ಮರಾಠಿ ಚೆಲುವೆಯ ಮೆಕ್ಯಾನಿಕ್ ಪ್ರೇಮಾಯಣ ಹಾಗೂ ಕನ್ನಡ ಸಾಹಿತ್ಯ
“ಹೀಗೆ ಏನಾಯಿತು ಯಾಕಾಯಿತು ಎಂದೇನೂ ತಿಳಿಯದ ಆ ಹುಡುಗಿ ಮೊದಮೊದಲು ಇದನ್ನೆಲ್ಲಾ ಅಲಕ್ಷ್ಯ ಮಾಡಿದರೂ ನಂತರದಲ್ಲಿ ಇವರ ಕಾಟ ಹೆಚ್ಚಾಗಿ ಹೋಯಿತು. ಬೈಗುಳಕ್ಕೂ ಬಗ್ಗದ ನೀಚ ಗುಂಪೊಂದು ಸದಾ ಆಕೆಯನ್ನು ಗೋಳಾಡಿಸತೊಡಗಿತು. ಮೊದಮೊದಲು ತಲೆ ಮೇಲಿದ್ದ ಸೆರಗನ್ನು ಮುಖವೆಲ್ಲಾ ಹೊದ್ದು ಓಡಾಡುತ್ತಿದ್ದ ಈ ಚೆಲುವೆ, ಆಮೇಲಾಮೇಲೆ ಅಲ್ತಾಫನ ಅಂಗಡಿಯ ಕಡೆ ಬರುವುದನ್ನೇ ಕಡಿಮೆ ಮಾಡಿದಳು.”
ʻಲೋಕ ಸಿನಿಮಾ ಟಾಕೀಸ್ʼನಲ್ಲಿ ಇಂಗ್ಲೆಂಡಿನ `ದ ಅವರ್ಸ್ʼ ಸಿನಿಮಾ
“ಅವಳನ್ನು ಬಹುವಾಗಿ ಪ್ರೀತಿಸುವ ಗಂಡ ಲಿಯೊನಾರ್ಡ್ಗೆ ಯಾವಾಗಲೂ ಆತಂಕದ ಗಳಿಗೆಗಳೇ ಹೆಚ್ಚು. ಅವಳ ಬಗ್ಗೆ ಅವನದು ಇನ್ನಿಲ್ಲದಷ್ಟು ಕಾಳಜಿ. ಸಾಧ್ಯವಾದಷ್ಟೂ ಅವಳ ವರ್ತನೆಗಳನ್ನು ಅವಲೋಕಿಸಿ ಅವಳ ಅಂತರಂಗವನ್ನು, ಮಾನಸಿಕ ತುಮುಲವನ್ನು ತಕ್ಕಷ್ಟು ಮಟ್ಟಿಗೆ ಸರಿಯಾಗಿ ಊಹಿಸುವುದೇ ಅವನ ಮುಖ್ಯ ಕರ್ತವ್ಯಗಳಲ್ಲೊಂದು.”
ಎ.ಎನ್. ಪ್ರಸನ್ನ ಬರೆಯುವ ʻಲೋಕ ಸಿನಿಮಾ ಟಾಕೀಸ್ʼನಲ್ಲಿ ಇಂಗ್ಲೆಂಡ್ ನ ʻದ ಅವರ್ಸ್ʼ ಸಿನಿಮಾದ ವಿಶ್ಲೇಷಣೆ
ಮಹಾಲಕ್ಷ್ಮಿಯ ಮಡಿಲಿಗೆ ಸೇರಿದೆನಾದರೂ…
ನಾನು ಹೊಸಬ. ರಂಗರಾಜನ್ ಪಳಗಿದವರು. ಹೇಗೋ ರೇಟಿಂಗ್ ಹೆಚ್ಚಿಸಬೇಕೆಂದು ನನಗಿದ್ದ ಉತ್ಸಾಹಕ್ಕೆ ವಾಸ್ತವದ ಆಯಾಮವನ್ನು ನೀಡಿ ಭೂಮಿಗೆ ಇಳಿಸಿದರು. ‘ವೇಣೂ, ಪರಿಸ್ಥಿತಿಯನ್ನು ಅರ್ಥಮಾಡಿಕೊ. ನಮಗೆ ಅನುಕೂಲವಾದದ್ದನ್ನು ಸಾಧಿಸಬೇಕೆನ್ನುವುದು ಸರಿಯೇ. ಆದರೆ ಹೇಳಿಕೆಯಲ್ಲಿ ವಿಶ್ವಸಾರ್ಹತೆ ಕುಂಠಿತವಾಗುವಂತಹ ಅತ್ಯುತ್ಸಾಹ ತೋರಿಸಕೂಡದು.”
ಎಂ.ಎಸ್. ಶ್ರೀರಾಮ್ ಅನುವಾದಿಸಿದ ವೈ.ವಿ. ರೆಡ್ಡಿಯವರ ಆತ್ಮಕಥನದ ಆಯ್ದ ಭಾಗದ ನಾಲ್ಕನೆಯ ಕಂತು
ಕಾಲದ ಲೆಕ್ಕಾಚಾರ: ವಾದ ಪ್ರತಿವಾದಗಳ ಹೊಳಹು
‘ಭೌತಶಾಸ್ತ್ರಜ್ಞರ ಕಾಲ’ ಮತ್ತು ‘ತತ್ವಶಾಸ್ತ್ರಜ್ಞರ ಕಾಲ’ ಇವೆರಡೂ ಬೇರೆಯದೇ ಎಂಬುದಾಗಿ ತತ್ವಶಾಸ್ತ್ರಜ್ಞ ಹೆನ್ರಿ ಬೆರ್ಗ್ಸನ್ ಪ್ರತಿಪಾದಿಸಿದರೆ, ‘ತತ್ವಶಾಸ್ತ್ರಜ್ಞರ ಕಾಲ ಎನ್ನುವುದು ಇಲ್ಲ; ಇರುವುದು ಮಾನಸಿಕ ಮತ್ತು ಭೌತಿಕ ಕಾಲಗಳ ವ್ಯತ್ಯಾಸ ಅಷ್ಟೇ’ ಎಂದು ವಿಜ್ಞಾನಿ ಐನ್ ಸ್ಟೈನ್ ವ್ಯಾಖ್ಯಾನಿಸುತ್ತಾನೆ. ಕಾಲದ ಪರಿಕಲ್ಪನೆ ಕುರಿತು ಐನ್ ಸ್ಟೈನ್ ಮತ್ತು ಹೆನ್ರಿ ಬೆರ್ಗ್ಸನ್ ನಡುವೆ ನಡೆದ ವಾದ ಸರಣಿಯ ಒಂದು ವಿಶ್ಲೇಷಣೆಯನ್ನು ..”
ಅಪರಾಧ ಮತ್ತು ಶಿಕ್ಷೆ: ಯಾರದ್ದು ಗೆಲುವು.. ನಂದೋ… ನಿಂದೋ?
“ರಾಸ್ಕೋಲ್ನಿಕೋವ್ನಲ್ಲಿ ಹುಟ್ಟಿದ ಅಸಹ್ಯದ ಭಾವ ಅವನ ಎಚ್ಚರದ ಮೇರೆಯನ್ನೂ ಮೀರಿ ಹರಿಯಿತು. ಅವನು ನಗು ನಿಲ್ಲಿಸಿದ. ಹುಬ್ಬು ಗಂಟಿಕ್ಕಿದ. ಪೋರ್ಫಿರಿಯನ್ನು ಬಹಳ ಹೊತ್ತು ದಿಟ್ಟಿಸಿದ. ಆ ನೋಟದಲ್ಲಿ ದ್ವೇಷವಿತ್ತು. ಕೊನೆಯೇ ಇರದ ಹಾಗೆ ಬೇಕೆಂದೇ ನಗು ಉಕ್ಕಿಸಿಕೊಳ್ಳುತ್ತಿದ್ದಷ್ಟೂ ಹೊತ್ತು ಅವನ ನೋಟ ಪೋರ್ಫಿರಿಯನ್ನು ಬಿಟ್ಟು ಕದಲಲಿಲ್ಲ.”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ
‘ಖಾನ್ ಕಾಂಪೌಂಡ್’ ಗೆ ರಫೀಕ್ ಖಾನ್ ಬರೆದ ಪ್ರಸ್ತಾವನೆ
ಧಾರವಾಡ ಘರಾನಾ ಶೈಲಿಯ ಸಂಗೀತ ಗಾರುಡಿಗ ಪ್ರಸಿದ್ಧ ಸಿತಾರ್ ವಾದಕ ಉಸ್ತಾದ್ ರಫೀಕ್ ಖಾನ್ ಅವರ ಕುಟುಂಬದಲ್ಲಿ ಸಿತಾರ್ ಸಾಧಕರ ದಿಗ್ಗಜರ ಗಡಣವೇ ಇದೆ. ಸಿತಾರ್ ಮತ್ತು ಸಂಗೀತವನ್ನು ನಂಬಿದ ಈ ಕುಟುಂಬ ಸಾಗಿದ ದಾರಿಯ ಕುರಿತು ರಫೀಖ್ ಖಾನ್ ತಮ್ಮ ವಿಚಾರಗಳನ್ನು ಅಭಿವ್ಯಕ್ತಗೊಳಿಸಿದ್ದಾರೆ. ಅವುಗಳನ್ನು ಅಕ್ಷರ ರೂಪಕ್ಕಿಳಿಸಿದವರು ಲೇಖಕ ಶೇಣಿ ಮುರಳಿ. “ಖಾನ್ ಕಾಂಪೌಂಡ್’’ ಎಂಬ ಶೀರ್ಷಿಕೆಯಡಿ ಪ್ರಕಟವಾದ ಈ ಪುಸ್ತಕದ ಕೆಲವು ಅಧ್ಯಾಯಗಳು ಓದುಗರಿಗೆ ಇಲ್ಲಿಲಭ್ಯವಾಗಲಿದೆ. “
ಸಿಂಗರನ ಬಾಲ್ಯಕಾಲದ ಕಥನ: ವಂಶವೃಕ್ಷ
“ಅಮ್ಮ ತನ್ನ ಭಾವಿ ವರನನ್ನು ಭೇಟಿಯಾದಾಗ ಪೂರ್ಣ ಕೆಂಪು ಗಡ್ಡದ ಈ ಮನುಷ್ಯನನ್ನು ನೋಡಿ ಮುಜುಗರವಾಗಿತ್ತಂತೆ. ಆದರೆ ಅವನು ಅವಳ ತಂದೆಯ ಜೊತೆಗಿನ ಧಾರ್ಮಿಕ ಪ್ರಶ್ನೆಗಳ ಚರ್ಚೆಯಿಂದಾಗಿ ಗೌರವದ ಜೊತೆಗೆ ಅವನನ್ನು ಮೆಚ್ಚಿಕೊಂಡಳಂತೆ. ನನಗೆ ಹೇಳಿದ್ದಳು ಅವಳಿಗಿಂತ ಐದು ವರ್ಷಕ್ಕೆ ದೊಡ್ಡವನಿದ್ದ ವರ ಸಿಕ್ಕಿದ್ದು ಸಂತಸವಾಗಿತ್ತು ಎಂದು. ಟೆಮರ್ಲ್ ಅಜ್ಜಿ ಅಮ್ಮನಿಗೆ ಧರಿಸಲು ಆಗದಂತಹ ತೂಕದ ಚಿನ್ನದ ಸರವೊಂದನ್ನು ಉಡುಗೊರೆಯಾಗಿ ನೀಡಿದ್ದಳು.”
ಶ್ರೀಧರನ ಮದುವೆ ಸುಸಂಪನ್ನವಾದ ಪರಿ
“ಇಂತಿಪ್ಪ ಸಜ್ಜನ ಕುಟುಂಬವನ್ನು ಹೀಗೆ ಪರಿಪರಿಯಾಗಿ ಗೋಳಾಡಿಸಿದ ಈ ಶ್ರೀಧರನು ಇನ್ನೇನು ಅನಾಹುತ ಮಾಡಿದನೋ ಎಂದು ಎದೆಬಡಿತ ಸಹಿಸುತ್ತಾ ಕೇಳುತ್ತಿದ್ದವರಿಗೆ ಕಡೇ ಪಾಯಿಂಟನ್ನು ಕಿರಿಸೊಸೆಯಾದ ರುಕ್ಮಿಣಿಯವರೇ ವಿವರಿಸಿದರು. “ನೋಡಿ, ಒಂದೇ ಒಂದು ದಿನಕ್ಕೂ ಇವರು ಕೈಕಾಲು ತೊಳೆದು ತಟ್ಟೆಯ ಮುಂದೆ ಕೂತದ್ದು ನಾನು ನೋಡ್ಲಿಲ್ಲ. ದರಿದ್ರವಾಗಿ ಎಲ್ಲಿದ್ದರೆ ಅಲ್ಲಿಂದಲೇಎದ್ದು ತಟ್ಟೆಗೆ ಕೈಯಿಡೋದು.
ಮಧುರಾಣಿ ಎಚ್. ಎಸ್. ಬರೆಯುವ ಮಠದ ಕೇರಿ..”
ʻಲೋಕ ಸಿನಿಮಾ ಟಾಕೀಸ್ʼನಲ್ಲಿ ʻದ ಲೈವ್ಸ್ ಆಫ್ ಅದರ್ಸ್ʼ ಸಿನಿಮಾ
“ವೀಸ್ಲರ್ ಸದಾ ಕಾಲ ತನ್ನ ಬೆನ್ನ ಹಿಂದೆಯೇ ಇದ್ದಾನೆ ಎನ್ನುವುದನ್ನು ಅರಿಯದ ಡ್ರೇಮನ್ ನಾಟಕ ರಚಿಸುವ ಸಲುವಾಗಿ ಅದರ ವಸ್ತುವನ್ನು ಕುರಿತಂತೆ ತನ್ನ ಸಹಪಾಠಿಗಳೊಂದಿಗೆ ಚರ್ಚಿಸುತ್ತಿರುತ್ತಾನೆ. ಆದರೆ ವೀಸ್ಲರ್ನ ದೃಷ್ಟಿಯಲ್ಲಿ ಡ್ರೇಮನ್ ಮಾಡುತ್ತಿರುವುದು ಹೆಸರಿಗೆ ಮಾತ್ರ. ಅವನ ಮೂಲ ಉದ್ದೇಶವೇ ಬೇರೆ ಎಂದು ಸಂದೇಹ. ಈಸ್ಟ್ ಜರ್ಮನ್ ಸಂಗತಿಗಳನ್ನು ಪಾಶ್ಚ್ಯಾತ್ಯ ದೇಶಗಳಿಗೆ ತಿಳಿಸುವ ಉದ್ದೇಶವಿದೆ ಎಂದು ವೀಸ್ಲರ್ ಗೆ ಗುಮಾನಿ.”










