ವಾಸ್ತವವಾದಿ ನೆಲೆಯಲ್ಲಿ ಮೈತಳೆದ ಕತೆಗಳು
ಸಿನಿಕತನದಲ್ಲಾಗಲೀ, ಅಸಹಾಯಕತೆಯಲ್ಲಾಗಲೀ ಇವರು ಅಳುತ್ತಾ, ಹಣೆಬರೆಹವನ್ನು ಹಳಿಯುತ್ತಾ ಕೂಡುವುದಿಲ್ಲ. ಹೀಗಿದ್ದಾಗಲೂ ಬಿಗಿಹುಬ್ಬಿನ ಕಾರ್ಪಣ್ಯದ, ಶಠತ್ವದ ಬದುಕನ್ನೂ ಇವರು ನಡೆಸುವುದಿಲ್ಲ. ಬದಲಿಗೆ ಅದೇ ಜೀವನೋತ್ಸಾಹದ, ಲವಲವಿಕೆಯ ವ್ಯಕ್ತಿತ್ವವನ್ನು ಕೊನೆಯವರೆಗೂ ಉಳಿಸಿಕೊಳ್ಳುತ್ತಾರೆ. ತಿಳಿಗೇಡಿಯನ್ನು ಕಟ್ಟಿಕೊಂಡೇ ಬದುಕನ್ನು ಗೆಲ್ಲುತ್ತಾ ಹೋಗುವ ಈ ಹೆಣ್ಣು ಮಕ್ಕಳು ಇವರಿಬ್ಬರೂ ಮನೆಯಲ್ಲಿಲ್ಲದ ಹೊತ್ತಿನಲ್ಲಿ ಆತ ಮಿತಿಮೀರಿ ತಿಂದ ಜಾಮೂನಿನ ಕಾರಣಕ್ಕೆ ಕಳೆದುಕೊಳ್ಳುವುದು ವಿಕಟ ವ್ಯಂಗ್ಯದಂತೆ ನಮಗೆ ಕಾಣಿಸುತ್ತದೆ.
ಶೋಭಾ ಗುನ್ನಾಪೂರ ಕಥಾ ಸಂಕಲನ “ಭೂಮಿಯ ಋಣ”ಕ್ಕೆ ಎಂ.ಎಸ್. ಆಶಾದೇವಿ ಬರೆದ ಮುನ್ನುಡಿ
‘ಬೇಕಿತ್ತು ನಿಮ್ಮದೊಂದೆರೆಡು ಕವಿತೆಗಳು ಸಾಲವಾಗಿ…ʼ
ಮೂಲ ಲೇಖಕರ ಒಪ್ಪಿಗೆಯಿರಲಿ, ಅವರ ಗಮನಕ್ಕೂ ತಾರದೇ ನೇರವಾಗಿ ಕವಿತೆಯ ಸಾಲುಗಳನ್ನು ನಕಲು ಮಾಡಿ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ತಾವೇ ರಚಿಸಿದ್ದೆಂದು ಪ್ರಚಾರ ಪಡೆಯುವ ಕಪಟ ಸಾಹಿತಿಗಳನ್ನು ಕೆಣಕಿದ್ದಾರೆ. ‘ಇರಬೇಕು, ಇದ್ದೇ ಇರುತ್ತಾರೆ, ಒಬ್ಬಿಬ್ಬರಲ್ಲ ಒಂದಷ್ಟು ಜನ, ಇರುವಿಕೆಯ ಅರಿವನ್ನಷ್ಟೇ ಉಳಿಸಿ, ಎಲ್ಲರೊಳಗೂ ಸಾಲವಾಗಿಯೇ ಉಳಿಯುವವರು..’ ಎಂದೆನ್ನುತ್ತಾ ಪ್ರತಿಯೊಂದರಲ್ಲೂ ಮೂಗು ತೋರಿಸುವವರ ಸಂಖ್ಯೆ ಈಗ ಅಧಿಕ. ಅದರ ಬಗ್ಗೆ ಪರಿಜ್ಞಾನ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ತನ್ನದೂ ಒಂದು ಅಭಿಪ್ರಾಯವಿರಲಿ ಎನ್ನುವವರೇ ಹೆಚ್ಚಾಗಿದ್ದಾರೆ.
ಸೌಜನ್ಯ ದತ್ತರಾಜ ಕವನ ಸಂಕಲನ “ಭಾವನೌಕೆಯನೇರಿ” ಕುರಿತು ಪ ನಾ ಹಳ್ಳಿ ಹರೀಶ್ ಕುಮಾರ್ ಬರಹ
ಬದುಕಿನ ಪಾಠ ಕಲಿಸುವ ಜೋತಯ್ಯನ ಕತೆ…
ಇಲ್ಲಿರುವ ಕಥೆಗಳ ಕಥಾವಸ್ತು ಬಹುತೇಕ ಮನುಷ್ಯರ ಕಷ್ಟ ಸುಖ ನೋವು ನಲಿವಿನದೇ ಆಗಿದ್ದರೂ, ಕಥೆಗಳ ಮೂಲಕ ಹೊರಬರುವ ವ್ಯಾಕುಲತೆ ಸ್ಪಂದನೆ ಲೇಖಕರಿಗೆ ಇರುವ ಬದುಕಿನ ಅನುಭವಗಳಿಂದಲೇ ಮೂಡಿರಬಹುದು, ಹಾಗಾಗಿ ಅವುಗಳು ಗಟ್ಟಿ ಕಥೆಗಳಾಗಿ ರೂಪುಗೊಂಡಿವೆ. ಇನ್ನು ನಿರೂಪಣೆಗೆ ಬಂದರೆ ಬಹುಶಃ ಮಾಸ್ತಿಯವರಂತೆ ಲೇಖಕಿಯು ಕವಯಿತ್ರಿಯೂ ಆಗಿರುವುದರಿಂದ ಇರಬೇಕು ಕಥೆಗಳನ್ನು ನಿರೂಪಿಸುವುದಕ್ಕೆ ಬಳಸುವ ಉಪಮೆಗಳು ಸಂದರ್ಭೋಚಿತವಾಗಿದ್ದು ಇವುಗಳಿಂದ ಹೊರಹೊಮ್ಮುವ ಭಾವನೆಗಳು ನೇರವಾಗಿ ಓದುಗರನ್ನು ತಟ್ಟುತ್ತವೆ.
ತೇಜಸ್ವಿನಿ ಹೆಗಡೆ ಕಥಾ ಸಂಕಲನ “ಜೋತಯ್ಯನ ಬಿದಿರು ಬುಟ್ಟಿ”ಯ ಕುರಿತು ಸಿಂಧು ಜಗನ್ನಾಥ್ ಬರಹ
ಹೂ ಅರಳುವ ಸಮಯ…
ʻನಿಮ್ಮ ಕಾವ್ಯದಲ್ಲಿ ನೀವು ಬರೆಯಲೇಬೇಕೆಂಬ ಮಾತುಗಳು ಇರುವಂತೆಯೇ ನೀವು ಬರೆದೂ ಬರೆದೂ ಜಾಳಾಗಬಹುದಾದ ಕೆಲವು ಸಂವೇದನೆಗಳು ಸಹ ಜಾಗ ಪಡೆದಿವೆ. ಇದು ಪ್ರತಿ ಕವಿಗೂ ಇರುವ ತೊಡಕು. ನೀವು ಬರೆಯಲಾರಂಭಿಸಿದ ತಕ್ಷಣ ನಿಮಗೆ ಒಂದು ಶೈಲಿಯು ಸಿದ್ಧಿಸುತ್ತದೆ. ಅದನ್ನು ಬಳಕೆ ಮಾಡುತ್ತಾ ಹೋದಂತೆ ಅದರ ಸಾರ ಕಡಿಮೆಯಾದಂತೆ ಅನ್ನಿಸುತ್ತದೆ. ಪ್ರಾಯಶಃ ನೀವು ಆವಾಹಿಸಿಕೊಳ್ಳುವ ಪ್ರೀತಿಯ ವ್ಯಾಮೋಹ ಅನೇಕ ಕವಿತೆಗಳಲ್ಲಿ ಪುನಾರಾವರ್ತನೆ ಆಗುವ ಅಪಾಯದಲ್ಲಿವೆ. ಒಂದು ವಿಷಯವನ್ನು ವೃತ್ತಾಕಾರವಾಗಿ ನಿಧನಿಧಾನವಾಗಿ ಪ್ರವೇಶಿಸಿ ಅದರ ಗಾಢತೆಯನ್ನು ಅರಿಯುವುದು ಒಂದು ತಂತ್ರʼ.
ಚೈತ್ರ ಶಿವಯೋಗಿಮಠ ಕವನ ಸಂಕಲನ “ಪೆಟ್ರಿಕೋರ್”ಗೆ ತಾರಿಣಿ ಶುಭದಾಯಿನಿ ಬರೆದ ಮಾತುಗಳು
ಸೂಕ್ಷ್ಮ ಅಂಶಗಳ ನೇಯ್ಗೆಯಲ್ಲಿ ಸಂಕೀರ್ಣ ಭಾವಬಿಂಬ
ಸಮಾಜ ʻಕುರೂಪಿʼ ಗುರುತಿಸಿದ, ಹೆಣ್ಣೊಬ್ಬಳ ಮಾನಸಿಕ ತುಮುಲದ ಕಥೆಯೇ ‘ಅವಿವಾಹಿತೆ’. ಬಹಿರಂಗದ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮುಖ್ಯವೆಂಬ ಭಾವನೆ ಪ್ರತಿಯೊಬ್ಬರಲ್ಲಿ ತುಂಬಿರುತ್ತದೆ. ಆದರೆ ಅಂತರಂಗದ ನಿಷ್ಕಲ್ಮಷ ಹಾಗೂ ನಿರ್ಮಲವಾದ ಭಾವನೆ ಪರಿಗಣನೆಗೆ ಬಾರದ ಸಮಾಜದಲ್ಲಿ ನಿರುಪಮಾಳ ಭವಿಷ್ಯದ ಕನಸು ನುಚ್ಚು ನೂರಾಗುವ ಚಿತ್ರಣವನ್ನು ವ್ಯಾಸರಾಯ ಬಲ್ಲಾಳರು ಸಮರ್ಪಕವಾಗಿ ಚಿತ್ರಿಸಿದ್ದಾರೆ. ಸಮಾಜದಲ್ಲಿ ‘ವಿವಾಹ’ವೆಂಬುದು ತುಂಬಾ ಅಗತ್ಯವೆಂಬ ಚೌಕಟ್ಟು ನಿರ್ಮಾಣವಾಗಿ ಹೋಗಿದೆ. ಬದ್ದ ಕಲ್ಪನೆಗಳ ನೆಲೆಯಲ್ಲಿ ನಿರುಪಮಾ ತನ್ನ ಆಸಕ್ತಿ ಮತ್ತು ಆಶಯಗಳತ್ತ ಗಮನ ಹರಿಸುತ್ತಾಳೆ. ನಿರುಪಮಗೆ ಸಮಾಜದ ಈ ಕ್ರೌರ್ಯ ವ್ಯವಸ್ಥೆಯನ್ನು ಎದುರಿಸಲಾಗುವುದಿಲ್ಲ. ವ್ಯಾಸರಾಯ ಬಲ್ಲಾಳರ ʻಅವಿವಾಹಿತೆʼ ಕತೆಯ ಕುರಿತು ರಾಜಶೇಖರ ಜಮದಂಡಿ ಅವರು ಬರೆದ ವಿಮರ್ಶೆ ಇಲ್ಲಿದೆ.
ಪಾಗಾರದಲ್ಲೊಂದು ಸೃಜನಾತ್ಮಕ ಕಲಾಕೃತಿ
ಆಯಾ ಕಾಲಕ್ಕನುಗುಣವಾಗಿ ಲೇಖಕಿ ಸೂಕ್ಷ್ಮ ಕುಸುರಿಯ ನೇಯ್ಗೆಯಿಂದ ಕಲಾತ್ಮಕವಾಗಿ ನಿರ್ಮಿಸಿರುವ ಪರಿ ಓದುಗರನ್ನು ಕೈಯ್ಯಲ್ಲಿ ಹಿಡಿದ ಪುಸ್ತಕ ಕೆಳಗಿಡದಂತೆ ಸೆಳೆಯುತ್ತದೆ. ಕಾದಂಬರಿಯ ಘಟನೆಗಳ ಕಾಲಮಾನ, ಅದಕ್ಕನುಗುಣವಾಗಿ ಒಂದೊಂದೂ ಪಾತ್ರಗಳಲ್ಲಿ ಲೇಖಕಿ ಪರಕಾಯ ಪ್ರವೇಶ ಮಾಡಿದಂತೆ ಕಡೆದಿಟ್ಟ ಪಾತ್ರ ಚಿತ್ರಣವು ಓದುಗರ ಮನೋ ಭೂಮಿಕೆಯಲ್ಲೂ ಜೀವಂತವಾಗಿ ನೆಲೆಸಿ ಭಾವನೆಗಳೊಂದಿಗೆ ಸ್ಪಂದಿಸುತ್ತವೆ. ಮಳೆಗಾಲದಲ್ಲಿ ಪಾಚಿ ಕಟ್ಟಿಕೊಳ್ಳುವ ಮನೆಯ ಸುತ್ತಲಿನ ಕಲ್ಲಿನ ಪಾಗರವನ್ನು ಲೇಖಕಿ ಒಂದು ರೂಪಕದಂತೆ ಬಳಸಿಕೊಂಡಿದ್ದು ಕಾದಂಬರಿಯಲ್ಲಿ ಪಾಗಾರದ ಪ್ರಸ್ತಾಪ, ಅದರ ಪಾಚಿ ಕೂಡ ಅಷ್ಟೇ ಕಲಾತ್ಮಕವಾಗಿ ಮೂಡಿ ಬಂದಿದೆ.
ಮಿತ್ರಾ ವೆಂಕಟ್ರಾಜ ಅವರ ʻಪಾಚಿಗಟ್ಟಿದ ಪಾಗಾರʼ ಕಾದಂಬರಿಯ ಕುರಿತು, ಲೇಖಕಿ ಕೆ.ಆರ್.ಉಮಾದೇವಿ ಉರಾಳ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ
ನಾನಿನ್ನು ಹೋಗಿಬರಲೇ..
ಸುಚಿತಾ ದಿಙ್ಮೂಢಳಾದಳು. ತನಗೆ ಹೀಗೆ ವರ್ತಿಸುವುದು ಸಾಧ್ಯವಿತ್ತೇ? ತನ್ನೊಳಗೆ ಹೊತ್ತಿ ಉರಿದ ವಿಷಯವನ್ನು ತನ್ನ ಮಗಳು ನಿರಾಕರಿಸುತ್ತಿರುವುದು ತಮಗೆ ಸಹಿಸುವುದು ಸಾಧ್ಯವಿತ್ತೇ? ಅದರ ಬಗೆಗೆ ಇಷ್ಟೊಂದು ನಿರ್ವಿಕಾರವಾಗಿರುವದು ಸಾಧ್ಯವಿತ್ತೇ? ಇದು ದಾದಾನ ನಿರ್ವಿಕಾರವೇ ಅಥವಾ ಇದೇ ಜೀವನದ ಬಗೆಗಿರುವ ಸಮತೋಲವೇ? ಅಮ್ಮನ ಸಾವಿನ ಬಳಿಕ ಅವರು ಬಂದು ತಲುಪಿದರು, ಆಗವಳು ಭೇಟಿಯಾದಾಗ ಅವರೇನೂ ವ್ಯಕ್ತ ಮಾಡಿರಲಿಲ್ಲ. ಅವಳು ಮಲಗಿದ್ದಾಗ ಮಾತ್ರ ಹೊದಿಕೆಯನ್ನು ಸರಿಪಡಿಸಿದರು. ಹಣೆಯ ಮೇಲಿನ ತಲೆಗೂದಲನ್ನು ಸರಿಪಡಿಸಿ, ಎಲ್ಲರ ಎದುರಿಗೆ ಕೂದಲಲ್ಲಿ ಬೆರಳಾಡಿಸಿದರು…
ಚಂದ್ರಕಾಂತ ಪೋಕಳೆ ಅನುವಾದಿಸಿದ ಆಶಾ ಬಗೆಯವರ ಮರಾಠಿ ಕಾದಂಬರಿ “ಸೇತು” ಇಂದ ಕೆಲವು ಪುಟಗಳು ನಿಮ್ಮ ಓದಿಗೆ
ಗಡಂಗು ಹೋಗಿ ಶರಾಬು ಬಂತೂ….
ತಮ್ಮ ಹೊಸ ಗಡಂಗನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಯಾದವ ಶೆಟ್ಟರ ಎರಡು ಪ್ರಯತ್ನಗಳು ಇತಿಹಾಸದಲ್ಲಿ ದಾಖಲಾಗತಕ್ಕವೇ ಆಗಿವೆ. ಅವುಗಳಲ್ಲಿ ಮೊದಲನೆಯದು, ಒಂದು ನಿಗದಿತ ದಿನ ತಮ್ಮ ಗಡಂಗಿಗೆ ಯಾರೇ ಬಂದರೂ ಶರಾಬು ಕುಡಿಯುವವರಿಗೆ ಅವರು ಕುಡಿಯುವಷ್ಟು ಶರಾಬನ್ನು ಉಚಿತವಾಗಿ ಕೊಡಲಾಗುವುದೆಂದು ಯಾದವ ಶೆಟ್ಟಿಯವರು ಘೋಷಿಸಿದ್ದು. ಅದೊಂದು ಸ್ಮರಣೀಯ ಮದ್ಯಪಾನೋತ್ಸವವಾಗಿತ್ತು. ಶರಾಬು ಸಮಾರಾಧನೆಯ ದಿನ ಬೆಳಗಿನಿಂದಲೇ ಶರಾಬು ಅಂಗಡಿಗೆ ನುಗ್ಗಲಾರಂಭಿಸಿದ ಊರಿನ ಶರಾಬು ಪ್ರಿಯರು ಬಹಳ ಬೇಗನೇ ‘ಟೈಟ್’ ಆದರು (ಮತ್ತೇರಿಸಿಕೊಂಡರು). ಆಮೇಲೆ ಪರಸ್ಪರ ಬೈದಾಡುತ್ತಾ, ದೂಡಿಕೊಳ್ಳುತ್ತಾ, ಬಡಿದಾಡುತ್ತಾ ಮನಸ್ಸಿನಲ್ಲಿದ್ದ ಕಲ್ಮಶಗಳನ್ನೆಲ್ಲ ಹೊರಗೆ ಹಾಕುತ್ತಾ ಮೆರೆದಾಡಿದರು.
ಬಿ. ಜನಾರ್ದನ ಭಟ್ ಹೊಸ ಕಾದಂಬರಿ “ಗಮ್ಯ”ದಿಂದ ಕೆಲವು ಪುಟಗಳು ನಿಮ್ಮ ಓದಿಗೆ
ಮೀನು ಕುಡಿದ ಕಡಲಿನ ವಿಷಯ
ಲೋಕವನ್ನು ಕವಿತೆಯ ಮೂಲಕ ಅಸಾಮಾನ್ಯವಾಗಿ ಮರು ರೂಪಿಸುವ ಸೂರ್ಯಕೀರ್ತಿಯವರು, ಅದೇ ಹೊತ್ತಲ್ಲಿ ಸಾಂಪ್ರದಾಯಕ ಸಂಕೇತಗಳನ್ನು ನಿರ್ದಯವಾಗಿ ನಾಶಗೊಳಿಸುತ್ತಾರೆ. ಅವರು ಕಾಣುವ ಹಸಿವಿನ ಅನ್ನದ ಮುಂದೆ ಶಿವನ ಧ್ಯಾನ, ಮುದ್ರಿಕೆ, ನಾಥ ಪಟ್ಟಗಳೂ ಶೂನ್ಯವಾಗುತ್ತವೆ. ದೈವ ಕಲ್ಪನೆಯೇ ವ್ಯರ್ಥವಾಗುತ್ತದೆ. ಗಾಂಧಿಯ ಕನ್ನಡಕವು ಕೂಡಾ ಪಾಚಿಗಟ್ಟಿದ ಕಣ್ಣುಗಳಲ್ಲಿ ಮರೆಯಾಗುತ್ತದೆ. ಬಾಗಿಲ ಸಂದುಗೊಂದುಗಳಲ್ಲಿ ಚಂದ್ರಮತಿಯರು ನಡುಗುತ್ತಾರೆ, ಜನ್ನನ ಸುನಂದೆ, ಅಮೃತಮತಿಯರು ಪಿಸುಗುಡುತ್ತಾ ನರಳುತ್ತಾರೆ.
ಸೂರ್ಯಕೀರ್ತಿ ಬರೆದ “ಮೀನು ಕುಡಿದ ಕಡಲು” ಕವನ ಸಂಕಲನಕ್ಕೆ ಪ್ರೊ. ಪುರುಷೋತ್ತಮ ಬಿಳಿಮಲೆ ಬರೆದ ಮಾತುಗಳು









