ನಮ್ಮೂರಿನ ಕತೆಗಳು: ಸುಮಾ ಸತೀಶ್ ಸರಣಿ
ಅವರ ಮನ್ಯಾಗೆ ಲೆಟ್ರಿನ್ ಇತ್ತು. ಇಲ್ಲಿ ಬಯಲಿಗೆ ಹೋಗೋಕೆ ಸುತ್ರಾಂ ಒಪ್ತಿಲ್ಲ. ಚೊಂಬು ಹಿಡಿಯಾಕಿಲ್ಲ ಅಂದ್ಲು. ಕೊನೀಗೆ ಸಣ್ಣ ಹುಡ್ಗಿ ಅಂತ ನನ್ನ ಅವಳ ಹಿಂದೆ ಚೊಂಬು ಹಿಡ್ಕೊಂಡು ಮೆರವಣಿಗೆ ಕಳಿಸಿದ್ರು. ಥೋ, ನಂಗೋ ಕೋಪ. ಅವಳ ಹಿಂದೆ ಹೋಗಿ, ಚೊಂಬು ಕೊಟ್ಟೆ. ಆ ನೀರು ಸಾಲಲಿಲ್ಲ ಅಂತ ಅಲ್ಲೇ ಕುಂತ್ಲು. ಇನ್ನೊಂದು ಚೊಂಬು ತರಾಣಿ ಅಂತ ಹೊಂಟ್ರೇ, ಚೊಂಬು ಸಾಲಾಕಿಲ್ಲ, ಬಿಂದಿಗೇಲಿ ತತ್ತಾ ಅಂತ ಹಠ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮೂರಿನ ಕುರಿತ ಬರಹ
ತಿಳಿವಳಿಕೆಯ ಚಳುವಳಿಗಳಿಂದ ಅರಳಿನಿಂತ ಫ್ರಾನ್ಸ್: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ
ಫ್ರಾನ್ಸ್ ಕಲಾವಲಯದ ಕುರಿತ ವಿವರಣೆಯು ಪ್ಯಾಬ್ಲೋ ಪಿಕಾಸೊ ಅವರ ಪ್ರಸ್ತಾಪವಿಲ್ಲದೆ ಪೂರ್ಣವಾಗಲಾರದು. ಶಿಲ್ಪಕಲೆಯನ್ನು ಪ್ರಧಾನವಾಗಿಸಿಕೊಂಡು ಇತರ ಕಲೆಗಳಲ್ಲಿಯೂ ತೊಡಗಿಸಿಕೊಂಡ ಇವರು ಸ್ಪೇನ್ ಮೂಲದವರು. ಇಪ್ಪತ್ತನೇ ಶತಮಾನದ ಫ್ರಾನ್ಸ್ ಶಿಲ್ಪಕಲೆಯ ಮೊದಲ ಅರ್ಧಭಾಗ ಪಿಕಾಸೊ ಅವರಿಗೆ ಮೀಸಲಾಗಿದೆ. ‘ಮ್ಯಾನ್ ವಿದ್ ಅ ಲ್ಯಾಂಬ್’ ಎನ್ನುವ ಅವರ ಶಿಲ್ಪಕಲಾ ಕೆತ್ತನೆಯಲ್ಲಿ ಮಾನವೀಯತೆ ಅಭಿವ್ಯಕ್ತಗೊಂಡಿದ್ದರೆ, ‘ಡೆತ್ಸ್ ಹೆಡ್’ ಎನ್ನುವ ಕೆತ್ತನೆಯು ಯುದ್ಧದ ಭೀಕರತೆಯನ್ನು ಮನದಟ್ಟು ಮಾಡಿಕೊಡುವಂತಿದೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ
ಸಿಸಿಇ-ಹೊಸ ಮೌಲ್ಯಮಾಪನ ಪದ್ಧತಿ…: ಅನುಸೂಯ ಯತೀಶ್ ಸರಣಿ
ಇನ್ನು ಪರೀಕ್ಷೆ ಮುಗಿಯುವವರೆಗೂ ಪುಸ್ತಕ ಕೆಳಗೆ ಇಡುವಂತಿಲ್ಲ. ಸದಾ ಕಾಲ ಪುಸ್ತಕವನ್ನು ಕೈಯಲ್ಲೇ ಹಿಡಿದಿರಬೇಕು” ಎಂದಿದ್ದೆ. ನನ್ನ ಮಾತಿನ ಸೂಕ್ಷ್ಮಾರ್ಥವನ್ನು ಗ್ರಹಿಸದ ಆ ಮಗು ಕೇವಲ ಪುಸ್ತಕವನ್ನು ಕೈಯಲ್ಲಿ ಹಿಡಿದು ನನ್ನ ಮಾತಿನ ಪರಿಪಾಲನೆ ಮಾಡಿದ್ದನು. ನನಗಾಗ ಅರ್ಥವಾಯಿತು. ಯಾವುದೇ ವಿಷಯವನ್ನು ಮಕ್ಕಳಿಗೆ ಮಾರ್ಮಿಕವಾಗಿ, ಗೂಡಾರ್ಥದಲ್ಲಿ ಅಸ್ವಷ್ಟವಾಗಿ ಹೇಳಬಾರದು ಎಂದು.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ
“ಧಂ”ಪತಿ ಮುಯ್ಯಿ: ಸುಮಾವೀಣಾ ಸರಣಿ
‘ಧಂ’ ಅಂದರೆ ಧೈರ್ಯ ಉಸಿರು ಎನ್ನುವ ಅರ್ಥವೂ ಇದೆ. ಹೊಸ ಮನೆ ಕಟ್ಟುವಾಗ ಮನೆ ಕಟ್ಟುವವರಿಗೆ, ಪಕ್ಕದ ಸೈಟವರಿಗೆ ಕಾಂಪೌಂಡ್ಗೆ ಜಾಗ ಬಿಡುವ ವಿಚಾರದಲ್ಲಿ ತಕರಾರು ಇದ್ದೇ ಇರುತ್ತದೆ. ಆಗ ಪರಸ್ಪರೂ ‘ಧಮ್’ ಇದ್ದರೆ ಕಟ್ಟು ನೋಡೋಣ ಅಂದರೆ ಪ್ರತಿಯಾಗಿ ಇನ್ನೊಬ್ಬ ‘ಧಮ್’ ಇದ್ದರೆ ನಿಲ್ಲಿಸು ನೋಡೋಣ ಎನ್ನುವ ಸವಾಲುಗಳು ಪ್ರತಿ ಸವಾಲುಗಳನ್ನು ಹಾಕಿಯೇ ಇರುತ್ತಾರೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಎರಡನೆಯ ಬರಹ
ಹೊಸ ಚಿಂತನೆ..ಹೊಸ ತಿರುವು..: ಎಸ್. ಜಯಶ್ರೀನಿವಾಸ ರಾವ್ ಸರಣಿ
ಅವರ ಕೆಲವು ಕವಿತೆಗಳು ಕೇವಲ ಆರು ಪದಗಳಷ್ಟೇ ಉದ್ದವಿರುತ್ತವೆ – ಇದು ಅವಶ್ಯಕತೆ ಮತ್ತು ಸಾಧ್ಯತೆಯತ್ತ ಗಮನ ಸೆಳೆಯುವ ದಿಟ್ಟವಾದ ನಡೆ. ಅತಿ ತೆಳ್ಳನೆಯ ವಸ್ತುಗಳಿಂದ ಇಂತಹ ವಿಸ್ತೃತವಾದ ಕವಿತೆಗಳನ್ನು ರಚಿಸುವ ಅವರ ಸಾಮರ್ಥ್ಯವು ಭಾಗಶಃ, ಐಸ್ಲ್ಯಾಂಡಿಕ್ ಇತಿಹಾಸದ ಅವರ ಜ್ಞಾನದಿಂದ ಮತ್ತು ಪದಸೃಷ್ಟಿ ಬಗ್ಗೆ ಅವರಿಗಿರುವ ಒಲವಿನಿಂದ ಬರುತ್ತದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಐಸ್ಲ್ಯಾಂಡ್ ದೇಶದ ಖ್ಯಾತ ಕವಿ ಮಾಗ್ನುಸ್ ಸಿಗುರ್ದ್ಸನ್-ರವರ
(Magnus Sigurðsson) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ಇಲ್ಲಿ ಸೋಲೂ ಇದೆ, ಗೆಲುವೂ ಇದೆ…: ಕಾರ್ತಿಕ್ ಕೃಷ್ಣ ಸರಣಿ
ಅಂಕಗಳು ಸೋರಿಹೋಗುತ್ತಿದ್ದರೂ ಎದೆಗುಂದದೆ ಆಡುತ್ತಿದ್ದ ಮೆರಿನ್ ಕೆಲವೇ ಘಳಿಗೆಯಲ್ಲಿ ನೋವನ್ನು ತಾಳಲಾರದೆ ಮತ್ತೆ ಕುಸಿದಳು. ಈ ಬಾರಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಅವಳ ನೋವಿಗೆ ಇಡೀ ಕ್ರೀಡಾಂಗಣ ಮರುಗುತ್ತಿತ್ತು. ಕುಸಿದಲ್ಲೇ ಅಳುತ್ತಿದ್ದ ಮೆರಿನ್ಳನ್ನು ತಬ್ಬಿ ಸಮಾಧಾನ ಮಾಡುತ್ತಿದ್ದ ಅವಳ ಕೋಚ್ಗೂ ಕೂಡ ತನ್ನ ಕಣ್ಣೀರನ್ನು ತಡೆಹಿಡಿಯಲಾಗಿರಲಿಲ್ಲ. ಎದುರಾಳಿ ಹೇ ಗೆ ತಾನು ಫೈನಲ್ ತಲುಪಿದ್ದಕ್ಕೆ ಖುಷಿಪಡುವುದೋ, ಅಥವಾ ಮೆರಿನ್ಳ ಸ್ಥಿತಿಯನ್ನು ನೋಡಿ ಮರುಗುವುದೋ, ಒಂದೂ ತಿಳಿಯದೆ ಮೆರೀನಳ ಬಳಿ ಬಂದು ವಿಷಾದದ ನೋಟ ಬೀರುತ್ತಾ ನಿಂತಿದ್ದಳು.
ಕಾರ್ತಿಕ್ ಕೃಷ್ಣ ಬರೆಯುವ “ಒಲಂಪಿಕ್ಸ್ ಅಂಗಣ” ಸರಣಿ
ಮೈನಾ- ಇದು ದೇಹವಲ್ಲ, ಭಾವಗಳ ಸಂಕಲನ: ರಾಮ್ ಪ್ರಕಾಶ್ ರೈ ಕೆ. ಸರಣಿ
ಮೈನಾ ಸತ್ಯನಿಗೆ ಚಪ್ಪಲಿಯನ್ನು ಉಡುಗೊರೆಯಾಗಿ ನೀಡುತ್ತಾಳೆ. ಅದನ್ನು ಕಂಡು ಬೇಸರದಿಂದ ಇದೆಂಥಾ ಉಡುಗೊರೆ ಎಂದು ಸತ್ಯ ಎಸೆಯುತ್ತಾನೆ. ಅನಂತರ ಕಾಲಿಲ್ಲದೇ ನೆಲಕ್ಕೆ ಕೈಯ್ಯಿಟ್ಟು ನಡೆಯುವಾಗ ನೋವನುಭವಿಸಬಾರದು ಎಂದು ಇದನ್ನು ನೀಡಿದ್ದಾಳೆ ಎಂದು ತಿಳಿದು ಖೇದಗೊಳ್ಳುತ್ತಾನೆ ಆತ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕಥೆಯು ಸೆರೆ ಹಿಡಿದ ಸೂಕ್ಷ್ಮತೆ. ಈ ದೃಶ್ಯವೇನೂ ಕಥೆಯ ಮುಖ್ಯ ಭಾಗವಲ್ಲದಿದ್ದರೂ, ಅದೆಷ್ಟು ಅಧ್ಯಯನದ ದೃಷ್ಟಿಕೋನ ಈ ದೃಶ್ಯದಲ್ಲಿ ಅಡಗಿದೆ ಎಂಬುದು ಅಚ್ಚರಿಯ ಸಂಗತಿ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ
ಅಮೆರಿಕದ ಅಂಗಡಿಯಲ್ಲಿ ಗಣೇಶ ದರ್ಶನ!: ಗುರುಪ್ರಸಾದ ಕುರ್ತಕೋಟಿ ಸರಣಿ
ಆ ಅಂಗಡಿಯ ಹೆಸರು ಡಾಲರ್ ಟ್ರೀ ಅಂತ. ಅಲ್ಲಿ ಯಾವುದೇ ಸಾಮಾನು ಕೊಂಡರೂ ಅದಕ್ಕೆ ಒಂದು ಡಾಲರ್ ಮಾತ್ರ ಬೆಲೆ. ಪೆನ್ನು, ನೋಟ್ ಬುಕ್, ಆಟಿಗೆ ಸಾಮಾನು ಹೀಗೆ ಎಲ್ಲವೂ ಒಂದೇ ಡಾಲರ್. ಯಾರಿಗುಂಟು ಯಾರಿಗಿಲ್ಲ ಅಂತ ಜನರೂ ಕೂಡ ಸಿಕ್ಕಿದ್ದನ್ನೆಲ್ಲ ಬಾಚಿಕೊಂಡು ಹೋಗುತ್ತಿದ್ದರು. ಎಷ್ಟೋ ಸಾಮಾನುಗಳು ಒಂದೇ ಡಾಲರಿಗೆ ಇಷ್ಟೆಲ್ಲಾ!? ಅನ್ನಿಸುವಷ್ಟು ಇದ್ದವಾದರೂ, ಅದರ ಜೊತೆಗೆ ತೆಗೆದುಕೊಳ್ಳುವ ಎಷ್ಟೋ ಇನ್ನಿತರ ವಸ್ತುಗಳು ಡಾಲರಗಿಂತ ಕಡಿಮೆ ಬೆಲೆಯವೇ ಆಗಿದ್ದವು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ
ಸುತ್ತೂರ್ಗೊಂದೇ ಗೌರ್ಮೆಂಟು ಇಸ್ಕೂಲ್: ಸುಮಾ ಸತೀಶ್ ಸರಣಿ
ಅಲ್ಲಾ ನಮ್ ಮೇಷ್ಟ್ರು ಹೇಳಿರೋ ಸಿನ್ಮಾ ಇದೇನಾ ಅಂತ ಕಣ್ಣು ತಿಕ್ಕೊಂಡು ಇನ್ನೊಂದು ದಪ ನೋಡಿದ್ರೂ ಆ ಪಟಗ್ಳು ವಸೀನೂ ಬದಲಾಗ್ಲೇ ಇಲ್ಲ. ‘ಅಯ್ ಇದೇನಮ್ಮಿ ನಮ್ಮೇಷ್ಟ್ರು ಕುಲಗೆಟ್ಟೋಗವ್ರೆ. ಅಲ್ಲಾ ವಾಗಿ ವಾಗಿ ಇಂತ ಸಿನಿಮ್ವೇ ನಮ್ಮಂತ ಸಣ್ಣೈಕ್ಳುಗೆ ನೋಡಾಕ್ ಯೇಳಾದು. ತಗ್ ತಗಿ ಯಾರಾದ್ರೂ ಮರ್ವಾದಸ್ಥರು ನೋಡೋ ಸಿನಿಮ್ವೇ ಇದು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಮಕ್ಕಳು ಸಿನಿಮಾ ನೋಡಿದ ಪ್ರಸಂಗ ನಿಮ್ಮ ಓದಿಗೆ









