ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಆಶಾ ಜಗದೀಶ್ ಬರೆದ ಕಥೆ
ಅದು ವಯಸ್ಸಾದ ತಂದೆ, ತಾಯಿ, ಮಡದಿ, ಮಕ್ಕಳಿದ್ದ ತುಂಬು ಕುಟುಂಬ, ಈ ಜೇನಿನ ಗೂಡಿಗೆ ಕಲ್ಲು ಹೊಡೆದುಬಿಟ್ಟೆನಾ! ನಡುಗಿ ಹೋಗಿದ್ದೆ. ಲಕ್ಷ್ಮಿ ಗುದ್ದಾಡಿದಳು, ಹಾದಿಬೀದಿ ರಂಪ ಮಾಡಿದಳು, ಯಾವಾಗ ನನ್ನ ಸೀರೆ, ಪೋಲ್ಕ ಜಗ್ಗಾಡಿ ನನ್ನ ಮೇಲೆ ಕೈ ಎತ್ತಿದಳೋ, ಮಾದೇವ ಕಡ್ಡಿ ತುಂಡು ಮಾಡಿಬಿಟ್ಟ.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಆಶಾ ಜಗದೀಶ್ ಬರೆದ ಕತೆ ‘ಎಲೆ ಉದುರುವ ಕಾಲಕ್ಕೆʼ
ಮುನವ್ವರ್ ಬರೆಯುವ ʼಡರ್ಬನ್ ಇದಿನಬ್ಬʼ ಕಾದಂಬರಿ ಇಂದಿನಿಂದ…
ನೇತ್ರಾವತಿ ದಂಡೆಯ ಅಜಿಲಮೊಗರು ಎಂಬ ಊರಿನ ಇದಿನಬ್ಬನಿಗೆ, ಆಫ್ರಿಕಾದ ಡರ್ಬನ್ ನಂಟು ಅಂಟಿದ ಕತೆಯಿದು. ನದಿಯ ಹರಿವಿನಂತೆ ಸಾಗುವ ಈ ಕಥೆಯಲ್ಲಿ ಅನಿರೀಕ್ಷಿತ ತಿರುವುಗಳು ಓದಿನ ಕುತೂಹಲವನ್ನು ಹೆಚ್ಚಿಸುತ್ತವೆ. ಕಥೆ ಹೇಳುತ್ತ ಗುಲಾಮ ಪದ್ಧತಿಯಲ್ಲಿರುವ ಕ್ರೌರ್ಯದ ಅನಾವರಣ ಮಾಡಿರುವ ಕಾದಂಬರಿಕಾರ ಮುನವ್ವರ್ ಜೋಗಿಬೆಟ್ಟು, ಬರವಣಿಗೆಯನ್ನು ಬಹಳ ಪ್ರೀತಿಸುತ್ತಾರೆ.”
ಅಕ್ಷತಾ ಕೃಷ್ಣಮೂರ್ತಿ ಬರೆದ ಭಾನುವಾರದ ಕತೆ ‘ಅಬ್ಬೋಲಿ’
”ಕಾಳಿ ನದಿ ಆಣೆಕಟ್ಟಿನ ಕೆಲಸ ನೋಡಿಕೊಳ್ಳುವ ಅಧಿಕಾರಿಗಳು ರಾತ್ರಿ ಊಟಕ್ಕೆ ಬರುತ್ತಿದ್ದರು. ಅವರಿಗೆ, ‘ಒರಿಜನಲ್ಲೂ ಮತ್ತೆಲ್ಲೂ ಸಿಗದು.ತಾಜಾ ಮಾಲು’ ಎಂದು ಕಳ್ಳು ಮಾರಿ ಹಣ ವಸೂಲಿ ಮಾಡುತ್ತಿದ್ದ. ಅದರ ಅರ್ಧ ಪಾಲು ಸಡಗೋನಿಗೂ ಹೋಗುತ್ತಿತ್ತು.ಇಂತಹುದೆಲ್ಲ ವ್ಯವಹಾರ ಮಾಡುತ್ತಾ ಸಡಗೋ ಕಳ್ಳಿನ ದಾಸನಾದ. ಡಿಸೆಂಬರನಿಂದ ಫೆಬ್ರುವರಿಯವರೆಗು ಸಿಗುವ ಕಳ್ಳು ಕುಡಿಯುತ್ತ ಕಾಡಿನ ಯಾವುದೊ ಮರದ ಅಂಚಲ್ಲಿ…”
ಕ್ರೌರ್ಯ-ಹಿಂಸೆಯ ಅನಾವರಣಕ್ಕೆ ಕಾರಣವೇ ಬೇಕಿಲ್ಲ
ಶಶಿಧರ್ ಹಾಲಾಡಿ ಅವರು ಬರೆದ ‘ಕಾಲಕೋಶ’ ಕಾದಂಬರಿಯ ಹರವು 1947 ರಿಂದ ಪ್ರಾರಂಭವಾಗಿ 1984ರ ವರೆಗೂ ಮುಂದುವರೆದಿದೆ. 2002ರ ಗುಜರಾತ್ ಹಾಗೂ ಅದಕ್ಕೂ ನಂತರ ಬರಬಹುದಾದ ಅನೇಕ ವಿಪ್ಲವಗಳ ಕುರಿತಾದ ಮುನ್ಸೂಚನೆಯೂ ಈ ಕಾದಂಬರಿಯಲ್ಲಿದೆ. ಮನುಷ್ಯ ಮೂಲತಃ ಸಂಘಜೀವಿ ಎನ್ನುವದಕ್ಕೇ ಅನುಮಾನ ಬರುವ ಅನೇಕ ಸಂಗತಿಗಳನ್ನು ಇಂದು ನಾವು ಜನಾಂಗೀಯ ಹಿಂಸೆಯಲ್ಲಿ ಕಾಣುತ್ತೇವೆ. ಕಥಾನಾಯಕನ..”
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಅನುಪಮಾ ಪ್ರಸಾದ್ ಬರೆದ ಕಥೆ
“ಗೆಯ್ಮೆ ಮಾಡುತ್ತಲೇ ಬದುಕು ಕಟ್ಟಿಕೊಂಡವನು ಜಯಂತ ಪೂಜಾರಿ. ಶಾಲಾ ದಿನಗಳಿಂದಲೇ ಕಬಡ್ಡೀ ಜಯಂತ ಎಂದೇ ಹೆಸರು ಪಡೆದವನು. ಅವನಿದ್ದಲ್ಲಿ ಎಂತಹ ಜಡಬರತನೂ ಪುಟಿದೇಳಲೇಬೇಕು ಅಂತಹ ಪಾದರಸ. ದೇವ ನಗರಿಯಿಂದ ಹತ್ತು ಮೈಲು ದೂರದ ಏಯ್ಡೆಡ್ ಹೈಸ್ಕೂಲ್‌ನಲ್ಲಿ ದಿನ ಗುತ್ತಿಗೆಗೆ ಪಿ.ಟಿ. ಮೇಷ್ಟ್ರಾಗಿ ಸೇರಿದಂದಿನಿಂದ ವಿದ್ಯಾರ್ಥಿಗಳನ್ನು ಕಂಬಳದ ಕೋಣಗಳಂತೆ ಹುರಿಗೊಳಿಸುತ್ತಾನೆಂದುಪ್ರಸಿದ್ದಿ ಪಡೆದಿದ್ದ.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಅನುಪಮಾ ಪ್ರಸಾದ್ ಬರೆದ ಕಥೆ ‘ಕಾಳಿಂದಿ ಮಡು’
ಬೆನ್ನ ಮೇಲೆ ಇಮಾರತಿನ ಭಾರ; ಒಡಲೊಳಗೊಂದು ಪುಟ್ಟ ಝರಿ
“ನಿನ್ನ ಹೆಸರೇನು?” ಎಂದು ಸಂತೆಯಲ್ಲಿ ತನ್ನ ಹೆಸರು ಕೇಳಿದ ತರುಣಿ ಬ್ಲಿಮುಂಡಾಳ ಹಿಂದೆ ಬಲ್ತಸಾರ್ ನಡೆದು ಬಂದಿದ್ದಾನೆ. ಆಕೆಯ ಮನೆಯಲ್ಲೇ ಇಬ್ಬರೂ ಒಂದಾಗಿ ಜೀವನ ನಡೆಸುತ್ತಿದ್ದಾರೆ. ಮೊದಲ ದಿನವೇ ಬ್ಲಿಮುಂಡಾಳ ವಿಚಿತ್ರ ಅಭ್ಯಾಸವನ್ನು ಬಲ್ತಸಾರ್ ಕಾಣುತ್ತಾನೆ. ರಾತ್ರಿಯೇ ಹಾಸಿಗೆಯ ಪಕ್ಕದಲ್ಲಿ ಬ್ರೆಡ್ಡಿನ ತುಂಡೊಂದನ್ನು ತೆಗೆದಿಟ್ಟುಕೊಂಡು ಮುಂಜಾನೆ ಕಣ್ತೆರೆಯುವ ಮೊದಲೇ ಬ್ಲಿಮುಂಡಾ ಆ ಬ್ರೆಡ್ಡನ್ನು ತಿಂದು ಮುಗಿಸಿಯೇ ಕಣ್ಬಿಡುತ್ತಾಳೆ.”
1998ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಪೋರ್ಚುಗೀಸ್ ಭಾಷೆಯ ಬರಹಗಾರ…
ಅಬ್ದುಲ್ ರಶೀದ್ ಬರೆದ ಈ ಭಾನುವಾರದ ಕಥೆ “ಕಲಗಚ್ಚು”
“ಆಗಲೂ ಹೀಗೇ ಇದ್ದಳು. ಸಂಜೆಗತ್ತಲ ಹೊತ್ತಲ್ಲಿ ನೂರು ಆಶೆಗಳನ್ನು ಹುಟ್ಟಿಸುವವಳು ಒಂದು ಸಂಜೆ ಇರುಳು ತಲೆಯ ಮೇಲಿದ್ದ ಕಲಗಚ್ಚಿನ ಬಕೆಟ್ಟನ್ನು ನನ್ನ ಮೇಲೆ ಬಗ್ಗಿಸಿದ್ದಳು. ಆಮೇಲೆ ಎಂದೂ ಬಂದಿರಲಿಲ್ಲ. ಮಾತೂ ಬಿಟ್ಟಿದ್ದಳು. ಗುರುತೇ ಇಲ್ಲದವಳಂತೆ ದೂರವಾದಳು. ನಾನೂ ಊರು ಬಿಟ್ಟು ದೂರ ಎಲ್ಲೆಲ್ಲೋ ಹೋದೆ. ಏನೆಲ್ಲಾ ಆದೆ. ಅವಳ ಮೇಲೇ ಮೊದಲ ಕತೆ ಬರೆದು ಹರಿದು ಹಾಕಿದೆ. ಆಮೇಲೆಯೂ ಕಥೆಗಳನ್ನು ಬರೆದೆ. ಕವಿಯೂ ಆದೆ.”
ಸೀಮಾರೇಖೆಯಿಲ್ಲದ ಮೂಢನಂಬಿಕೆಗಳು……!
“ಏವ್‌ಬರಿ ಸುತ್ತಮುತ್ತ ಕ್ರೈಸ್ತ ಜನಾಂಗದವರೆ ಬದುಕುತ್ತಿದ್ದರು, ಯಾರಾದರು ಸತ್ತಾಗ ಅವರ ಮನೆಯವರು ಅಂತ್ಯಸಂಸ್ಕಾರವನ್ನು ಮುಗಿಸಿ ಏವ್‌ಬರಿಯ ಚರ್ಚಿಗೆ ಬಂದು ಪೂಜೆ ಸಲ್ಲಿಸುತ್ತಿದ್ದರು. ಕೆಲವರ ಮನೆಯಲ್ಲಿ ಸತ್ತವರ ಹೆಸರಿನ ಪೂಜೆ ಸಲ್ಲಿಸಿದ ಮೇಲೆಯೂ ಕೂಡ ಆತ್ಮ ಕಾಣಿಸಿದ ಅನುಭವವಾಗಿದೆ. ಅಂಥಹ ಸಮಯದಲ್ಲಿ ಚರ್ಚಿನ ಪಾದ್ರಿಯ ಸಲಹೆಯ ಮೇರೆಗೆ ಒಂದು ಪೂಜಿಸಿದ ಯಂತ್ರವನ್ನು ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಅದಾಗಿಯೂ ಸುತ್ತ ಮುತ್ತಲಿನ ಕೆಲವು ಊರುಗಳಲ್ಲಿ ಆತ್ಮಗಳು…”
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಎಚ್. ಎಸ್. ಅನುಪಮಾ ಬರೆದ ಕಥೆ
“ಈಗ ನನಗೆ ಊಟಮಾಡುವ ಆಸೆ ಹುಟ್ಟಿದೆ ಯುವರ್ ಆನರ್. ನಾನು ಗೆದ್ದು ಉಪವಾಸ ನಿಲಿಸಬೇಕು. ಆಯಿ ಮಾಡುವ ಮೀನ್‍ಫ್ರೈ, ಪತ್ರೊಡೆ, ತಂಬ್ಳಿ, ದೊಡ್ನ ಎಲ್ಲ ನೆನಪಾಗುತ್ತಿದೆ. ಅವುಗಳ ರುಚಿ ಮರೆಯುವ ಮೊದಲು ಎಲ್ಲರ ಜೊತೆ ಕೂತು ಉಣ್ಣಬೇಕು ಅನಿಸುತ್ತಿದೆ. ಅಷ್ಟೇ ಅಲ್ಲ, ನಾನು ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿರುವೆ. ಅವನ ಮದುವೆಯಾಗಬೇಕು. ಮಕ್ಕಳ ಹೆರಬೇಕು. ಸಂಸಾರ ಕಟ್ಟಿಕೊಳ್ಳಬೇಕು.”