ಬದಲಾವಣೆಯಲ್ಲಿ ಸ್ವಾತಂತ್ರ್ಯದ ಸಾಕಾರ
ಈ ಭೂಗೋಳದ ಬಹುತೇಕ ರಾಷ್ಟ್ರಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಜಗಳ, ಕದನ, ವೈಮನಸ್ಸು, ಪ್ರತಿಭಟನೆ, ಆಗ್ರಹಗಳು ನಡೆಯುತ್ತಲೇ ಇರುವುದನ್ನು ಓದಿದಾಗ, ಕೇಳಿದಾಗ ಮನುಷ್ಯ ಮನಸ್ಸು ಅದೆಷ್ಟು ಅತಂತ್ರವೆನಿಸುತ್ತದೆ. ಆ ಮನಸ್ಸುಗಳು ಅದೆಷ್ಟು ಸುಲಭವಾಗಿ ಆಕ್ರಮಣಶೀಲತೆಯನ್ನು ಅಪ್ಪಿಕೊಳ್ಳುತ್ತವೆ ಎಂದು ಗೋಚರಿಸುತ್ತದೆ. ತಾನು ಮುಖ್ಯ, ತನ್ನದು ಮುಖ್ಯ, ತನ್ನದೇ ಮೇಲು, ತನ್ನದನ್ನು ವಾದಿಸುತ್ತಾ ಮುಂದಿರಿಸಬೇಕು, ಎನ್ನುವುದು ಬರೀ ಮನುಷ್ಯ ಸ್ವಭಾವವೇ ಹೌದು. ಒಮ್ಮೊಮ್ಮೆ ಅದು ಎಲ್ಲ ಪ್ರಾಣಿಗಳ ಸಾರ್ವತ್ರಿಕ ಸ್ವಭಾವ ಎನ್ನುವುದಾದರೂ ಪ್ರಾಣಿಪ್ರಪಂಚವನ್ನು ಗಮನಿಸಿದಾಗ ಈ ಬಗೆಯ ವೈಮನಸ್ಯಗಳು ಕಾಣುವುದಿಲ್ಲ.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”
ನನ್ನ ತಾಯಿಬೇರೇ ನನ್ನ ಕಥೆ
ಕಣ್ಣೀರ ಕಣ್ಣರೆಪ್ಪೆಗಳು ತಡೆಯದಾದವು. ತುಳುಕಿದವು. ಹೇಳಿದೆ. ‘ನಾನಲ್ಲ ಕಥೆ ಬರೆದದ್ದು. ಕಥೆಯ ನನ್ನ ತಾಯಿ ಹೇಳಿ ಬರೆಸಿದಳು. ನನ್ನ ತಾಯಿ ಈಗ ನನ್ನ ನೆತ್ತರಲ್ಲಿ ಮಾತ್ರ ಬದುಕಿ ಉಳಿದಿದ್ದಾಳೆ. ಅವಳ ಆತ್ಮ ನನ್ನ ಎದೆಗೂಡ ದೇಗುಲದಲ್ಲಿ ನನ್ನ ಚೈತನ್ಯವಾಗಿದೆ… ಅವಳ ಮೌನ ನನ್ನ ಭಾಷೆಯಾಗಿದೆ. ಅವಳ ಕಿಚ್ಚು ನನ್ನ ಬರೆಹದ ಬೆಳಕಾಗಿದೆ… ನಾನು ನೆಪದ ಕಥೆಗಾರ ಅಷ್ಟೇ… ಅವಳೇ ನನ್ನ ಬರೆಹದ ಬೇರು ಕಾಂಡ ರೆಂಬೆ ಕೊಂಬೆ ಚಿಗುರು ಎಲ್ಲ… ಎಲ್ಲ ಅವಳೇ… ನನ್ನದೇನಿದ್ದರೂ ಅವಳ ಕಥೆಯ ನೆರಳು ಅಷ್ಟೇ’ ಎಂದೆ.
ಮೊಗಳ್ಳಿ ಗಣೇಶ್ ಬರೆಯುವ “ನನ್ನ ಅನಂತ ಅಸ್ಪೃಶ್ಯ ಆಕಾಶ” ಆತ್ಮಕತೆ ಸರಣಿಯ 34ನೇ ಕಂತು
ಓದಿ ತಿಳಿ ಗಿಡವ ನೆಟ್ಟು ಕಲಿ
ಮಣ್ಣು ನಿರ್ಜೀವ ವಸ್ತು ಅಲ್ಲ ಅದು ಜೀವಂತ! ಅದರಲ್ಲಿ ಎಷ್ಟೋ ಕ್ರಿಮಿ ಕೀಟಗಳು, ಶಿಲೀಂದ್ರಗಳು, ಬಹುಮುಖ್ಯವಾಗಿ ಎರೆ ಹುಳುಗಳು ಇವೆಲ್ಲ ಇರಲೇಬೇಕು, ಅವುಗಳನ್ನು ಹೇಗೆ ಹೆಚ್ಚಿಸಬೇಕು, ಮಣ್ಣಿಗೆ ಹೊದಿಕೆ ಹೇಗೆ ಮಾಡಬೇಕು, ಸಸ್ಯಗಳನ್ನು ಸಹಜವಾಗಿ ಹೇಗೆ ಪೋಷಿಸಬೇಕು ಎಂಬೆಲ್ಲ ಹೊಸ ಹೊಸ ವಿಷಯಗಳ ಅರಿವು ನನಗೆ ಈ ಮಹಾನುಭಾವರು ಬರೆದ ಪುಸ್ತಕಗಳ ಮೂಲಕ ತಿಳಿದಿತ್ತು. ಇನ್ನೂ ಹಲವಾರು ಟಿಪ್ಪಣಿ ಮಾಡಿಟ್ಟುಕೊಂಡ ನನ್ನ ಹೊತ್ತಿಗೆಗಳು ಬೃಹದಾಕಾರವಾಗಿ ಬೆಳೆದಿದ್ದವು. ಈಗ ಗಿಡಗಳನ್ನು ಬೆಳೆಯುವ ಸಮಯ ಬಂದಿತ್ತು! ಇದು ಹೊಸದಾಗಿ ರೈತರಾಗುವವರಿಗೆ ಎದುರಾಗುವ ಸಮಸ್ಯೆ. ಸಿಕ್ಕಾಪಟ್ಟೆ ಮಾಹಿತಿಗಳ ಕೇಳಿ ತಬ್ಬಿಬ್ಬಾಗಿ ಬಿಡುತ್ತಾರೆ. ಗುರುಪ್ರಸಾದ್ ಕುರ್ತಕೋಟಿ ಬರೆಯುವ ಅಂಕಣ “ಗ್ರಾಮ ಡ್ರಾಮಾಯಣ”
ʻದ ಡಿಪಾರ್ಟೆಡ್ʼ: ಕ್ರೈಮ್ ಕಥನದ ಅಂತರ್ಮುಖಿ ಪಯಣ
ಕಾಲಿನ್ ಸಲ್ಲಿವನ್ ಎಂಬ ಯುವ ಕ್ರಿಮಿನಲ್ ಪೊಲೀಸ್ ಇಲಾಖೆಯ ಒಳಗೆ ನುಸುಳಿಕೊಂಡು ಅಲ್ಲಿನ ಎಲ್ಲ ವಿದ್ಯಮಾನಗಳನ್ನು ಗ್ಯಾಂಗ್ ಲೀಡರ್ ಗೆ ರವಾನಿಸುವ ಕೆಲಸ ನಿರ್ವಹಿಸಬೇಕಾಗಿರುತ್ತದೆ. ಇದು ಕಥನದ ಪ್ರಾರಂಭಿಕ ಭಾಗವಾದರೆ ಚಿತ್ರ ಮುಂದುವರಿದಂತೆ ಅವರು ತಮ್ಮ ನಿಯೋಜಿತ ಕೆಲಸಗಳಲ್ಲಿ
ತೊಡಗುತ್ತಾರೆ. ಇದರಲ್ಲಿ ನಿರತರಾದಾಗ ಬಿಲ್ಲಿ ಕಾಸ್ಟಿಗನ್ ಮತ್ತು ಕಾಲಿನ್ ಸಲ್ಲಿವನ್ ಅಂತರಂಗದಲ್ಲಿ ಸಂಭವಿಸುವ ಸಂಘರ್ಷದ ಪದರುಗಳನ್ನು ಪ್ರಕಟಿಸುವುದೇ ನಿರ್ದೇಶಕನ ಉದ್ದೇಶ. ಇಂಥದನ್ನು ಪ್ರಕಟಿಸುವ ಏಕಾಂತ ಕ್ಷಣಗಳಲ್ಲಿ ಪಾತ್ರಗಳ ಅಭಿನಯ ಪರಿಣಾಮಕಾರಿ. ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್’ನಲ್ಲಿ ಅಮೆರಿಕದ ʻದ ಡಿಪಾರ್ಟೆಡ್ʼ ಸಿನಿಮಾದ ವಿಶ್ಲೇಷಣೆ
ಓ ದೇವರೆ ಈ ಪುಣ್ಯ ಅವನಿಗೆ ಲಭಿಸಲಿ
ನನ್ನ ತಂದೆಗೆ ಆ ತೂತಿನ ದುಡ್ಡು ಕೇಳಿದೆ. ಅವರು ಕೊಡಲಿಲ್ಲ. ಆ ದುಡ್ಡು ನನ್ನದಲ್ಲ ಎಂದರು. ನನಗೆ ಅರ್ಥವಾಗಲಿಲ್ಲ. ಆ ತೂತಿನ ದುಡ್ಡಿಗಾಗಿ ಕೊಂಯಾ ಕೊಂಯಾ ಮಾಡುತ್ತಿದ್ದೆ. ಸೇಂಗಾ ಬೆಲ್ಲ ಕೊಳ್ಳುವವರೆಗೂ ಆ ತೂತಿನ ದುಡ್ಡಿನಲ್ಲಿ ಕಿರುಬೆರಳು ಸೇರಿಸಿ ಆಡುವ ಖುಷಿಯೂ ಇತ್ತು. ಹೀಗೆ ಆ ದುಡ್ಡು ಡಬಲ್ ಧಮಾಕಾ ಇಫೆಕ್ಟ್ ಕೊಡುತ್ತಿತ್ತು. ಅಂದು ಇದೊಂದು ದೊಡ್ಡ ಚಿಂತೆಯಾಯಿತು. ನನ್ನ ತಂದೆ ಇಷ್ಟೇಕೇ ಕಠೋರ ಆಗಿದ್ದಾರೆ ಎಂಬುದು ತಿಳಿಯಲಿಲ್ಲ. ಅಂತೂ ಶನಿದೇವರ ಗುಡಿಯ ಮುಂದೆ ಹೋದೆವು. ತಂದೆ ಆ ಎರಡು ರೂಪಾಯಿ ಚಿಲ್ಲರೆ ದುಡ್ಡನ್ನು ಕುಂಬಳ ಚಾಟಿಯ ಕಿಸೆಯಲ್ಲಿ ಇಟ್ಟುಕೊಂಡಿದ್ದರು. ರಂಜಾನ್ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ 42ನೇ ಕಂತು ಇಲ್ಲಿದೆ.
ಒಳಗುದಿಯ ದೀಪ ಉರಿಯುತಿತ್ತು
ಆಗ ನನಗೆ ಒಂದು ಸುಂದರ ಹವ್ಯಾಸ ಇತ್ತು. ಈಗಲೂ ಅದನ್ನು ಬಿಟ್ಟಿಲ್ಲ… ಹಳೆಯ ಹಿಂದಿ ಸಿನಿಮಾ ಹಾಡುಗಳನ್ನು ಕೇಳುತ್ತಲೇ ಇರುವುದು… ಆ ಮುಖೇಶ್, ರಫೀ, ಸೈಗಲ್, ಕಿಶೋರ್ ಕುಮಾರ್, ಲತಾ ಅವರ ಕೊನೆ ಮೊದಲಿಲ್ಲದ ಹಾಡುಗಳ ನನ್ನ ಪೂರ್ವಿಕರಿಗೆಲ್ಲ ಕೇಳಿಸಬೇಕು ಎಂಬಂತೆ ಸುಪ್ತ ಪ್ರಜ್ಞೆಯಲ್ಲಿ ಮಲಗಿದ್ದ ಅವರನ್ನೆಲ್ಲ ಎಬ್ಬಿಸಿ ಈ ಹಾಡನ್ನು ಕೇಳಿ… ಈ ಅನಂತ ಹಿಂದೂಸ್ತಾನಿ ಸಂಗೀತದ ಸಮುದ್ರದ ಅಲೆಯ ರಾಗಗಳ ಆಲಿಸಿ ಎನ್ನುತ್ತಿದ್ದೆ. ನನ್ನ ಅಳಲನ್ನು ಈ ಸಂಗೀತಗಾರರು ಅದೆಷ್ಟು ಸಲ ಸಂತೈಸಿದ್ದಾರೊ ಏನೊ..ಮೊಗಳ್ಳಿ ಗಣೇಶ್ ಬರೆಯುವ “ನನ್ನ ಅನಂತ ಅಸ್ಪೃಶ್ಯ ಆಕಾಶ” ಆತ್ಮಕತೆಯ 33ನೇ ಕಂತು
ಒಲಿವಿಯಾ ನ್ಯೂಟನ್ ಜಾನ್ ಮತ್ತು ಬೆಂಗಳೂರು ಒಳ ಚರಂಡಿ ಆಫೀಸು
ಮ್ಯಾಕ್ಸ್ ಬೋರ್ನ್ ಬೆಂಗಳೂರಿನಲ್ಲಿದ್ದ ಕೆಲವೇ ತಿಂಗಳುಗಳಲ್ಲಿ, ರಾಮನ್‌ರ ಮೂಲಕ ಅವರಿಗೆ ಮೈಸೂರು ಸಂಸ್ಥಾನದ ಅಂದಿನ ಹಲವಾರು ಗಣ್ಯರ ಪರಿಚಯವಾಯಿತು. ಹೀಗೆ ಪರಿಚಯವಾದವರಲ್ಲಿ ದಿವಾನ್ ಮಿರ್ಜಾ ಇಸ್ಮಾಯಿಲ್ ಸಾಹೇಬರೂ ಒಬ್ಬರು. ಆ ಕಾಲದಲ್ಲಿ, ಇಸ್ಮಾಯಿಲ್ ಸಾಹೇಬರು ಬೆಂಗಳೂರಿನಲ್ಲಿ ಹಲವಾರು ಸಾರ್ವಜನಿಕ ಮೂಲ ಸೌಕರ್ಯ ಮತ್ತು ಕಟ್ಟಡಗಳನ್ನು ನಿರ್ಮಿಸುವ ಆಲೋಚನೆಯಲ್ಲಿದ್ದರು. ಈ ಕಟ್ಟಡಗಳನ್ನು ವಿನ್ಯಾಸ ಮಾಡಲು ಅವರು ಒಬ್ಬ ನುರಿತ ಆರ್ಕಿಟೆಕ್ಟ್‌ಗಾಗಿ ಹುಡುಕಾಟದಲ್ಲಿದ್ದರು.
ಶೇಷಾದ್ರಿ ಗಂಜೂರು ಬರಹ
ಪಡುವಣದ ಗಾಳಿಯಲಿ ಅಧ್ಯಾತ್ಮದ ಗಂಧ ಹರಡಿದ ಅಲೆಮಾರಿ ಬೋಧಕ
ವಿವೇಕಾನಂದರು ನೀಡಿದ ಅನೇಕ ಉಪನ್ಯಾಸಗಳು 1896ರಲ್ಲಿ ಪ್ರಕಟವಾಗಿವೆ. ಪಶ್ಚಿಮದ ಅಧ್ಯಾತ್ಮ ಓದುಗರ ಕುತೂಹಲ ಆಸಕ್ತಿಗಳನ್ನು ಹೆಚ್ಚಿಸಿವೆ. ಹಿಂದೂ ನಂಬಿಕೆಗಳಲ್ಲಿ ಅಂತರ್ಗತವಾಗಿರುವ ದೇವರ ಕಲ್ಪನೆಯ ಪ್ರಚಾರಕನಾಗಿ ಬ್ರಿಟನ್ನಿಗೆ ಬಂದರು , ಎಲ್ಲ ಧರ್ಮಗಳ ಅರಿವಿನ ಪರಿಧಿಯನ್ನು ಹೆಚ್ಚಿಸಿ ಹೋದರು. ಭಾರತದಲ್ಲಿ ಜನಪ್ರಿಯವಾಗಿರುವ ವಿವಿಧ ನಂಬಿಕೆಗಳಿಂದ ನೇರ ಉದಾಹರಣೆಗಳನ್ನು ಆಧಾರವಾಗಿಸಿ ವಿವರಿಸುತ್ತಿದ್ದರು.ಎಲ್ಲ ನಂಬಿಕೆಗಳ ಒಳಹರಿವಾಗಿ , ಭಾರತೀಯ ಯೋಚನಾಕ್ರಮವನ್ನು ಆಧರಿಸಿದ ತತ್ವಶಾಸ್ತ್ರವನ್ನು ಬೋಧಿಸಿದರು. ವೇದ ಉಪನಿಷತ್ತು ಭಗವದ್ಗೀತೆಗಳನ್ನು ಉಲ್ಲೇಖಿಸಿದರು. ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಯೋಗೀಂದ್ರ ಮರವಂತೆ ಬರಹ ಇಲ್ಲಿದೆ.
ನನ್ನ ತಂದೆ ಶರಣರಂತೆ, ಸಂತರಂತೆ
ಅವರು ಜೀವನದಲ್ಲಿ ಸಾಲವನ್ನೇ ಮಾಡಲಿಲ್ಲ. ದುಡಿಮೆಯೆ ಅವರ ಬ್ಯಾಂಕು. ವಾಪಸ್ ಮಾಡುವ ಶಕ್ತಿಇಲ್ಲವೆಂದ ಮೇಲೆ ಸಾಲ ಮಾಡಬಾರದು ಎಂಬುದು ಅವರ ನೀತಿಯಾಗಿತ್ತು. ಸಮಾಜ ಜಾತಿ ಉಪಜಾತಿಗಳ ಬಂಧನದಲ್ಲಿ ಸಿಕ್ಕಿ ಹಾಕಿಕೊಂಡಿದ್ದರೂ ಅಸ್ಪೃಶ್ಯತೆ ಆಚರಿಸುತ್ತಿದ್ದರೂ ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ‘ನೀವು ಹಾಗಿರಬೇಕು, ಹೀಗಿರಬೇಕು’ ಎಂದು ಯಾರಿಗೂ ಉಪದೇಶ ಮಾಡಲಿಲ್ಲ. ಆದರೆ ಸ್ವಂತಕ್ಕೆ ಜಾತಿ, ಧರ್ಮ ಮತ್ತು ಅಸ್ಪೃಶ್ಯತೆ ಮುಂತಾದವುಗಳನ್ನು ಮೀರಿ ಬದುಕಿದವರು. ನಾನು ಶನಿವಾರ ಜನಿಸಿದ್ದರಿಂದ ಪ್ರತಿ ಶನಿವಾರ ನನ್ನನ್ನು ಕರೆದುಕೊಂಡು ಶನಿದೇವರ ಗುಡಿಗೆ ಹೋಗುತ್ತಿದ್ದರು. ರಂಜಾನ್ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿ









