ಪ್ರೀತಿ ಮತ್ತು ಕವಿತೆ

ಒಲವಿನಂತ
ನದಿ ಹರಿಯಲಿಲ್ಲ
ನದಿಯಂತ
ಕವಿತೆ ಸಿಕ್ಕಲಿಲ್ಲ

ಪ್ರೀತಿಸುತ್ತೇನೆ
ವಾಚಾಳಿಯಾಗದ ಕವಿತೆಯಂತೆ
ಕವಿತೆ
ಸುಮ್ಮನೆ ಹರಿವ ನದಿಯಂತೆ

ಪ್ರೀತಿ
ಮೆಟಾಮಾರ್ಫಿಸಿಸ್ ಚಿಟ್ಟೆ
ಕವಿತೆ
ಬುಡ್ಡಿ ಅವಿತ್ತಿಟ್ಟ ಹಕ್ಕಿ

ಪ್ರೀತಿ ಮತ್ತು ಕವಿತೆ
ಚಿಟ್ಟೆ ಮತ್ತು ಹಕ್ಕಿ

ಕಂಬಳಿ ಹುಳು ಮತ್ತು ತತ್ತಿ
ಪ್ರೀತಿ ಮತ್ತು ಕವಿತೆ

ವಿಶಾಲ್ ಮ್ಯಾಸರ್ ಹೊಸಪೇಟೆಯವರು
ಪ್ರಸ್ತುತ ವಿಜಯನಗರ ಮಹಾವಿದ್ಯಾಲಯ ಹೊಸಪೇಟೆಯಲ್ಲಿ ಬಿ.ಎಸ್ಸಿ ಪದವಿಯನ್ನ ವ್ಯಾಸಂಗ ಮಾಡುತ್ತಿದ್ದಾರೆ
“ಬಟ್ಟೆಗಂಟಿದ ಬೆಂಕಿ” ಇವರ ಪ್ರಕಟಿತ ಕವಿತಾ ಸಂಕಲನ