ಈ ಗದ್ದುಗೆ ಈ ಹಿಂಸೆ ಈ ಅನಾಥ ಸಂಬಂಧಗಳು
ಅವನು ಒಬ್ಬ ಅಪರಾಧಿ ಎಂಬಂತೆ ನನ್ನೆದ್ರು ಕೂತು ಒಪ್ಪಿಸುತ್ತಿದ್ದ. ವಿಚಾರಣಾಧಿಕಾರಿಯಂತೆ ನನ್ನ ಪ್ರಶ್ನೆಗಳಿದ್ದವು. ಒಂದೇ ತಾಯ ಬಳ್ಳಿಯವರು. ಅವನೇ ಬೇರೆ ನಾನೇ ಬೇರೆ ಎಂಬಂತಿತ್ತು. ಅಂದು ಅವನು ದೊಡ್ಡ ಸಾಹೇಬನಾಗಿ ಬರುತ್ತಾನೆ ಎಂದು ಅವನು ಅತಾರಿ ಇರಬೇಕೂ; ಇದೇ ನನ್ನ ತಮ್ಮನ ಬಗ್ಗೆ ತಾನೆ ಅಪ್ಪನ ಮುಂದೆ ರೀಲು ಬಿಡುತ್ತಿದ್ದುದು. ಒಂದು ಕನಸಿನ ಲೋಕವನ್ನೇ ಹೆಣೆದಿದ್ದರಲ್ಲ ಆ ರಾತ್ರಿ ಅಮಲಾಗಿ. ಈಗ ಈ ತಮ್ಮನ ಬಗ್ಗೆ ಯಾರೂ ಕನಸು ಕಟ್ಟುವುದಿಲ್ಲ. ಯಾರಿಗೂ ಬೇಡವಾದವನು.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ 26ನೇ ಕಂತು
ಬ್ರೋಕನ್ ವಿಂಗ್ಸ್: ಮಧ್ಯಮ ವರ್ಗದ ಪಡಿಪಾಟಲು
ವ್ಯಕ್ತಿಯೊಬ್ಬನಲ್ಲಿ ಒಡಮೂಡುವ ಭಾವನೆಗಳನ್ನು ಇನ್ನೊಂದು ಜೀವಿಗೆ ಸಂವಹಿಸುವ ಬಗೆಯಲ್ಲಿ ಆಯಾ ಪ್ರದೇಶದ ಸಾಂಸ್ಕೃತಿಕ ಅಂಶಗಳು ಪ್ರಧಾನ ಭೂಮಿಕೆಯಲ್ಲಿರುತ್ತವೆ ಎನ್ನುವುದೂ ಅಷ್ಟೇ ನಿಜವಾದ ಸಂಗತಿ. ವಿಸ್ತಾರವಾದ ಈ ಪ್ರಪಂಚದಲ್ಲಿ ಸಾಸ್ಕೃತಿಕ ಅಂಶಗಳು ಅನೇಕ ರೂಪಗಳಲ್ಲಿರುವುದು ಸಾಧ್ಯವಿದೆ. ಹೀಗಿರುವಾಗ ಹತ್ತಾರು ಸಾವಿರ ಮೈಲಿ ದೂರವಿರುವ ಪುಟ್ಟ ದೇಶದ ಚಲನಚಿತ್ರವೊಂದನ್ನು ನೋಡಿದಾಗ, ಇಗೋ ಇಲ್ಲೇ ನಮ್ಮ ಅಕ್ಕಪಕ್ಕದಲ್ಲಿರುವ ಮಧ್ಯಮ ವರ್ಗದ ಸಂಸಾರದಲ್ಲಿ ಹೀಗೆ ನಡೆಯಬಹುದು ಎನ್ನಿಸುವ ಹಾಗಿದ್ದರೆ ನಿಜಕ್ಕೂ ಸೋಜಿಗವಲ್ಲದೆ ಮತ್ತೇನು?
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್’ ಸರಣಿ
ಟ್ಯಾಕ್ಸಿಡರ್ಮಿ ಎಂಬ ಚರ್ಮ ಪ್ರಸಾಧನ ಕಲೆ
ಬಹುಪಾಲು ಬಡ ತಾಯಂದಿರು ತಮ್ಮ ಮಕ್ಕಳಿಗಾಗಿ ಪಡುತ್ತಿದ್ದ ಕಷ್ಟ ಹೇಳಲಸಾಧ್ಯವಾದುದು. ತಮ್ಮ ಮಗ ಬಹಳಷ್ಟು ಓದಿ ದೊಡ್ಡ ಹುದ್ದೆ ಪಡೆಯಬೇಕು ಎಂಬ ಕನಸನ್ನು ಕೂಡ ಕಾಣಲು ಸಾಧ್ಯವಾಗದಂಥ ದುಃಸ್ಥಿತಿಯಲ್ಲಿ ಅವರಿದ್ದರು. ಮಗ ಬೀಡಿ, ಸಿಗರೇಟ್, ಇಸ್ಪೆಟ್, ಕುಡಿತ ಮುಂತಾದ ದುಶ್ಚಟಗಳಿಗೆ ಬಲಿಯಾಗಬಾರದು ಎಂಬ ಚಿಂತೆ ಅವರನ್ನು ಸದಾ ಕಾಡುತ್ತಿತ್ತು. ಮಗ ಆರೋಗ್ಯ ಕಾಪಾಡಿಕೊಂಡಿರಬೇಕು, ಯಾವುದೋ ಕೂಲಿನಾಲಿ ಮಾಡಿಕೊಂಡು ಮರ್ಯಾದೆವಂತನಾಗಿ ಬದುಕಬೇಕು ಎಂಬುದು ಅವರ ಆಸೆಯಾಗಿತ್ತು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ
`ಕ್ರಾಂತಿ ಕನ್ನೆಯ ಮೋಹದ ಮಳೆಯಲ್ಲಿ’
ರೂಮಿನ ವರಾಂಡದಲ್ಲಿ ಕೆಲವು ವಿದ್ಯಾರ್ಥಿ ಮಿತ್ರರು ನನ್ನ ಪರವಾಗಿ ಬಂದು ಬಾಗಿಲು ಬಡಿದು ಕೂಗಿದ್ದರು. ಒಳಗಿದ್ದವರು ಹೆದರಿದ್ದರು. ಗುಂಡ್ಲುಪೇಟೆಯ ಶಿವಬುದ್ಧಿ ಎಂಬ ಮಿತ್ರ ಇದ್ದ. ದ.ಸಂ.ಸದ ಅರೆಕಾಲಿಕ ಕಾರ್ಯಕರ್ತನಾಗಿ ರಾಜ್ಯಶಾಸ್ತ್ರದಲ್ಲಿ ಎಂ.ಎ.ಮುಗಿಸುತ್ತಿದ್ದ. ಅವಾಜ್ ಹಾಕಿದ್ದ. ‘ಬಾಗ್ಲು ತಗೀಲಿಲ್ಲಾ ಅಂದ್ರೆ ಯೀಚ್ವಾರಿಂದ ಬೀಗಾ ಹಾಕಂದು ಪೋಲಿಸ್ಗೆ ಕಂಪ್ಲೇಂಟ್ ಕೊಡ್ತೀನಿ’ ಎಂದು ಅಬ್ಬರಿಸಿದ್ದ. ಅವರು ನನ್ನನ್ನು ಹೊರಗೆ ಬಿಡಲೇ ಬೇಕಿತ್ತು. ಅವನೊಮ್ಮೆ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ಕಾರಿಗೆ ಅಡ್ಡ ನಿಂತು ಧಮಕಿ ಹಾಕಿ ನಮ್ಮ ಹಳ್ಳಿಗೆ ಇಂತಿಂತಹ ಕೆಲಸಗಳನ್ನು ಮಾಡಿಕೊಡಬೇಕೆಂದು ಆಗ್ರಹಿಸಿ ಯಶಸ್ವಿ ಆಗಿದ್ದ.
ಮೊಗಳ್ಳಿ ಗಣೇಶ್ ಬರೆಯುವ ಸರಣಿ.
ಬಡವರ ಶಕ್ತಿ ಅದಮ್ಯ
ಬಡವರು ಎಷ್ಟೇ ಮೂಢನಂಬಿಕೆಯವರಿದ್ದರೂ ತಮ್ಮ ಶಕ್ತಿಯನ್ನು ಅವಲಂಬಿಸಿಯೆ ಬದುಕುವುದು ಅವರ ಜಾಯಮಾನವಾಗಿದೆ. ಬದುಕೆಂಬುದು ಅವರಿಗೆ ಹೋರಾಟದ ಅಖಾಡಾ ಆಗಿದೆ. ಆಹಾರ, ಬಟ್ಟೆ, ಆಶ್ರಯ ಮತ್ತು ಮಕ್ಕಳ ಭವಿಷ್ಯಕ್ಕಾಗಿ ಅವರು ನಿರಂತರವಾಗಿ ಹೋರಾಡುತ್ತಲೇ ಇರುತ್ತಾರೆ. ಆದರೆ ಈ ಹೋರಾಟ ಮಾರ್ಕ್ಸ್ ಹೇಳುವ ವರ್ಗ ಹೋರಾಟವಾಗಿರುವುದಿಲ್ಲ. ಅವರ ಶೋಷಣೆ ಮಾಡುವವರು ಅವರಿಗೆ ಅನ್ನದಾತರು ಎಂದು ಕಾಣುತ್ತಿದ್ದರೇ ಹೊರತು ಶೋಷಕರಾಗಿ ಕಾಣುತ್ತಿರಲಿಲ್ಲ. ರಂಜಾನ್ ದರ್ಗಾ ಬರೆಯುವ ಆತ್ಮಕತೆ ನೆನಪಾದಾಗಲೆಲ್ಲ ಸರಣಿಯ 33ನೆಯ ಕಂತು ಇಲ್ಲಿದೆ.
ಅಲೆಗಳು ಕರೆತಂದಿದ್ದವು ದಂಡೆಗೆ
ಅದೇ ಅವನು ನಮ್ಮಪ್ಪ ನರಭಕ್ಷಕ ಬಾಂಡ್ಲಿಯಲ್ಲಿ ಬೋಂಡ ಹಾಕುತಿದ್ದ. ಅವನ ಹೆಂಡತಿ ಸಪ್ಲೆರ‍್ರಾಗಿದ್ದಳು. ಪುಟ್ಟ ಹುಡುಗಿ; ಅವಳ ಹೆಸರು ಮೀನಾಕ್ಷಿ, ಶಾಲೆಗೆ ಸೇರಿದ್ದಳೊ ಇಲ್ಲವೊ ಗೊತ್ತಿರಲಿಲ್ಲ. ಅವಳ ತಾಯ ತದ್ರೂಪ. ಅಲಲಲಾ… ಎಂತಹ ಪಾಳೆಯಗಾರ… ಇಲ್ಲಿ ಫುಟ್‌ಪಾತಲ್ಲಿ ಬಂದು ಬಿದ್ದಿದ್ದಾನಲ್ಲಾ. ಇವನೆನಾ ನಮ್ಮಪ್ಪ! ಕೊಂದು ಬಿಡಲು ಎಷ್ಟು ಸಲ ಯತ್ನಿಸಿ ವಿಫಲನಾಗಿದ್ದನಲ್ಲಾ! ಈಗ ಇಲ್ಲಿ ಈ ಪಾಡಿನಲ್ಲಿ. ಮೆರೆದಿದ್ದವನ ಗತಿಯೇ ಇದೂ ಎಂದು ಗಕ್ಕನೆ ನಿಂತೆ. ನನ್ನ ಅನಂತ ಅಸ್ಪೃಶ್ಯ ಆಕಾಶ ಸರಣಿಯಲ್ಲಿ ಮೊಗಳ್ಳಿ ಗಣೇಶ್ ಬರಹ.
ಇದು ಪ್ರೇಕ್ಷಕಾನುಸಂಧಾನ
ಒಂದು ಪ್ರಸಂಗದಲ್ಲಿ ಭೀಷ್ಮ, ಸತ್ಯವತಿಯನ್ನು ತುಂಬಾ ವರ್ಣನೆ ಮಾಡಿದ್ದನ್ನುಸರೋಜಕ್ಕ ನೋಡಿದರು. ತಂದೆ ಇಷ್ಟ ಪಟ್ಟ ಹೆಣ್ಣನ್ನು ತಾಯಿ ಅಂತನೇ ನೋಡಬೇಕಿತ್ತು. ಹಾಗೆಲ್ಲಾ ತುಂಬಾ ವರ್ಣನೆ ಮಾಡಿದ್ದು ಆಭಾಸವಾಯಿತು ಅಂದರು. ಕರ್ಣಪರ್ವದಲ್ಲಿ ಕರ್ಣ ಪಾಪ, ಪಾಂಡವರಾಗಿ ಹುಟ್ಟಿದರೂ ಏನು ಇಲ್ಲ. ತಾಯಿ ಇದಾರೆ, ತಮ್ಮಂದಿರಿದಾರೆ. ಆದರೂ ಯಾರೂ ಇಲ್ಲ. ಇಡೀ ಮಹಾಭಾರತದಲ್ಲಿ ಕರ್ಣ ಅಂದ್ರೆ ಬಹಳ ಪ್ರೀತಿ. ಕುಂತಿ ನೋಡಿದ್ರೆ ಸಿಟ್ಟು ಬರತ್ತೆ ಒಂದೊಂದ್ಸಲ. ಆದರೆ ಕೀಲಿ ಕೈ ಇರೋದು ಕೃಷ್ಣನ ಹತ್ರನೇ. ಕಪಟ ನಾಟಕ ಅಂತನೇ ಇದೆಯಲ್ಲ.
ಕೃತಿ. ಆರ್. ಪುರಪ್ಪೇಮನೆ ಅವರು ಯಕ್ಷಾರ್ಥ ಚಿಂತಾಮಣಿ ಸರಣಿಯ ಬರಹ
ಪತ್ರಿಕಾ ಸ್ವಾತಂತ್ರ್ಯದ ಸುತ್ತಮುತ್ತ ʻದ ಪೋಸ್ಟ್ʼ
ಅಮೆರಿಕ ರಕ್ಷಣಾ ವಿಭಾಗದ ಪೆಂಟಗನ್ ಪೇಪರುಗಳಿಗೆ ಸಂಬಂಧಿಸಿದಂತೆ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ಒದಗಿದ ಅವಸ್ಥೆಯನ್ನು ತಿಳಿದಿದ್ದರೂ ಬೆನ್ ಬ್ರಾಡ್ಲಿ ತಾವೇಕೆ ಆ ಮಾಹಿತಿಯನ್ನು ಪ್ರಸಾರ ಮಾಡಕೂಡದು ಎಂದು ಯೋಚಿಸುತ್ತಾನೆ. ಅದು ಹೊಳೆದ ಕೂಡಲೆ ಡೇನಿಯಲ್ ಎಲ್‌ಬರ್ಗ್ ನನ್ನು ಸಂಪರ್ಕಿಸಿ ಉದ್ದೇಶಿತ ಮಾಹಿತಿಯನ್ನು ಪಡೆಯಲು ಸಫಲನಾಗುತ್ತಾನೆ. ನ್ಯೂಯಾರ್ಕ್ ಟೈಮ್ಸ್‌ನಿಂದ ಯುದ್ಧದ ಸತ್ಯವಾದ ಮಾಹಿತಿ ಸಾರ್ವಜನಿಕರಿಗೆ ತಿಳಿಯಲಾಗದ ಪರಿಸ್ಥಿಗೆ ಎಲ್‌ಬರ್ಗ್ ನೊಂದುಕೊಂಡಿರುತ್ತಾನೆ.
ಎ.ಎನ್. ಪ್ರಸನ್ನ ಬರಹ ಇಲ್ಲಿದೆ.
ಅಂಬಾಭವಾನಿಯ ಆರಾಧನೆಯ ದಿನಗಳು
ಪ್ರತಿ ಶುಕ್ರವಾರ ಜನ ಕಿಕ್ಕಿರಿದು ತುಂಬತೊಡಗಿದರು. ನನಗೋ ಶುಕ್ರವಾರ ಬಂದರೆ ಬೇಸರ ಶುರುವಾಗತೊಡಗಿತು. ನನ್ನ ಮತ್ತು ಅಂಬಾಭವಾನಿಯ ಮಧ್ಯದ ಏಕಾಗ್ರತೆಗೆ ಈ ಶಾಂತಿಭಂಗ ಬಹಳ ಕಿರಿಕಿರಿ ಎನಿಸುತ್ತಿತ್ತು. ಎಲ್ಲರೂ ಪ್ರಶ್ನೆ ಕೇಳುತ್ತಿದ್ದಿಲ್ಲ. ಆ ಮುಗ್ಧ ಮಹಿಳೆಯರು ಕುತೂಹಲದಿಂದ ಬರುತ್ತಿದ್ದರೂ ನನ್ನ ಪೂಜೆ ಧ್ಯಾನ ಮುಗಿಯುವ ವರೆಗೂ ತುಟಿಪಿಟಕ್ಕೆನ್ನದೆ ಕುಳಿತುಕೊಳ್ಳುತ್ತಿದ್ದರು. ಆದರೆ ಅವರೆಲ್ಲ ಬಂದು ಕೂಡುವುದೇ ನನಗೆ ಕಿರಿಕಿರಿ ಎನಿಸುತ್ತಿತ್ತು.
ರಂಜಾನ್ ದರ್ಗಾ ಬರೆಯುವ ಸರಣಿ









