ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಜಯಶ್ರೀ ಕಾಸರವಳ್ಳಿ ಬರೆದ ಕತೆ
ಹಾಗೆ ನೋಡಿದರೆ, ಅವನು ಇರುವೆ ತಿಂದಿದ್ದು ಇಂದೇ ಮೊದಲಿರಲಿಕ್ಕಿಲ್ಲ. ಈ ಮೊದಲೇ ಅವನಿಗೆ ಅರಿವಿಲ್ಲದಂತೆ ಅದೆಷ್ಟು ಇರುವೆ ಅವನ ಹೊಟ್ಟೆಯೊಳಗೆ ಹೊಕ್ಕು ಹೊರ ಹೋಗಿದ್ದವೋ ಯಾರಿಗೆ ಗೊತ್ತು? ಅವನೂರಿನ ಆಲೆಮನೆ ಸಂದರ್ಭದಲ್ಲಂತೂ ಇರುವೆ ಜೊತೆ ದೊಡ್ಡ ದೊಡ್ಡ ಗೊದ್ದಗಳೆಲ್ಲಾ ಮನೆ ತುಂಬಾ ಹರಿದಾಡುತ್ತಿದ್ದವು. ಉಪ್ಪರಿಗೆಯಲ್ಲಿ ಜೋಡಿಸಿಟ್ಟ ಬೆಲ್ಲದ ತಗಡಿನ ಡಬ್ಬಗಳಿಗೆ ರಾಶಿ ಇರುವೆಗಳು ಮುತ್ತಿಕೊಳ್ಳುತ್ತಿದ್ದರಿಂದ, ಅವನಪ್ಪ ಇರುವೆಗಳನ್ನು ಓಡಿಸಲು ಡಬ್ಬದ ಸುತ್ತಲೂ ಡಿ.ಡಿ.ಟಿ. ಪುಡಿಯನ್ನು ದುಂಡಗೆ ಚೆಲ್ಲಿರುತ್ತಿದ್ದರು.
ಶ್ರೀ ಡಿ. ಎನ್. ಬರೆದ ಈ ಭಾನುವಾರದ ಕತೆ
ಅವಳಮ್ಮ ಅಂದುಕೊಂಡಂತೆ ಅವ ಅವಳಿಗೆ ಬರೀ ಕ್ಲಾಸ್ ಮೇಟ್ ಮಾತ್ರವಾಗಿರಲಿಲ್ಲ. ಅವನೆಂದರೆ ಮಿಠಾಯಿ. ಅವನೆಂದರೆ ಬಲೂನು. ಅವಳು ಮೋಞಿಯವರ ಅಂಗಡಿಗೆ ಮನೆಸಾಮಾನಿಗಂತ ಹೋಗಲಾರಂಭಿಸಿದ್ದು ಎಂಟನೇ ಕ್ಲಾಸಿರಬೇಕಾದರೆ. ಅಬೂಬಕರ್ ಅಂಗಡಿ ಕೌಂಟರಲ್ಲಿದ್ದರೆ ಅವಳಿಗೊಂಥರಾ ಖುಷಿ. ಅವನು ಇರುವ ಹೊತ್ತು ನೋಡಿಯೇ ಅವಳು ಅಂಗಡಿಗೆ ಹೋಗುತ್ತಿದ್ದುದೂ ಇದೆ. ಹಾಗೆ ಹೋದಾಗ ಮನೆ ಸಾಮಾನು ಜತೆ ಅವಳಿಗಿಷ್ಟದ ಮಿಠಾಯಿ ನಾಕು ಬೇಕಂತ ಕೇಳಿದರೆ ಅವನು ಆರು ಹಾಕಿರುತ್ತಿದ್ದ. ಅವಳಿಗೆ ಬುಗ್ಗೆಯೆಂದರೆ ಇಷ್ಟ ಅಂತ ಅವನಿಗೆ ಅದು ಹೇಗೆ ಗೊತ್ತಾಯ್ತೋ, ಒಂದೊಂದು ಸಲ ಬಲೂನು ಕೂಡ ಹಾಕಿರುತ್ತಿದ್ದ.
ಶ್ರೀ ಡಿ. ಎನ್. ಬರೆದ ಈ ಭಾನುವಾರದ ಕತೆ “ಬಲೂನು”
ನವೀನ ಗಣಪತಿ ಬರೆದ ಈ ಭಾನುವಾರದ ಕತೆ
ಮಧ್ಯಾಹ್ನ ಒಂದು ಘಂಟೆಗೇ ತಾನು ಮನೆಯಲ್ಲಿ ಮಾಡಬಹುದಾದ ಎಲ್ಲ ಕೆಲಸಗಳೂ ಮುಗಿದು ಮತ್ತೆಲ್ಲ ಮನಸ್ಸಿಗೆ ಕಿರಿಕಿರಿಯಾಗ ಹತ್ತಿತ್ತು. ನಾಲ್ಕು ದಿನ ದಾವಣಗೆರೆಗೆ ಹೋಗಿ ಮಗಳೊಟ್ಟಿಗೆ ಇದ್ದು ಬರೋಣವೆನಿಸುತ್ತಿತ್ತು. ಆದರೆ ಶಂಭಣ್ಣನನ್ನು ಬಿಟ್ಟು ಎಲ್ಲಿಯೂ ಹೋಗುವಂತಿರಲಿಲ್ಲ. ಮಗಳೂ ವಾರ ವಾರ ಬರುವವಳಲ್ಲ. ಅವಳಿಗೆ ಭಾನುವಾರ ರಜಾದಿನಗಳು ಇದ್ದಾಗಲೇ ಜೋರು ವ್ಯಾಪಾರ. ಇನ್ನು ಆಚೀಚೆ ಎರಡು ಹೆಂಗಸರೊಟ್ಟಿಗೆ ಹರಟೆ – ಮಾತು – ಒಡನಾಟ ಮಾಡೋಣವೆಂದರೆ, ಒಬ್ಬರ ವ್ಯವಹಾರವಾದರೂ ಚೊಕ್ಕಟವಾಗಿದೆಯೇ?
ನವೀನ ಗಣಪತಿ ಬರೆದ ಈ ಭಾನುವಾರದ ಕತೆ “ಧನಲಕ್ಷ್ಮಿ”
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಬಿ. ಜನಾರ್ದನ ಭಟ್ ಬರೆದ ಕತೆ
ಮಕ್ಕಳೆಲ್ಲ ಬಾಕಿಮಾರು ಗದ್ದೆಯತ್ತ ನಡೆದುಕೊಂಡು ಹೋದಾಗ ಅವಿನಾಶನಿಗೆ ಅಯ್ಯಪ್ಪ ಎನಿಸಿತು. ಮಕ್ಕಳು ಅಂಗಳದಲ್ಲಿ ಕ್ರಿಕೆಟ್ ಆಡಲು ಶುರು ಮಾಡಿದರೆ ತಾನು ಅಲ್ಲಿಂದ ಏಳಬೇಕಾಗುತ್ತದೆಂಬ ಆತಂಕದಲ್ಲಿ ಅದುವರೆಗೂ ಅವನಿದ್ದ. ಮಕ್ಕಳು ಆಡಿದರೆ ಆಡಬಾರದೆಂದು ಹೇಳಲು ಚಂದ್ರಕ್ಕನಿಗೂ ಧೈರ್ಯವಿಲ್ಲ. ಅಂಗಳದಲ್ಲಿ ಕ್ರಿಕೆಟ್ ಆಡಿದರೆ ಹಟ್ಟಿ ಕೊಟ್ಟಿಗೆಯ ಹಂಚುಗಳು, ದಂಡೆಯಲ್ಲಿಟ್ಟ ಚೊಂಬು, ಕೊಡಪಾನಗಳು, ಪ್ಲಾಸ್ಟಿಕ್ ಬಾಲ್ದಿಗಳು ಚೆಂಡಿನ ಪೆಟ್ಟು ತಿಂದು ಅಲ್ಲೋಲಕಲ್ಲೋಲ ಆಗುತ್ತದೆ. ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಬಿ. ಜನಾರ್ದನ ಭಟ್ ಬರೆದ ಕಥೆ
ಡಾ. ಮಲರ್ ವಿಳಿ ಅನುವಾದಿಸಿದ ಕತೆ “ಸ್ವಲ್ಪ ಹೊತ್ತು ಮನುಷ್ಯನಾಗಿದ್ದವನು”
ತಲೆಯನ್ನು ಸ್ವಲ್ಪ ಮೇಲಕ್ಕೆ ಎತ್ತಿ ಹಿಡಿದು ಸರವನ್ನು ಬಿಚ್ಚಿದನು. ಅರಿಶಿನ ದಾರವನ್ನು ಮಾತ್ರ ಹಾಗೇ ಬಿಟ್ಟುಬಿಟ್ಟು ಬಂಗಾರದ ತಾಳಿ, ಕಾಸನ್ನು ಸೆಳೆದು ತೆಗೆದುಕೊಂಡನು. ಮೂಗುತಿಯನ್ನು ಬಿಚ್ಚಲು ನೋಡಿದ ತಿರುಪು ಎಂಬ ಸೂಕ್ಷ್ಮವನ್ನು ಅಕ್ಕಸಾಲಿಗನು ಒಳಗೆ ಇಟ್ಟಿದ್ದಾನೆ. ಬೆರಳ ತೂರಿಸಿ ಎಷ್ಟು ಪ್ರಯತ್ನಿಸಿದರೂ ಬಿಚ್ಚಲಾಗಲಿಲ್ಲ. ಕಾಡೈಯನ್ ತಾಳ್ಮೆಗೆಟ್ಟನು. ಮೂಗುತಿ ಮುಖ್ಯವೇ ಹೊರತು ಮೂಗು ಯಾತಕ್ಕೆ ಹೆಣಕ್ಕೆ? ಒಂದು ಬಾರಿ ಎಳೆದನು. ಡಾ. ಮಲರ್ ವಿಳಿ ಅನುವಾದಿಸಿದ ತಮಿಳಿನ ಕಥೆಗಾರ ಡಾ. ವೈರಮುತ್ತು ಬರೆದ “ಸ್ವಲ್ಪ ಹೊತ್ತು ಮನುಷ್ಯನಾಗಿದ್ದವನು” ಕತೆ, ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಜಾಹ್ನವಿ ಬಿ.ಟಿ. ಬರೆದ ಕತೆ
ಈ ಮನು ಹಾಗೇನೆ ತಲೆಗೇನಾದ್ರೂ ಬಂತಂದ್ರೇ ಪಟ್ಟು ಹಿಡಿದು ಮಾಡದೆ ಬಿಡೋನಲ್ಲ. ಅಷ್ಟೇ ಜಲ್ದಿನೂ ಯಾವಾಗ್ಲೂ. ಅವನು ಹೋದಲ್ಲೆಲ್ಲಾ ನಗುವಿನ ಬುಗ್ಗೆ. ಅವನಿದ್ದಲ್ಲೆಲ್ಲಾ ಗದ್ದಲ, ಖುಷಿ, ಸಂಭ್ರಮ ಯಾವತ್ತೂ. ಸಾಮಾನ್ಯ ನಾವಿಬ್ರೂ ಬೈಕ್ನಲ್ಲಿ ಹೊರಟರೆ ತನಗಿಷ್ಟವಾದ ಸಿನಿಮಾದ್ದೋ ಇಲ್ಲ ನಾಟಕದ್ದೋ ಡೈಲಾಗ್ಸ್ ಹೇಳ್ತಿರ್ತಾನೆ. ಇಲ್ಲಾಂದ್ರೆ ಆಯಾ ಸಿಚುಯೇಷನ್‌ಗೆ ತಕ್ಕನಾಗಿ ಹಾಡ್ತಾ ಇರ್ತಾನೆ, ಅದೂ ಇಲ್ಲ ಅಂದ್ರೆ ದಾರೀಲಿ ಹೋಗೋ ಬರೋರ್ನೆಲ್ಲಾ ಕಾಡೋಕೆ ಶುರು ಮಾಡ್ತಾನೆ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಜಾಹ್ನವಿ ಬಿ.ಟಿ. ಬರೆದ ಕಥೆ “ನೆರೆ ಹಾವಳಿ” ನಿಮ್ಮ ಈ ಭಾನುವಾರದ ಓದಿಗೆ
ಮಂಜಯ್ಯ ದೇವರಮನಿ ಬರೆದ ಈ ಭಾನುವಾರದ ಕತೆ
ಶಾರವ್ವನಿಗೆ ಶಿವರುದ್ರಯ್ಯನ ಇಂಥ ನಡವಳಿಕೆ ವಿಚಿತ್ರವೆನಿಸಿತು. ದೇವರ ಹೊಲ ತನ್ನ ಗಂಡನಿಗೆ ಕೊಡಿಸ್ತೀನಿ ಅಂತಾ ಪೂಜಾರಪ್ಪ ಹೇಳಿದ್ದು ತನಗೆ ಗೊತ್ತಿತ್ತು. ಸಿಗಬೇಕು ಎಂಬ ವಿಚಾರದಲ್ಲಿ ಒಂದು ಒಪ್ಪಂದವಾಗಿತ್ತು ಎನ್ನುವುದು ಪೂಜಾರಪ್ಪ ಮತ್ತು ತನಗೆ ಮಾತ್ರ ಗೊತ್ತಿದ್ದ ವಿಷಯವಾಗಿತ್ತು. ಆದರೆ ಶಿವರುದ್ರಯ್ಯ ಗುಡಿ ಪೂಜಾರಿ ಕ್ರಿಷ್ಣಪ್ಪನ ಮುಖಾಂತರ ಹೇಳಿಸಿ ತನ್ನ ಉದ್ದೇಶ ಸಾಧನೆಗೆ ಮುಂದಾಗಿದ್ದ. ಕ್ರಿಷ್ಣಪ್ಪ ಉದ್ದೇಶದ ಮೂಲವನ್ನು ಪೂರ್ತಿಯಾಗಿ ಹೇಳದೆ ಪರವಾಗಿ ಎನ್ನುವಂತೆ ಹೇಳಿ ಶಾರವ್ವನನ್ನು ಒಪ್ಪಿಸಿದ್ದ.
ಮಂಜಯ್ಯ ದೇವರಮನಿ, ಸಂಗಾಪುರ ಬರೆದ ಕತೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಎನ್. ಜಗದೀಶ್ ಕೊಪ್ಪ ಬರೆದ ಕತೆ
ಹಿಂದೆ ಬಂದರೆ ಒದೆಯದ, ಮುಂದೆ ಬಂದರೆ ಹಾಯದ ಹಸುವಿನಂತಹ ಗುಣದ ಪುಗಸಟ್ಟೆ ಪುಟ್ಟರಾಜನ ಬಗ್ಗೆ ಊರಿನ ಜನರಿಗೆಲ್ಲಾ ಅಪಾರ ಪ್ರೀತಿ. ಏನೇ ಕೆಲಸ ಹೇಳಿದರೂ ಸಹ ಇಲ್ಲವೆನ್ನದೆ ಮಾಡುತ್ತಿದ್ದ ಪುಟ್ಟರಾಜ, ನೆರೆ ಹೊರೆಯ ಹಳ್ಳಿಗಳಿಗೆ ಹೋಗಿ ತೆಂಗಿನ ಮರ ಹತ್ತಿ ಕಾಯಿ ಕೀಳುವುದು, ಸುಲಿಯುವುದು, ಕಳೆ ಕೀಳುವುದು ಹೀಗೆ ನೂರೆಂಟು ಕೆಲಸಗಳನ್ನು ಪ್ರೀತಿಯಿಂದ ಮಾಡಿ ಬರುತ್ತಿದ್ದ. ಅವರು ಉಣ್ಣಲು ಅಥವಾ ಕುಡಿಯಲು ಏನಾದರೂ ಕೊಟ್ಟರೆ ಅದೇ ಅವನ ಪಾಲಿಗೆ ಪ್ರಸಾದವಾಗಿತ್ತು. ಡಾ. ಎನ್. ಜಗದೀಶ್ ಕೊಪ್ಪ ಬರೆದ ಕಥೆ
ವಿಜಯಶ್ರೀ ಹಾಲಾಡಿ ಬರೆದ ಈ ಭಾನುವಾರದ ಕತೆ
“ಆ ಮುದ್ಕ ಸಂಕ್ರಪ್ಪ ದೇವಮ್ಮಕ್ಕನ ಗಂಡನೇ ಅಲ್ವಂತೆ. ಅವನೂರಾಗೆ ಬ್ಯಾರೆ ಸಂಸಾರ ಅದೆ. ಈವಮ್ಮಂಗೂ ಮಕ್ಕಳು ಮರಿ ಅವೆ. ಈ ವಯಸ್ನಾಗೆ ಈವಪ್ಪನ ಹಿಂದೆ ಓಡ್‌ಬಂದದೆ. ಸಂಕ್ರಪ್ಪಂಗೆ ರಿಟೈರ್ ಆಯ್ತಂತೆ. ಅದಕ್ಕೇ ಈಗ ಆವಯ್ಯನ್ನ ಬಿಟ್ಟು ಇನ್ನೆತ್ಲಾಗೋ ಹೋಗದೆ; ಘಾಟಿ ಹೆಂಗ್ಸು’ ಓನರ್ ಆಂಟಿಯಂತೂ ತಿಂಗಳೊಪ್ಪತ್ತು ಹೊಸರಾಗ, ಹಳೆರಾಗ ಎಲ್ಲವನ್ನೂ ಬೆರೆಸಿ ಹಾಡಿದರು. ಅಷ್ಟೆಲ್ಲ ಅಕ್ಕರೆಯ ಒರತೆಯಾಗಿರುವ ದೇವಮ್ಮಕ್ಕನ ನಿಜ ಬಣ್ಣ ಹೀಗಿರಬಹುದಾ ಎಂಬ ಅಚ್ಚರಿ ಮಲ್ಲಿಕಾಳಿಗೆ. ವಿಜಯಶ್ರೀ ಹಾಲಾಡಿ ಬರೆದ ಕತೆ