ಬೈ ಟೂ
ಕಣ್ತಪ್ಪಿಸಿದಾಗಲೆ
ನೀನು ನೋಡುವಿ ಎಂಬುದು ನನಗೆ ಗೊತ್ತು
ಹಾಗೆ ನಿನಗೂ
ಹೋಟೆಲಿನ ಆ ಮೂಲೆಯಲ್ಲಿ ಕೂತವನೊಬ್ಬನಿಗೆ
ನಾವಿಬ್ಬರೂ ಪರಸ್ಪರ ನೋಡಲೆಷ್ಟು ಹಂಬಲಿಸುತ್ತೇವೆ
ಎಂಬುದು ಗೊತ್ತಾಗಿ
ನಮ್ಮನು ಪ್ರೇಮಿಗಳೆಂದು ಭಾವಿಸುತ್ತಾನೆ
ನಿನಗಿಷ್ಟು
ಮತ್ತೆ ನನಗೇಷ್ಟೋ ಹೇಳಲಿಕ್ಕಿದೆ
ನನ್ನೆದೆಯ ನಿನ್ನೆದೆಯ ಮದ್ದಳೆ ಸದ್ದಿನಲಿ ಗದ್ದಲಕೆ ಬಿದ್ದಿದ್ದೇವೆ
ಒಂದು ರಿದಂ ನಮ್ಮನು ಕುಣಿಸುತ್ತಿದೆ
ನನಗೆ ನೀನು
ನಿನಗೆ ನಾನು
ಹೇಳಲಿಕ್ಕಾದರೂ ಏನಿದೆ
ಬೈಟೂ ಕಾಫೀಯ ಘಮಲು ನಿನ್ನೊಳಗು ನನ್ನೊಳಗು
ನಾವು ಯಾವತ್ತು ಒಂದು ಬಟ್ಟಲು ಕಾಫೀಯನ್ನು ಹಂಚಿಕೊಳ್ಳುತ್ತೇವೆ
ನಾವು ಎರಡು ಬಟ್ಟಲು
ಒಂದು ಕಾಫೀ
ಲಿಂಗರಾಜ ಸೊಟ್ಟಪ್ಪನವರ ಹಾವೇರಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ವಿಜ್ಞಾನ ಶಿಕ್ಷಕರು. ಇವರ ಅನೇಕ ಕಥೆಗಳು ವಿವಿಧ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿವೆ. ಇವರ ಹಲವು ಕಥೆಗಳಿಗೆ ಪ್ರಶಸ್ತಿಗಳು ದೊರಕಿವೆ. ಮಾರ್ಗಿ – ಇವರ ಪ್ರಕಟಿತ ಕಥಾ ಸಂಕಲನ. ಮನ್ಸೂರ್ ಸಾಹೇಬನ ಕೇಗೆಲ್ ಎಕ್ಷಪರೀಮೆಂಟು (ಕಥಾ ಸಂಕಲನ) ಹಾಗೂ ಹರಿವ ನದಿಯೂ ಹಂಬಲದ ತಟವೂ- ಕವನ ಸಂಕಲನಗಳು ಪ್ರಕಟಣೆ ಹಂತದಲ್ಲಿವೆ.
Thanku
ಅದ್ಭುತವಾದ ಕವಿತೆ ಸರ್.. ನಿಜಕ್ಕೂ ಪ್ರೇಮಿಗಳಿಬ್ಬರ ಹಸಿ ಹಸಿಯಾದ ತಲ್ಲಣ ಮತ್ತೆ ತಾಕಲಾಟಗಳನ್ನು ಎಳೆ ಎಳೆಯಾಗಿ ನಮಗೆ ಭಾವ ತುಂಬಿ ಉಣಬಡಿಸಿದ್ದೀರಿ..
.
ಧನ್ಯವಾದಗಳು ಸರ್ ನಿಮಗೆ