ಅನ್ನ ದೇವರ ಮುಂದೆ ಇನ್ನ ದೇವರು ಉಂಟೆ?: ಅಂಜಲಿ ರಾಮಣ್ಣ ಪ್ರವಾಸ ಕಥನ
ಐಶ್ವರ್ಯಾಳ ಸೌಂದರ್ಯ, ಅಮಿತಾಬನ ಎತ್ತರ ಜೊತೆಗೆ ಮಂಗಲ ನಾಥನ ಶಕ್ತಿ ಎಲ್ಲವೂ ಗೌಣ ಹಸಿವಿನ ಮುಂದೆ. ಅಲ್ಲಿಯೇ ನಾಲ್ಕಾರು ರಸ್ತೆಯ ಮುಂದೆ ಇದ್ದ, ದೊಡ್ಡ ಶಾಮಿಯಾನ ಹಾಕಿ ಮದುವೆ ಮನೆಯ ಊಟದ ಹಜಾರದಂತೆ ಇದ್ದ ಜಾಗಕ್ಕೆ ಕರೆದುಕೊಂಡು ಬಂದ ಪವನ್. ‘ಸಾಯು ಕ್ರುಪಾ’ ಎನ್ನುವ ಬೋರ್ಡ್ ಇತ್ತು.
ಅಂಜಲಿ ರಾಮಣ್ಣ ಬರೆಯುವ ‘ಕಂಡಷ್ಟೂ ಪ್ರಪಂಚ’ ಪ್ರವಾಸ ಅಂಕಣ
ಅಂಜಲಿ ರಾಮಣ್ಣ ಪ್ರವಾಸ ಅಂಕಣ ‘ಕಂಡಷ್ಟೂ ಪ್ರಪಂಚ’ ಮತ್ತೆ ಶುರು…
ಮನೆಯಿಂದ ಹೊರಟಾಗ ಚಿರಾಪುಂಜಿ ಎಂದರೆ ಪ್ರೈಮರಿ ಶಾಲೆಯಲ್ಲಿ ಹೇಳಿಕೊಟ್ಟಿದ್ದಂತೆ ಭಾರತದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಎನ್ನುವುದು ಮಾತ್ರ ತಲೆಯಲ್ಲಿ ಇತ್ತು. ಶಿಲ್ಲಾಂಗ್‌ನಿಂದ ಒಂದುವರೆ ಗಂಟೆಯ ಪ್ರಯಾಣ ಮಾತ್ರ ಎಂದಾಗ ಖುಷಿಯೋ ಖುಷಿ. ಹೋಗ್ತಾನೇ ಇದ್ದರೂ ಎಲ್ಲೂ ಚಿರಾಪುಂಜಿ ಅಂತ ಬೋರ್ಡ್ ಕಾಣದೆ ಚಾಲಕ ಬುರಿತ್ ಧೊತ್‍ದಾಂಗ್‍ನನ್ನು ಕೇಳಿದೆ. “ನೀವೀಗ ಚಿರಾಪುಂಜಿಯಲ್ಲಿಯೇ ಇದ್ದೀರ” ಎಂದ.
ಅಂಜಲಿ ರಾಮಣ್ಣ ಬರೆಯುವ ‘ಕಂಡಷ್ಟೂ ಪ್ರಪಂಚ’ ಪ್ರವಾಸ ಅಂಕಣದಲ್ಲಿ ಮೇಘಾಲಯದಲ್ಲಿ ಸುತ್ತಾಡಿದ ಅನುಭವಗಳ ಕುರಿತ ಬರಹ
ರೂಪ್ಮತಿ ಮಹಲಿನಲಿ… ರೂಪ್ಮತಿಯ ನೆನಪಿನಲಿ…
ರಕ್ತದಲ್ಲಿ ಮಧುರ ದನಿಯನ್ನು ಹೊತ್ತು ತಂದಿದ್ದ ಮಗು ಬಾಲೆಯಾಗಿ ಬೆಳೆಯುತ್ತಾ ವಿಪರೀತ ಚಂದದ ಗಾಯಕಿ ಆದಳು. ವಯಸ್ಸಿನ ಹುಡುಗಿಯನ್ನು ಸ್ವಯಂವರದ ಮೂಲಕ ಗ್ವಾಲಿಯರಿನ ದೊರೆ ಮಾನ್ ಸಿಂಗ್‍ಗೆ ಮದುವೆ ಮಾಡಿಕೊಡಲಾಗಿತ್ತು. ನಿತ್ಯವೂ ನರ್ಮದೆಯ ಪೂಜೆ ಸಲ್ಲಿಸದೆ ಗುಟುಕು ನೀರನ್ನೂ ಒಲ್ಲೆ ಎನ್ನುತ್ತಿದ್ದ ರೂಪ್ಮತಿಗೆ, ಗ್ವಾಲಿಯರಿನಲ್ಲಿ ನರ್ಮದೆ ಕಾಣದಾಗಿದ್ದಳು.
ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ ಮಧ್ಯಪ್ರದೇಶದ ಮಾಂಡುವಿನಲ್ಲಿ ಸುತ್ತಾಡಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ ಅಂಜಲಿ ರಾಮಣ್ಣ ಬರಹ
ಗುಮ್ಮನಿಂದಲೂ ಚಾಕೋಲೇಟ್ ಕೊಡಿಸುವ “ಕಾರ್ನಿವಲ್” ಹಬ್ಬ…
ಅಕ್ಟೋಬರ್‌ನಿಂದ ಖಿನ್ನಗೊಂಡ ಮನಸ್ಸುಗಳು ಮತ್ತೆ ಸೂರ್ಯನ ಬೆಳಕು ಹೆಚ್ಚಾಗುವುದನ್ನು ಕಾದು ಕುಳಿತಿರುತ್ತವೆ. ಚಳಿಗಾಲದ ಸಂಕ್ರಮಣ ಬದುಕಿನ ಹುರುಪನ್ನು ಹಿಂದಿರುಗಿ ಕೊಡುತ್ತದೆ. ಬಹಳ ಹಿಂದಿನ ದಿನಗಳಲ್ಲಿ ನಂಬಿಕೆಗಳು ಹುಟ್ಟುವ ಕಾಲಘಟ್ಟದಲ್ಲಿ, ಫೆಬ್ರವರಿ ಸಮಯದ ದಿನಗಳನ್ನು ವಿಶೇಷವಾಗಿ ನೋಡಲಾಗುತ್ತಿತ್ತು. ಕತ್ತಲು ಎಂಬ ದುಷ್ಟ ಶಕ್ತಿಯನ್ನು ತೊಲಗಿಸಿ, ಬೆಳಕು ಎಂಬ ಭರವಸೆಯನ್ನು ಮರುಸ್ಥಾಪಿಸಲು ಜನರು ಒಂದು ಹಬ್ಬವನ್ನು ಹುಟ್ಟು ಹಾಕಿದರು.
“ದೂರದ ಹಸಿರು” ಸರಣಿಯಲ್ಲಿ ಗುರುದತ್ ಅಮೃತಾಪುರ ಬರಹ
ದಾರಾಸುರಂನ ಐರಾವತೇಶ್ವರ ದೇಗುಲದ ಒಳಗೂ… ಹೊರಗೂ…
ನಮಗೆ ರಥ ಅಂದ ಕೂಡಲೇ ನೆನಪಾಗುವುದು ಹಂಪಿಯ ವಿಜಯ ವಿಠ್ಠಲ ದೇವಾಲಯದ ರಥ, ಆಮೇಲೆ ಕೋನಾರ್ಕಿನ ಸೂರ್ಯ ದೇವಾಲಯದ ಚಕ್ರಗಳು. ಆದರೆ ಅದೇ ರೀತಿ ಇರುವ ರಥದ ಕಲ್ಪನೆಯಲ್ಲಿ ಕಟ್ಟಿರುವ ಇನ್ನೂ ಹಲವು ದೇವಾಲಯಗಳಿವೆ. ತಾಡಿಪತ್ರಿಯ ರಥದ ಮಾದರಿಯಲ್ಲಿರುವ ಗರುಡಗಂಬ, ಕುಂಭಕೋಣಂನ ಸಾರಂಗಪಾಣಿ ದೇವಾಲಯ ಹಾಗೂ ದಾರಾಸುರಮ್‌ನ ದೇವಾಲಯ ತಕ್ಷಣಕ್ಕೆ ನೆನಪಿಗೆ ಬರುವ ನಾನು ಕಂಡ ರಥದ ದೇವಾಲಯಗಳು.
‘ದೇವಸನ್ನಿಧಿ’ ಅಂಕಣದಲ್ಲಿ ಗಿರಿಜಾ ರೈಕ್ವ ಬರಹ
ಇನ್ಸ್ಬ್ರುಕ್ ಎಂಬ ಮಾಯಾಲೋಕ
ನಾರ್ಡ್ ಕೆಟ್ಟೆಯಲ್ಲಿ ಪ್ರವಾಸಿಗರಿಗೋಸ್ಕರ “ಇಗ್ಲೂ” ಕೂಡ ಮಾಡಿ ಇಡಲಾಗಿತ್ತು. ಗಟ್ಟಿಯಾದ ಹಿಮದ ಇಟ್ಟಿಗೆಗಳಿಂದ ಕಟ್ಟಿದ ಪುಟ್ಟ ಮನೆಯೇ ಇಗ್ಲೂ. ತಾಪಮಾನ ಹೆಚ್ಚಿದ ಹಾಗೆ ಕರಗಿ ಹೋಗುವ ಈ ಮನೆ, ಬೇಸಿಗೆಯಲ್ಲಿ ಮಾಯವಾಗಿಬಿಡುತ್ತದೆ. ಮತ್ತೆ ಚಳಿಗಾಲದಲ್ಲಿ ಹೊಸದಾಳಿ ಹಿಮ ಬಿದ್ದು, ಗಟ್ಟಿಯಾದಮೇಲೆ ಪುನಃ ಕಟ್ಟಿಕೊಳ್ಳಬೇಕು. ಅಲ್ಲಿಗೆ ಹಿಂದಿನವರ ಕಾಲದಲ್ಲಿ ಪ್ರತಿವರ್ಷ ಹೊಸ ಮನೆ ಕಟ್ಟಿ, ಗೃಹಪ್ರವೇಶ ನಡೆಯುತ್ತಿತ್ತು ಅನ್ನಿಸುತ್ತದೆ!
“ದೂರದ ಹಸಿರು” ಸರಣಿಯಲ್ಲಿ ಇನ್ಸ್ಬ್ರುಕ್ ನಗರದಲ್ಲಿ ಓಡಾಡಿದ ಅನುಭವಗಳ ಬರೆದಿದ್ದಾರೆ ಗುರುದತ್ ಅಮೃತಾಪುರ
ಕ್ರಿಸ್ಮಸ್ ರಾಜಧಾನಿಯಲ್ಲಿ ಸುತ್ತಾಡಿದ ಕ್ಷಣಗಳು
ಚೆಸ್ಟ್ ನಟ್ ಎಂದರೆ ಒಂದು ರೀತಿಯ ಹಲಸಿನ ಬೀಜದ ಹಾಗಿರುತ್ತದೆ. ಕೆಂಡದಲ್ಲಿ ಆಗ ತಾನೇ ಸುಟ್ಟು ಒಂದು ಪೊಟ್ಟಣದಲ್ಲಿ ತುಂಬಿಸಿ ಕೊಡುತ್ತಾರೆ. ಈ ಪೊಟ್ಟಣದ ವಿಶೇಷ ಎಂದರೆ, ಇದರಲ್ಲಿ ಎರಡು ಭಾಗವಿರುತ್ತದೆ. ಒಂದರಲ್ಲಿ ಬಿಸಿ ಬಿಸಿ ಚೆಸ್ಟ್ ನಟ್ ಹಾಕಿದ್ದರೆ, ಮತ್ತೊಂದು ಭಾಗ ಖಾಲಿ ಇರುತ್ತದೆ. ಬಿಡಿಸಿದ ಸಿಪ್ಪೆ ಹಾಕಲು ಖಾಲಿ ಭಾಗವನ್ನು ಬಳಸಬೇಕು!
“ದೂರದ ಹಸಿರು” ಸರಣಿಯಲ್ಲಿ ಯೂರೋಪಿನ ಕ್ರಿಸ್ಮಸ್ ರಾಜಧಾನಿ ಸ್ಟ್ರಾಸ್‌ಬುರ್ಗ್‌ನಲ್ಲಿ ಓಡಾಡಿದ ಅನುಭವದ ಕುರಿತು ಬರೆದಿದ್ದಾರೆ ಗುರುದತ್ ಅಮೃತಾಪುರ
ಡಚ್ ಜನರ ಸೈಕಲ್ ಪ್ರೀತಿ!
ಗಿತೋರ್ನ್ ಪಟ್ಟಣದ ಐತಿಹಾಸಿಕ ಭಾಗಗಳಿಗೆ ರಸ್ತೆ ಮಾರ್ಗವಿಲ್ಲ. ದೋಣಿಯ ಸಹಾಯದಿಂದ ಮಾತ್ರ ತಲುಪಬಹುದು. ಇಲ್ಲಿನ ಬಹುತೇಕ ಮನೆಗಳು ಇಂದು “ಹೋಂ ಸ್ಟೇ” ಆಗಿ ಮಾರ್ಪಟ್ಟಿವೆ. ಪ್ರವಾಸಿಗರಿಗೆ ಇದೊಂದು ಅನನ್ಯ ಅನುಭವ. ನಮ್ಮಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಬಸ್ ವ್ಯವಸ್ಥೆ ಇದ್ದಂತೆ, ಇಲ್ಲಿ ಬೋಟಿನ ವ್ಯವಸ್ಥೆ ಇದೆ. ಕಾಲುವೆಗಳ ಪಕ್ಕದಲ್ಲಿ ನಡೆದು ಹೋಗಲು ಪಾದಚಾರಿ ಮಾರ್ಗವಿದೆ. ಅಲ್ಲಲ್ಲಿ ಪಾದಚಾರಿಗಳಿಗೆ ಸಣ್ಣ ಸೇತುವೆಗಳಿವೆ.
ಗುರುದತ್ ಅಮೃತಾಪುರ ಬರೆಯುವ “ದೂರದ ಹಸಿರು” ಸರಣಿ
ಅರೋರಾ ಬೋರಿಯಾಲಿಸ್: ನರ್ತಿಸುವ ಬೆಳಕಿನ ನೂರೆಂಟು ಮೋಹಕ ರೂಪ
ಹಿಂದಿನ ಸಾಲಿನಲ್ಲಿ ಮಲಗಿದ್ದ ಶ್ವೇತಾ ಜೋರಾಗಿ ಭುಜ ಅಲುಗಿಸಿ ನನ್ನನೆಬ್ಬಿಸುತ್ತಿದ್ದಾಳೆ. ಅವಳಿಗೆ ಗಂಟಲುಬ್ಬಿ ಮಾತೇ ಹೊರಡುತ್ತಿಲ್ಲ. ಕೈಸನ್ನೆ ಮಾಡಿ ಕಿಟಕಿಯ ಪರದೆ ಎತ್ತು ಎನ್ನುತ್ತಿದ್ದಾಳೆ. ಪೈಲಟ್ ಕಡೆ ಬೆರಳು ತೋರಿಸುತ್ತಿದ್ದಾಳೆ. ನನಗೋ ಎದೆ ಧಸಕ್ ಎಂದಿತು. ಅವಳ ಮುಖದ ತುಂಬಾ ಇದ್ದ ನಗು ನೋಡಿ ವಿಮಾನ ಅಪಾಯದಲ್ಲಿಲ್ಲ ಎಂದು ಖಾತ್ರಿಯಾಯಿತು. ಅಂದರೆ.. ಅಂದರೆ.. ನಿಜಕ್ಕೂ ನಾರ್ಥರ್ನ್ ಲೈಟ್ಸ್ ಕಾಣಿಸುತ್ತಿದೆಯಾ? ಇವೆಲ್ಲ ನಡೆದಿದ್ದು ಕೆಲವೇ ಸೆಕೆಂಡುಗಳಲ್ಲಿ ಎನ್ನಬಹುದು.
ʻಜಗದ ಜಗಲಿಯಲಿ ನಿಂತುʼ ಪ್ರವಾಸ ಬರಹಗಳ ಸಾಲಿನಲ್ಲಿ ವೈಶಾಲಿಹೆಗಡೆ ಬರಹ









