ಸಫಲತೆಯ ಸಂದೇಶದ ಕವಿತೆಗಳು: ತೇಜ ಎಸ್. ಬಿ. ಬರಹ
ಅಕ್ಕ, ಜೋಗತಿ ಮಂಜಮ್ಮ, ಪದವಿ, ಅವ್ವ, ಮಗು, ಸಮಾನಳು ಮುಂತಾದ ಕವಿತೆಗಳು ಜೀವ-ಭಾವ ತುಂಬಿ ಮಹಿಳೆಯರ ಜೀವನದ ಬಗ್ಗೆ ಚಿತ್ರಿಸಿವೆ. ಮುಂತಾಗಿ ನನಗಾರು ಸಾಟಿ, ತಮಟೆ, ಕಣ್ಣಾಮುಚ್ಚೆ ಕಾಡೆ ‘ಗೋಡೆ’ ಬೆಂಗಳೂರಿನ ಮಗ ಸಂಭಾಷಣೆಯೇ ಇಲ್ಲದಂತೆ ಕಾಡುವುದಂತೂ ಸಹಜ. ಪುಸ್ತಕ ಓದಲು ಹೆಚ್ಚೇನು ಸಮಯ ತೆಗೆದುಕೊಳ್ಳಲಿಲ್ಲ, ಆದರೆ ಅವು ನಮ್ಮಲ್ಲಿ ಹುಟ್ಟುಹಾಕಿದ ಪ್ರಶ್ನೆಗಳನ್ನು, ಭಾವಗಳನ್ನು ಜೀರ್ಣಿಸಿಕೊಳ್ಳಲು ಬಹಳ ಸಮಯ ಬೇಕಾಯಿತು…
ವಿಕ್ರಮ್ ಬಿ.ಕೆ. ಕವನ ಸಂಕಲನ “ನಾವಿಬ್ಬರೇ ಗುಬ್ಬಿ” ಕುರಿತು ತೇಜ ಎಸ್. ಬಿ. ಬರಹ
“ಸಾವಿನ ದಶಾವತಾರ”: ಡಾ. ಸುಧಾ ಬರಹ
ಎಲ್ಲಿಂದಲೋ ಬಂದ ಅಪರಿಚಿತನೊಬ್ಬ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡದ್ದು.. ತಾವು ಬೇರೆ ಬೇರೆ ಜಾತಿಗೆ ಸೇರಿದ್ದರಿಂದ ಕುಟುಂಬದವರಿಂದ ವಿವಾಹಕ್ಕೆ ಬಂದ ತೀವ್ರ ಪ್ರತಿರೋಧಕ್ಕೆ ನೊಂದು ಜೀವನಕ್ಕೇ ಅಂತ್ಯ ಹಾಡಿದ ಪ್ರೇಮಿಗಳು-ಇನ್ನೇನು ವಿವಾಹಕ್ಕೆ ತಯಾರಾದವರಂತೆ ಸಾಲಂಕೃತರಾಗಿ ಒಬ್ಬರನ್ನೊಬ್ಬರು ಆಲಂಗಿಸಿಕೊಂಡ ಭಂಗಿಯಲ್ಲಿದ್ದ ಅವರ ಮೃತ ದೇಹಗಳು-ದೂರದಲ್ಲಿದ್ದು ವೀಕ್ಷಕರಂತೆ ನೋಡಲೂ ಕಷ್ಟವಾದ ಈ ಸಾವುಗಳಿಗೆ ಅಂತ್ಯ ಸಂಸ್ಕಾರದ ಸಿದ್ಧತೆ ಮಾಡುವುದು ಹತಾಶೆಯ ಪರಮಾವಧಿಯಲ್ಲದೆ ಇನ್ನೇನು ಎಂದು ಅಲವತ್ತುಕೊಳ್ಳುತ್ತಾನೆ ನಮ್ಮ ನಿರೂಪಕ.
ಕೆ. ಸತ್ಯನಾರಾಯಣ ಬರೆದ `ಸಾವಿನ ದಶಾವತಾರ’ ಕಾದಂಬರಿಯ ಕುರಿತು ಡಾ. ಸುಧಾ ಬರಹ
ಹಂಗಿಲ್ಲದ ಹಾದಿಯಲ್ಲಿ…
ಇಲ್ಲಿಯೂ ಅವನ ಮತ್ತು ಅವಳ ನಡುವಿನ ಪ್ರೀತಿ, ಪ್ರೇಮ, ವಿರಹ ಇವೆ. ಪ್ರೀತಿಯ ಆಳ-ಅಗಲ, ವಿರಹದ ಸುಡುವ ಯಾತನೆ ಮತ್ತೆ ಮತ್ತೆ ಚಿತ್ರಿತವಾಗಿದೆ. ಹಾಗೆಯೇ ಇವರಿಬ್ಬರ ಸುತ್ತ ಇರುವ ಲೋಕವೂ ಇದೆ; ಭೂತ, ವರ್ತಮಾನಗಳೂ ಇವೆ. ಸುಮಿತ್ ಇವುಗಳನ್ನು ಈಗಾಗಲೇ ಬಳಕೆಯಾಗಿರುವ ಮಾತುಗಳಲ್ಲಿ, ಪ್ರತಿಮೆ ರೂಪಕಗಳಲ್ಲಿ ಚಿತ್ರಿಸುತ್ತ ಕಾವ್ಯವನ್ನು ಸವೆದ ದಾರಿಯಲ್ಲಿ ನಡೆಸುವುದಿಲ್ಲ. ಪ್ರತಿ ಹೆಜ್ಜೆಯನ್ನು ಇಡುವಾಗಲೂ ಹೊಸ ರೀತಿಯಲ್ಲಿ, ಹೊಸ ದಾರಿಯಲ್ಲಿ ನಡೆಯಲು ಸಾಧ್ಯವೇ ಎಂದು ನೋಡುತ್ತಾರೆ.
ಸುಮಿತ್ ಮೇತ್ರಿ ಕವನ ಸಂಕಲನ “ಈ ಕಣ್ಣುಗಳಿಗೆ ಸದಾ ನೀರಡಿಕೆ” ಕುರಿತು ಜಿ.ಪಿ. ಬಸವರಾಜು ಬರಹ
ಆನಂದದ ಹುಡುಕಾಟದಲ್ಲಿ…: ಡಾ. ಎ.ಎನ್. ನಾಗರಾಜ್ ಅನುಭವ ಕಥನ
ಗಾಂಧೀಜಿಯವರು ದೂರದಲ್ಲಿದ್ದುಕೊಂಡು ಎಲ್ಲರನ್ನೂ ಹುರಿದುಂಬಿಸುತ್ತಿದ್ದರು, ಅವರಲ್ಲಿ ಪ್ರೀತಿಯನ್ನು ಉಕ್ಕಿಸಿಬಿಡುತ್ತಿದ್ದರು ಎನ್ನುವುದಕ್ಕೆ ಉದಾಹರಣೆಯಾಗಿ ನನ್ನ ತಾಯಿಯ ಮೇಲೆ ಅವರು ಪ್ರಭಾವ ಬೀರಿದ್ದು ಹೀಗೆ. ಗಾಂಧೀಜಿ ಮೈಸೂರಿಗೆ ನಾನು 2 ಅಥವಾ 3 ವರ್ಷದವನಾಗಿದ್ದಾಗ ಬಂದಿದ್ದರಂತೆ. ನಾವೆಲ್ಲ ಅವರನ್ನು ನೋಡುವುದಕ್ಕೆ ಹೋಗಿದ್ದೆವಂತೆ. ಗಾಂಧೀಜಿಯವರು ಎಲ್ಲರಿಂದಲೂ ಹಣ ಸಹಾಯ ಕೋರಿದರಂತೆ. ಏನೂ ಓದಿಲ್ಲದ ಮುಗ್ಧ ಜಯಮ್ಮ ಅವರಿಗೆ ತಕ್ಷಣ ತನ್ನ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ತೆಗೆದು ಕೊಟ್ಟಳಂತೆ.
ಡಾ. ಎ.ಎನ್. ನಾಗರಾಜ್ ಅನುಭವ ಕಥನ “ಆನಂದದ ಹುಡುಕಾಟದಲ್ಲಿ” ಕೃತಿಯ ಕೆಲವು ಪುಟಗಳು ನಿಮ್ಮ ಓದಿಗೆ
ಧರೆಗೆ ಮೆರುಗು ತಂದು ನಕ್ಷತ್ರಗಳಾದವರು
ಶಾರ್ಟ್ ಹ್ಯಾಂಡ್ ಬರಹದಲ್ಲಿ ವಿಸ್ತಾರ ಸ್ವರೂಪವನ್ನು ಹೇಗೆ ಸಂಕೇತರೂಪದಲ್ಲಿ ಚಿಕ್ಕದಾಗಿ ದಾಖಲಿಸಿಕೊಳ್ಳುತ್ತಾರೋ ಹಾಗೆಯೇ ಇಲ್ಲಿ ವೀರೇಶರು ನಿಜ ಸಾಧಕರ ವ್ಯಕ್ತಿತ್ವ ಮತ್ತು ಸಾಧನೆಯನ್ನು ಕೆಲವೇ ಸಾಲುಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿ ಗೆದ್ದಿದ್ದಾರೆ. ಓದುಗರಿಗೆ ಬೇಸರವಾಗದಿರಲೆಂದು ಪ್ರಾಸ ಬಳಕೆಗೆ ಒತ್ತು ನೀಡಿರುವ ವೀರೇಶರು ತಮ್ಮ ಕವನಗಳನ್ನು ಶಾಲಾ ಮಕ್ಕಳೂ ಸಂತಸದಿಂದ ಕಲಿತು ಹಾಡಲು ಅನುಕೂಲವಾಗುವಂತಾಗಿಸಿರುವುದು ಅವರ ಹೆಗ್ಗಳಿಕೆ.
ವೀರೇಶ ಬ. ಕುರಿ ಸೋಂಪೂರ ಬರೆದ ‘ಧರೆಗೆ ಮೆರುಗು ತಂದವರು’ ಕವನ ಸಂಕಲನದ ಕುರಿತು ಪ.ನಾ. ಹಳ್ಳಿ ಹರೀಶ್ ಕುಮಾರ್ ಬರಹ
ನೆನಪುಗಳಿಗೆ ಜೀವ ತುಂಬುವ ಬರಹ: ಸ್ಮಿತಾ ಅಮೃತರಾಜ್ ಬರಹ
ನನಗಿಲ್ಲಿ ಲೇಖಕಿಯ ಬರೆಹಗಳು ಇಷ್ಟವಾಗುವುದಕ್ಕೆ ಅನೇಕ ಕಾರಣಗಳಿವೆ. ಮೊದಲನೆಯದಾಗಿ ಬಾಲ್ಯದಲ್ಲಿ ನಮಗೆ ನೋವು, ಕೀಳರಿಮೆ, ಅಪಮಾನ, ತಾರತಮ್ಯ ಎಲ್ಲದರ ಅನುಭವಗಳಿಗೆ ಒಡ್ಡಿಕೊಂಡು ಒಂದಲ್ಲ ಒಂದು ಹಂತದಲ್ಲಿ ಮನಸ್ಸನ್ನು ಹಿಡಿಮಾಡಿಕೊಂಡಿರುತ್ತೇವೆ. ಒಂದು ಕ್ಷಣ ಅದು ಮನಸ್ಸನ್ನು ಘಾಸಿಗೊಳಿಸಿದರೂ ಮರುಕ್ಷಣಕ್ಕೆ ಮರೆತು ಮೆಟ್ಟಿನಿಲ್ಲುವ ಛಾತಿಯೂ ಜೊತೆಜೊತೆಗೆ ಹುಟ್ಟಿಕೊಳ್ಳುತ್ತಿತ್ತು.
ನಾಗರೇಖಾ ಗಾಂವಕರ ಬರೆದ ಬಾಲ್ಯದ ಅನುಭವಗಳ ಕುರಿತ ಬರಹಗಳ “ಬಣ್ಣದ ಕೊಡೆ” ಕೃತಿಯ ಕುರಿತು ಸ್ಮಿತಾ ಅಮೃತರಾಜ್ ಸಂಪಾಜೆ ಬರಹ
“ತಾಳೆಗರಿ” ಮತ್ತು ಆರದ ಗಾಯಗಳು…
ಯಾವ ಆಸೆಯಿಂದ ಅವರು ನನ್ ಆಗಿದ್ದರೋ ಅದು ಈಡೇರುವ ಯಾವ ಸೂಚನೆಯೂ ಅವರಿಗೆ ಕಾಣುವುದಿಲ್ಲ. ಒಂದು ಸಾರಿ ಕೀಳು ಜಾತಿಯಲ್ಲಿ ಹುಟ್ಟಿದ್ರೆ ಅವರು ಸಾಯೋವರೆಗೂ ಅಲ್ಲೇ ಇರಬೇಕು. ಅದರ ನೋವು ಅವಮಾನ ಅನುಭವಿಸಲೇಬೇಕು. ನಮ್ಮವರು ನಿದ್ದೆಯಿಂದ ಎದ್ದು ಬರಬೇಕಾಗಿದೆ. ಈ ಗುಲಾಮಗಿರಿಯನ್ನು ಸಹಿಸಿಕೊಳ್ಳಬಾರದು, ಬದಲಾವಣೆಗಾಗಿ ನಾವೇ ಎದ್ದು ನಿಲ್ಲಬೇಕಾಗಿದೆ, ಜಾತಿ ಹೆಸರಿನಿಂದ ತಲೆಮಾರಿನಿಂದ ನಮ್ಮನ್ನು ತುಳಿಯುತ್ತಲೇ ಬಂದವರ ವಿರುದ್ಧ ಧ್ವನಿ ಎತ್ತುವ ಕೆಲಸ ಭಾಮಾ ಅವರು ಮಾಡುತ್ತಾರೆ.
ಡಾ. ಎಚ್.ಎಸ್. ಅನುಪಮಾ ಅನುವಾದಿಸಿದ ತಮಿಳಿನ ಬಾಮಾ ಅವರ ಆತ್ಮಕತೆ “ಬಾಮಾ ತಾಳೆಗರಿ”ಯ ಕುರಿತು ವಿಜಯಲಕ್ಷ್ಮಿ ದತ್ತಾತ್ರೇಯ ದೊಡ್ಡಮನಿ ಬರಹ
ಹೂದೋಟದ ಹೂಗಳಂಥಾ “ಸಂಗಮ”
‘ಸಂಗಮ’ ಕಥಾ ಸಂಕಲನದಲ್ಲಿ ನನಗೆ ಬಹಳ ಇಷ್ಟವಾಗಿದ್ದು ಕತೆಗಳಿಗೆ ಆಯ್ದುಕೊಂಡಿರುವ ಶೀರ್ಷಿಕೆಗಳು. ಓದಿದ ತಕ್ಷಣ ಕತೆಯ ಬಗ್ಗೆ ಯಾವ ತರಹದ ಸುಳಿವನ್ನೂ ಬಿಟ್ಟು ಕೊಡುವುದಿಲ್ಲ ಅವು. ಆ ಶೀರ್ಷಿಕೆ ಯಾಕೆ ಎಂದು ತಿಳಿಯಬೇಕಿದ್ದರೆ ನೀವು ಇಡೀ ಕತೆಯನ್ನು ಓದಬೇಕು. ಉದಾಹರಣೆಗೆ ಎರಡನೇಯ ಕತೆ ‘ಮೈ ದಾಸ್’ ಅನ್ನೇ ತೆಗೆದುಕೊಳ್ಳಿ. ಊಹುಂ.. ನೀವು ಗೆಸ್ ಮಾಡಲಿಕ್ಕೆ ಸಾಧ್ಯವೇ ಇಲ್ಲ. ಮುಟ್ಟಿದೆಲ್ಲವೂ ಚಿನ್ನ ಎಂಬ ಗಾದೆ ಮಾತಿದೆಯಲ್ವ.. ಅದನ್ನು ನಿಜವಾಗಿಯೂ ಸಾಧ್ಯವಾಗಿಸಲು ಯತ್ನಿಸುವ ವೈಜ್ಞಾನಿಕ ಸಂಶೋಧಕನ ಕತೆ.
ರಾಜಲಕ್ಷ್ಮಿ ಎನ್. ರಾವ್ ಅವರ “ಸಂಗಮ” ಕಥಾಸಂಕಲನದ ಕುರಿತು ಸಂಜೋತಾ ಪುರೋಹಿತ್ ಬರಹ
ಹೊಸ ಸ್ವರೂಪಕ್ಕೆ ಕಾಯುತ್ತಿರುವ ಪ್ರವಾಸ ಕಥನ
ಎರಡು ಮೂರು ದಶಕಗಳ ಹಿಂದೆ ವಿದೇಶಗಳ ಬಗ್ಗೆ ಇದ್ದಷ್ಟು ಕುತೂಹಲ ಈಗ ಭಾರತದಲ್ಲಾಗಲಿ, ಮೂರನೆ ಜಗತ್ತಿನ ದೇಶಗಳಲ್ಲಾಗಲಿ ಇಲ್ಲ. ಜಾಗತೀಕರಣವೂ ಸೇರಿದಂತೆ ಬೇರೆ ಬೇರೆ ಕಾರಣಗಳಿಗಾಗಿ, ಉದ್ಯೋಗ, ವ್ಯಾಪಾರ, ಪ್ರವಾಸಗಳಿಗೆ ಬೇರೆ ದೇಶಗಳಿಗೆ ಹೋಗಿ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚು ಅವಕಾಶಗಳು ಕೂಡ ತೆರೆದಿವೆ. ಉದಾಹರಣೆಗೆ ಕರ್ನಾಟಕದ ಪ್ರತಿ ಜಿಲ್ಲೆಯಿಂದ ಕನಿಷ್ಠ ಹತ್ತು ಕುಟುಂಬಗಳ ಸದಸ್ಯರಾದರೂ, ಬಂಧುಗಳಾದರೂ ಈಗ ಹೊರದೇಶಗಳೊಡನೆ ಬೇರೆ ಬೇರೆ ರೀತಿಯಲ್ಲಿ ಸಂಪರ್ಕ, ಒಡನಾಟ ಇಟ್ಟುಕೊಂಡಿರುತ್ತಾರೆ.
ಕೆ. ಸತ್ಯನಾರಾಯಣ ಪ್ರವಾಸ ಕಥನ “ಅಮೆರಿಕದಲ್ಲಿ ಬಸವನಗುಡಿ”ಯ ಒಂದು ಬರಹ ನಿಮ್ಮ ಓದಿಗೆ









