ಹಮೀರ್ ಮುಗಿಲು ಕೆ.ಎಲ್. ಬರೆದ ಈ ಭಾನುವಾರದ ಕಥೆ
ಹೊರಗಾಳಿಯ ತಾಜಾತನವನ್ನು, ಮಧ್ಯಾಹ್ನ ಮೂರುಗಂಟೆಯ ಬಿಸಿಲನ್ನು ಸೇವಿಸಿದೆ. ರೋಡು ದೊಡ್ಡ ಮಾಡಿದಾಗ ಕಡಿದ, ಈಗ ರೊಡಿನ ಸೈಡಲ್ಲಿ ಮಹಾ ಬಂಡೆಗಳ ತರ ಅಥವಾ ರಾಮಲಕ್ಷ್ಮಣರೋ, ಪಾಂಡವರೊ ಸಾಯಿಸಿ ಕೊಚ್ಚಿಹಾಕಿದ ಉಗ್ರ ರಾಕ್ಷಸ ಜನಾಂಗದ ಹೆಣಗಳ ಹಾಗೆ ಬಿದ್ದಿರೊ ಮೂರ್ನಾಲ್ಕು ಶತಮಾನಗಳಷ್ಟು ಪುರಾತನವಾಗಿರಬಹುದಾದ ಮರಗಳ ಬುಡಗಳು ಕಣ್ಣಿಗೆ ಬಿದ್ದವು. ಆ ತಾಜಾತನದ ಸಹಾಯದಿಂದಲೋ ಏನೋ ಇಲ್ಲಿಯತನಕ ಸಿಗದ ಪರಿಹಾರವು ಸಿಕ್ಕಿತು, ಅಥವಾ ಉತ್ಪತ್ತಿಯಾಯಿತು, ಆಥವಾ ನನ್ನ ಸುಪ್ತಪ್ರಜ್ಞಾ ಮನಸ್ಸು ಸಂಶ್ಲೇ಼ಷಣೆ ಮಾಡಿತು.
ಹಮೀರ್ ಮುಗಿಲು ಕೆ.ಎಲ್. ಬರೆದ ಈ ಭಾನುವಾರದ ಕಥೆ “ಹಿಂದಿನದು” ನಿಮ್ಮ ಓದಿಗೆ
ಆಕರ್ಷ ಕಮಲ ಬರೆದ ಈ ಭಾನುವಾರದ ಕತೆ
ಪಜಲ್ ಪೀಸ್ಗಳನ್ನು ಕೆಳಕ್ಕಿರಿಸಿ ಕೀಲಿಕೈಗಳ ಗೊಂಚಲನ್ನು ಚರಂಡಿಗೆ ಎಸೆಯಲು ನಿರ್ಧರಿಸಿದ್ದನೇನೋ ಎನ್ನುವಷ್ಟೇ ವೇಗವಾಗಿ ಎಲಿವೇಟರ್ಗಳ ಕಡೆಗೆ ಓಡಿದ. ಹದಿಮೂರನೇ ಮಹಡಿಯಿಂದ ಗ್ರೌಂಡ್ ಫ್ಲೋರ್ ಲಾಬಿಗೆ ಬರುವಷ್ಟರಲ್ಲಿ ಕಚೇರಿಯಿಂದ ಹೊರನಡೆಯುವಾಗ ತನ್ನ ಹೆಸರು ನೆನಪಿಲ್ಲದ ಕಾವಲುಗಾರನಿಗೆ ಏನು ಹೇಳಬಹುದು, ಮನಸ್ಸನ್ನು ನೋಯಿಸದೆ ಪೊಲಿಟಿಕಲಿ ಕರೆಕ್ಟ್ ಆಗಿ ಹೇಗೆ ಮಾತನಾಡಬಹುದು ಎಂದೆಲ್ಲ ಯೋಚಿಸಿದ. ಆಕ್ಸೆಸ್ ಕಾರ್ಡ್ ಇಲ್ಲದೆಯೇ ಮತ್ತೆ ಕಚೇರಿಗೆ ಬರಲೇಬೇಕು.
ಆಕರ್ಷ ಕಮಲ ಬರೆದ ಕತೆ “ಆಯತಾಕಾರದ ನೆರಳು” ನಿಮ್ಮ ಈ ಭಾನುವಾರದ ಓದಿಗೆ
ಎಂದಿಗೂ ಹುಟ್ಟದ ಮಗುವಿಗೆ ಮೂರು ಕಿನ್ನರ ಕತೆಗಳು
ಪಾತ್ರೆ ತೊಳೆದು ಮುಗಿಸಿದ ಅಮ್ಮ ಹಾಲಿಗೆ ಬಂದು ಮೊದಲು ನೆಲದ ಹಾಸನ್ನು ಬ್ರಶ್ನಿಂದ ತಿಕ್ಕಿ ಸ್ವಚ್ಛಗೊಳಿಸುತ್ತಿದ್ದರು. ನಂಆಗೆಲ್ಲ ಆ ಸುಂದರ ಹೆಂಗಸು ಸೋಫಾದ ಮೇಲೆ ಮಲಗಿ ಪುಸ್ತಕವನ್ನು ಓದುತ್ತಲೇ, ಏನಾದರೂ ದೂರುಗಳನ್ನು ದಾಖಲಿಸುತ್ತಿದ್ದಳು. ಟೇಬಲ್ ಮೇಲೆ ಕುಳಿತು ಇದನ್ನೆಲ್ಲ ನೋಡುತ್ತಿದ್ದ ಪುಟ್ಟ ಹುಡುಗಿಗೆ ಅರ್ಥವಾಗದ ವಿಷಯವೊಂದಿತ್ತು.
ಇಟಲಿಯ ಸಾಹಿತಿ ಮತ್ತು ಪತ್ರಕರ್ತೆಯಾಗಿದ್ದ ಓರಿಯಾನ ಪಲಾಸಿಯವರ ‘ಎಂದಿಗೂ ಹುಟ್ಟದ ಮಗುವಿಗೆ ಪತ್ರ’ ಕಾದಂಬರಿಯನ್ನು ಸುಧಾ ಆಡುಕಳ ಕನ್ನಡಕ್ಕೆ ಅನುವಾದಿಸುತ್ತಿದ್ದು, ಅದರ ಭಾಗವೊಂದು ನಿಮ್ಮ ಓದಿಗೆ ಇಲ್ಲಿದೆ
ಅಬ್ದುಲ್ ರಶೀದ್ ಬರೆದ ಈ ಭಾನುವಾರದ ಕಥೆ
ಕಾಣೆಯಾಗಿದ್ದ ಟಿಬೆಟನ್ ಕ್ಯಾಂಪಿನ ಮೂವರು ಹಸುಳೆಗಳು ಇದೇ ಬಿಡಾರದ ಬಾಗಿಲು ತಟ್ಟಿ ಆಹಾರ ಕೋರಿದ್ದರು. ಕುಡಿದು ಬಿದ್ದಿದ್ದ ಈ ಆಸಾಮಿ ಕಣ್ಣೇ ಬಿಟ್ಟಿರಲಿಲ್ಲ. ಆತ ಕಣ್ಣು ಬಿಟ್ಟಾಗ ಆತನ ಮಡದಿ ಅದಾಗಲೇ ಲಾಮಾ ಮಕ್ಕಳ ಬಟ್ಟೆ ಬದಲಾಯಿಸಿ, ಬಿಸಿ ನೀರಲ್ಲಿ ಸ್ನಾನ ಮಾಡಿಸಿ, ಹೊಟ್ಟೆಗೆ ತಿನ್ನಲು ಕೊಟ್ಟು, ಅವರ ಕಾಷಾಯ ವಸ್ತ್ರಗಳನ್ನು ಒಗೆದು ಬಿಸಿಲಿಗೆ ಒಣಗಲು ಹಾಕಿ, ಅವರಿಗೆ ಕಂಬಳಿ ಹೊದೆಸಿ ಬೆಚ್ಚಗೆ ಮಲಗಿಸಿ ಅವರನ್ನು ಕಾದು ಕುಳಿತಿದ್ದಳು.
ಅಬ್ದುಲ್ ರಶೀದ್ ಬರೆದ ಕಥೆ “ಅಂತಾರಾಷ್ಟ್ರೀಯ ಕುಂಬಳಕಾಯಿ”
ಶ್ರೀನಿವಾಸ ವೈದ್ಯರು ಇನ್ನಿಲ್ಲ….
‘ಹಳ್ಳ ಬಂತು ಹಳ್ಳ’ ಕೃತಿ ಬಂದಾಗ ಅವರ ವಿದ್ವತ್ತು ಓದುಗರಿಗೆ ಪರಿಚಯವಾಯ್ತು. ಶುದ್ಧ ಹಾಸ್ಯ ಸೃಷ್ಟಿಸುವ ಶಕ್ತಿ ಇರುವವರಿಗೆ ಬದುಕನ್ನು ಗಾಢವಾಗಿ ನೋಡುವ ಶಕ್ತಿಯೂ ಇರುತ್ತದೆ ಎಂಬುದು ಈ ಕೃತಿ ನಿರೂಪಿಸಿತ್ತು. ಯಾವುದೇ ಅನುಮಾನವಿಲ್ಲದೆ ಈ ಕಾದಂಬರಿ ಕನ್ನಡ ಸಾಹಿತ್ಯಲೋಕದ ಅಪರೂಪದ ಕೃತಿ. ಅದು ಬಿಡುಗಡೆಯಾದಾಗ ನಾನು ಸಂಭ್ರಮ ಪಟ್ಟು ಅದರ ಕುರಿತು ವಿ.ಕ. ದಲ್ಲಿ ವಿಮರ್ಶೆ ಬರೆದಿದ್ದೆ. ಆ ವಿಮರ್ಶೆಯಲ್ಲಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬರಲಿ ಎಂದು ಆಶಿಸಿದ್ದೆ. ಅಂತೆಯೇ ಅವರಿಗೆ ಆ ಪ್ರಶಸ್ತಿ ಅನಂತರದ ವರ್ಷ ಬಂದಿತು.
ಇಂದು ಬೆಳಗ್ಗಿನ ಜಾವ ತೀರಿಕೊಂಡ ಹಿರಿಯ ಸಾಹಿತಿ ಶ್ರೀನಿವಾಸ ವೈದ್ಯರ ಕುರಿತು ಕಥೆಗಾರ ವಸುಧೇಂದ್ರ ಬರಹ
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಈ ಭಾನುವಾರದ ಕತೆ
ದೊಡ್ಡ ಮನೆ, ಐದೆಕರೆ ಫಲವತ್ತಾದ ಕೃಷಿಭೂಮಿ, ಅಡಕೆ ತೋಟ ಮೇಲಾಗಿ ಅತ್ತೆ ನಾದಿನಿಯರ ಕಾಟವಿಲ್ಲದ ಎಲ್ಲರೂ ಬಯಸುವ ಕನಸಿನ ಸಂಸಾರ! ಏನು ಕೊರತೆ ಇತ್ತು ಸುಖಕ್ಕೆ? ಆದರೆ ಯಾಕೋ ಅಲ್ಲಿ ಸ್ವರ್ಗಕ್ಕೆ ಕಿಚ್ಚು ಹಚ್ಚುವ ಯಾವುದೇ ಸಂಭ್ರಮ ಕಾಣದೇ ನಿಧಾನವಾಗಿ ಸಂಸಾರದೊಳಗೇ ಅಸಮಾಧಾನದ ಕಿಚ್ಚು ಹೊತ್ತಿಕೊಂಡದ್ದು ಅಷ್ಟು ಬೇಗನೇ ಯಾರ ಅರಿವಿಗೂ ಬರಲಿಲ್ಲ. ಆದರೆ ಎಲ್ಲರ ಅರಿವಿಗೆ ಬರುವ ಹೊತ್ತಿಗೆ ಬಹಳ ತಡವಾಗಿ ಹೋಗಿತ್ತು.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಕತೆ “ಶಿಕ್ಷೆ” ನಿಮ್ಮ ಈ ಭಾನುವಾರದ ಓದಿಗೆ
ಮುದಿರಾಜ್ ಬಾಣದ್ ಬರೆದ ಈ ಭಾನುವಾರದ ಕತೆ
ಬಿದ್ದಿದ್ದ ಜಡೆಗುಂಡು ರಿಬ್ಬನ್ ತಗಂಡು ನೀಲೇಶ್ ಜೇಬಲ್ಲಿ ಇಟ್ಟಿಕೊಳ್ಳುವದಕ್ಕೂ ಅವನ ತಾಯಿ ಅಲ್ಲಿಗೆ ಬರುವುದಕ್ಕೂ ಸರಿ ಹೋಯಿತು. “ಏನ್ ನಿಮ್ಮ ಜಗಳ ಹಾವು ಮುಂಗಸಿ ಆಡಿದಂಗಾ, ಏನಾಯ್ತು? ಹೇ ಮುದುಕ ಅದೇನ್ ಚಡ್ಡಿ ಬಕಣದಾಗ ಇಟ್ಟಿಕಂಡಿದ್ದು?” ಅಂತ ಕೇಳಿದಳು. ಅಕ್ಕ ತಮ್ಮ ಇಬ್ಬರೂ ಒಮ್ಮೆ ಮುಖ ಮುಖ ನೋಡಿಕೊಂಡರು. “ಅಮ್ಮ ಅದು ಅದು…” ಅಂತ ರಾಗ ಎಳೆಯುವಷ್ಟರಲ್ಲಿ, “ಲೇ ತಾರ ಅವ ಸಿಕ್ಕನಾ ಬಾರೇ ಜಲ್ದಿ” ಅಂತ ನೀಲೇಶನ ತಂದೆ ಜೋರು ಜೋರಾಗಿ ಕೂಗಿದ.
ಮುದಿರಾಜ್ ಬಾಣದ್ ಬರೆದ ಈ ಭಾನುವಾರದ ಕಥೆ “ಗಂಡುಮಲಿ” ನಿಮ್ಮ ಓದಿಗೆ
ಶರಣಗೌಡ ಬಿ ಪಾಟೀಲ ಬರೆದ ಈ ಭಾನುವಾರದ ಕಥೆ
ನಿಮ್ಮಪ್ಪ ಹ್ಯಾಂಗೇ ಇರಲಿ ಅವನು ನಮ್ಮ ಕಣ್ಮುಂದೆ ಇರಬೇಕು. ಅಂವ ನನ್ನ ಪಾಲಿನ ದೇವರು. ನನ್ನ ಹಣೆಬರಹದಾಗ ಏನಿದೆಯೋ ಅದು ಆಗಿ ಹೋಗಿದೆ. ಹಿರಿಯರ ಮಾತಿಗೆ ಬೆಲೆ ಕೊಟ್ಟು ಆತನ ಜೊತೆ ಮದುವೆಯಾದೆ. ಅಂತಹ ಗಂಡನ ಜೊತೆ ಹ್ಯಾಂಗ ಸಂಸಾರ ಮಾಡ್ತಿಯೋ ಏನೋ ಅಂತ ಆಡಿಕೊಳ್ಳತಿದ್ದರು. ಅವರ ಮಾತಿಗೆ ನಾನೆಂದೂ ತಲೆ ಕೆಡಿಸಿಕೊಳ್ಳಲಿಲ್ಲ. ಹೀಗಿದ್ದರೂ ಆತ ಹೇಳದೇ ಕೇಳದೇ ಹೋಗಿದ್ದಾನೆ.
ಶರಣಗೌಡ ಬಿ ಪಾಟೀಲ, ತಿಳಗೂಳ ಬರೆದ ಸಣ್ಣ ಕತೆ “ಎಲ್ಲರಂತವನಲ್ಲ!” ನಿಮ್ಮ ಈ ಭಾನುವಾರದ ಓದಿಗೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಧುಸೂದನ ವೈ. ಎನ್. ಕತೆ
ಅವಳು ಚಡಪಡಿಸಿದಳು. ಮುಷ್ಠಿ ಬಿಗಿ ಹಿಡಿದಳು. ಉಗಿದು ಅವನನ್ನು ಓಡಿಸುವುದೋ, ಅಥವಾ ಕಿರುಚಿಕೊಳ್ಳುವುದೋ ಗೊತ್ತಾಗಲಿಲ್ಲ. ಸುಮ್ಮನೆ ನಿರ್ಲಕ್ಷಿಸಿ ನಿಂತರೆ ಹೇಗೆ, ಯೋಚಿಸಿದಳು. ಅವನು ಇದಾವುದರ ಪರಿವೆಯೆ ಇಲ್ಲದಂತೆ ಬಜ್ಜಿ ತಿನ್ನುತ್ತಲೆ ಇದ್ದ. ಅವಕಾಶ ಸಿಕ್ಕಂತೆಲ್ಲ ಅವನು ಹತ್ತಿರ ಸರಿಯುತ್ತಿರುವುದು ಅವಳಿಗೆ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.
“ನಾನು ಮೆಚ್ಚಿದ ನನ್ನ ಕತೆ”ಯ ಸರಣಿಯಲ್ಲಿ ಮಧುಸೂದನ ವೈ. ಎನ್. ಬರೆದ ಕತೆ “ಬೋಣಿ”