ಭರವಸೆಯ ಬುತ್ತಿ, ಶಾಂತಿದೂತೆ – ಜೇನ್ ಗುಡಾಲ್: ಕ್ಷಮಾ ವಿ.ಭಾನುಪ್ರಕಾಶ್ ಬರಹ
ಸಂಶೋಧನೆಗಳಿಗಾಗಿ ಸೆರೆಯಲ್ಲಿರುವ ಪ್ರಾಣಿಗಳ ಆರೈಕೆಯ ಬಗ್ಗೆ, ವನ್ಯಜೀವಿಗಳ ಅಕ್ರಮ ಸಾಗಾಣಿಕೆ ಹಾಗೂ ಮಾರಾಟದ ವಿರುದ್ಧ ತಮ್ಮ ಸಂಸ್ಥೆಯ ಮೂಲಕ ಜೇನ್ ವಿಶ್ವಮಟ್ಟದಲ್ಲಿ ಪ್ರಭಾವಿ ಹೆಸರಾಗಿದ್ದು, ಪರಿಣಾಮಕಾರಿ ಕೆಲಸಗಳನ್ನು ಮಾಡಿದ್ದಾರೆ. ಜೇನ್ ಗುಡಾಲ್ ಇನ್ಸ್ಟಿಟ್ಯೂಟ್ ನ ‘ರೂಟ್ಸ್ ಆಂಡ್ ಶೂಟ್ಸ್’ ಎಂಬ ಶಾಖೆಯು ಯುವಪೀಳಿಗೆಯನ್ನು ಪರಿಸರ ರಕ್ಷಣೆಯ ನಿಜವಾದ ಸವಾಲುಗಳಿಗೆ ಸಿದ್ಧ ಪಡಿಸುವೆಡೆಗೆ, ಪರಿಸರದ ಬಗ್ಗೆ ಜವಾಬ್ದಾರಿಯಿಂದ ನಡೆದುಕೊಳ್ಳುವ ಕಡೆಗೆ ಅನೇಕ ಯೋಜನೆಗಳ ಮುಖಾಂತರ ಮಾರ್ಗದರ್ಶನ ನೀಡುತ್ತಿದೆ.
ಇತ್ತೀಚ್ಚೆಗೆ ತೀರಿಕೊಂಡ ವಿಜ್ಞಾನಿ ಜೇನ್ ಗುಡಾಲ್ ಕುರಿತು ಕ್ಷಮಾ ವಿ. ಭಾನುಪ್ರಕಾಶ್ ಬರಹ ನಿಮ್ಮ ಓದಿಗೆ
ನಮ್ಮನೆಯ ದೀಪಾವಳಿ…: ರೂಪಶ್ರೀ ಕಲ್ಲಿಗನೂರ್ ಬರಹ
ಕನಿಷ್ಟ ಎರಡು ವಾರಗಳ ಹಿಂದಿನಿಂದ ಕೆಲಸ ಆರಂಭಿಸಿರುತ್ತಿದ್ದ ಅಮ್ಮ, ದೀಪಾವಳಿ ಬಟ್ಟೆ ಶಾಪಿಂಗಿಗೆ ಬಂದಿದ್ದು ಕಡಿಮೆಯೇ. ಅಕ್ಕ-ನಾನು ಆಯ್ದ ಬಟ್ಟೆಗಳು ಅವರಿಗೆ ಯಾವಾಗಲೂ ಖುಷಿಯೇ. ಹಾಗಾಗಿ ನೀವೇ ಆರಿಸಿತಂದುಬಿಡಿ ಅಂತ ನಮ್ಮೆಲ್ಲರನ್ನೂ ಕಳಿಸಿಬಿಡುತ್ತಿದ್ದರು. ಹಾಗಾಗಿ ನಮ್ಮದೆಲ್ಲ ಬಟ್ಟೆ ಕೊಂಡಾದ ಮೇಲೆ, ಅಮ್ಮನಿಗೆಂದು ಚಂದದ ಸೀರೆ ಆರಿಸುವ ಜವಾಬ್ದಾರಿ ನಮ್ಮಗಳ ಮೇಲಿರುತ್ತಿತ್ತು. ಅಪ್ಪನೂ, ನಾವೂ ಎಲ್ಲರೂ ಸೇರಿ ಅಮ್ಮನಿಗೆ ಒಪ್ಪಬಹುದಾದ ಸೀರೆಯನ್ನು ಬಹಳ ಕುತೂಹಲದಿಂದ ಆರಿಸುತ್ತಿದ್ದೆವು. ದೀಪಾವಳಿಯ ಆಚರಣೆಯ ಕುರಿತು ರೂಪಶ್ರೀ ಕಲ್ಲಿಗನೂರ್ ಬರಹ
ದೀಪಾವಳಿ ಹಬ್ಬದ ಆ ದಿನದ ನೆನಪು: ಮಾರುತಿ ಗೋಪಿಕುಂಟೆ ಬರಹ
ಅಂತೂ ಈಡಿಗೆ ಬೆಂಕಿ ತಾಕಿಸಿ ಅದು ಉರಿಯುವುದರೊಳಗೆ ನನ್ನನ್ನು ಅಲ್ಲಿಂದ ಮನೆಗೆ ಕಳಿಸಿದ್ದರು. ಅದಾದ ಮೇಲೆ ಎಂದೂ ನಾನು ಬಾನ ಹೊತ್ತಿದ್ದು ನೆನಪಿಲ್ಲ. ನನಗೆ ದೇವರನ್ನು ಹೊತ್ಕೋಬೇಕು ಅಂತ ಆಸೆ ಇತ್ತು. ಆದರೆ ನಾವು ದೇವರನ್ನು ತಲೆಮೇಲೆ ಹೊರಬಾರ್ದು ಅನ್ನುತ್ತಿದ್ದರು. ಅದಕ್ಕೆ ಅನೇಕ ನಿಯಮಗಳಿರುತ್ತವೆ ಅನ್ನುತ್ತಿದ್ದರು. ನಾವ್ಯಾಕೆ ಹೊತ್ಕೋಬಾರ್ದು ಎಂಬ ಪ್ರಶ್ನೆ ನನ್ನನ್ನು ಕಾಡುತ್ತಲೆ ಇತ್ತು. ಅಂತೂ ಆ ವರ್ಷದ ದೀವಣ್ಗೆ ಹಬ್ಬ ಮುಗಿದುಹೋಗಿತ್ತು. ಪ್ರತಿ ದೀಪಾವಳಿ ಹಬ್ಬದಲ್ಲೂ ಅಂತಹ ನೆನಪುಗಳು ಮತ್ತೆ ಮತ್ತೆ ಮರುಕಳಿಸುತ್ತಲೆ ಇರುತ್ತವೆ.
ಮಾರುತಿ ಗೋಪಿಕುಂಟೆ ನೆನಪುಗಳು
ತುಳುನಾಡಿನ ದೀಪಾವಳಿ: ಫಕೀರ್ ಮುಹಮ್ಮದ್ ಕಟ್ಪಾಡಿ ನೆನಪುಗಳು
ಪಟಾಕಿ ಸುಡುವುದರ ಬಗ್ಗೆ ಕ್ಲಾಸಿನಲ್ಲಿ ಪಾಠದ ಮಧ್ಯೆ ಸುಮ್ಮನೆ ದಂಡಕ್ಕೆ ಎಂದು ಬೋಧಿಸಿದ್ದ ನಮ್ಮ ನೆರೆಮನೆಯ ದೇಜು ಮಾಸ್ಟ್ರು ತಮ್ಮ ಮಕ್ಕಳು ಕೃಷ್ಣ, ಲಕ್ಷ್ಮಣ, ಪುಟ್ಟ ಮಗು ಮಾರುತಿಯರನ್ನು ಕರೆದುಕೊಂಡು ಬಂದು ನಮ್ಮ ತಂದೆಯವರ ಜೊತೆಗೆ ನಿಂತು ಉತ್ಸವವನ್ನು ನೋಡಿದಂತಾಯಿತೆಂದು ಹೇಳಿಕೊಂಡು, ಖುಷಿ ಪಟ್ಟುಕೊಂಡು, ನಮ್ಮ ಸಂತೋಷದಲ್ಲಿ ಭಾಗಿಯಾಗಿದ್ದರು. ಸುಮಾರು ಅರ್ಧ ಗಂಟೆಗಳ ಕಾಲ ನಮ್ಮ ಸುಡು ಮದ್ದು ಬಿರುಸು ಬಾಣಗಳ ವೈಭವವನ್ನು ಸವಿದ ಊರವರು ಮುಂದೆ ವರ್ಷಗಟ್ಟಲೆ ಈ ದೀಪಾವಳಿಯನ್ನು `ಗುರುಕುಲೆ ಇಲ್ಲದ ದೀಪೋಲಿ’ ಎಂತಲೇ ನೆನಸಿ ಕೊಳ್ಳುತ್ತಿದ್ದರು.
ತುಳುನಾಡಿನ ದೀಪಾವಳಿಯ ಆಚರಣೆಗಳ ಕುರಿತು ಫಕೀರ್ ಮುಹಮ್ಮದ್ ಕಟ್ಪಾಡಿ ನೆನಪುಗಳು ನಿಮ್ಮ ಓದಿಗೆ
ಹೊಸ ಮನೆ… ಹೊಸ ಏರಿಯಾ.. ಹೊಸ ಸಮಸ್ಯೆಗಳು…: ಎಚ್. ಗೋಪಾಲಕೃಷ್ಣ ಸರಣಿ
ಅವತ್ತು ಜೋರು ಮಳೆ. ಮಳೆ ಬಂದು ನಿಂತ ನಂತರ ನಮ್ಮ ಸೈಕಲ್ ಜಾಥಾ ಶುರು ಆಯಿತು. ರಾಮಚಂದ್ರಪುರದ ಕಿರು ರಸ್ತೆಗೆ ಬಂದೆವು. ಕತ್ತಲಿನಲ್ಲಿ ಒಬ್ಬ ಮಧ್ಯ ವಯಸ್ಕರು ಕೈಯಲ್ಲಿ ಒಂದು ಟಾರ್ಚ್ ಹಿಡಿದು ನಿಂತಿದ್ದರು. ಸ್ವಾಮೀ ನಿಲ್ಲಿ, ನಿಲ್ಲಿ ಸಾರ್ ಅಂತ ನಮ್ಮನ್ನು ತಡೆದರು. ಎಲೆಕ್ಟ್ರಿಕ್ ವೈರ್ ರಸ್ತೆ ಮೇಲೆ ಅಲ್ಲೆಲ್ಲಾ ಬಿದ್ದು ಕರೆಂಟ್ ಹರಿತಾ ಇದೆ. ಈ ರೋಡಿನಲ್ಲಿ ಹೋಗಬೇಡಿ ಅಂತ ಹೇಳಿ ಎಂ ಎಸ್ ಪಾಳ್ಯದ ಮೂಲಕ ಹೋಗಿ ಅಂತ ಸೂಚಿಸಿದರು. ಇದು ನಾಲ್ಕು ಕಿಮೀ ಹೆಚ್ಚು ದೂರ. ಆದರೂ ಜೀವ ನಮ್ಮದು ತಾನೇ?
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೦ನೇ ಬರಹ ನಿಮ್ಮ ಓದಿಗೆ
ನವರಾತ್ರಿಯಲ್ಲಿ ನನಗೆ ಅಮ್ಮ ಸಿಕ್ಕಳು…: ಗಾಯತ್ರಿ ರಾಜ್ ಬರಹ
ಕಣ್ಣು ತೇವಗೊಂಡು, ಭಾವ ಗಂಟಲುಬ್ಬಿ ಬಂದು, ಆ ನವದುರ್ಗೆಯರಲ್ಲೂ, ನನ್ನಲ್ಲೂ, ನನ್ನ ಮಗಳಲ್ಲೂ ಅಮ್ಮನನ್ನೇ ಗುರುತಿಸುತ್ತಾ ಅವಳು ಕಲಿಸಿದ ದೇವರ ನಾಮ ಗುನುಗುತ್ತೇನೆ. ಅವಳನ್ನೇ ಮೈವೆತ್ತಂತೆ ಮತ್ತೆ ಮತ್ತೆ ಮೈದುಂಬಿ ಹಾಡುವಾಗ, ನನ್ನ ಮಗಳು ಕೂಡ ನನ್ನ ಜೊತೆ ಗುನುಗುತ್ತಾ ಮುಗುಳ್ನಗುತ್ತಾಳೆ. ತಲೆಮಾರುಗಳ ಸಂಯೋಜನೆಯೊಂದು ಸಜೀವವಾಗಿ ಕಣ್ಣೆದುರು ನಿಂತಂತಾಗುತ್ತದೆ. ನನ್ನೊಳಗಿನ ಅಮ್ಮ ಈಗ ಅವಳ ತುಟಿಯಲ್ಲಿ ಮೂಡುತ್ತಿದ್ದಳೆ. ಅವಳೂ ಕೂಡ ನಾಳೆ ನಾ ಅಮ್ಮನಿಂದ ಕಲಿತು, ಕಲಿಸಿದ ಹಾಡನ್ನೇ ತನ್ನದೇ ದನಿಯಲ್ಲಿ, ತನ್ನದೇ ಭಾವದಲ್ಲಿ ಪುನರ್ಜೀವಗೊಳಿಸುತ್ತಾಳೆ.
ನವರಾತ್ರಿ ಆಚರಣೆಯಲ್ಲಿ ಅಮ್ಮನ ನೆನಪುಗಳ ಕುರಿತು ಗಾಯತ್ರಿ ರಾಜ್ ಬರಹ
ಮಾನವನ ವಿಕಾಸಕ್ಕೆ ಪ್ರಶ್ನಿಸುವುದೇ ಆಧಾರ: ನಮ್ರತಾ ಪೊದ್ದಾರ್ ಬರಹ
ಬಹಳ ಪೋಷಕರು ಮಕ್ಕಳ ಕುತೂಹಲಭರಿತ ಪ್ರಶ್ನೆಗಳಿಗೆ ನಕ್ಕು ಸುಮ್ಮನಾಗಿಯೋ ಅಥವಾ ಅರೆಬರೆ ಉತ್ತರ ಕೊಟ್ಟೋ ಜಾರಿಕೊಳ್ಳುತ್ತಾರೆ. ತಮ್ಮ ನಂಬಿಕೆಗಳಿಗೆ ಹಾಗೂ ಆಚಾರ, ವಿಚಾರಕ್ಕೆ ಸರಿಹೊಂದದೆ ಇರುವ ಪ್ರಶ್ನೆಗಳನ್ನು ಮಕ್ಕಳು ಕೇಳಿದಾಗ ಕಸಿವಿಸಿಗೊಂಡು ಕೋಪಿಸಿಕೊಳ್ಳುವುದನ್ನು ನೋಡಿದ್ದೇವೆ. ಯಾವುದೇ ವಿಷಯದ ಬಗ್ಗೆ ಗೊತ್ತಿಲ್ಲದಿರುವುದು ಅವಮಾನದ ಮಾತಲ್ಲ. ನಾವೇ ಏನೋ ಊಹೆ ಮಾಡಿಕೊಂಡು, ಖಾಲಿ ಇರುವ ಜಾಗದಲ್ಲಿ ಏನೋ ತುಂಬಿಕೊಂಡು ಸತ್ಯವನ್ನು ಹುಡುಕುವ ಗೋಜಿಗೆ ಹೋಗದಿರುವುದು ತಪ್ಪು.
ನಮ್ರತಾ ಪೊದ್ದಾರ್ ಬರಹ ನಿಮ್ಮ ಓದಿಗೆ
ಅಪರೂಪದ ಗ್ರೂಪ್ ಫೋಟೋ: ಜಯಂತ ಕಾಯ್ಕಿಣಿ ಬರಹ
ವ್ಯಕ್ತಿಗತವಾಗಿ ವಿಭಿನ್ನ ಹುಡುಕಾಟ, ನೋಟ, ನಿಲುವುಗಳಿದ್ದರೂ, ಒಟ್ಟಾರೆ ಸೇರಿ ಏನೋ ಒಂದು ಒಳ್ಳೆಯದರಲ್ಲಿ ತೊಡಗಿರುವ ಭಾವವೊಂದು ಇಲ್ಲಿ ನಿಚ್ಚಳವಾಗಿದೆ. ‘ಬೇಂದ್ರೆ-ತರಾಸು ತೊಡೆನಾಟʼ ಇದಕ್ಕೆ ಸೊಗಸಾದ ಸಾಕ್ಷಿ. ಬೇಂದ್ರೆ ಮತ್ತು ಅಡಿಗರ ನಡುವೆ ಕಾಯ್ಕಿಣಿ, ಎಕ್ಕುಂಡಿ, ಶರ್ಮ ಇರುವುದೇ ಒಂದು ರೂಪಕ. ಬಹುಶಃ ಇದು ಆಗ ನಡೆದಿದ್ದ ಕುಮಟಾ ಸಾಹಿತ್ಯ ಸಮ್ಮೇಳನಕ್ಕೆ ಬಂದ ಕೆಲವು ಅತಿಥಿಗಳು ಗೋಕರ್ಣವನ್ನೂ ನೋಡಿಕೊಂಡು ಹೋಗಲು ಬಂದಾಗ ನಡೆದ ಕೂಟ ಕಲಾಪ….
ಕವಿ, ಕತೆಗಾರ, ಸಿನಿಮಾ ಹಾಡುಗಳ ಸರದಾರ, ಜಯಂತ ಕಾಯ್ಕಿಣಿ ತಮ್ಮ ತಂದೆ; ವಿದ್ವಾಂಸ, ವಿಮರ್ಶಕ, ಸಂಶೋಧಕ ಗೌರೀಶ ಕಾಯ್ಕಿಣಿ ಮತ್ತು ಅವರ ಸಮಕಾಲೀನ ಬರಹಗಾರರರನ್ನು ಅಪರೂಪದ ಫೋಟೋವೊಂದರ ಮೂಲಕ ನೆನಪಿಸಿಕೊಂಡಿದ್ದಾರೆ.
ತಾವರೆಯ ಧ್ಯಾನ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಲಲಿತ ಪ್ರಬಂಧ
ರೀಲ್ಸ್‌ನಲ್ಲಿ ತೋರಿಸಿದ ಹಾಗೆ ಎರಡು ದಿನಗಳಲ್ಲಿ ಅದರಲ್ಲಿ ಸೃಷ್ಟಿಯ ಕುರುಹುಗಳು ಕಂಡುಬರಬೇಕಿತ್ತು. ದಿನ ಎರಡಾಯಿತು ಮೂರಾಯಿತು ಬೀಜ ಕದಲಲಿಲ್ಲ. ಬೀಜಗಳನ್ನು ಹೊರತೆಗೆದು ಕೈಯಲ್ಲಿಟ್ಟು ನೋಡಿದ. ತಿರುಗಿಸಿ ತಿರುಗಿಸಿ ನೋಡಿದರೂ ಬೀಜ ನಿಸ್ತೇಜವಾಗಿ ಬಿದ್ದುಕೊಂಡಿತ್ತು. ಅದು ಮೊಳಕೆಯೊಡೆಯುವ ಯಾವ ಮನಸ್ಸನ್ನೂ ಮಾಡಲಿಲ್ಲ. ಮೊದಮೊದಲು ಧ್ರುವನ ಈ ತಳಮಳವನ್ನು ನೋಡಿ ನಾನು ಜೋರಾಗಿ ನಗುತ್ತಿದ್ದೆ. ಮೊದಲೇ ಹೇಳಿದ್ದೆ ನಿಂಗೆ ಇದು ವರ್ಕ್ ಔಟ್ ಆಗಲ್ಲ ಅಂತ. ಸುಮ್ನೆ ಟೈಮ್ ವೇಸ್ಟ್. ರೀಲ್ಸ್‌ನಲ್ಲಿ ಸುಮ್ನೆ ತೋರಿಸಿ ನಮ್ಮನ್ನು ಮಂಗ ಮಾಡ್ತಾರೆ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಲಲಿತ ಪ್ರಬಂಧ ನಿಮ್ಮ ಓದಿಗೆ









