ದೂರ ದೂರ ಹೋದರೆ…
ನಾಯಕಿ ನೇಯ್ಗೆ ಮಾಡಿದ ಕೆಂಪು ವಸ್ತ್ರವನ್ನು ಶಾಲಾ ಕಟ್ಟಡದಲ್ಲಿ ಕಟ್ಟಲಾಗುತ್ತದೆ. ಈ ಎಲ್ಲ ಘಟನೆಗಳು ಜರುಗಿದರೂ ಒಮ್ಮೆಯೂ ನಾಯಕ-ನಾಯಕಿಯರ ಮುಖಾಮುಖಿಯಾಗಿರುವುದಿಲ್ಲ. ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವುದರಿಂದ ಉಂಟಾಗುವ ಕಲರವವನ್ನು ಮನೆಯಲ್ಲಿರುವ ನಾಯಕಿ ತನ್ನಜ್ಜಿಯ ಜೊತೆಗೆ ಕೇಳಿಸಿಕೊಳ್ಳುತ್ತ ತನ್ನಷ್ಟಕ್ಕೆ ಸಂಭ್ರಮಿಸುತ್ತಾಳೆ. ಶಿಕ್ಷಕ ನಾಯಕನಿಗೆ ಪ್ರತಿದಿನ ಮಕ್ಕಳ ಜೊತೆ ಊರಾಚೆ ಓಡಾಡುವುದು ವಾಡಿಕೆ. ಅವನು ಹೀಗೆ ಮಾಡುವುದನ್ನು ನಿರೀಕ್ಷೆಯಿಂದ ಕಾಯುವ ಆತಂಕ, ಲಜ್ಜೆ ಸಂತೋಷ ಇವುಗಳನ್ನು ಒಳಗೊಂಡ ನಾಯಕಿಗೆ ನಾಯಕನ ಪ್ರಥಮ ಭೇಟಿಯಾಗುತ್ತದೆ.
ಎ.ಎನ್. ಪ್ರಸನ್ನ ಬರೆಯುವ ಸಿನಿಮಾ ಸರಣಿ
ಯುದ್ಧದಲ್ಲಿ ಗೆಲ್ಲುವುದು ಸಾವು ಮಾತ್ರ…
ಯುಸಿ಼ಫ್ ತನ್ನ ಹದಿನೈದು ವರ್ಷದ ಮಗ ಆದಮ್‌ನ ಹಿಂದೆ ನಿಂತ. ಅಂಬೆಗಾಲು ಹಾಕುತ್ತ ಜನರ ಕಾಲೊಳಗಿಂದ ಬಾಗಿಲ ಬಳಿ ಹೋಗಲು ಮಗನಿಗೆ ತಿಳಿಸಿದ. ಆದಮ್ ಪ್ರಯತ್ನಪಟ್ಟು ಬಾಗಿಲ ಬಳಿ ಬಂದು ಹೊರಗೆ ನುಸುಳಿ ಓಡತೊಡಗಿದ. ಆದರೆ ನಾಜಿಗಳ ಗುಂಡಿಗೆ ಗುರಿಯಾದ. ಮಗನನ್ನು ಹಿಂಬಾಲಿಸಿದ ಯುಸಿ಼ಫ್ ಮೇಲೂ ಗುಂಡು ಹಾರಿಸಲಾಯಿತು. ನಾಜಿಯೊಂದು ಓಡಿ ಬಂದು ಬಿದ್ದ ಯುಸಿ಼ಫ್‌ನನ್ನು ಬೂಟುಗಾಲಿನಿಂದ ಒದ್ದು, ಬಂದೂಕಿನಿಂದ ತಿವಿಯಲಾಯಿತು. ಖತಿನ್ ಅನುಭವಿಸಿದ ಕೊನೆ ಗಳಿಗೆಯನ್ನು ಮೂರ್ಛಾವಸ್ಥೆಯಲ್ಲಿದ್ದ ಯುಸಿ಼ಫ್ ನೋಡಲಾಗಲಿಲ್ಲ. ನಾಜಿಗಳು ಅಲ್ಲಿಂದ ಹೋದ ನಂತರ ನೆರೆ ಗ್ರಾಮದ ಜನರು ಯುಸಿ಼ಫ್‌ನನ್ನು ಬದುಕಿಸಿದರು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ಸರಣಿ
ಮದ್ರಾಸಿನಂತಹ ಲಂಡನ್ನಿನಲ್ಲಿದ್ದ ತಪಸ್ವಿ
ಲಂಡನ್ ಬದುಕಿನ ದೀರ್ಘ ಅನುಭವವನ್ನು ಹೀಗೆ ಬರೆದುಕೊಂಡಿದ್ದ ವಿ.ಕೆ. ಕೃಷ್ಣ ಮೆನನ್, ಅದಕ್ಕಿಂತ 43 ವರ್ಷಗಳ ಹಿಂದೆ 1920ರಲ್ಲಿ, ವಕೀಲಿಕೆಯ ವಿದ್ಯಾರ್ಥಿಯಾಗಿ ಮದ್ರಾಸಿನಲ್ಲಿದ್ದಾಗ ಅನ್ನಿ ಬೆಸೆಂಟರ ಹೋಂ ರೂಲ್ ಚಳವಳಿಯ ಪ್ರಭಾವಕ್ಕೆ ಒಳಗಾಗಿದ್ದರು. ಬೆಸೆಂಟರೂ ರಾಷ್ಟ್ರೀಯತೆಯ ಖಾತೆಗೆ ಇನ್ನೊಬ್ಬ ವ್ಯಕ್ತಿಯನ್ನು ಜಮಾ ಮಾಡುವ ಉದ್ದೇಶ ಇಟ್ಟು ಹುಡುಕಾಟದಲ್ಲಿ ಇದ್ದವರು. ಮೆನನ್‌ರನ್ನು “ಹೋಮ್ ರೂಲ್” ಕುಟುಂಬದ ಸದಸ್ಯನನ್ನಾಗಿ ಸ್ವೀಕರಿಸಿದರು ಮತ್ತು ಇಂಗ್ಲೆಂಡ್‌ನಲ್ಲಿ ಮೆನನ್‌ರ ಥಿಯೋಸ್ಪಿಯನ್ ಅರಿವನ್ನು ಹೆಚ್ಚಿಸಬಹುದಾದ ಓದಿನ ವಿದ್ಯಾರ್ಥಿವೇತನಕ್ಕಾಗಿ ಓಡಾಡಿದರು.
ಯೋಗೀಂದ್ರ ಮರವಂತೆ ಬರಹ
ಓದುಗರಿಗೊಂದು ಪತ್ರ…
ಈ ಆತ್ಮಕಥನ ಕಾದಂಬರಿಯಲ್ಲಿ ಬರುವ ಎಲ್ಲ ಪಾತ್ರಗಳ ನೆನೆದರೆ ತುಂಬ ಬೇಸರವಾಗುತ್ತದೆ. ಅನೇಕರು ಸತ್ತು ಹೋಗಿದ್ದಾರೆ… ಅವರು ಕೇವಲ ಪಾತ್ರವಾಗಿರಲಿಲ್ಲ… ನನ್ನ ವ್ಯಕ್ತಿತ್ವದ ಬೇರುಗಳಾಗಿದ್ದರು. ಆದರೆ ಆ ಕ್ಷಣಕ್ಕೆ ಪಾತ್ರಗಳಾಗಿಯೇ ಬರೆಹಕ್ಕೆ ಕರೆದುಕೊಂಡೆ. ಇವನು ಕೆಟ್ಟವನು… ಅವರು ಬಹಳ ಒಳ್ಳೆಯವರು ಎಂಬ ಭೇದ ಮಾಡಲಿಲ್ಲ. ಬಾಲ್ಯದಲ್ಲಿ ಇಡೀ ಊರಾದ ಊರೇ ನೆರೆದು ರಾಮಾಯಣ ಮಹಾಭಾರತಗಳ ನಾಟಕ ನೋಡುತ್ತಿದ್ದರು. ನಮಗೆ ರಾಮನೂ ರಾವಣನೂ ಇಬ್ಬರೂ ನಮ್ಮ ಸ್ವಂತ ಸಂಬಂಧಿಕರೇ ಆಗಿರುತ್ತಿದ್ದರು.
‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯಲ್ಲಿ ತಮ್ಮ ಆತ್ಮಕತೆಯನ್ನು ಬರೆದ ಮೊಗಳ್ಳಿ ಗಣೇಶ್ ಕೆಂಡಸಂಪಿಗೆಯ ಓದುಗರಿಗೆ ಪತ್ರವೊಂದನ್ನು ಬರೆದಿದ್ದಾರೆ
ಕರುಳಬಳ್ಳಿಯೋ… ಕೊರಳ ಉರುಳೋ…
ಅಲ್ಲಿ ಜನರು ಒಬ್ಬರಿಗೊಬ್ಬರು ಅಂಟಿಕೊಂಡು ಟೊಮೇಟೊ ಕೆಂಪು ರಸವನ್ನು ಒಬ್ಬರಿಗೊಬ್ಬರು ಮೆತ್ತುತ್ತಿರುತ್ತಾರೆ. ಮುಂದುವರಿದ ಹಾಗೆ ಚಿತ್ರ ಬದಲಾಗಿ ಅವರ ತಲೆಯ ಮೇಲೆ ಅಂಗಾತ ಮಲಗಿದ ಟಿಲ್ಡಾಳನ್ನು ದಾಟಿಸುತ್ತಿರುತ್ತಾರೆ. ಅವಳ ಮೈ ಮೇಲೆ ಟೊಮ್ಯಾಟೋ ರಸ ಹರಿಯುತ್ತಿರುತ್ತದೆ. ಕೆಂಪು ಬಣ್ಣ ಸೂಸುವ ಅಹಿತಕರವಾದ ಭಾವನೆಗಳಿಗೆ ಮತ್ತು ಚಿತ್ರದ ಅಂತರಾಳಕ್ಕೂ ಸಂಬಂಧವಿರುವುದು ವಿಶೇಷ. ಅಲ್ಲದೆ ಟೊಮ್ಯಾಟೊ ರಸದಲ್ಲಿ ಮುಳುಗಿರುವ ಟಿಲ್ಡಾಳ ಮುಖದಲ್ಲಿ ನಗುವಿರುವುದು ಆಶ್ಚರ್ಯವೇ. ಅಲ್ಲದೆ ಇದು ಸಾಕಷ್ಟು ಗೊಂದಲಗಳನ್ನೂ ಹುಟ್ಟಿಸುತ್ತದೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್’ನಲ್ಲಿ ಇಂಗ್ಲೆಂಡ್‌ನ ʻವಿ ನೀಡ್ ಟು ಟಾಕ್ ಅಬೌಟ್ ಕೆವಿನ್ʼ ಸಿನಿಮಾದ ವಿಶ್ಲೇಷಣೆ
ಸಮಾಜವಾದದ ಪ್ರೇರಣೆಗೊಂದು ಉದಾಹರಣೆ ಸೋವಿಯತ್ ರಷ್ಯಾ
ಸೋವಿಯತ್ ದೇಶಕ್ಕೆ ನಾನು ಭೇಟಿ ನೀಡಿದ ಸಂದರ್ಭದಲ್ಲಿ ಯುವಕರೆಲ್ಲ ಎರಡನೇ ಮಹಾಯುದ್ಧದ ನಂತರ ಜನಿಸಿದವರೇ ಆಗಿದ್ದರು. ಅವರಿಗೆ ೧೯೧೭ರ ಕ್ರಾಂತಿಯಾಗಲಿ, ೧೯೪೫ರಲ್ಲಿ ಕೊನೆಗೊಂಡ ಎರಡನೇ ಮಹಾಯುದ್ಧದ ಅನಾಹುತಗಳಾಗಲೀ ಅನುಭವಕ್ಕೆ ಬರಲು ಸಾಧ್ಯವೇ ಇಲ್ಲ. ಅವನ್ನೆಲ್ಲ ಅವರು ತಿಳಿದುಕೊಳ್ಳುವುದು ಹಿರಿಯರ ಅನುಭವದಿಂದ, ಇತಿಹಾಸದ ಪುಟಗಳಿಂದ. ಬಹುಪಾಲು ಯುವಕರು ಇದನ್ನೆಲ್ಲ ಅರಿತರೂ ಐರೋಪ್ಯ ದೇಶಗಳ ಜನರ ಮತ್ತು ಅವರು ಬಳಸುವ ವಸ್ತುಗಳ ಸಂಪರ್ಕದಿಂದ ಅವರ ಮನಸ್ಸು ಕ್ರಮೇಣ ಕೊಳ್ಳುಬಾಕ ಸಂಸ್ಕೃತಿಯ ಕಡೆಗೆ ವಾಲತೊಡಗಿತು. ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ ೫೦ನೇ ಕಂತು ಇಲ್ಲಿದೆ.
ರಾಜರ ಸ್ವಭಾವ, ರಾಜ್ಯವಿಸ್ತಾರದ ಪ್ರೇರಣೆ
ಮಾಳವದ ಯಶೋಧರ್ಮನು ಭಾರತದಲ್ಲಿ ಹೂಣರನ್ನು ಅಣಗಿಸಲು ಪ್ರಮುಖ ಪಾತ್ರ ವಹಿಸಿದವನು. ದಿಗ್ವಿಜಯವನ್ನು ಮಾಡಿ ಬ್ರಹ್ಮಪುತ್ರಾ ನದಿಯಿಂದ ಮಹೇಂದ್ರ ಪರ್ವತದವರೆಗೂ, ಹಿಮಾಲಯದಿಂದ ಪಶ್ಚಿಮ ಸಮುದ್ರದ ತನಕವೂ ವಿಸ್ತರಿಸಿದ್ದ ರಾಜ್ಯವನ್ನು ಮಂಡಸೋರದ ರಾಜಧಾನಿಯಿಂದ ಆಳಿದನು. ಯಶೋಧರ್ಮನು ಉತ್ತಮ ಹಿಂದೂ ಅರಸನಾಗಿದ್ದು ಮನು, ಭರತ ಮೊದಲಾದವರಿಗೆ ಹೋಲಿಸಲ್ಪಟ್ಟಿದ್ದನು. ಈತನ ಮಂತ್ರಿಯಾದ ಧರ್ಮದೋಷನು ವರ್ಣಸಂಕರವಾಗದಂತೆ ಯತ್ನಿಸಿದನು. ಯಶೋಧರ್ಮನ ವಿಷಯಗಳು ಮಂಡಸೋರದ ಶಿಲಾಸ್ತಂಭದಿಂದ ತಿಳಿಯುತ್ತವೆ.
ಕೆ.ವಿ. ತಿರುಮಲೇಶ್ ಬರೆಯುವ ‘ನನ್ನ ಹಿಸ್ಟರಿ ಪುಸ್ತಕ’ ಸರಣಿಯ ಬರಹ ಇಲ್ಲಿದೆ.
ಪದಗಳಿಗೆ ಸಿಗದ ಫಕೀರ
ಭಾರತದಿಂದ ಹೊರಡುವ ಮೊದಲು ಮಾಂಸಾಹಾರ ಮಾಡುವುದಿಲ್ಲ, ವೈನ್ ಕುಡಿಯುವುದಿಲ್ಲ ಎಂದು ತಾಯಿಗೆ ಮಾತು ಕೊಟ್ಟು ಹೊರಟವರು ಗಾಂಧೀಜಿ . 20 ಬ್ಯಾರನ್ ಕೋರ್ಟ್ ರಸ್ತೆಯಲ್ಲಿ ಇನ್ನರ್ ಟೆಂಪಲ್‌ಗೆ ಭರ್ತಿ ಆಗುವಾಗ ಉಳಿದಿದ್ದ ಮನೆಯ ಮಾಲಕಿ ವಾರಕ್ಕೆ ಮೂವತ್ತು ಶಿಲ್ಲಿಂಗ್ ಬಾಡಿಗೆ ಪಡೆಯುತ್ತಿದ್ದಳು. ಆದರೆ ಸಸ್ಯಾಹಾರ ಒದಗಿಸುವುದು ಆಕೆಗೆ ಕಷ್ಟ ಆಗುತ್ತಿತ್ತು. ಊಟ ಕೆಟ್ಟದಾಗಿರುವುದು, ಹಸಿದುಕೊಂಡೇ ದಿನಕಳೆಯುತ್ತಿದ್ದುದನ್ನು ಗಾಂಧೀಜಿ ಬೇರೆ ಬೇರೆ ಸಂದರ್ಭದಲ್ಲಿ ನೆನಪಿಸಿದ್ದಿದೆ. ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಗಾಂಧೀಜಿಯವರ ಲಂಡನ್ ವಾಸದ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ
ಜ್ಞಾನವೆಂಬುದು ಬಣ್ಣದ ಸೊತ್ತಲ್ಲ ಬಿಡಿ
ಮಾಸ್ಕೋದಲ್ಲಿ ಅನೇಕ ಆಫ್ರಿಕಾದ ಯುವಕರು ರಷ್ಯನ್ ಯುವತಿಯರನ್ನು ಮದುವೆಯಾಗಿದ್ದರು. ಅವರ ಮಕ್ಕಳು ಮಿಶ್ರವರ್ಣದವರಾಗಿದ್ದರು. ದಕ್ಷಿಣ ಆಫ್ರಿಕಾದ ಮಿಶ್ರವರ್ಣೀಯರ ಬಿಷಪ್ ಅಲೆನ್ ಬೊಸೆಕ್ “ವು ಆರ್ ದ ಫ್ಯೂಚರ್ ಆಫ್ ಸೌತ್ ಆಫ್ರಿಕಾ” ಎಂದು ಹೇಳಿದ್ದರು. ಮಿಶ್ರವರ್ಣೀಯರು ದಕ್ಷಿಣ ಆಫ್ರಿಕಾ ಅಷ್ಟೇ ಅಲ್ಲ ಇಡೀ ಜಗತ್ತಿನ ಭವಿಷ್ಯ ಎಂಬುದು ಸಾಬೀತಾಗುತ್ತಿದೆ. ಭಾರತದ ಎಲ್ಲ ಜಾತಿ ಮತ್ತು ಧರ್ಮಗಳಲ್ಲಿಆಫ್ರಿಕಾದ ಮೂಲ ನಿವಾಸಿಗಳು ಇದ್ದಾರೆ ಬೆಳ್ಳಗಿದ್ದವರೂ ಇದ್ದಾರೆ. ಆದರೂ ಜಾತಿ ಭ್ರಮೆ ಉಳಿದುಕೊಂಡಿದೆ. ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ ೪೯ನೇ ಭಾಗ ಇಲ್ಲಿದೆ.









