂದು ಕೇಳಿದ.
“That is the very Good place for you”
ಸಂತೋಷವಾಗಿ ನಾವು ಹೋಗುತ್ತಿದ್ದರೆ,
“God bless you” ಎಂದ.
ಆ School ಗೆ ಹೋಗಿ, ಪ್ರಿನ್ಸಿಪಾಲ್ರನ್ನು ನೋಡುತ್ತೇನೆ ಎಂದೆ. ಮಹಡಿ ಮೇಲಿನ ಒಂದು ದೊಡ್ಡ ಕೋಣೆಯೊಳಗೆ ಪ್ರಶ್ನೆ ಮಾಡದೆ ಕರೆದುಕೊಂಡು ಹೋದರು. ಅಲ್ಲೊಬ್ಬ ಮುದುಕಿ ಇಂಗ್ಲಿಷ್ ಮಾತನಾಡುತ್ತ ಆಫೀಸಿನ ಮೇಜಿನ ಮೇಲೆ ಕುಳಿತುಕೊಂಡು ಬರೆಯುತ್ತಿದ್ದಾಳೆ. ಕಣ್ಣೆತ್ತಿ ನಮ್ಮ ಕಡೆಗೆ ಪ್ರಶ್ನಾರ್ಥಕವಾಗಿ ನೋಡಿದಳು.
“ಈಕೆಯನ್ನು ಸೇರಿಸಿಕೊಳ್ಳುತ್ತೀರಾ?” ಎಂದು ಕೇಳಿದ.
“of course” ಎಂದಳು.
ರಿಜಿಸ್ಟರ್ಗಳು, ಕಾಗದಗಳನ್ನು ಮುಂದಿಟ್ಟೆ. ಅಷ್ಟರಲ್ಲಿ ಪೇಜ್ಗಳನ್ನು ತಿರುಗಿಸುತ್ತಾ ವೊಯ್ಯಿಯನ್ನು ಕರೆದು ಪಕ್ಕದಲ್ಲಿ ಕುಳ್ಳಿಸಿಕೊಂಡೆ. ಮತ್ತೆ ಬರೆಯಲು ತೊಡಗಿದಳು. ಒಂದೆರಡು ನಿಮಿಷಗಳ ನಂತರ, ತಲೆಯೆತ್ತಿ ನನ್ನೊಂದಿಗೆ.
“All Right you can go” ಎಂದಳು.
ನನಗೇನು ಅರ್ಥವಾಗಲಿಲ್ಲ. ಮಾರನೇಯ ದಿನ ಮತ್ತೆ ಹೋದೆ, ವೊಯ್ಯಿ ಬಟ್ಟೆಗಳ ಪೆಟ್ಟಿಗೆಯನ್ನು ತೆಗೆದುಕೊಂಡು, ಆಕೆ ನನ್ನನ್ನು ನೋಡುತ್ತಿರುವಂತೆ ಕುಳಿತುಕೊಳ್ಳಲು ಹೇಳಿದಳು. ವೊಯ್ಯಿ ಕುಣಿದಾಡುತ್ತ ಬಂದಳು.
ಇಲ್ಲಿ ತುಂಬಾ ಚೆನ್ನಾಗಿದೆ. ಊಟಕ್ಕೆ ತೊಂದರೆ. ಆದರೆ ನಾನು ತೊಂದರೆಯೆಂದು ಭಾವಿಸುತ್ತಿಲ್ಲ. ನನಗೆ ನೀನು ತಿಂಗಳಿಗೆ 37 ರೂಪಾಯಿ ಕಳುಹಿಸಿದರೆ ಸಾಕು.
“ನಾನಿನ್ನೂ ದಿಗ್ಭ್ರಮೆಯಿಂದ ಹೊರಗೆ ಬರಲಿಲ್ಲ” ಇವರು ಒಂದು ವೇಳೆ Christion ಧರ್ಮಕ್ಕೆ ಸೇರು ಎಂದರೆ ಸೇರಲಾ? ಇಲ್ಲಿ ಎಲ್ಲರೂ ಕ್ರಿಶ್ಚಿಯನ್ನರೆ” ಎಂದಳು.
ನಿನ್ನ ಹಿಂದೆ ನಾನೂ ಆಗುತ್ತೇನೆ. ಹಿಂದೂ ಪೀಡೆ ತೊಲಗಿ ಹೋಗುತ್ತದೆ.
ಹಿಂದೂ school ನಲ್ಲಿ, Government School ನಲ್ಲಿ ಅವರ ನೋಟಗಳು ಅವರ ಗರ್ವಗಳು, ಅವರ ಪ್ರಶ್ನೆಗಳು ನೆನಪಿಗೆ ಬಂದವು.
ಆ ರಾತ್ರಿ ನಾನು ಸಂತೋಷದಿಂದ ರೈಲು ಹತ್ತಿ ನನ್ನ ಯುದ್ಧಭೂಮಿಗೆ; ಅಂದರೆ ನಾನು ಕೆಲಸ ಮಾಡುವ ಸ್ಕೂಲ್ಗೆ 60 ಮೈಲಿ ವೇಗದಲ್ಲಿ ಮರಳಿ ಹೋಗುತ್ತಿದ್ದಾನೆ. ಅಂತ್ಯವಿಲ್ಲದ ಈ ಕತ್ತಲಲ್ಲಿ. ಈ ಹೊಗೆಯ ಬಂಡಿ ಗಂಭೀರವಾಗಿ, ದೃಢವಾಗಿ, ನಿರ್ಭಯವಾಗಿ, ಯಾವ ಸಂದೇಹವೂ ಇಲ್ಲದೆ, ಮುಂದಕ್ಕೆ ಸಾಗುತ್ತಾ ಹೋಗುತ್ತಿದೆ. ನನ್ನ ಜೀವನ ಹಾಗೆ ಸಾಗಿ ಹೋಗಬಾರದಾ? ನನ್ನ ಪಕ್ಕದಲ್ಲಿ ಒಂದು 20 ಜನ ಕುಳಿತಿದ್ದಾರೆ. ಅವರ ಮುಖಗಳ ಕಡೆ ನೋಡುತ್ತ, ಹೀಗೆ ಭಾವಿಸಿಕೊಂಡೆ.
“ನೀವೆಲ್ಲಾ ನಿರ್ವೀಚಾರವಾಗಿ, ನಿರ್ಭಯವಾಗಿ ಕುಳಿತಿರುವಿರಿ ಎಷ್ಟೊಂದು ತೃಪ್ತಿ ಸಂತೋಷವೊ ನಿಮ್ಮ ಮುಖಗಳಲ್ಲಿ. ಈ ಕತ್ತಲಿನಲ್ಲಿ ಇಷ್ಟೊಂದು ವೇಗವಾಗಿ ಚಲಿಸುವ ಈ ಯಂತ್ರದ ಕುರಿತು ನಿಮಗಷ್ಟು ವಿಶ್ವಾಸ, ನಿಮ್ಮನ್ನು ಸುರಕ್ಷಿತವಾಗಿ ಮನೆ ಸೇರಿಸುತ್ತದೆ. ಹಾಗೆಯೇ ನಿಮ್ಮ ಜೀವನಗಳ ಮೇಲೆಯೂ ಕೂಡಾ ಹಾಗೆಯೇ ವಿಶ್ವಾಸವಿರುತ್ತದೆ. ತಿಳಿದೋ, ತಿಳಿಯದೋ, ನಿಮ್ಮನ್ನು ಪ್ರೀತಿಸುವ ಈಶ್ವರನು ಸುರಕ್ಷಿತವಾಗಿ ಕಾಪಾಡುತ್ತಾ ಕರೆದುಕೊಂಡು ಹೋಗುತ್ತಿದ್ದಾನೆಂದು. ನಿಜವಾಗಿ ಹೇಳಿ, ಇದ್ದಾನಾ? ನಿಮಗೆ ಗೊತ್ತಾ? ನನ್ನ ಅನುಮಾನಗಳು ನಿಮಗೆ ಇಲ್ಲವಾ? ಈ ನಿರ್ಭಾಗ್ಯನಿಗೆ ನೀವು ಯಾವ ವಿಧವಾದ ತೃಪ್ತಿಯನ್ನು ಕೊಡುವುದಕ್ಕೆ ಆಗುವುದಿಲ್ಲ?”
ಅಂತ್ಯವಿಲ್ಲದ ಈ ಕತ್ತಲಲ್ಲಿ. ಈ ಹೊಗೆಯ ಬಂಡಿ ಗಂಭೀರವಾಗಿ, ದೃಢವಾಗಿ, ನಿರ್ಭಯವಾಗಿ, ಯಾವ ಸಂದೇಹವೂ ಇಲ್ಲದೆ, ಮುಂದಕ್ಕೆ ಸಾಗುತ್ತಾ ಹೋಗುತ್ತಿದೆ. ನನ್ನ ಜೀವನ ಹಾಗೆ ಸಾಗಿ ಹೋಗಬಾರದಾ? ನನ್ನ ಪಕ್ಕದಲ್ಲಿ ಒಂದು 20 ಜನ ಕುಳಿತಿದ್ದಾರೆ. ಅವರ ಮುಖಗಳ ಕಡೆ ನೋಡುತ್ತ, ಹೀಗೆ ಭಾವಿಸಿಕೊಂಡೆ.
ಆ ಮಧ್ಯಾಹ್ನ ನಮಗೆ ಸಹಾಯ ಮಾಡಿದ ಕ್ರಿಶ್ಚಿಯನ್ ಆತ ನೆನಪಾದ. ನಾವು ಎಂತಹವರೆಂದು ತಿಳಿದು ಕೂಡಾ may god blessing ಎಂದ. ನಿಜವಾಗಲೂ ಒಂದು God bless ಮಾಡುತ್ತಾನಾ? ಅಂತಹ ಒಬ್ಬ ಸರ್ವ ರಕ್ಷಕನ ಮೇಲೆ, ದಯಾಮಯನ ಮೇಲೆ ಭಾರವಾಕಿ ಬದುಕಲಾದರೆ, ಬ್ರಹ್ಮ ಸಮಾಜದಲ್ಲಿ ಹಾಗೆಯೇ ಬದುಕುತ್ತಿದ್ದೆ. ನನಗೆ ಯಾಕೆ ಇದ್ದಾನಾ? ಇಲ್ಲವಾ? ಎಂದು ಅನುಮಾನಗಳು ಬರಬೇಕು? ಇದೆಲ್ಲಾ ನನ್ನ ಸ್ತ್ರೀ ವ್ಯಾಮೋಹದಿಂದ ತಾನೇ! ಆದರೆ ಸ್ತ್ರೀ ಶೃಂಗಾರ ವೆಂಬುದು ಇಲ್ಲದೆ ಹೋದರೆ ಯಾಕೆ ಬದುಕಿ! ಸಮಸ್ತವೂ ತಾನೇ ಆದ ಈಶ್ವರನು, ಈ ಸ್ತ್ರೀ ಶೃಂಗಾರ, ಇವೂ ಕೂಡಾ ತಾನೇ ಆಗಬಾರದಾ? ಇವುಗಳ ಕುರಿತು ನನಗೆ ಯಾಕೆ ವಿರೋಧ? ಈ ಮಾತುಗಳನ್ನು ನೆನೆಯುತ್ತಿರುವಂತೆ ಆ ಕೊಳಚೆ ಶಾಲೆಯಲ್ಲಿ ಒಂಟಿಯಾಗಿ ಓದಿಕೊಳ್ಳುವ ವೊಯ್ಯಿ, ಆಕೆಯ ಬೆರಳನ್ನೂ ಬಿಡದೆ ಮುತ್ತಿಟ್ಟುಕೊಳ್ಳಲು ಸಾಧ್ಯವಾಗದೆ ಬಿಟ್ಟುಬಿಟ್ಟ ಕೊನೆಯ ನಿಮಿಷದ ಮಾಧುರ್ಯ, ಮನೆಯ ಹತ್ತಿರ ಅಪ್ಪ ಯಾವಾಗ ಬರುತ್ತಾನೆಂದು ಎದುರು ನೋಡುವ ರವಿ, ಮೇಷ್ಟ್ರು ಮುಖ ಮತ್ತೆ ನಮಗೆ ಯಾವಾಗ ಕಾಣಿಸುತ್ತದೆಯೆಂದು ಎದುರು ನೋಡುವ ನನ್ನ ವಿದ್ಯಾರ್ಥಿಗಳ ಪ್ರೀತಿ, ಇವೆಲ್ಲಾ ನೆನಪಿಗೆ ಬಂದು ನನ್ನ ಹೃದಯ ಕೃತಜ್ಞತೆಯಿಂದ ತುಂಬಿ ಹೋಯಿತು. ಯಾರಿಗೂ ಕೃತಜ್ಞತೆ ಇಲ್ಲವಲ್ಲವೆ! ಎಷ್ಟು ಅನ್ಯಾಯ ಮಾಡಿದನೋ ನನ್ನನ್ನು ನಂಬಿಸಿ ನನ್ನ ಪ್ರೀತಿಯನ್ನು ತೆಗೆದುಕೊಂಡು. ನಾನು ಇದ್ದೇನೆ. ಇಷ್ಟೇ ಬೇಕು ಎಂದು….! ನಿದ್ದೆ ಹೋದೆ.
* * * * *
ಅಲ್ಲಿ Students, teachers ಎಲ್ಲರೂ ಕ್ರಿಶ್ಚಿಯನ್ನರು, ತನ್ನನ್ನು ಹೊರತುಪಡಿಸಿ, ಆದರೆ ತನ್ನನ್ನು ಬೇರೆಯಾಗಿ ನೋಡಲಿಲ್ಲ. ಕ್ರಿಶ್ಚಿಯನ್ ಧರ್ಮದಲ್ಲಿ ಸೇರುಯೆಂದು ತನ್ನನ್ನು ಕೇಳಲಿಲ್ಲ. ಎಲ್ಲರೂ ಎಷ್ಟೊಂದು ಒಳ್ಳೇಯವರೋ, ಊಟ ಮಾತ್ರ ತುಂಬಾ ಘೋರ. ವಾರಕ್ಕೊಂದು ಸಾರಿ ಎರಡು ಚೆಂಬು ನೀರು ಸ್ನಾನಕ್ಕೆ. ಆಕೆಯ ಬರುವಿಕೆಗಾಗಿಯೆ ನಾನು ರವಿ ಅಷ್ಟು ತಿಂಗಳು ಕನಸು ಕಾಣುತ್ತಿದ್ದೇವೆ. ಯಾವಾಗಲು ಬದುಕು ಕಡಿಮೆಯಾಗಿ ಕಾಣಿಸುತ್ತಿತ್ತು. ನೋವಿಂದ ಇರುತ್ತಿತ್ತು. ವೊಯ್ಯಿ ಬಂದು ನಮ್ಮೊಂದಿಗೆ ಇದ್ದರೆ ಸಾಕು. ಇನ್ನು ಕಾಲವೆಲ್ಲಾ ಆನಂದಮಯವಾಗುವುದಿಲ್ಲವಾ ಎಂದು ಕನಸು ಕಾಣುತ್ತಿದ್ದೇವೆ.
ಅಧಿಕಾರಿಗಳೊಂದಿಗೆ ದೊಡ್ಡ ಸಮರ ಪ್ರಾರಂಭಿಸಿದೆ. ಅದರೊಂದಿಗೆ ಸರಿ ಹೋಗುತ್ತಿತ್ತು ನನ್ನ ಕಾಲವೆಲ್ಲಾ. ಆ ಕಾಲದಲ್ಲಿಯೇ ಪ್ರಕಾಶಂ ನನ್ನನ್ನು ನೋಡಲು ಬಂದದ್ದು ರಾಮೂರ್ತಿ, ರತ್ನಮ್ಮ, ಪ್ರಕಾಶಂ, ಸತ್ಯವತಿ ಬಂದು ಬೇರೆ ದಿಕ್ಕಿಲ್ಲದೆ ನಮ್ಮೊಂದಿಗೇನೆ ಇರುತ್ತಿದ್ದಾರೆ. ಯಾವಾಗ ಅವರು ಬಂದು ನಮ್ಮ ಶರಣಾಗತಿ ಎಂದರೋ, “T” ತನ್ನ ಹಳೆಯ ಕೋಪಗಳನ್ನು ಮರೆತು ಅವರನ್ನು ತನ್ನ ಹೃದಯಕ್ಕೆ ಹತ್ತಿರ ಮಾಡಿಕೊಂಡಳು. ಆಕೆ ಹೊಟ್ಟೆಯಿಂದ ಇದ್ದಾಳೆ. ಅವರ ಕಡೆಯವರು ಯಾರೂ ಸಹಾಯ ಮಾಡಲಿಲ್ಲ. ‘T’ ಎಲ್ಲರಿಗೆ ಅಡುಗೆ ಮಾಡುತ್ತಿದ್ದಳು. ಎಲ್ಲರೂ ಬೆರೆತು ಬರೀ ಕಥೆಗಳು, ಹಾಡುಗಳು, ನಗೆಗಳು, ತುಂಬಾ ಸುಂದರವಾಗಿ ಕಳೆದೆವು. ಆ ಕಾಲವನ್ನು ವೊಯ್ಯಿ ನಮ್ಮೊಂದಿಗೆ ಇಲ್ಲದಿರುವುದೊಂದೇ ಕೊರತೆ. ರಾಮೂರ್ತಿಗೆ ಪ್ರಕಾಶಂ ಇಬ್ಬರಿಗೂ ನಮ್ಮ ಸ್ಕೂಲ್ನಲ್ಲಿಯೇ ಕೆಲಸ ಕೊಡಿಸಿದೆ.
ಬಂದಾಗಿನಿಂದ ಸತ್ಯವತಿ, ರತ್ನಮ್ಮ ನನ್ನನ್ನು ಹಿಡಿದುಕೊಂಡು ನೇತಾಡುತ್ತಿದ್ದಾರೆ. ಮದ್ರಾಸ್ನಲ್ಲಿರುವ ವೊಯ್ಯಿಯನ್ನು ನೆನಪಿಸಿಕೊಂಡ ಮಾತ್ರಕ್ಕೆ ನನ್ನ ಮನಸು ಪರವಶವಾಗುತ್ತಿತ್ತು. ನಾನು ದೈವವನ್ನು ಕಾಂಕ್ಷೆ ಮಾಡಿದಷ್ಟೂ ಕಾಲ, ಎಲ್ಲದಕ್ಕಿಂತ ಆತನೇ ವಾಂಚನಿಯ ನನಗೆ ಆತನೇ ಶರಣ್ಯ. ಆ ಈಶ್ವರನ ಕುರಿತು ಯಾವಾಗ ಅನುಮಾನಗಳು ಮೂಡಿದವೊ, ಅಂದಿನಿಂದ ಸ್ತ್ರೀಯೇ ನನ್ನ ದೈವವಾಯಿತು. ಆಕೆಯಲ್ಲಿಯೆ ನನ್ನ ಜೀವನಕ್ಕೆ ಸಾಪಲ್ಯ ಅದಕ್ಕಿಂತ ಈ ಲೋಕದಲ್ಲಿ ಬಯಸುವಂತಹದು ಏನೂ ಇಲ್ಲ. ಇದಕ್ಕಿಂತ ಯಾವುದೂ ತೃಪ್ತಿ ಕೊಡುವುದಿಲ್ಲ. ನನ್ನನ್ನು, ನನ್ನ ದುಃಖವನ್ನು, ನನ್ನ ಆಶಯಗಳನ್ನು, ಎಲ್ಲವನ್ನು ಆಕೆಯೊಬ್ಬಳೇ ತೀರಿಸಬಲ್ಲಳು. ಆಕೆಯ ಪ್ರೀತಿಯನ್ನು ಪಡೆದವನು ಧನ್ಯನು ಆದರೆ ನನ್ನ ಬುದ್ಧಿ ಚಂಚಲ. ನನ್ನ ಮನಸು ಹೃದಯ ಒಬ್ಬರ ಮೇಲೆ ನಿಂತಿದ್ದರೂ, ಅಷ್ಟರಲ್ಲಿ ಯಾರಾದರು ನನ್ನ ಕಡೆಗೆ ಕೈಚಾಚಿದರೂ, ನನ್ನನ್ನು ಕಣ್ಣಿನಿಂದ ಆಕರ್ಷಿಸಿದರೂ, ನಿಲ್ಲಲಾರದೆ ಆಕೆಯ ಕಡೆಗೆ ಓಡಿ ಹೋಗುತ್ತಿದ್ದೆ. ಈ ಚಂಚಲತೆಯಿಂದ ನನ್ನ ಆದರ್ಶ ಪ್ರೀತಿಗೆ ಯಾವ ಭಂಗವೂ ಉಂಟಾಗುತ್ತಿರಲಿಲ್ಲ. ಈ ಚಂಚಲತೆಯನ್ನು ನೋಡಿದರೆ, ನನಗೆ ತುಂಬಾ ಹೇಸಿಗೆ. ಈ ಗುಣದಿಂದ ನನ್ನ ಜೀವನವೆಲ್ಲಾ ಯುದ್ಧ ಮಾಡಿದೆ. ಆದರೆ ನನ್ನನ್ನು ಬಿಡುವುದಿಲ್ಲ. ಆ ದೋಷ ಅದರಿಂದ ಎಷ್ಟೊಂದು ಸಿಕ್ಕುಗಳಲ್ಲಿ ಇಳಿದೆನೋ! ಅಸಹ್ಯವಾದ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡೆ.
ಚಿಕ್ಕಂದಿನಿಂದ ಸ್ತ್ರೀಯೊಬ್ಬಳು ಆದರ್ಶಮೂರ್ತಿ ನನ್ನ ಭಾವಗಳಲ್ಲಿ ನಿಂತಿದ್ದಾಳೆ. ನನಗೆ ಯಾವ ಸ್ತ್ರೀಯ ಮೇಲಾದರು ಪ್ರೀತಿಯುಂಟಾದಾಗ ಆಕೆಯನ್ನು ನನ್ನ ಆದರ್ಶದೊಂದಿಗೆ ಹೋಲಿಸಿಕೊಳ್ಳುತ್ತಿದ್ದೆ. ವೊಯ್ಯಿ ಸ್ಕೂಲ್ನಿಂದ ಮರಳಿ ಬಂದ ಮೇಲೆ ಎಷ್ಟೊಂದು ಚೆನ್ನಾಗಿ ಜೀವಿಸುತ್ತೇವೆಯೊ! ಕುಳಿತುಕೊಂಡು ಕಥೆಗಳನ್ನು ಹೇಳಿಕೊಳ್ಳುತ್ತಲೋ ಕನಸುಗಳನ್ನು ಕಾಣುತ್ತಿದ್ದೇವು ನಾನೂ, ರವಿ. ಆ ಆಸೆಗಳೆಲ್ಲಾ ಸಂತೋಷದಿಂದ ಇರುವ ಯಾವುದೋ ತಿಳಿಯದೆ ಇರುವುದಕ್ಕಾಗಿ, ಯಾವುದಕ್ಕಾಗಿಯೊ, ಮನಸಿನಲ್ಲಿ ಕದಲುತ್ತಿರುತ್ತದೆ. ಆ ಆಸೆಗಳೆಲ್ಲಾ ವೊಯ್ಯಿಯ ಮೇಲೆ center ಆಗಿರುತ್ತದೆ. ಹೊಸದಾಗಿ ಆಗಲೇ ಇಂಗ್ಲೀಷಿನಲ್ಲಿ ಹೊರಬಂದ ಠಾಕೂರ್ರವರ ಪುಸ್ತಕಗಳನ್ನು ಓದಿ ಕನಸು ಕಾಣುತ್ತಿದ್ದೇವು ರವಿ, ನಾನು ಇಬ್ಬರೇ.
ಈಶ್ವರನಲ್ಲಿ ವಿಶ್ವಾಸವಿಲ್ಲ. ಆದರೆ ಠಾಕೂರ್ರವರ ನಿತ್ಯಪಥಿಕನು, ಜನ್ಮ-ಜನ್ಮಗಳ ಸಹಚರನು ಎಷ್ಟು ಹತ್ತಿರವಾಗಿ ತೆಗೆದುಕೊಂಡು ಮಧುರ ಭಾವಗಳಿಂದ ಆರಾಧಿಸಿ ಕೊಳ್ಳುತ್ತಿದ್ದೇವೊ ರವಿ, ನಾನೂ. ಮನಸಿನಲ್ಲೂ, ಕತ್ತಲಲ್ಲೂ, ಇಕ್ಕಟ್ಟಾದ ಸ್ಥಿತಿಯನ್ನು ನೋಡಿದ ಸ್ವಲ್ಪ ಸಮಯದಲ್ಲಿ ಅವರಿಗಿಂತ ಅಧಿಕನೆಂಬ ಭಾವ ನನ್ನಲ್ಲಿ ಮೊದಲಿನಿಂದ ಇರುತ್ತಿತ್ತು. ಈ ಮಾಮೂಲು ನೀಚತ್ವದಿಂದ, ಸ್ವಾರ್ಥಗಳಿಂದ, ಉನ್ನತವಾಗಿ ಬದುಕುತ್ತಿದ್ದೆ. ಅವು ನನ್ನ ಸ್ವಭಾವದಲ್ಲಿ ಇಲ್ಲ. ಪೂರ್ತಿಯಾಗಿ ನನ್ನನ್ನು ನಾನು ತೆರೆದುಕೊಂಡು ಮನುಷ್ಯರೊಂದಿಗೆ ಸ್ನೇಹದಿಂದ ಬೆರೆಯಲಾರೆ. ಮನುಷ್ಯರಿಂದ ಬಹಿಷ್ಕಾರ, ಅವಹೇಳನ ವಿರೋಧ ನನ್ನನ್ನು ಆ ವಿಧವಾಗಿ ಮಾಡಿದವು. ಎಷ್ಟು ಬಾಧೆಯಲ್ಲಿದ್ದರೂ ನನಗೆ, ಪ್ರೀತಿಯಲ್ಲಿ ಹೊರತು ಸ್ನೇಹದಲ್ಲಿ ಅರಳುವುದಿಲ್ಲ. ಅಂದಿಗೂ ಇಂದಿಗೂ ಕೂಡಾ. ಅದಕ್ಕೆ ನಾನು ಒಬ್ಬನೆ ಇರುವೆ. ಎಲ್ಲರಲ್ಲಿದ್ದರೂ ಒಂಟಿ ಮನುಷ್ಯನು. ಅವರ ಮಾಮೂಲು ಮಾತುಗಳನ್ನು ನಾನು ಮಾತನಾಡಲಾಗದು. ಅವರ ಮಾಮೂಲು ಪ್ರವರ್ತನೆ ನನ್ನಿಂದ ಆಗುವುದಿಲ್ಲ. ನನ್ನ ಜೀವನದಲ್ಲಿ ರವಿ ನನಗೆ ದೊಡ್ಡ ಮಿತ್ರನು.
* * * * *
ಅಧಿಕಾರಿಗಳೊಂದಿಗೆ ನನ್ನ ಬಡಿದಾಟ ಹೆಚ್ಚಾಗಿ ಹೋಗಿವೆ. ಹೇಗಾದರು ಮಾಡಿ ನನ್ನನ್ನು ಬಿಡಿಸಬೇಕೆಂದು ಬ್ರಹ್ಮ ಪ್ರಯತ್ನ ಮಾಡುತ್ತಿದ್ದಾರೆ. students ಎಲ್ಲರೂ ಹಠ ಹಿಡಿದು ನನ್ನ ಕಡೆಗೆ ಇರುವುದರಿಂದ, ಅವರು ಏನು ಮಾಡಲು ಆಗದೆ ಹೋಗುತ್ತಿದ್ದಾರೆ. ಇನ್ನು ಮಾಡಲು ಏನೂ ಇಲ್ಲದೆ ನಾವಿರುವ ಮನೆಯಿಂದ ಹೊರ ಹೋಗಲು ಹೇಳಿದರು. ಅಸಲೇ ಅದು ಊರ ಹೊರಗಿನ ಮನೆ. ಇಷ್ಟರಲ್ಲಿ ಅಲ್ಲಿ ಸೌರಿಸ್ ಹುಟ್ಟಿದಳು. ನಮ್ಮ ಕುರಿತು ದಯೆಯುಂಟಾಗಿ ಆ ಊರಿನ agricultural officer ಪಾತ್ರೋ ಊರಿಗೆ ಮೂರು ಮೈಲಿ ದೂರದಲ್ಲಿ ದೊಡ್ಡ ಕಾಡಿನ ನಡುವೆ ಯಾವಾಗಲೋ Government ರವರು ಕಟ್ಟಿ ಬಿಟ್ಟಿರುವ ಬಂಗಳೆಯೊಂದಕ್ಕೆ ಹೋಗಿ ಇರುವಿರಾ ಎಂದು ನನ್ನನ್ನು ಕೇಳಿದರು. ತಕ್ಷಣ ಹೋದೆವು. ಅದು ನಿರ್ಜನವಾದ ದಂಡಕಾರಣ್ಯ! ದಿನಾ ಟಪಾಲು ತಂದುಕೊಡುವ ಜವಾನನ ಹೊರತು ಊರಿಗೂ ಮನೆಗೂ ಸಂಬಂಧವಿಲ್ಲ. ಸುತ್ತಾ ತಿರುಗುವ ಹಾವುಗಳೇ ನಮಗೆ ಸಹವಾಸ. ತುಂಗಭದ್ರ ನದಿಯ ಕಾಲುವೆ ನಮ್ಮ ಮನೆಯ ಪಕ್ಕದಿಂದ ಹೋಗುತ್ತಿತ್ತು. ಆ ಕಾಲುವೆಯಿಂದ ತುಂಗೆ ಬೆಳೆಗಳಿಗೆ, ಬೆಟ್ಟ ಕಲ್ಲುಗಳ ಮೇಲಿನಿಂದ ಉರುಳುತ್ತ ಅದು ಹೋಗುತ್ತಿರುತ್ತದೆ. ಆ ದೊಡ್ಡ ಕಾಲುವೆಯ ಮೇಲೆಯಿಂದ ಒಂದು ಹಗ್ಗ Spring ನ ಸೇತುವೆ ಇರುತ್ತಿತ್ತು. ಅದರ ಮೇಲೆ ತೂಗಾಡಿ, ಒಬ್ಬೊಬ್ಬರೆ ನೀರಿಗೆ ಧುಮುಕುತ್ತಿದ್ದೇವು. ನಾನೂ, ವೊಯ್ಯಿ, ರವಿ ಸ್ನಾನ ಮಾಡುತ್ತಿದ್ದೇವೆ ದಿನನಿತ್ಯ ಕಾಲುವೆಯಲ್ಲಿ.
ಠಾಕೂರ್ ಪುಸ್ತಕಗಳು, Lawrance hope ನ ಮೊಗಲ್ ಕಾವ್ಯ ಜೈಬುನಿಸ್ಸಾ ದಿವಾನ್, ಇವೆಲ್ಲವನ್ನು ಗಿಡಗಳ ಕೆಳಗೆ ಕುಳಿತುಕೊಂಡು ಓದುತ್ತಿದ್ದೇವು. ಗಿಡಗಳ ಕೆಳಗೆ ಕುಳಿತುಕೊಂಡು ಆಕಾಶದಲ್ಲಿ ತೇಲಿ ಹೋಗುವ ಬಿಳಿಯ ಮೋಡಗಳನ್ನು ನೋಡುತ್ತಾ ವರಾಂಡದಲ್ಲಿ ಕಟ್ಟಿರುವ ಉಯ್ಯಾಲೆಯಲ್ಲಿ ಮಲಗಿಕೊಂಡು, ಗಾಳಿಯ ಅಲೆಗಳು ಮುಖವನ್ನು ತಾಕಿದಾಗಲೆಲ್ಲಾ ಗಲಗಲನೆ ನಗುತ್ತಿದ್ದಳು ಷೋ. ಆ ದಿನಗಳಲ್ಲಿ ತರಕಾರಿ ತಂದುಕೊಡುವವರಿಲ್ಲದೆ ಈರುಳ್ಳಿಯ ಚಟ್ನಿ, ಸಾರು, ಮಜ್ಜಿಗೆಯ ಮೇಲೆಯೆ ಬದುಕಿದೆವು. ನಿರ್ಜನ ಅರಣ್ಯದಲ್ಲಿ ಕಳ್ಳರ ಭಯವಿದ್ದರೂ ನಮಗೆ ಯಾಕೆ ಇರುತ್ತಿತ್ತೆಂದು ಇಂದಿಗೂ ಅರ್ಥವಾಗದು. ಅವು ಅಷ್ಟೊಂದು ಸಂತೋಷದ ದಿನಗಳು.
(ಕೃತಿ: ಚಲಂ ಆತ್ಮಕಥೆ (ತೆಲುಗು ಮೂಲ), ಕನ್ನಡಕ್ಕೆ: ಲಕ್ಕೂರು ಆನಂದ್, ಪ್ರಕಾಶಕರು: ಸೃಷ್ಟಿ ಪಬ್ಲಿಕೇಶನ್ಸ್, ಬೆಲೆ: 150/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ