ಜೀವಂತಿಕೆ ಒಸರುವ ಕವಿತೆಗಳು: ಸ್ಮಿತಾ ಅಮೃತರಾಜ್ ಬರಹ
ನಾವು ಬದುಕುವ ರೀತಿ ನೀತಿ ನಮ್ಮ ಪ್ರತಿಷ್ಟೆ ಪರಾಕಾಷ್ಟೆಗಳು ಅದೆಷ್ಟಿದ್ದರೂ ನಾವೆಲ್ಲರೂ ಮನುಷ್ಯರು. ಆಳದಲ್ಲಿ ನಾವೆಲ್ಲರೂ ಅನುಭವಿಸುವ ಭಾವಗಳು ಒಂದೇ. ನಾನಾ ಸ್ತರಗಳಲ್ಲಿ ಪ್ರಕಟಗೊಳ್ಳುವ ನಮ್ಮ ನೋವು ನಲಿವು ಗೆಲುವು ಸೋಲು ಅಪಮಾನ ಎಲ್ಲವೂ ಇಲ್ಲಿ ಕವಿತೆಯಾಗಿ ನಿಸೂರಾಗುತ್ತವೆ. ನಾಗರೇಖಾ ತನ್ನದೇ ರೀತಿಯಲ್ಲಿ ಕವಿತೆ ಕಟ್ಟುವ ಕೌಶಲ್ಯವನ್ನು ಸಿದ್ಧಿಸಿಕೊಂಡಿದ್ದಾರೆ. ತಾನು ಬದುಕಿದ, ತಾನು ಕಾಣುವ ಸುತ್ತ ಮುತ್ತಲಿನ ಸಹಜ ಸಂಗತಿಗಳನ್ನು ಕವಿತೆಯ ಮೂಲಕ ತರುತ್ತಾ ಅದನ್ನು ಮತ್ಯಾವುದೋ ಸಂದರ್ಭಕ್ಕೆ, ಸಂಗತಿಗಳಿಗೆ ಕೊಂಡಿ ಕೂಡಿಸುತ್ತಾರೆ. ಒಂದು ವಸ್ತುವನ್ನು ತೆರೆದಿಡುತ್ತಾ ಮತ್ಯಾವುದೋ ಹೊಳಹನ್ನು ಕಾಣಿಸುವುದು ನಾಗರೇಖರ ಕವಿತೆ ವೈಶಿಷ್ಟ್ಯತೆ.
ನಾಗರೇಖಾ ಗಾಂವಕರ ಕವನ ಸಂಕಲನ “ಪಾದಕ್ಕೊಂದು ಕಣ್ಣು” ಕುರಿತು ಸ್ಮಿತಾ ಅಮೃತರಾಜ್ ಬರಹ
