ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕಥೆ
ಮೂಲೆಯ ಮುರುಕು ಬೆಂಚಿನಲ್ಲಿ ಕುಳಿತು ಆ ವ್ಯಕ್ತಿಯ ಮಾತು- ವರ್ತನೆಗಳೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ವೆಂಕಪ್ಪ- ಅಣ್ಣುವಿಗೆ ಇನ್ನಷ್ಟು ಕುತೂಹಲವಾಯಿತು. “ಇವನೊಬ್ಬ ಬೋನಸ್ ಆಯುಷ್ಯದಲ್ಲಿ ಬದುಕುತ್ತಿದ್ದಾನೆ. ಇವನ ದುರ್ಬುದ್ಧಿಯನ್ನು ದೇವರು ಸರಿಯಾಗಿ ಲೆಕ್ಕಕ್ಕೆ ತೆಗೆದುಕೊಂಡಿದ್ದಿದ್ದರೆ ಇಷ್ಟರಲ್ಲಾಗಲೇ ಇವನು ಕೊಟ್ಟಾಯಿ ಆಗಿ, ಇವನ ಮೂರನೇ ವರ್ಷದ ಶ್ರಾದ್ಧ ಮುಗಿದಿರಬೇಕಿತ್ತು” ಎಂದು ರಾಮಣನ ಹಿಂದಿನಿಂದ ಮಾತನಾಡಿಕೊಳ್ಳುತ್ತಿದ್ದವರು ಈ ಇಬ್ಬರು, ವೆಂಕಪ್ಪ ಮತ್ತು ಅಣ್ಣು. ಇನ್ನಷ್ಟು ದಿನ ಬದುಕಿರಬೇಕಿತ್ತು…
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಚಿಂತಾಮಣಿ ಕೊಡ್ಲೆಕೆರೆ ಕತೆ
ನನ್ನೊಳಗೆ ಉಷಾ ಜೀವಂತವಾಗಿಯೇ ಇದ್ದಳು. ಕೆಲವೊಮ್ಮೆ ಕನಸುಗಳಲ್ಲಿ ಬಂದು ತನ್ನ ದುಃಖದ ಕಥೆಗಳನ್ನು ಹೇಳಿಕೊಂಡಳು. ಇನ್ನು ಕೆಲವೊಮ್ಮೆ ಅವಳೊಬ್ಬ ಸದ್ಗೃಹಿಣಿಯಾಗಿ ತಲೆಗೆ ಮಿಂದು, ಕೂದಲು ಕಟ್ಟಿಕೊಂಡು, ಬಟ್ಟೆ ತುರುಬು ಹಾಕಿ, ಮಂಗಲ ಕುಂಕುಮವನ್ನಿಟ್ಟುಕೊಂಡು ನಂದಿನಿ ಹಾಲಿನ ಪ್ಯಾಕೆಟ್ ಮನೆಯೊಳಗೆ ತರುತ್ತಿರುವಂತೆ ಕನಸಾಗುತ್ತಿತ್ತು. ‘ಸದಾಶಿವಯ್ಯನವರ ಮಾತನ್ನು ಎಂದಿಗೂ ನಂಬಬೇಡ’ ಎಂದು ಒಂದು ಸಲ ಹೇಳಿ ಹೋದಳು. ‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಚಿಂತಾಮಣಿ ಕೊಡ್ಲೆಕೆರೆ
ಸದಾಶಿವ ಸೊರಟೂರು ಬರೆದ ಈ ಭಾನುವಾರದ ಕಥೆ
ಬೆಳಕಿರುವ ಜಗದಲ್ಲಿ ತನ್ನವರು ಎಲ್ಲೋ ಕಳೆದು ಹೋಗಿರುವಾಗ ಹುಡುಕಿ ಸೇರಿಕೊಳ್ಳಲು ಹಂಬಲಿಸಿ ಸೋತು ಹೋದಳು. ಸುಮ್ಮನೆ ಅಲೆಯಬೇಕು. ಒಂದೂರಲಿ ಒಂದೆರಡು ದಿನ. ಭಿಕ್ಷೆಯ ಕೂಳು ಹೊಟ್ಟೆಗಿತ್ತು. ಹರಿದ ಎರಡು ದುಪ್ಪಟಿಗಳು ರಾತ್ರಿ ಚಳಿಗಿದ್ದವು. ರಾತ್ರಿ ಮಾತ್ರ ಸ್ನಾನದ ಹಂಗಿನಲ್ಲಿ ಅವಳ ಬೆತ್ತಲೆ ದೇಹವನ್ನು ನೋಡಿತ್ತು. ಆಚೆ ನೆಲದಲ್ಲಿ ಕೂಡಿಸಿಟ್ಟ ಮೂರು ಕಲ್ಲುಗಳು ಅವಳ ಅಡುಗೆ ಮನೆ. ಇಂತಿಪ್ಪ ಆಕೆಯ ಬದುಕು ಬೆಳಕು, ಕತ್ತಲುಗಳ ಮಧ್ಯೆ ನುಗ್ಗುತ್ತಿತ್ತು.
ಸದಾಶಿವ ಸೊರಟೂರು ಬರೆದ ಕಥೆ “ಬಯಲು” ನಿಮ್ಮ ಈ ಭಾನುವಾರದ ಓದಿಗೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಚೀಮನಹಳ್ಳಿ ರಮೇಶಬಾಬು ಕತೆ
ಮಳೆ ನಿಂತಿತ್ತಾದರೂ ಸಂದಿಯಲ್ಲಿರುವ ನೀರು ಖಾಲಿಯಾಗುವವರೆಗು ಮನೆಯೊಳಗೆ ನೀರು ಬರುತ್ತಲೆ ಇತ್ತು. ಹಾಗಾಗಿ ಅವಳು ಬಹುಪಾಲು ರಾತ್ರಿಯೆಲ್ಲ ಹಾಗೆ ನೀರನ್ನು ಹೊರ ಹಾಕುತ್ತಲೆ ಇದ್ದಳು. ಅದಾದ ಮೇಲೆ ಮಣ್ಣನ್ನೆಲ್ಲ ತೆಗೆದು ಒಂದಷ್ಟು ಸ್ವಚ್ಛಗೊಳಿಸಿದ್ದಳಾದರು ಮುಂಜಾವಿನವರೆಗೂ ತಾರಸಿ ಸೋರುತ್ತಲೆ ಇತ್ತು. ಅವಳು ತುಂಬಿದ ಪಾತ್ರೆಗಳಲ್ಲಿನ ನೀರನ್ನು ಆಚೆ ಚಲ್ಲಿ ಮತ್ತೆ ಅದೇ ಜಾಗದಲ್ಲಿ ಇಡುತ್ತಿದ್ದಳು. ಹೀಗೆ ರಾತ್ರಿಯೆಲ್ಲ ಎದ್ದು ಬಗ್ಗಿ ಓಡಾಡಿ ಹೈರಾಣಾಗಿದ್ದಳು. ರಾತ್ರಿಯ ಕತ್ತಲಲ್ಲಿ ಅದುಮಿಟ್ಟುಕೊಂಡಿದ್ದ ಅವಳೆಲ್ಲ ಭಾವನೆಗಳು ಬೆಳಗಾಗುತ್ತಿದ್ದಂತೆ ಸಿಡಿದು ಸದ್ದು ಮಾಡತೊಡಗಿದವು.
ಎ.ಬಿ. ಪಚ್ಚು ಬರೆದ ಈ ಭಾನುವಾರದ ಕತೆ “ಮದಿಮಾಲ್”
ಮದಿಮಾಲ್ ನೆನಪಾದರೆ ಯಾಕೋ ನನ್ನ ಕಾಲ್ಗುಣದಿಂದಾಗಿ ಸಾಲು ಸಾಲಾಗಿ ಸತ್ತು ಮಲಗಿದವರೇ ನೆನಪಾಗುತ್ತಿದ್ದರು. ಮೊದಲ ಬಾರಿಗೆ ಆಸೆಯಿಂದ ಗಂಡನ ಮನೆಗೆ ಮದಿಮಾಲ್ ಮೀನು ತೆಗೆದುಕೊಂಡು ಹೋದಾಗ ಅತ್ತೆ ಅದನ್ನು ತೊಟ್ಟೆ ಸಹಿತ ಅಂಗಳಕ್ಕೆ ಬಿಸಾಡಿದ್ದು, ಜಿಮ್ಮಿ ನಾಯಿ, ಮಂಗು ಬೆಕ್ಕು ಆ ಮದಿಮಾಲ್ ಮೀನನ್ನು ಕಚ್ಚಿಕೊಂಡು ಓಡಿ ಹೋದದ್ದು, ಈ ದೃಶ್ಯಗಳೆಲ್ಲವೂ ಕಣ್ಣಿಗೆ ಕಟ್ಟಿದಂತೆಯೇ ಆ ನಂತರವೂ ನನ್ನ ಜೊತೆ ಶಾಶ್ವತವಾಗಿ ಉಳಿದು ಹೋದವು.
ಎ.ಬಿ. ಪಚ್ಚು ಬರೆದ ಈ ಭಾನುವಾರದ ಕತೆ “ಮದಿಮಾಲ್” ನಿಮ್ಮ ಓದಿಗೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಚಿದಾನಂದ ಸಾಲಿ ಕತೆ
ಪಿಯುಸಿಯಲ್ಲಿ ಇಮಾಂಸಾಬಿಯ ರೂಮಿನಲ್ಲಿ ಅದ್ಹೇಗೋ ಹೊಂದಿಸಿಕೊಂಡು ನಿಯರ್ ಫಸ್ಟ್‌ಕ್ಲಾಸ್‌ನಲ್ಲಿ ಪಾಸೇನೋ ಆದೆ. ಆದರೆ ಅವನು ಫೇಲಾದ ಹೊಟ್ಟೆಕಿಚ್ಚಿಗೆ ನನ್ನ ಪಾಲಿಗೆ ರೂಮಿನ ಬಾಗಿಲು ಮುಚ್ಚಿಕೊಂಡಿತು. ನಿತ್ಯ ಮನೆಯಲ್ಲಿ ಅಪ್ಪನ ಮತ್ತಿನ ಬಡಬಡಿಕೆಗಳು, ಅದಕ್ಕೆ ಪ್ರತಿಯಾಗಿ ಅಮ್ಮನ ಬೈಗುಳಗಳು ನನ್ನನ್ನು ಚಿತ್ರಹಿಂಸೆಗೆ ಈಡು ಮಾಡಿದವು. ಎದುರಿಗೆ ಕಲ್ಲುಗೋಡೆಯಂತೆ ಇಂಜಿನಿಯರಿಂಗ್. ಇಷ್ಟೆಲ್ಲದರ ನಡುವೆ ಸೋತು ಸುಣ್ಣಾಗಿ ಹೋಗಿದ್ದವನಿಗೆ ಕಾಲೇಜಿನಲ್ಲಿ ಸುರೇಶ್ ಪರಿಚಯವಾದ.
ವಿಜಯಾ ಮೋಹನ್ ಬರೆದ ಈ ಭಾನುವಾರದ ಕತೆ
ಅವಳು ಜೀವ್‌ಮಾನದಾಗೆ, ಅಷ್ಟೊಂದು ಬಳೆ ತೊಟ್ಟುಕೊಂಡಿರ್‍ಲಿಲ್ಲ. ಅವ್ವನ ತವರಲ್ಲಿ, ಅವಳ ಬೆನ್ನಿಂದಲ, ತಮ್ಮನೊಬ್ಬನು ಮೇಷ್ಟ್ರಾಗಿದ್ದವನು. ಊರ ಮಾರಮ್ಮನ ಜಾತ್ರೆಯೊಂದಕ್ಕೆ ಕರಿಸಿಕೊಂಡು. ಏಷ್ಟೊ ವರುಷಕ್ಕೆ ಬಂದಿದ್ದೀಯಕ್ಕ, ಮುಂದುಕ್ಕೆ ಇರೋವರ್ಯಾರೊ? ಸಾಯೋವರ್ಯಾರೊ? ನೀನು ತೊಟ್ಟೇ ತೊಟ್ಟುಕೊಬೇಕೆನುತ, ಬಳೆ ಮಲಾರದವನನ್ನ ಕರೆಸಿ. ಒಂದೊಂದು ಕ್ಯೆಗೆ ಎರೆಡೆರೆಡು ಡಸನ್ನಿನಷ್ಟು, ನೂರು ರೂಪಾಯಿನ ಬಳೆ ತೊಡಿಸಿ, ನೆಟ್ಟಗಿನ್ನ ಹದಿನೈದು ದಿನವಾಗಿರಲಿಲ್ಲ. ಏನು ತಗದ್ರು ತಗೀತೀನಿ, ಕ್ಯೆಯ್ಯಾಗಳ ಬಳೆ ಮಾತ್ರ ಬಿಚ್ಚಲ್ಲ ಸಾ, ನೋಡಿಸಾ ಮುತ್ಯೆದೆ ಬಳೆ ಬಿಚ್ಚುಸಬ್ಯಾಡಿ ಸಾ, ಒಡಿಬ್ಯಾಡ್ರಿ ಸಾ, ಅನುತ ಇನ್ನಿಲ್ಲದಂಗೆ ಬೇಡಿಕೊಂಡ್ಲು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಛಾಯಾ ಭಟ್ ಕತೆ
ಮದುವೆಯಾಗಿ ಬಂದಮೇಲೆ ಮಾಕುಚಿಕ್ಕಿಯ ಮಾತು ಸೊಟ್ಟಗಾಗಲು ಬಹಳ ದಿನ ಹಿಡಿಸಲಿಲ್ಲ, ಕರಿಮಣಿ ಕಟ್ಟಿಕೊಂಡವರೆಲ್ಲ ಉರಿದು ಬೀಳುವುದು ಸಂಪ್ರದಾಯವಿರಬೇಕು ಅಂತ ಆಶ್ಚರ್ಯ ಪರಮುಗೆ. ತನ್ನ ಹಡೆದಬ್ಬೆಯ ಪ್ರೀತಿಯಲ್ಲಿಯೂ ಹೆಚ್ಚೇನೂ ಓಲಾಡಿದವನಲ್ಲ ಪರಮು. ಅಬ್ಬೆ ವರ್ಷಕ್ಕೊಮ್ಮೆ ಹೊಟ್ಟೆ ಡುಬ್ಬ ಮಾಡಿಕೊಂಡು ಹೆರಿಗೆ ನೋವು ಬಂದೊಡನೆ ಕೊಂಕಣಿ ಅಜ್ಜಿಗೆ ಬರ ಹೇಳುವುದು, ಒಂದಲ್ಲ ಒಂದು ಕಾರಣಕ್ಕೆ ಮಗು ಹುಟ್ಟುತ್ತಲೇ ಕೈಲಾಸ ವಾಸಿಯಾಗುವುದು ಇದ್ದಿದ್ದೇ. ಮಗುವಿಲ್ಲದ ಬಾಳಂತನದಲ್ಲಿ ಅಳುವ ಅಬ್ಬೆ, ಕಂಡವರ ಶಿಶುಗಳಿಗೆಲ್ಲ ಹಾಲೂಡಿಸಿ ಎದೆ ಭಾರ ಕಳೆದ ಮೇಲೆ ಮತ್ತೆ ಮೊದಲಿನಂತೆ…
ಕಾವ್ಯಾ ಕಡಮೆ ಬರೆದ ಈ ಭಾನುವಾರದ ಕತೆ
ಮಾತನಾಡದೇ ಹೊರಹೋದವಳ ಬೆನ್ನು ದಿಟ್ಟಿಸುತ್ತ ತಟಸ್ಥಳಾಗಿ ಆಫೀಸಿನ ಸೋಫಾದ ಮೇಲೆಯೇ ಕುಸಿದುಬಿಟ್ಟೆ. ನನಗರಿವಿಲ್ಲದೇ ಎದೆಯ ಮುಂದೆ ಕೈಕಟ್ಟಿಕೊಂಡು ಕುಳಿತೆ. ಪ್ರಕಟವಾಗಿರುವ ಸಂದರ್ಶನಗಳು, ನ್ಯೂಸ್ ಪ್ರತಿಕ್ರಿಯೆಗಳನ್ನೆಲ್ಲ ಇನ್ನೊಮ್ಮೆ ತೆಗೆದು ನೋಡಿದೆ. ಎಲ್ಲಿಯೂ ಈ ಮ್ಯಾರಥಾನಿನಲ್ಲಿ ಟಾಪ್‌ಲೆಸ್ ಓಡುವುದಿಲ್ಲ ಅಂತ ನಾನು ಸ್ಪಷ್ಟವಾಗಿ ಹೇಳಿರಲಿಲ್ಲ. ಎಲ್ಲಿಯೂ ಆ ಮಾತೇ ಬಂದಿರಲಿಲ್ಲ. ಸಾವಿರದ ಸಂಖ್ಯೆಯಲ್ಲಿ ಹೆಂಗಸರು ತೆರೆದೆದೆಯಲ್ಲಿ ಓಡುವುದು, ಇದನ್ನು ಸಾಧ್ಯವಾಗಿಸಿದ್ದಕ್ಕೆ ಎಲ್ಲರೂ ನನ್ನನ್ನು…