Advertisement
ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

ಕಲುಷಿತ ನಿರ್ಮೋಹಿ

ಎಂದೂ ತಿನಿಸದ, ಉಣಿಸದ
ಸ್ನಾನ ಮಾಡಿಸದ, ಬಟ್ಟೆ ತೊಡಿಸದ
ಅತ್ತಾಗ ರಮಿಸದ, ರೋಗ ಬಂದಾಗ
ನಿದ್ದೆಗೆಡದ, ಭಾವನಾ ರಹಿತರು
ಉಸಿರಾಡುತ್ತಿದ್ದಾರೆ ಜಗದಲಿ

ಪರೀಕ್ಷೆಯ ರ್ಯಾಂಕ್
ಹಾಡು, ಭಾಷಣ, ನೃತ್ಯ
ಗೆದ್ದಾಗ ಆಟದಲ್ಲಿ
ಭೇಷ್ ಎನ್ನದ, ಬೆನ್ನು ತಟ್ಟದ
ಕಲುಷಿತ ನಿರ್ಮೋಹಿಗಳಿದ್ದಾರೆ

ಖುಷಿಯಲ್ಲೂ ಭಾಗಿಯಾಗದ
ದುಃಖವನ್ನೂ ಹಂಚಿಕೊಳ್ಳದ
ಬೇಸರವನ್ನೂ ಸಮಾಧಾನಿಸದ
ನಿರ್ಜೀವಿಗಳಿದ್ದಾರೆ
ಅದೆಂತ ತಟಸ್ಥತೆ!!!!!

ಸದಾ ಕಚೇರಿಯ ನೆಪದಲ್ಲಿ
ವ್ಯಸ್ತತೆಯ ನಿತ್ಯ ನಾಟಕ ರಂಗ
ಸ್ನೇಹಿತರೇ ಜಗತ್ತಾಗುವ
ಮದ್ಯದ ಅಮಲು
ಸಂಸಾರ ಮಕ್ಕಳು ಗಾಳಿಯಲ್ಲಿ

ಹೆಂಡತಿ ಮಕ್ಕಳ
ನಿರಂತರ ಜವಾಬ್ದಾರಿ
ತೊರೆದರೆ, ಸನ್ಯಾಸಿ
ನಿರ್ಮೋಹಿ ಅನ್ನಲಾದೀತೆ?
ಅದು ಕಲುಷಿತ

ಅಪ್ಪ ಎಂದರೆ ಸ್ನೇಹಿತ
ಅಪ್ಪ ಎಂದರೆ ಹೀರೋ
ಅಪ್ಪ ಎಂದರೆ ಆಕಾಶ
ಬರೀ ಹಾಡು, ಪುಸ್ತಕಗಳ
ಸೊತ್ತಾಗುವುದು ಕೆಲವರಿಗೆ

ಅಪ್ಪನ ಸ್ಪರ್ಶ, ಆತ್ಮೀಯತೆ
ಪ್ರೇಮ, ವಾತ್ಸಲ್ಯ, ಹುಸಿಕೋಪ
ದಕ್ಕುವುದು ಅದೃಷ್ಟವಂತರಿಗೆ
ಕಾಣಿಕೆ ರೂಪದಲ್ಲಿ
ದೇವರ ಅನುಗ್ರಹ

ಸಂಬಂಧಗಳ ತಳಪಾಯ
ಅಪ್ಪ ಅವ್ವ
ಒಂದರ ಅದೃಶ್ಯ
ಮತ್ತೊಂದರ ಅಸ್ತಿತ್ವದ ಧಕ್ಕೆ
ಇಬ್ಬರೂ ಪೂರಕ

ಒಲುಮೆಯ, ಕಾಳಜಿಯ
ಅಪ್ಪ ಸ್ವರ್ಗಕ್ಕೆ ಮಿಗಿಲು
ಸಿಕ್ಕವರದು ದೈವ
ಸಿಗದಿದ್ದವರದು ದುರ್ದೈವ
ನಸೀಬ್ ಆಡುವುದಷ್ಟೇ..

About The Author

ಮಾಲಾ ಮ. ಅಕ್ಕಿಶೆಟ್ಟಿ

ಮಾಲಾ ಅಕ್ಕಿಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ. ಲೇಖನ, ಕವಿತೆ, ಕಥೆ, ಲಲಿತ ಪ್ರಬಂಧ, ಮಕ್ಕಳ ಕಥೆಗಳನ್ನು ಬರಿಯೋದು ಹವ್ಯಾಸ. ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ