ಕಾವ್ಯ ಗಾರುಡಿಗನ ಕೊನೇ ಷೋ: ಪ್ರಹ್ಲಾದ್ ಬರಹ
ಸರಿಯಾದ ಸಮಯಕ್ಕೆ ಎಂದಿನಂತೆ ಆಟೋದಿಂದ ಇಳಿದ ಕಿ.ರಂ. ಅವರನ್ನು ನಾನು, ವಿಜಯಮ್ಮ ಬರಮಾಡಿಕೊಂಡೆವು. ತುಂಬಾ ಬಳಲಿದಂತಿದ್ದ ಅವರ ಮುಖದಲ್ಲಿ ಯಾವತ್ತಿನ ಗೆಲುವಿರಲಿಲ್ಲ. ಇವತ್ತು ಇಲ್ಲಿಗೆ ಮಾತಾಡಲು ಬರುವುದೇ ಅನುಮಾನವಿತ್ತು ಅಂದರು.
`ತುಂ ತುಂ’ ಕವಿತೆ ವಿವರಿಸದೇ ತೆರಳಿದ ಕಿರಂ:ಶಶಿಕಲಾ ಪತ್ರ
ಲಂಕೇಶ್ ಅವರು ಒಳಗೆ ಬರ ಹೇಳಿದ್ದು ನಿಜಕ್ಕೂ ನನ್ನನ್ನಲ್ಲ. ನನ್ನನ್ನು ಮತ್ತಾರೋ ಎಂದು ತಿಳಿದು. ನಾನು ಹಾಗು ಅಲ್ಲಿದ್ದ ಮತ್ತೊಬ್ಬ ಕವಿಯತ್ರಿ ಉಟ್ಟಿದ್ದ ಸೀರೆಯ ಬಣ್ಣ ಒಂದೇ ಆಗಿತ್ತು. ದೂರದಿಂದ ಅವರಷ್ಟೇ ಎತ್ತರ ಆಕಾರ ಇದ್ದ ನಾನೂ ಅವರಂತೆ ಲಂಕೇಶರ ಮಬ್ಬು ಕಣ್ಣಿಗೆ ಕಂಡಿದ್ದೆನೋ ಏನೋ.
ರಾಧೆ ಹಾಕಿದ ಗಂಡಸರ ಚಪ್ಪಲಿ : ಕುಸುಮಾ ಬರಹ
ಹೀಗೆ ದಿವಸಕ್ಕೊಂದು ವಿಷಯ ಪ್ರಸ್ತಾಪವಾಗುತ್ತಿತ್ತು. ಆ ದಿನ ರಾಧೆಗೆ ರಸ್ತೆ ಮತ್ತೊಂದು ತುದಿಯಲ್ಲಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮೇಲೆ ಬಹಳವೇ ಸಿಟ್ಟು ಬಂದಿತ್ತು. ವೈದ್ಯರು ಎರಡು ದಿನಗಳಿಂದ ಬರಲಿಲ್ಲವಂತೆ. ಆಯಾ ಇನ್ನು ಯಾರದ್ದೊ ಮನೆಯ ಜಂಬ್ರಕ್ಕೆ ಹೋಗಿದ್ದಾಳಂತೆ.
ಲಂಕೇಶರಿಲ್ಲದ ಹತ್ತು ವರ್ಷ: ಶಂಕರ್ ಮೆಲುಕು
ಲಂಕೇಶರ ಪ್ರತಿಭೆಯ ಬಗ್ಗೆ ಏನು ಹೇಳಹೊರಟರೂ ಸವಕಲು ಮಾತೇ ಆಗಬಹುದು. ಅದು ಬೇಡ. ಆದರೆ ಅವರ ಒಂದು ಗುಣವನ್ನು ಇಲ್ಲಿ ಪ್ರಸ್ತಾಪಿಸಬೇಕು. ತಾವು ಒಮ್ಮೆ ಯೋಚಿಸಿದ್ದು ಅಥವಾ ಬರೆದಿದ್ದಕ್ಕೇ ಶಾಶ್ವತವಾಗಿ ಅಂಟಿಕೊಂಡು ಪಟ್ಟು ಹಿಡಿಯುವುದು ಎಂದೂ ಲಂಕೇಶರ ಜಾಯಮಾನವಾಗಿರಲಿಲ್ಲ.
ಕೆ.ಎಸ್.ಅಶ್ವಥ್ ಕುರಿತು ಅಮೆರಿಕಾದಲ್ಲಿರುವ ಗೆಳೆಯ
ಅಶ್ವಥ್ ಅವರ ಪರಿಚಯವೂ ನನಗೆ ನಾಟಕದ ಮೂಲಕವೇ ಆದದ್ದು. ಆ ಕಾಲದಲ್ಲಿ ಮೈಸೂರಲ್ಲಿ ನಮಗಿದ್ದ ನಾಟಕ ಮಾಧ್ಯಮಗಳು ಎರಡೇ- ಹವ್ಯಾಸೀ ನಾಟಕ ರಂಗ (ಮುಖ್ಯವಾಗಿ ಕಾಲೇಜು ನಾಟಕ ರಂಗ), ಮತ್ತು ರೇಡಿಯೋ ನಾಟಕ ರಂಗ.
ಹೀಗೊಬ್ಬರು ಅಪರೂಪದ ರಾಜಕಾರಣಿ ಬಿ.ವಿ.ನಾಯಕ
ಉತ್ತಮ ವಾಗ್ಮಿಗಳಾಗಿದ್ದ ಇವರು ಸಂಸತ್ತಿನಲ್ಲಿ ತಮ್ಮ ಪ್ರಖರ ವಿಚಾರಧಾರೆಯಿಂದ ಮಿಂಚಿದರು. ಸ್ಥಳೀಯ, ರಾಷ್ಟೀಯ, ಅಂತರ್ರಾಷ್ಟೀಯ ಸಮಸ್ಯೆ-ವಿಷಯಗಳಿಗೆಲ್ಲ ಸಮರ್ಥವಾಗಿ ಧ್ವನಿ ನೀಡಿದರು.
ಕಿ.ರಂ. ಸಾರ್,ಸ್ಸಾರೀ….,: ರಜನಿ ಬರಹ
ನಾನವರ ಜೊತೆ ನಾಟಕ ಮತ್ತು ನಮ್ಮ ಪ್ರಯೋಗದ ಕುರಿತೇ ಮಾತಾಡಿದ್ದೇನೆಯೆ ಹೊರತು ಕಾವ್ಯದ ಬಗೆಗೆ ಮಾತಾಡಿಲ್ಲ. ಅದಕ್ಕಿಂತ ಹೆಚ್ಚೆಂದರೆ ಕಾಡು ಹರಟೆ ಹೊಡೆದಿದ್ದೇನೆ. ಇತ್ತೀಚೆಗಿನ 5-6 ವರ್ಷಗಳಿಂದ ಅವರ ಜೊತೆಗೆ ಮಾತಾಡುವ ಸಂದರ್ಭ ಬಂದಾಗೆಲ್ಲ ಬೇಕೆಂತಲೇ ತಪ್ಪಿಸಿಕೊಂಡಿದ್ದೇನೆ.
ಲಿಯು ಶಿಯಾಬೋ: ಕೆಂಪು ಚೀನಾದ ಅಶಾಂತ ಸಂತ
ಲಿಯು ಚಿಂತನೆಗಳು, ಮಾತುಗಳು ಎಂಥವರನ್ನೂ ಮಂತ್ರಮುಗ್ಧವಾಗಿಸುತ್ತವೆ. ‘ಅಕ್ಷರ, ಪದ, ವಾಕ್ಯಗಳನ್ನು ಅಪರಾಧವೆಂದು ಭಾವಿಸುವುದನ್ನು ಮೊದಲು ನಿಲ್ಲಿಸಬೇಕು’ ಎಂದು ವಿನಂತಿಸಿಕೊಂಡಿದ್ದವನು ಲಿಯು.
ಗುರುಗಳ ದಿನ ನಾಯಕರ ನೆನಪು:ಸುಮಿತ್ರಾ ಬರಹ
ಮೊದಲನೇ ಸೆಮೆಸ್ಟರ್ ನಲ್ಲಿ ಜಿ.ಎಚ್. ನಾಯಕರು ಹರಿಶ್ಚಂದ್ರ ಕಾವ್ಯ ಪಾಠ ಮಾಡುವಾಗ ಆ ಕಾವ್ಯದ ಪ್ರತಿಯೊಂದು ಮಗ್ಗುಲನ್ನೂ ವಿಶ್ಲೇಷಿಸಿದ ರೀತಿ ದಶಕಗಳ ನಂತರವೂ ನೆನಪಿನಲ್ಲಿ ಉಳಿದಿದೆ. ಈಗ ನಾನು ಪಾಠ ಮಾಡುವಾಗಲೂ ಆ ವಿಚಾರಗಳ ನೆರಳು ಇರುತ್ತದೆ.