ನರಕದಲ್ಲಿ ಕ್ಷಣ ಬೆರಳದ್ದಿ ಬಂದಿದ್ದೆ
ನನ್ನ ಇತಿ ಮಿತಿಯಲ್ಲಿ ಅವುಗಳಲ್ಲಿ ಬೇಕಾದವನ್ನು ಆಯ್ದುಕೊಂಡೆ. ಬರೆವ ಬಣ್ಣಗಳು ಆಗಲೇ ಹೈಸ್ಕೂಲು, ಪಿಯು ಕಾಲೇಜಿನಲ್ಲೆ ಅಂಟಿಕೊಂಡಿದ್ದವು ಎಂದು ಹೇಳಿದ್ದೆ. ಲೈಬ್ರರಿಯ ತರಾವರಿ ಗ್ರಂಥಗಳ ಬೆಟ್ಟ ಕಂಡ ಕೂಡಲೆ ಬರೆಯುವುದನ್ನೆ ಮರೆತುಬಿಟ್ಟಿದ್ದೆ. ಹಾದಿ ಬೀದಿಯಲ್ಲಿ ಅಲೆವಾಗ ಎಷ್ಟೊಂದು ಚೆಲುವೆಯರ ಕಂಡೆ; ನಗರದ ಮೂಲೆ ಮೂಲೆಯ ನರಕವ ಕಂಡೆ…
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿ
ಬೆಂಕಿಯಲ್ಲಿ ಅರಳಿದ `ಹೂ’ “ಗೋದಾವರಿ ಗಂಟಿಚೋರ”
ಗಂಟಿಚೋರ ಸಮುದಾಯವನ್ನು ಬ್ರಿಟೀಶ್ ಆಡಳಿತದಲ್ಲಿ ಕ್ರಿಮಿನಲ್ ಟ್ರೈಬ್ಸ್ ಪಟ್ಟಿಗೆ ಸೇರಿಸಿ ಇವರನ್ನು ನಿಯಂತ್ರಿಸಲು `ಸೆಟ್ಲಮೆಂಟ್’ ಎಂಬ ದೊಡ್ಡ ಜೈಲಲ್ಲಿ ಬಂಧಿಸಿದ್ದರು. ಇವರನ್ನು ಹದ್ದಿನ ಕಣ್ಣಿನಲ್ಲಿ ಕಾವಲು ಕಾಯುತ್ತಾ ಚಿತ್ರ ಹಿಂಸೆಗೆ ಒಳಗುಮಾಡಿದ್ದರು. ಪೌಜುದಾರ, ಪೋಲಿಸರಿಂದ ನಿರಂತರ ಹಿಂಸೆಗೆ ಒಳಗಾದ ಈ ಪುಟ್ಟ ಗಂಟಿಚೋರ ಸಮುದಾಯ ಕಾಲಾನಂತರದಲ್ಲಿ ಯಾರೇ ಕಳ್ಳತನ ಮಾಡಿದರೂ ಇವರನ್ನೇ ಹಿಂಸಿಸುತ್ತಿದ್ದ ಪೋಲಿಸರ ದಬ್ಬಾಳಿಕೆಗೆ ನಲುಗಿತು. ಡಾ. ಅರುಣ್ ಜೋಳದಕೂಡ್ಲಿಗಿ ಬರೆಯುವ ಸರಣಿ
ನಿರ್ಭಾಗ್ಯರ ಲಂಡನ್ ನಗರ ಮತ್ತು ನಿರ್ಲಕ್ಷ್ಯಕ್ಕೊಳಗಾದ ಕವಿಮಹಾಶಯ
ಈ ಕಾಲ ವಿಲಿಯಮ್ ಬ್ಲೇಕ್ ನನ್ನು ಆಂಗ್ಲ ಕವಿ, ಚಿತ್ರಕಾರ, ಮುದ್ರಣಕಾರ ಎಂದು ಗೌರವದಿಂದ ನೆನೆಯುತ್ತದೆ. ಬದುಕಿದ್ದಾಗ ವಿಶೇಷವಾದ ಗುರುತು ಪ್ರಸಿದ್ಧಿ ಇಲ್ಲದವನನ್ನು ಈ ಕಾಲ, ಕಾವ್ಯ ಚರಿತ್ರೆಯಲ್ಲಿ ಕ್ರೀಯಾಶೀಲ, ರೋಮ್ಯಾಂಟಿಕ್ ಕಾಲದ ದೃಶ್ಯ ಕಲೆಯನ್ನು ಪ್ರತಿನಿಧಿಸುವವನು ಎಂದೆಲ್ಲ ಸ್ಮರಿಸುತ್ತದೆ. ‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಸರಣಿಯಲ್ಲಿ ಯೋಗೀಂದ್ರ ಮರವಂತೆ ಬರಹ
ಹಾಡುವ ದಾರಿಯಲಿ ಹಿಂದಿರುಗದೆ ಹೋದಾತ….
ವಾರ್ಷಿಕ ಪರೀಕ್ಷೆ ಮುಗಿದ ಕೂಡಲೆ ಮುಂದಿನ ಇಯತ್ತೆಯ ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನು ಅರ್ಧ ಬೆಲೆಗೆ ಖರೀದಿಸುವ ತವಕ ಪ್ರತಿಯೊಬ್ಬ ಬಡ ವಿದ್ಯಾರ್ಥಿಗೆ ಸಾಮಾನ್ಯವಾಗಿತ್ತು.. ನಮ್ಮ ಮುಂದಿನ ಇಯತ್ತೆಯ ವಿದ್ಯಾರ್ಥಿಗಳಲ್ಲಿ ಯಾರು ಚೆನ್ನಾಗಿ ಪುಸ್ತಕಗಳನ್ನು ಇಟ್ಟುಕೊಂಡಿರುತ್ತಾರೆ ಎಂಬುದನ್ನು ನಾವು ಗಮನಿಸುತ್ತಿದ್ದೆವು. ಪರೀಕ್ಷೆ ಮುಗಿದ ಕೂಡಲೆ ಅವರ ಮನೆಗೆ ಹೋಗಿ ಪುಸ್ತಕಗಳ ಖರೀದಿಗೂ ಸಮಯ ಮೀಸಲಿಡಬೇಕಿತ್ತು. ರಂಜಾನ್ ದರ್ಗಾ ಬರೆಯುವ “ನೆನಪಾದಾಗಲೆಲ್ಲ” ಸರಣಿಯ ಇಪ್ಪತ್ತೇಳನೆಯ ಕಂತು
ಮೂಡಿದ್ದವು ತರಾವರಿ ತಾರೆಗಳು
ಆ ರಾತ್ರಿ ನಾವು ದಲಿತ ಹುಡುಗರು ಪ್ರತಿಭಟನೆಯ ಭಾಗವಾಗಿ ಅಡುಗೆ ಮನೆಗೆ ಬೀಗ ಹಾಕಿದ್ದೆವು. ಹಾಗೇಯೇ ಅಂಬೇಡ್ಕರ್‌ಗೆ ಆದ ಅಪಮಾನದಿಂದ ನೊಂದು ಉಪವಾಸ ಆಚರಿಸುತ್ತೇವೆ ಎಂದು ಸ್ವಯಂ ದಂಡಿಸಿಕೊಂಡಿದ್ದೆವು. ಇಡೀ ಹಾಸ್ಟೆಲ್ ಬಿಕೊ ಎನ್ನುತ್ತಿತ್ತು. ನಾಲ್ವಡಿ ಅವರ ಕಾಲದ ತಳದ ಹಳೆಯ ಬಿಲ್ಡಿಂಗಿನಲ್ಲಿ ನಮಗೆ ರೂಮುಗಳು ಪ್ರತ್ಯೇಕವಾಗಿದ್ದವು. ಹೊಸ ಕಟ್ಟಡದಲ್ಲಿ ಅವರಿಗೇ ಮೊದಲು ಆದ್ಯತೆ ಇದ್ದದ್ದು. ಮೊಗಳ್ಳಿ ಗಣೇಶ್ ಬರೆಯುವ ಸರಣಿ.
ಕಪಾಟು ತುಂಬ ಪಾಠ ಪುಸ್ತಕಗಳೇ ಇದ್ದರೆ..
ಅವತ್ತು ಉಡುಗೊರೆಯಾಗಿ ಬಂದ ಪುಸ್ತಕಗಳನ್ನು ಬಿಡಿಸಿ ನೋಡಿದಾಗ ನಮಗೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ. ಬಂದ ಪುಸ್ತಕಗಳಲ್ಲಿ ಹೆಚ್ಚಿನವು ಶಾಲೆಯಲ್ಲಿ ಮುಂದಿನ ವರ್ಷದ ಪಾಠಪುಸ್ತಕಗಳು ಮತ್ತು ಬರೆಯಲು ಉಪಯೋಗವಾಗುವ ಖಾಲಿ ನೋಟ್ ಪುಸ್ತಕಗಳು. ಓದಲಿಕ್ಕೆ ಆಸಕ್ತಿ ಬರುವಂಥ ಕಥೆ ಪುಸ್ತಕಗಳು ಕೆಲವು ಮಾತ್ರ.
ಅರವಿಂದ ಕುಡ್ಲ ಬರೆಯುವ ‘ಗಣಿತ ಮೇಷ್ಟರ ಶಾಲಾ ಡೈರಿ’
`ಕ್ರಿಮಿನಲ್ ಟ್ರೈಬ್’ ಹಣೆಪಟ್ಟಿ ಅಳಿಸಿಕೊಳ್ಳುವ ಯತ್ನ
ಬುಡಕಟ್ಟುಗಳ ಅಧ್ಯಯನಗಳು ಕರ್ನಾಟಕದಲ್ಲಿ ವಿವಿಧ ಸ್ತರಗಳಲ್ಲಿ ನಡೆದಿವೆ. ಭಾರತ ಸರಕಾರ ಕರ್ನಾಟಕದಲ್ಲಿ ಗುರುತಿಸಿರುವ ಅರವತ್ಮೂರು ಬುಡಕಟ್ಟುಗಳಲ್ಲಿ ಕೆಲವನ್ನು ಪರಿಶಿಷ್ಟ ಜಾತಿಗೆ, ಕೆಲವನ್ನು ಪರಿಶಿಷ್ಟ ಪಂಗಡಕ್ಕೆ ಮತ್ತು ಉಳಿದವುಗಳನ್ನು ಅಲೆಮಾರಿ, ಅರೆ ಅಲೆಮಾರಿ ಬುಡಕಟ್ಟುಗಳೆಂದು ಪರಿಗಣಿಸಿ ಹಿಂದುಳಿದ ವರ್ಗಗಳಿಗೆ ಸೇರಿಸಿದ್ದಾರೆ.
ಡಾ. ಅರುಣ್ ಜೋಳದಕೂಡ್ಲಿಗಿ ಬರೆಯುವ ಗಂಟಿಚೋರರ ಕಥನ ಸರಣಿಯಲ್ಲಿ ಹೊಸ ಬರಹ
ದೈಹಿಕಾಕರ್ಷಣೆಯ ಭಾವ ಪದರಗಳತ್ತ ಚೆಲ್ಲಿದ ಬೆಳಕು
ವಯೋಮಾನವನ್ನು ಪರಿಗಣಿಸದೆ ಗಂಡು ಮತ್ತು ಧಾರ್ಮಿಕ ಮನೋನೆಲೆಯ ಹೆಣ್ಣಿನಲ್ಲಿ ಕಾಮಪ್ರಜ್ಞೆ ಜಾಗೃತಗೊಂಡ ನಂತರ ಅವು ಮುನ್ನಡೆಯುವ ಪರಿಯಲ್ಲಿ ಉಂಟಾಗುವ ಸೂಕ್ಷ್ಮತರ ಭಾವ ಪದರುಗಳನ್ನು ಪ್ರಸ್ತುತಪಡಿಸುವ ಪರಿಕಲ್ಪನೆಯನ್ನು ಚಿತ್ರೀಕರಿಸುವ ಪ್ರಯತ್ನ ಮಾಡಿದ್ದಾಳೆ ʻದ ಹೋಲಿ ಗರ್ಲ್ʼ ಚಿತ್ರದ ನಿರ್ದೇಶಕಿ ಲುಕ್ರೇಷಿಯಾ ಮಾರ್ಟೆಲ್.
ಈ ಚಿತ್ರದ ಕುರಿತು ʻಲೋಕ ಸಿನಿಮಾ ಟಾಕೀಸ್ʼನಲ್ಲಿ ಎ.ಎನ್.ಪ್ರಸನ್ನ ಬರೆದಿದ್ದಾರೆ.
ಒಳ್ಳೆಯತನವೇ ಆಸ್ತಿಯಾಗಿದ್ದ ಕಾಲವದು
ಜನರು ಸ್ವಾಭಿಮಾನಿಗಳಾಗಿದ್ದರೆ ಹೊರತು ದುರಭಿಮಾನಿಗಳಾಗಿದ್ದಿಲ್ಲ. ಬೇರೆಯವರ ಘನತೆಯನ್ನು ಹಣ, ಅಂತಸ್ತು ಮತ್ತು ಹುದ್ದೆಗಳಿಂದ ಅಳೆಯುತ್ತಿರಲಿಲ್ಲ. ಮಾನವರಿಗೆ ಒಳ್ಳೆಯತನವೇ ಆಸ್ತಿಯಾಗಿತ್ತು. ಈ ಆಸ್ತಿ ಕಳೆದುಕೊಂಡರೆ ಸತ್ತುಹೋದಂತೆಯೆ ಎಂಬ ಭಾವ ಅವರಿಗಿತ್ತು. ಎಲ್ಲ ಸಮಾಜದವರನ್ನು ಗೌರವಿಸುತ್ತ ಸಾಧ್ಯವಾದ ಕಡೆಗಳಲ್ಲೆಲ್ಲ ಅವರ ಆಚರಣೆಗಳಲ್ಲಿ ಭಾಗವಹಿಸುತ್ತ ಎಲ್ಲರೊಳಗೊಂದಾಗಿ ಬದುಕುತ್ತಿದ್ದರು. ರಂಜಾನ್ ದರ್ಗಾ ಬರೆಯುವ ಆತ್ಮಕತೆ ‘ನೆನಪಾದಾಗಲೆಲ್ಲ’ ಸರಣಿಯ 26ನೆಯ ಕಂತು









