ನಿಗೂಢತೆಯೆಡೆಗೆ ಚಲಿಸುವ ಇರಾನ್‌ನ ʻಸರ್ಟಿಫೈಡ್ ಕಾಪಿʼ
ಅಬ್ಬಾಸ್ ಕಿಯರೋಸ್ತಮಿ ತನ್ನ ನೆಚ್ಚಿನ ಮನೋಭೂಮಿಕೆಗೆ ಹತ್ತಿರವಾದ ಮನುಷ್ಯನ ಅಂತರಂಗದಲ್ಲಿ ಹುದುಗಿರುವ ಭಾವನೆಗಳ ಏರಿಳಿತವನ್ನು ತೀರಾ ಸರಳವಾದ ನಿರೂಪಣಾ ವಿಧಾನದಿಂದ ಪ್ರಸ್ತುತಪಡಿಸುತ್ತಾನೆ. ಅವನ ಚಿತ್ರಗಳ ಪಾತ್ರಗಳ ಸೃಷ್ಟಿಕ್ರಿಯೆ ಹಲವು ಪದರುಗಳಲ್ಲಿ ಜರುಗುವುದು ಸಾಮಾನ್ಯ. ಇವುಗಳು ಅಷ್ಟಕ್ಕೆ ನಿಲ್ಲದೆ ತೀರ ಗಹನ ವಿಷಯಗಳನ್ನು ಅತ್ಯಂತ ಕಡಿಮೆ ಘಟನೆಗಳನ್ನು ಉಪಯೋಗಿಸಿ ಪ್ರಸ್ತುತಪಡಿಸುವುದು ಅವನ ಶೈಲಿಯಾಗಿದೆ. …
ಹಾಸ್ಟೆಲ್ ರೂಂನಲ್ಲಿ ಓದುವ ‘ಸೆಟಪ್’ ನಿರ್ಮಾಣ
ರಂಗಸ್ವಾಮಣ್ಣ ಮಾವನ ಬಗೆಗೆ ಕೊಟ್ಟಿದ್ದ ಬಿಲ್ಡಪ್‌ನಿಂದ ರೂಮಿನವರಾದ ನಾವಷ್ಟೆ ಅಲ್ಲದೆ ಅಕ್ಕಪಕ್ಕದವರೂ ಸೈಲೆಂಟಾಗಿದ್ದರು. ಗಂಟೆ ಗಟ್ಟಲೆ ಇದ್ದ ತಿಮ್ಮರಾಯಪ್ಪನವರು ಬಹಳ ಹೊತ್ತು ಭಾಮೈದುನನನ್ನು ಮಾತ್ರವಲ್ಲದೆ ನಮ್ಮನ್ನೂ ವಿಚಾರಿಸಿಕೊಂಡರು. ಕುಂದೂರು ತಿಮ್ಮಯ್ಯನವರ ಮಗ ಮತ್ತು ಭಾಮೈದ ಎಂದು ತಿಳಿದ ನಂತರ ನಮ್ಮನ್ನೂ ಕಾಳಜಿಯಿಂದ ಮಾತಾಡಿಸಿದರು. ಭಾಮೈದನ ವಿದ್ಯಾಭ್ಯಾಸದ ಸ್ಥಿತಿಗತಿಯನ್ನ ಒಂದಷ್ಟು ಒಳಹೊಕ್ಕೆ ಕೆದಕಿದ ನಂತರವೂ ಜೋಬಿಗೆ ಕೈ ಹಾಕಿ ಏನನ್ನೂ ತೆಗೆದಿದ್ದು ಕಾಣಲಿಲ್ಲ. ಹೊರಡಲು ಸಿದ್ಧರಾದ ತಿಮ್ಮರಾಯಪ್ಪನವರನ್ನ…
ಬಲಿಪಮಾರ್ಗದಲ್ಲೊಂದು ‘ಬಿಡ್ತಿಗೆ’ ವೃತ್ತಾಂತ
ಅಜ್ಜ ಬಲಿಪ ನಾರಾಯಣ ಭಾಗವತರು ಯಕ್ಷಗಾನದ ಹಾಡುಗಳಿಗೆ ಬಿಡ್ತಿಗೆ ಅತ್ಯಂತ ಅಗತ್ಯವೆಂದು ಹೇಳುತ್ತಿದ್ದರು. ಈ ಕುರಿತಾಗಿ ಕುರಿಯ ವಿಠಲ ಶಾಸ್ತ್ರಿಗಳಿಗೂ ಮತ್ತು ಭಾಗವತರಿಗೂ ವಾದಗಳು ನಡೆದವುಂಟು. ಅಜ್ಜನಿಗೂ ಹಿಂದಿನ ಕಾಲದ ಭಾಗವತರುಗಳ ಕ್ರಮದಲ್ಲಿ ಕರುಣರಸದ ಪದ್ಯಗಳಿಗೂ ಬಿಡಿತವನ್ನು ನಾವು ಕಾಣಬಹುದಿತ್ತು. ಅಜ್ಜ ಬಲಿಪರ ಹಾಡುಗಾರಿಕೆಯ ಶೈಲಿಯಲ್ಲಿ ಅನೇಕ ಪದ್ಯಗಳು ಇಂದು ಇಲ್ಲವಾಗಿದೆ. ವಿಶೇಷವಾದ ಮಟ್ಟುಗಳನ್ನು ಹೊಸತಲೆಮಾರು…
ಸಣ್ಣ ತಪ್ಪಿನಿಂದಾಗುವ ದೊಡ್ದ ಅನಾಹುತ
ಆಗಷ್ಟೇ ಶಾಲೆ ಬಿಟ್ಟು ಮಕ್ಕಳು ಅತ್ತಿಂದಿತ್ತ ಓಡಾಡುತ್ತಾ ರಸ್ತೆಯ ಮೇಲೂ, ಪಕ್ಕದಲ್ಲೂ ಚಲಿಸುತ್ತಿದ್ದರು. ಆಗ ನಡೆದುಕೊಂಡು ಹೋಗುತ್ತಿದ್ದ ಒಬ್ಬ ಚಿಕ್ಕ ಹುಡುಗಿಗೆ ಮುಂದಿನಿಂದ ಬಂದ ಒಂದು ಮೋಟಾರ್ ಬೈಕ್ ಸವಾರನ ಯಡವಟ್ಟಿನಿಂದಾಗಿ, ಅಪಘಾತ ಸಂಭವಿಸಿತ್ತು. ಕೂಡಲೇ ಕೆಲವು ಆಸ್ಪತ್ರೆಯ ಸಿಬ್ಬಂದಿ, ಓಡಿಹೋಗಿ ಮಗುವನ್ನು ಎತ್ತಿಕೊಂಡು ತುರ್ತು ವಿಭಾಗಕ್ಕೆ ತಂದಿದ್ದರು. ನಮ್ಮ ಜೊತೆ ಹರಟುತ್ತಾ ನಿಂತಿದ್ದ ಅಂದಿನ ತುರ್ತು ವಿಭಾಗದ ವೈದ್ಯರು ಅಲ್ಲಿದ್ದ ಅಪಘಾತ ಪುಸ್ತಕದಲ್ಲಿ ಅಂದಿನ ದಿನಾಂಕ, ಸಮಯ, ಮಗುವಿನ ಹೆಸರು, ವಯಸ್ಸು ಇತ್ಯಾದಿ ವಿವರಗಳನ್ನು…
ಹಲವು ಬಣ್ಣಗಳ ಜನ್ಮ ಪುರಾಣ….
ಹಿಂದಿನ ಶತಮಾನಗಳ ಕಲಾವಿದರು, ತಮ್ಮ ಪೇಂಟಿಂಗ್‌ಗಳಿಗೆ ಬೇಕಿರುವ ಬಣ್ಣದ ಕಣಗಳನ್ನು ನಿರ್ಮಿಸಲು ಪಡಬಾರದ ಪಾಡು ಪಟ್ಟಿದ್ದಾರೆ. ಕೆಂಪು ಮಣ್ಣು, ಕಲ್ಲು, ಬೂದಿ, ನಾನಾ ಗಿಡಗಳು, ಹೂವು-ಕಾಯಿ-ಹಣ್ಣುಗಳು, ಪಶು-ಪ್ರಾಣಿಗಳ ಅಂಗಗಳು, ಕಡೆಗೆ ಕ್ರಿಮಿ-ಕೀಟಗಳನ್ನೂ ಅರೆದು ತಮಗೆ ಬೇಕಾದ ಬಣ್ಣದ ಛಾಯೆಯನ್ನು ಸೃಷ್ಟಿಸಲು ಯತ್ನಿಸಿದ್ದಾರೆ. ಉದಾಹರಣೆಗೆ, ಕಾಕಿನೀಲ್ ಎಂಬ ಸಣ್ಣ ಕೀಟ. ಇದು, ಬಹು ಮಟ್ಟಿಗೆ, ಪಾಪಾಸು ಕಳ್ಳಿಗಳನ್ನು ಕಾಡುವಂತಹ ಕೀಟ. ಈ ಕೀಟವನ್ನು ಸಂಗ್ರಹಿಸಿ, ಒಣಗಿಸಿ…
ಹಂಗೂ ಹಿಂಗೂ ತೇಜಸ್ವಿ ಇಂಗು ತಂದದ್ದು
ಈ ಮೂಡಿಗೆರೆ ಒಂದು ವಿಚಿತ್ರ ‘ಊರು ಮಾರಾಯರ್ರೆ’. ಇಂಥ ಮಾತಿನ ಶೈಲಿ ಗಮನಿಸಿ ಏನೋ ಆತ್ಮೀಯತೆ ಅನ್ನಿಸೊಲ್ವೆ. ಈ ಊರಿನ ಪೇಟೆ ಅಂಗಡಿಯವರ ರೀತಿನೇ ಹಾಗೆ. ಕಳೆದ ವರ್ಷ ನಮ್ಮ ತೋಟದಲ್ಲಿ ಭರ್ಜರಿ ಮಾವಿನಕಾಯಿ ದೊಡ್ಡ ಸೈಜಿನವು ಹಿಡಿದಿತ್ತು. ಆಪ್ತರಿಗೂ ಕೊಡಲಿಕ್ಕಾಗುತ್ತೆಂದು ಹೆಚ್ಚಿಗೆನೇ ಉಪ್ಪಿನಕಾಯಿ ಹಾಕಿದ್ದೆ. ಆಂಧ್ರ ಬಗೆಯಂತೆ. ಒಗ್ಗರಣೆ ಬೇಕೆಂದು ನನ್ನವರಿಗೆ ಹೇಳಿ ಇಂಗು ತರಿಸಿಕೊಂಡೆ. ಯಾಕೋ ಚೆನ್ನಾಗಿಲ್ಲ ಅನಿಸಿತ್ತು. ತೇಜಸ್ವಿ ಒಳ್ಳೆಯ ಇಂಗು ಬೇಕೆಂದದು ಒಂದೆರಡು ಅಂಗಡಿಯಲ್ಲಿ ಕೇಳಿದರು. ಆಗ ಸಿಗಲಿಲ್ಲವೆನ್ನಿ. ಆದರೆ ಕೆಲದಿನಗಳು ಕಳೆಯುವಷ್ಟರಲ್ಲಿ ಇಂಗಿನ ಸರಕೇ ಮನೆಗೆ ಬಂದು ಬಿದ್ದಿತ್ತು.
ಅರುಣ್ ಜೋಳದಕೂಡ್ಲಿಗಿ ಬರೆಯುವ ಹೊಸ ಸರಣಿ ‘ಗಂಟಿಚೋರರ ಕಥನಗಳು’
ಭಾರತದ ಕೃಷಿ ಮತ್ತು ವ್ಯವಸಾಯದ ಜತೆ ಬೆಸೆದುಕೊಂಡಿದ್ದ ಕುಶಲಕರ್ಮಿಗಳನ್ನೂ, ಅರಣ್ಯವಾಸಿ, ಅಲೆಮಾರಿ ಮತ್ತು ಆದಿವಾಸಿ ಸಮುದಾಯಗಳನ್ನು ನಿಯಂತ್ರಿಸಲು ಬ್ರಿಟಿಷ್ ಆಡಳಿತ ರೂಪಿಸಿದ ಕಾಯ್ದೆ ‘ಕ್ರಿಮಿನಲ್ ಟ್ರೈಬ್ಸ್ ಆಕ್ಟ್’. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕವೂ ಇದು ಮುಂದುವರೆಯಿತು. ಇದರಿಂದಾಗಿ ಅಲೆಮಾರಿ ಸಮುದಾಯಕ್ಕೆ ಸೇರಿದ ಗಂಟಿಚೋರರು ಹಾಗೂ ಅಂತಹುದೇ ಇತರ ಸಮುದಾಯದ ಜನರು ಪಡಿಪಾಟಲು ಅನುಭವಿಸಬೇಕಾಯಿತು.
ಮಕ್ಕಳಾಗದ ಗಂಡಸರ ದುಃಖ, ಫೋರ್ ವೀಲ್ ಡ್ರೈವಿಂಗ್ ಸಾಹಸ ಕ್ರೀಡೆ
ಆಸ್ಟ್ರೇಲಿಯಾದಲ್ಲಿ ಫೋರ್ ವೀಲ್ ಡ್ರೈವಿಂಗ್ ಕ್ಲಬ್ ಎನ್ನುವುದು ಬಹಳ ಹಳೆಯ ಕಲ್ಪನೆ. ಬ್ರಿಟಿಷರೊಡನೆ ಆ ಕಲ್ಪನೆ ಮತ್ತು ಹವ್ಯಾಸ ಈ ದೇಶಕ್ಕೆ ಆಮದಾಗಿ ಬಂದದ್ದು. ಒಂದು ಶತಮಾನಕ್ಕೂ ದೀರ್ಘ ಕಾಲ ಫೋರ್ ವೀಲ್ ಡ್ರೈವಿಂಗ್ ಹವ್ಯಾಸವು ಲಂಗುಲಗಾಮಿಲ್ಲದೆ ಬೇಕಾಬಿಟ್ಟಿ ನಡೆದಿತ್ತು. ಅದಕ್ಕೆ ಕಾನೂನಿನ ಹಿಡಿತವಾಗಲಿ, ಒಂದಷ್ಟು ಚೌಕಟ್ಟಾಗಲಿ ಇಲ್ಲದೇ ಇದ್ದಾಗ, ಪ್ರಕೃತಿಗೆ, ಜೀವಸಂಕುಲಕ್ಕೆ ಆದ ಹಾನಿಗೆ ಲೆಕ್ಕವಿರಲಿಲ್ಲ. -ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಪತ್ರ
ದಪ್ಪ ತುಂಡಿನ ಬಾಡಿನೆಸರು
ನಾವು ನಮ್ಮ ಬಳಿ ಕಳವಾಗುತ್ತಿರುವ ಹಣ, ವಸ್ತುಗಳ ವಿಷಯವನ್ನ ಕುತೂಹಲದಿಂದಲೂ ಬೇಸರದಿಂದಲೂ ಹೇಳಿಕೊಳ್ಳುತ್ತಿದ್ದೆವು. ಅದನ್ನು ಕೇಳಿಸಿಕೊಳ್ಳುವ ಆತ ನಮ್ಮಂತೆಯೇ ಆಶ್ಚರ್ಯ ಚಕಿತನಾಗುತ್ತಿದ್ದ. ‘ಈ ದಿನ ಆಜಾಗ ಬೇಡ ಈ ಜಾಗದಲ್ಲಿ ಇಟ್ಟೋಗಿ’ ಎಂದು ಸಲಹೆ ಕೊಟ್ಟು ಜೋಪಾನವಾಗಿ ಕಾಲೇಜಿಗೆ ಕಳುಹಿಸುತ್ತಿದ್ದ. ಬಂದು ನೋಡಿದರೆ ಮತ್ತೆ ಕಳವು!ಒಂದು ದಿನ ಕಾಲೇಜು ಮುಗಿಸಿಕೊಂಡು ಮಧ್ಯಾಹ್ನ ಹಾಸ್ಟೆಲ್ಗೆ ಬಂದೆವು. – ಗುರುಪ್ರಸಾದ್ ಕಂಟಲಗೆರೆ ಬರಹ









