ಈ ಕಡಲು ಹೆಂಗಸಾ… ಗಂಡಸಾ….: ನಾಗಶ್ರೀ ಶ್ರೀರಕ್ಷ ಬರೆದ ಕಥೆ
“ಟೆರೇಸಿನ ಮೇಲೆ ತನ್ನ ಉದ್ವಿಗ್ನ ಕಥೆಗಳನ್ನು ಹೇಳುತ್ತಿದ್ದ ನಕುಲನ ಭುಜದ ಮೇಲೆ ಹಾರುತ್ತಿದ್ದ ನೀಳಕೂದಲು, ಕೆಳಗಿಂದ ಕೇಳುತ್ತಿದ್ದ ಮಕ್ಕಳ ಕೇಕೆ, ಮುಳಗುತ್ತಿರುವ ಸೂರ್ಯನನ್ನು ಹಿಂದಿಕ್ಕಿ ಕೆಂಪು ಬೆಳಕಿನಲ್ಲಿ ಪೂರ್ವದ ಕಡೆ ಹಾರುತ್ತಿರುವ ಹೆಸರು ಗೊತ್ತಿಲ್ಲದ ಹಕ್ಕಿಗಳ ಹಸಿವು ಬಾಯಾರಿಕೆ, ಬಣ್ಣಬಣ್ಣದ ರೆಕ್ಕೆಗಳ ಮೈಥುನದ ಆಸೆಗಳು, ಮೆಲ್ಲಗೆ ಪೂರ್ವದ ಕಡೆಯಿಂದ ಉದಯಿಸುತ್ತಿರುವ ಚಂದ್ರನ ಬೆಳಕ ಜೊತೆಯಲ್ಲೇ ಬೀಸಿ ಬರುತ್ತಿರುವ ತಂಗಾಳಿ..”
ರಾಜು ಹೆಗಡೆ ಬರೆದ ಸಣ್ಣ ಕಥೆ ʼಲಾಕ್ ಡೌನ್ʼ
“ಗಿರಿಜವ್ವ ಕೆಲಸದಲ್ಲಿ ಹುಷಾರ್ ಇದ್ದಳು. ಯಾವುದಕ್ಕೆ ಹೋದರೂ ಸೈ ಅನಿಸಿಕೊಳ್ಳಬಲ್ಲಳು. ಆರಂಭದಲ್ಲಿ ನಾಲ್ಕಾರು ಮನೆಗಳಿಗೆ ರೊಟ್ಟಿ ಮಾಡಲು ಹೋದಳು. ನಂತರ, ಹತ್ತಿರದ ಖಾನಾವಳಿ ಹಿಡಿದಳು. ಆಮೇಲೆ ಧರ್ಮಸ್ಥಳ ಸಂಘದಲ್ಲಿ ಸಾಲ ಮಾಡಿ ಸಣ್ಣ ತರಕಾರಿ ವ್ಯಾಪಾರ ಶುರು ಮಾಡಿದಳು. ಮೊದಮೊದಲು ಅಲ್ಲಿ ಇಲ್ಲಿ ರಸ್ತೆ ಬದಿಯಲ್ಲಿ ಕುಳಿತು ಮಾರುತ್ತಿದ್ದಳು. ನಂತರ ಯಾರನ್ನೋ ಹಿಡಿದು ಮೇನ್ ಮಾರ್ಕೆಟ್ ಆದ ಬಿಡ್ಕಿ ಬಯಲಿಗೆ ಹೋದಳು. ಹಾಗೆಂದು ತಾನು ರೊಟ್ಟಿ ಮಾಡುವ ಮನೆಗಳನ್ನಾಗಲಿ ಖಾನಾವಳಿಯನ್ನಾಗಲಿ ಬಿಡಲಿಲ್ಲ. ತಾಯಿಯ ಕಳಿಸಿದಳು. “
ಎನ್.ಸಿ. ಮಹೇಶ್ ಬರೆದ ಈ ಭಾನುವಾರದ ಕಥೆ “ಅಥವಾ…”
“ಆಚಾರಿಯ ಜೇಬನ್ನ ಹಣ ಅಷ್ಟೊಂದು ತುಂಬಿಕೊಳ್ಳುತ್ತಿರುವುದು ಹೇಗೆ ಎಂದು ರುದ್ರಯ್ಯ ತನ್ನ ಶರ್ಟ್ ಜೇಬಿನಲ್ಲಿರುವ ಚಿಲ್ಲರೆ ತಡಕುವಾಗ ಕೇಳಿಕೊಂಡ. ಅರಿಶಿನದ ಹಾಲು ವರ್ಕ್ ಆಗದಿದ್ದರೂ ರಮ್ ಬೆಳಗ್ಗೆವರೆಗೂ ಕೈ ಕೊಡುವುದಿಲ್ಲ ಅನಿಸಿ ದುಡ್ಡಿನ ಲೆಕ್ಕಾಚಾರ ಹಾಕುತ್ತಿದ್ದ ವೇಳೆ ಆಚಾರಿಯ ಉಬ್ಬಿದ ಜೇಬು ಮತ್ತೆ ನೆನಪಾಗಿತ್ತು. ಮಗನಿಗೆ ಗೊತ್ತಾಗದಂತೆ ಚೂರುಪಾರು ಉಳಿಸಿ ಬ್ಯಾಂಕಲ್ಲಿ ಇಟ್ಟಿರುವ ಹಣ ತೆಗೆದರೆ ಅದು ಹೇಗೆ…”
ಸರಿತಾ ನವಲಿ ಬರೆದ ಈ ಭಾನುವಾರದ ಕಥೆ “ಅಂದ-ಛಂದವಿಲ್ಲದ ಗೊಂಬಿ”
“ಜ್ವರದ ತಾಪದಿಂದ ನರಳುತ್ತಿದ್ದ ಅವ್ವಕ್ಕಗ ಹಣಿ ಮ್ಯಾಲೆ ತಣ್ಣೀರಿನ ಪಟ್ಟಿ ಹಾಕಿದ್ರಾತು ಅಂತ ಹಳೇ ಬಟ್ಟಿ ತುಂಡನ್ನು ಹುಡುಕಲು ಕಪಾಟಿನಲ್ಲಿ ತಡಕಾಡಿದ ಗಂಗವ್ವಜ್ಜಿಯ ಕೈಗೆ ಹೋದವರ್ಷ ಪಂಚಮಿಹಬ್ಬಕ್ಕಂತ ಹೊಲಿಸಿದ ಅವ್ವಕ್ಕನ ಲಂಗ ಸಿಕ್ಕಿತು. ಒಂದೆರಡೇ ಸಲ ಹಾಕಿಕೊಂಡಿದ್ದ ಲಂಗದ ಒಂದು ಭಾಗವನ್ನು ಕತ್ತರಿಯಿಂದ ಕತ್ತರಿಸಿದ್ದು ಕಂಡು ಗಂಗವ್ವಜ್ಜಿಯ ಎದಿ ಧಸಕ್ಕೆಂದಿತು. ಎಪ್ಪತ್ತು ವರ್ಷ ವಯಸ್ಸಿನ ಅನುಭವಿ ಮುದುಕಿ ಗಂಗವ್ವಗ ಏನೋ ಅನುಮಾನ ಬಂದು…”
ಕ್ರಾಂತಿಯಲ್ಲೊಂದು ಪ್ರೀತಿ ಮಾರ್ಗ ತೋರಿಸಿದ ಫೈಜ್: ಮಹಾಂತೇಶ ಹೊದ್ಲೂರ ಬರೆದ ಲೇಖನ
“ಫೈಜ್ ಕ್ರಾಂತಿ ಮಾಡುತ್ತಾ, ಕ್ರಾಂತಿಯೊಳಗೆ ಪ್ರೀತಿಯನ್ನು ತೋರಿಸಿದವರು. ಕ್ರಾಂತಿಗೂ ಪ್ರೀತಿ ಪಾಠ ಹೇಳಿಕೊಟ್ಟವರು ನನ್ನ ಪ್ರೀತಿಯ ಫೈಜ್. ಅವರು ಜೈಲಿಗೆ ಹೋಗಿ, ಬಿಡುಗಡೆಗೊಂಡು, ಮತ್ತೆ ಜೈಲಿಂದ ಜೈಲಿಗೆ ಸ್ಥಳಾಂತರಗೊಂಡು, ಬಜಾರಿನ ಬೀದಿಯಲ್ಲಿ ಅವರನ್ನು ಮೆರವಣಿಗೆ ಮಾಡಿದರೂ ಸಹ ಅವನ ಮುಖದಲ್ಲಿ ಬುದ್ಧನ ನಗು ಕಾಣತ್ತಾ ಇತ್ತು. ಲೆನಿನ್ ಶಾಂತಿ ಪ್ರಶಸ್ತಿ ಬಂದಾಗಲೂ ‘ಇದು ನನಗಲ್ಲ…”
ನಂದಿನಿ ಹೆದ್ದುರ್ಗ ಬರೆದ ಈ ಭಾನುವಾರದ ಕತೆ “ಅಸ್ತು”
“ತುರ್ತು ಕೆಲಸದ ನೆಪವೊಡ್ಡಿದವನನ್ನು ಮುದ್ದು ಪ್ರೇಮದಲಿ ಗದ್ದರಿಸಿ ನಾಳೆ ಬರುವಾಗ ನಮ್ಮ ಮೊದಲು ಭೇಟಿಯಲ್ಲಿ ನೀನು ತೊಟ್ಟ ‘ಬಾದಾಮಿ ಬಣ್ಣದ ಅದೇ ಶರ್ಟು’ ತೊಟ್ಟು ಬರಲು ಅಪ್ಪಣೆ ಮಾಡಿ ಈ ಬದಿಯಿಂದ. ಮುತ್ತು ತೂರಿದವಳ ಪ್ರೇಮಕ್ಕೆ ಸೋತು ಆರು ನಿಮಿಷ ಮಾತಾಡಿ ಯಾವುದೋ ಅರ್ಜೆಂಟ್ ಕರೆ ಬರುತ್ತಿದೆ ಎನ್ನುತ್ತಾ ಫೋನಿಟ್ಟ. ಮತ್ತೆ ಮೊದಲಿನ ದಿನದ ಕಳೆಯಲ್ಲಿ ಸುಹಾ..!! ʼಅರೆ.. ನಾನಷ್ಟೇ ಅವನಿಗೆ ಅಂಗಿಯ ಬಣ್ಣ ಹೇಳಿದೆ.. ನಾನೇನು ತೊಡಬೇಕು’.”
ರಾಗಂ ಪುಸ್ತಕದ ಕುರಿತು ಮುರ್ತುಜಾಬೇಗಂ ಕೊಡಗಲಿ ಬರೆದ ಲೇಖನ
“ಕೊಂಚ ಮನ ತಹಬದಿಗೆ ಬಂದಂತಾಗಿ, ಗೆಳೆಯರೊಬ್ಬರ ಮನೆಗೆ ಹೋಗಿ, ಅಲ್ಲಿದ್ದ ಪುಟ್ಟ ಕಂದಮ್ಮಗಳ ಬೊಗಸೆ ತುಂಬಿಸಿಕೊಂಡು ಮುದ್ದಾಡಿದೆ. ಮಗಳಂತೆ ಕಾಣುವ ಅಪ್ಪ-ಅಮ್ಮನ ಜೊತೆ ಮಾತಾಡಿ, ಕೀಟ್ಸ್ ನ ಸಹವಾಸದಿಂದ ಹೊರಬಂದೆ. ‘ಯಪ್ಪಾ, ಬದುಕಿದೆ’ ಅಂತ ನಿಟ್ಟುಸಿರು ಬಿಟ್ಟೆ. ಮಹಾಶಯ ಕೈಬಿಡಲೇ ಇಲ್ಲ. ಮರುದಿನ ಮತ್ತೆ ಅವನದೆ ಕನವರಿಕೆ, ಮುಂದೇನಾಯಿತು? ನಮ್ಮ ದೋಸ್ತನಿಗೆ ಎಂಬ ಹಳವಂಡ. ಮತ್ತೆ ತೆಕ್ಕೆಗೆಳೆದುಕೊಂಡು ಅವನೊಂದಿಗೆ ಮಾತಾದೆ”
ಪ್ರಕಾಶ್ ಪೊನ್ನಾಚಿ ಬರೆದ ಈ ವಾರದ ಕಥೆ “ಪರಿಧಿ”
“ಬೆಳಗೆದ್ದರೆ ಯುಗಾದಿ ಹಬ್ಬ, ಊರಲ್ಲೆಲ್ಲಾ ಎತ್ತುಗಳನ್ನ ಸಿಂಗರಿಸಿ ನೇಗಿಲು ನೊಗವನ್ನೆಲ್ಲಾ ಸ್ವಚ್ಚಗೊಳಿಸಿ ಭೂಮಿ ತಾಯಿಗೆ ಒಂದೆರಡು ಸುತ್ತು ಉಳುಮೆ ಮಾಡಿ ಪೂಜೆ ಸಲ್ಲಿಸಿ ಆ ವರ್ಷದ ವ್ಯವಸಾಯಕ್ಕೆ ಪಾದಾರ್ಪಣೆಗೆ ಅಡಿಗಲ್ಲು ಹಾಕುವುದು ಮಾಮೂಲು. ಅಪ್ಪ ಎಂದಿನಂತೆ ಕೆಬ್ಬೆ ಹೊಲದಲ್ಲಿ ಎತ್ತುಗಳನ್ನು ಕೆಬ್ಬೆ ಹೊಲದಲ್ಲಿ ಎತ್ತುಗಳನ್ನು ಸಿಂಗರಿಸಿ ಹೊನ್ನೇರು ಕಟ್ಟಲು ಅಣಿ ಮಾಡುತ್ತಿದ್ದರು. ನಾನು, ಅಕ್ಕ ಹೂ, ವಿಭೂತಿ, ನೀರುಗಳನ್ನು ಹಿಡಿದು ಅಪ್ಪನ ಪೂಜೆ, ಮೊದಲ ಏರಿನ ಸುತ್ತು ನೋಡಲು ಕಾತುರದಿಂದ ಅಪ್ಪನ ..”
ದೀಪಾ ಫಡ್ಕೆ ಬರೆದ ಈ ಭಾನುವಾರದ ಕಥೆ: ಸಂವಾದಿ
“ಸಂಜನಾಳ ಬೆಳಗುಗಳು ನಂತರ ಮನೋಹರನ ಮೆಸೇಜುಗಳಿಲ್ಲದೇ ಆರಂಭವಾಗುತ್ತಿರಲಿಲ್ಲ. ಬೆಳ್ಬೆಳಿಗ್ಗೆ ಗುಲಾಬಿಗಳ ಗುಛ್ಛ ಬಂದರೆ ನಂತರ ಮೆಸೇಜುಗಳ ಸುರಿಮಳೆ. ಇಡೀ ಪುರಾಣ ಯಾವುದೇ ಮುಚ್ಚು ಮರೆಯಿಲ್ಲದೇ ಹೇಳಿಕೊಳ್ಳುತ್ತಿದ್ದ. ಐಐಎಸ್ಸಿಯ ಮೈಕ್ರೋಬಯಾಲಜಿ ವಿಭಾಗದಲ್ಲಿದ್ದ. ಎಂಥ ಸೆಮಿನಾರೇ ಇರಲಿ, ಲೆಕ್ಚರ್ ಡೆಮಾನ್ಸ್ಟ್ರೇಷನ್ ಇರಲಿ. ಮೆಸೇಜು ತಪ್ಪುತ್ತಿರಲಿಲ್ಲ. ಸಂಜನಾಳೇ ಶೂಟಿಂಗ್ ಎಂದೊ ಎಡಿಟಿಂಗ್ ಎಂದೊ ಒಮ್ಮೊಮ್ಮೆ ಬೇಕೂಂತಲೇ ಉತ್ತರಿಸಲು ನಿಧಾನಿಸಿದರೂ ಬೇಸರವಿಲ್ಲದೆ ಇರುತ್ತಿದ್ದ. `”