ಚಿಣ್ಣಪ್ಪನವರ ಕುರಿತ ಪುಸ್ತಕಕ್ಕೆ ಉಲ್ಲಾಸ ಕಾರಂತ್ ಬರೆದ ಮುನ್ನುಡಿ
ಚಿಣ್ಣಪ್ಪನವರು ಹೆಚ್ಚು ವಿದ್ಯಾಭ್ಯಾಸ ಮಾಡಿದವರಲ್ಲ. ಅದರಿಂದ ಒಂದು ರೀತಿಯಲ್ಲಿ ಒಳ್ಳೆಯದಾಯಿತೆಂದೇ ಹೇಳಬೇಕು. ಚಿಕ್ಕ ಮಕ್ಕಳಲ್ಲಿ ನಿಸರ್ಗ-ಪರಿಸರಗಳ ಬಗ್ಗೆ ಅಪಾರ ಕುತೂಹಲವಿರುತ್ತದೆ. ಆ ಕುತೂಹಲವೆಲ್ಲವನ್ನೂ ನಮ್ಮ ಶಾಲೆಗಳ ವಿದ್ಯಾಭ್ಯಾಸ ಕ್ರಮ ಕೊಂದೇಬಿಡುತ್ತದೆ.
ಲೋಕಕೆ ಬಿಡುವಿಲ್ಲ ನಿನ್ನೆ ಚಿಂತಿಸುತಿರಲು: ಶುಭಾ ಎ.ಆರ್. ಬರೆದ ಕತೆ
“ಏಳು ಲಾಖಿ… ಈ ಆಸ್ಪತ್ರೆಯಲ್ಲಿ ಎಷ್ಟೆಂದು ಮಲಗುತ್ತೀಯ ನಡೀ” ಎನ್ನುತ್ತಾ ಜೀತೂ ಮೈಮೇಲೆ ಖಬರಿಲ್ಲದವನಂತೆ ಲಾಖಿಯ ಭುಜ ಹಿಡಿದು ಅಲುಗಾಡಿಸುತ್ತಿದುದನ್ನ ನೋಡಿ ಅಲ್ಲೇ ಓಡಾಡುತ್ತಿದ್ದ ಬಿಳಿಸೀರೆಯ ದಾದಿ ಕನಿಕರಗೊಂಡು “ತಮ್ಮಾ ನೀನು ಎಷ್ಟು ಎಬ್ಬಿಸಿದ್ರೂ ಅವಳಿನ್ನ ಏಳಲಾರಳು, ನೋಡಲ್ಲಿ ನಿನ್ನ ಮಕ್ಕಳು ಕಂಗಾಲಾಗಿ ನಿನ್ನನ್ನೇ ನೋಡ್ತಿವೆ” ಎಂದು ಅವನ ಭುಜ ಹಿಡಿದು ಸಂತೈಸಿದಳು. ಜೀತೂ ಮತ್ತೆ ವಾಸ್ತವದಲ್ಲಿ ಬಿದ್ದ. ಲಾಖಿ ಕ್ಯಾರೇ ಎನ್ನದಂತೆ ಮಲಗಿಯೇ ಇದ್ದಳು.”
ಆಕರ್ಷ ರಮೇಶ್ ಕಮಲ ಪುಸ್ತಕಕ್ಕೆ ಕೇಶವ ಮಳಗಿ ಮುನ್ನುಡಿ
“ನಗರಗಳ ಅನೂಹ್ಯತೆ, ಅವು ಸೃಷ್ಟಿಸುವ ತಲ್ಲಣ ಮತ್ತು ಉಂಟುಮಾಡುವ ಪಲ್ಲಟ, ಅದರೊಳಗೆ ಹೂತಿರುವ ಆದರೆ ಚದುರಿ ಚೆಲ್ಲಾಪಿಲ್ಲಿಯಾಗಿರುವ ಲೋಕ, ನಗರದ ಅಸ್ತವ್ಯಸ್ತತೆಗಳು, ಇವುಗಳ ನಡುವೆಯೇ ಇರಬಹುದಾದ ಅರ್ಥವನ್ನು ಹೊರ ತೆಗೆಯುವ ಸೃಜನಶೀಲ ಹುಡುಕಾಟ ಈ ಕವಿತೆಗಳ ಮೂಲದ್ರವ್ಯವಾಗಿದೆ. ಆ ನಿಟ್ಟಿನಲ್ಲಿ ಆಕರ್ಷ ತನ್ನ ಅವಕಾಶ, ವ್ಯಾಪ್ತಿ ಮತ್ತು ಇಳಿದಾಣಗಳನ್ನು ಈಗಾಗಲೇ ಗುರುತಿಸಿಕೊಂಡಂತೆ ಕಾಣುತ್ತಿದ್ದಾನೆ. ತನ್ನ ಅಭಿವ್ಯಕ್ತಿಗೆ ಬೇಕಾದ ನುಡಿಗಟ್ಟು, ರೂಪಕ, ಪ್ರತಿಮಾಲೋಕಗಳನ್ನು ಅನುಭವ ಮತ್ತು ಭಾಷೆಗಳ ಟಂಕಸಾಲೆಯಲ್ಲಿ ನಿರ್ಮಿಸಿಕೊಳ್ಳುತ್ತಿದ್ದಾನೆ”
ಓಬೀರಾಯನ ಕಾಲದ ಕತೆಗಳ ಸರಣಿಯಲ್ಲಿ ಎಂ. ಎನ್. ಕಾಮತ್ ಬರೆದ ಕತೆ “ಕದ್ದವರು ಯಾರು?”
“ಮಂತ್ರವಾದಿಯೂ ಗಂಡನೂ ಕೇಳುತ್ತಲೇ ಇದ್ದ ಪ್ರಶ್ನೆಗಳಿಗೆ “ನಾನೊಂದೂ ಅರಿಯೆ”, ಎಂದೇ ಉತ್ತರ ಕೊಡುತ್ತಿದ್ದಂತೆ, – ಕುಂಡದ ಬಳಿ ಅವಳು ಕೂತಿರಬೇಕೆಂದಾಯಿತು. ಮಿಂದುಟ್ಟ ಒದ್ದೆ ಸೀರೆಯು ಮೈಮೇಲೆಯೇ ಒಣಗಹತ್ತಿತು. ಕೂದಲು ಕಟ್ಟಿಕೊಂಡಿರಲಿಲ್ಲ, ಒಣಗಲೆಂದು; ಅದೆಲ್ಲ ಬೆಂಕಿಯ ಧಗೆಗೆ ಒಣಗುತ್ತ ಗಾಳಿಗೆ ತೂಗುತ್ತ, ಬೆಂಕಿಯ ನಾಲಿಗೆಗಳನ್ನು ಸೋಕುತ್ತ, ಅಷ್ಟಷ್ಟೇ ತುದಿಗಳು ಸುಡುತ್ತ ಕರಿಯಾದುವು.”
ತಿದ್ದಿಕೊಂಡ ಕನ್ನಡದ ಮನಸ್ಸೊಂದು ಭಿನ್ನಸಂಸ್ಕೃತಿಗಳ ಕಥೆಯಾಗಿಸುವ ಪರಿ
“ಕನ್ನಡದ ಕಥೆ-ಕಾದಂಬರಿಗಳಲ್ಲಿ ವಿಜ್ಞಾನದ ವಸ್ತುಗಳನ್ನು ಬಳಸಿಕೊಳ್ಳುವುದು ಅಪರೂಪವೇನಲ್ಲ, ಆದರೂ ಈ ಬಗೆಯ ಕಥೆಗಳಲ್ಲಿ ಪ್ರಯೋಗಶೀಲತೆಗೆ ಅಪಾರ ಅವಕಾಶವಿದೆ. ಎರಡು ಸಾವಿರದ ಒಂದುನೂರನೆಯ ಇಸವಿಯಲ್ಲಿ ನಡೆಯುವ ಈ ಕಥೆ, ಆದರ್ಶ ಲೋಕವನ್ನಲ್ಲ, ಅವನತಿ ಮುಖದ ನಾಗರಿಕತೆಯ ಚಿತ್ರಣವನ್ನು ಮಾಡುತ್ತದೆ. .”
ಬಿಡುಗಡೆ: ಮೀರಾ ಸಂಪಿಗೆ ಬರೆದ ಈ ವಾರದ ಕತೆ
“ಮುಂದೆ, ಆ ಮನೆಯಲ್ಲಿರಲಿಕ್ಕಾಗದೆ ಆಕೆ ಮನೆ ಖಾಲಿ ಮಾಡಿ ಹೋದಳು. ಅಡಿಗೆ ಮಾಡುವ ಕೆಲಸ ಸಿಕ್ಕಿದೆಯೆಂದು, ಸಂಬಳ ಚೆನ್ನಾಗಿದ್ದು, ಊಟ ಬಟ್ಟೆ ಖರ್ಚು ಕಳೆಯುತ್ತದೆಂದೂ, ಗಂಡನ ಖಾಯಿಲೆಗಾಗಿ ಮಾಡಿದ ಸಾಲ ತೀರಿಸುವುದಕ್ಕೆ ಸಹಾಯವಾಗುತ್ತದೆಂದು ಹೇಳಿದಳು. ಸಾಲ ಮುಗಿಯಲು ಅನೇಕ ವರ್ಷಗಳೇ ಬೇಕಾಗಬಹುದೆಂದೂ ತಿಳಿಸಿದಳು. ಅವಳ ಸಮಾಧಾನ, ಸ್ಥೈರ್ಯಗಳನ್ನು ಮೆಚ್ಚಿ ನಾನೂ ಕೆಲವು ಧೈರ್ಯದ ಮಾತನ್ನಾಡಿ ಅವಳಿಗೆ ವಿದಾಯ ಹೇಳಿದೆ. ಅಂತೂ ಹಲವು ವರುಷಗಳ ಹೊಡೆತ, ಬಡಿತದ ನರಕದಿಂದ ಆ ಜೀವಿಗೆ ಶಾಶ್ವತ ಬಿಡುಗಡೆ ದೊರೆಯಿತಲ್ಲಾ ಎಂದು ನೆಮ್ಮದಿಯ ಉಸಿರೆಳೆದೆ.”
ಸಂಸ್ಕೃತಿ ಕಥನವೇ ಆಗಿಬಿಡುವ ಬಾಲ್ಯದ ನೆನಪುಗಳ ಹೊತ್ತಿಗೆ
”ಬಾಲ್ಯದ ಅನುಭವಗಳನ್ನು ಬಿಡಿಬಿಡಿ ಅನುಭವ ಕಥನಗಳ ಮೂಲಕ ಸಾದರಪಡಿಸುವ ಜೋಯಪ್ಪ, ಈ ಅನುಭವಗಳನ್ನು ಒಂದು ಸಂಸ್ಕೃತಿ ಕಥನದ ಮಟ್ಟಕ್ಕೆ ಏರಿಸಿಬಿಡುತ್ತಾರೆ. ಸಂದ ಕಾಲದಲ್ಲಿ ನೆಲೆ ಊರಿದ್ದ ಒಂದು ಭೌಗೋಳಿಕ ಚೌಕಟ್ಟಿನ ಬದುಕನ್ನು; ಇದು ಎಲ್ಲಾ ಕುಟುಂಬಗಳ ಕಥೆ ಎಂಬಂತೆ ಹರಳು ಕಟ್ಟಿದ ಕಥನಗಳ ಮೂಲಕ ಜೋಯಪ್ಪ ಕಟ್ಟುತ್ತಾರೆ”
ಮೇದಿನಿ ಕವನ ಸಂಕಲನಕ್ಕೆ ಎಸ್.ಆರ್.ವಿಜಯಶಂಕರ್ ಮುನ್ನುಡಿ
“ಭಾವವು ಪ್ರೇಮವಾಗುವುದು ಸಹಜ ಬೆಳವಣಿಗೆ. ಪ್ರೇಮದ ಮುಂದಿನ ಹಂತ ಜೊತೆಯಾದ ಬದುಕು. ಅದು ವಾಸ್ತವ. ಆದರೆ ವಾಸ್ತವದಲ್ಲಿ ಭಾವದ ಬೀಜ ಭಿನ್ನ ರೂಪದಲ್ಲಿ ಇರುತ್ತದೆ. ಮೊಳಕೆ ಬೀಜದಿಂದ ಹುಟ್ಟಿದ್ದೇ ಆದರೂ ಅದು ಬೀಜವಲ್ಲ. ಲೋಕದ ಸತ್ಯದ ಇಂತಹ ಹಲವು ನೆಲೆಗಳ ಅರಿವು ಕವಯಿತ್ರಿಗಿದೆ.”
ಓಬೀರಾಯನ ಕಾಲದ ಕತೆಗಳ ಸರಣಿಯಲ್ಲಿ ತುದಿಯಡ್ಕ ವಿಷ್ಣ್ವಯ್ಯ ಬರೆದ ಕತೆ: ಶ್ಯಾನುಭಾಗ ಶ್ಯಾಮಣ್ಣನವರು
” ಶ್ಯಾನುಭಾಗ ಶ್ಯಾಮಣ್ಣನವರದ್ದು ಆನುವಂಶಿಕ ಶ್ಯಾನುಭಾಗತಿಕೆಯಾಗಿದ್ದುದರಿಂದ ಅವರ ಹಿರಿಯರು ಮನೆಯ ಪಕ್ಕದಲ್ಲೇ ಸರಕಾರಿ ಅಧಿಕಾರಿಗಳು ಉಳಿದುಕೊಳ್ಳಲೆಂದೇ ಒಂದು ಕಟ್ಟಡವನ್ನು ಕಟ್ಟಿಸಿದ್ದರು. ಅದರಲ್ಲಿ ಒಂದು ಅಡುಗೆ ಕೋಣೆ, ಮಲಗುವ ಕೋಣೆ, ಬರವಣಿಗೆ ನಡೆಸಲು ಮೇಜು ಕುರ್ಚಿಗಳಿರುವ ಮೊಗಸಾಲೆ ಮುಂತಾದ ಎಲ್ಲಾ ಅನುಕೂಲತೆಗಳು ಇದ್ದವು.”









