ಸಾಗುವ ದಾರಿ ದೂರ
ಸಾಗುವ ದಾರಿ ದೂರ
ಕಾಲವೇ ಗೂಢಚಾರ
ಗುರಿಯು ಉಂಟು ಜೊತೆಗೆ
ತೆವಲೇ ಇಲ್ಲಿ ತೆರಿಗೆ
ಸಾಗು….ಸಾಗು….
ಸಾಗು….ಸಾಗು….
ಕೆರಳಿ ಸುರಿಯೋ ಮಳೆಗೆ
ಇಳೆಯ ಜೊತೆಗೆ ಸಲುಗೆ
ಮಳೆಯಾ ನೆನಪಿನಲ್ಲಿ
ಮುಳುಗಿಹೋಗೋ ಭೂಮಿ
ಸಿಡಿಯೋ… ಮುಗಿಲು…
ಇಳೆಗೋ… ದಿಗಿಲು…
ಇರುಳಾ ಪರದೆಯಲ್ಲಿ
ಪರಿಧಿ ದಾಟೋ ಆಸೆ
ಕಾಡೋ ಚಿಂತೆಯಲ್ಲಿ
ಮೌನ ಒಂದೇ ಭಾಷೆ
ಮೌನಾ… ಕವನಾ…
ಜಂಟೀ… ಪಯಣಾ…
ಜಗದಾ ಸಂತೆಯಲ್ಲಿ
ಮನುಜ ನೀನು ಸರಕು
ನಿನ್ನಾ ಕೊಳ್ಳೋ ಜನರ
ನೀನೇ ಕುಳಿತು ಹುಡುಕು
ಮಾರೂ…ಕೊಳ್ಳೂ…
ಚಿಲ್ರೇ…ಬಾಳೂ…
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ