ಸಿಡಿಲು ಮರಿ:ಗಣಪತಿ ಮೊಳೆಯಾರರು ಬರೆದ ಸಣ್ಣ ಕಥೆ
“ಏನೂ ತಿಳಿಯದ ಹಳ್ಳಿಯ ಈ ಕುರುಬನಿಗೆ ಒಂದಿಷ್ಟು ವಿದ್ಯೆ ಕಲಿಸಿದಿರಿ. ದಂಡಿನಲ್ಲಿದ್ದು, ಕುದುರೆಯೋಡಿಸುವುದನ್ನೇ ಕಲಿತು, ನಡೆಯುವುದನ್ನೇ ಮರೆತುಬಿಟ್ಟಿದ್ದ ಈ ಕಾಲುಗಳಿಗೆ ಕುಣಿತ ಕಲಿಸಿದಿರಿ. ‘ಹೊಡಿ, ಕಡಿ, ಬಡಿ’ ಎನ್ನುವುದಕ್ಕೆ ಒಗ್ಗಿದ್ದ ನಾಲಿಗೆಗೆ ಒಂದಿಷ್ಟು ‘ಅರ್ಥ ಹೇಳುವ’ ಅಭ್ಯಾಸ ಮಾಡಿದಿರಿ” ಎಂದು ನುಡಿದನು.”
ಸುರೇಶ್ ಜೋಶಿ ಬರೆದ ಗುಜರಾತೀ ಸಣ್ಣ ಕಥೆ ‘ತೇಪೆ’
”ಅವನು ಸೂಜಿ ದಾರವನ್ನು ಕೈಯಲ್ಲಿ ಹಿಡಿದು ಮನೆಯ ಮುಂದಿರುವ ಬೀದಿ ದೀಪದ ಬೆಳಕಲ್ಲಿ ಹರಿದ ತನ್ನ ಕೋಟಿಗೆ ತೇಪೆ ಹಚ್ಚಲು ಎಷ್ಟು ಬಟ್ಟೆ ಬೇಕಾಗಬಹುದೆಂದು ಅಳತೆ ಮಾಡಿದ. ಚಾಪೆಯ ಕೆಳಗಿಟ್ಟ ಹರಿದ ಬಟ್ಟೆಯ ಗಂಟನ್ನು ಹೊರ ತೆಗೆದು ಆ ಕೋಟಿಗೆ ಸರಿ ಹೊಂದುವ ಬಟ್ಟೆ ನೋಡಿದ.”
ತಿಮ್ಮನಾಯಕನ ಫಿತೂರಿ:ಬೇಕಲ ರಾಮನಾಯಕರು ಬರೆದ ಸಣ್ಣ ಕತೆ
”ತಿಂಗಳ ಬೆಳಕಿನಲ್ಲಿ ಎತ್ತರವಾದ ಗಡಾಯಿಕಲ್ಲು ಮಸಕು ಮಸಕಾಗಿ ಕಾಣಿಸುತ್ತಿದ್ದಿತು. ಕೋಟೆಯೊಳಗಿಂದ ಉರಿಯುತ್ತಿದ್ದ ಒಂದು ಪಂಜು ಏನೋ ಸಂಕೇತ ಮಾಡಿತು. ಗಡದ ಕೆಳಗಿನ ಜಮಾಲಬಾದು ನಗರವೆಲ್ಲ ನಿದ್ದೆಯಲ್ಲಿ ಮೈಮರೆತಿತ್ತು. ಸುತ್ತಲೂ ಬೆಟ್ಟಗಳು ಕ್ರರಗಾಗಿ ಕಾಣಿಸುತ್ತಿದ್ದುವು.”
ಕಥೆಯೆಂಬ ಅನುರಾಗ, ಕಥೆಯೆಂಬ ಪಾಷಾಣ
”ಕನಸಲ್ಲಿ ಬಂದ ಅವಳು ಮರಳಿ ಹೋಗುವಾಗ ನನಗೆ ಎದೆ ನೋವಾದ ಹಾಗೆ ಅನಿಸುತ್ತಿತ್ತು. ಜೀವನಪೂರ್ತಿ ಜೊತೆಗಿರಬೇಕಾಗಿದ್ದ ಅನುರಾಗವೊಂದು ನಡುವಲ್ಲಿ ನೊಂದುಕೊಂಡು ಕೈ ತಿರುಗಿಸಿ ಹೊರಟು ಹೋದಂತೆ ಅನಿಸಿ ಕನಲಿ ಹೋಗಿದ್ದೆ. ನನ್ನ ಕಥೆ ಹೇಳುವ ಹುಚ್ಚು ನನ್ನ ಪ್ರೇಮಿಸುವ ಹುಚ್ಚಿನಷ್ಟೇ ನೋವಿನದ್ದು ಅನಿಸುತ್ತಿತ್ತು.”
ಬೇಕಲ ರಾಮನಾಯಕರು ಬರೆದ ಸಣ್ಣ ಕಥೆ ‘ಉಳ್ಳಾಲದ ರಾಣಿ’
”ರಾಣಿಯು ವಿದೇಶೀಯರ ಮೇಲೆ ಕಿಡಿ ಸೂಸುವ ಹೆಣ್ಣು. ರಾಜನಾದರೋ ಆ ಕಾಟಕರನ್ನು ಕಂಡರೆ ಸಿಡಿಮಿಡಿಕೊಳ್ಳುವ ಗಂಡು. ಆ ಸಿಂಹಿಣಿಗೂ ಈ ಶೃಗಾಲಕ್ಕೂ ಸರಿಬೀಳುವುದೆಂತು? ಬಂಗರಾಜನನ್ನು ಆ ಚೌಟ ಕುಮಾರಿ ಕೇವಲ ಪ್ರತಿಷ್ಠೆ ಗೌರವಕ್ಕಾಗಿ ವಿವಾಹವಾಗಿದ್ದಳು. ಗಂಡಹೆಂಡಿರಾಗಿ ಅವರೆಂದೂ ಒಟ್ಟಿಗೆ ಬಾಳಲಿಲ್ಲ. “
ಅಮೃತಬುತ್ತಿ:ಜಂಟಿ ಲೇಖಕರು ಬರೆದ ಸಮ್ಮಿಶ್ರ ಕಥೆ
‘ಸಮ್ಮಿಶ್ರ ಕಥೆ’ಯೆಂಬುದು ಸಮ್ಮಿಶ್ರ ಸರ್ಕಾರದಷ್ಟು ಚರ್ಚೆ ಮತ್ತು ಹೀಗಳಿಕೆಗಳಿಗೆ ತುತ್ತಾದ ಪ್ರಯೋಗವೇನಲ್ಲ. ಆದರೂ ಇಂತಹದೊಂದು ಪ್ರಯೋಗಕ್ಕೆ ಕೈ ಹಾಕುವ ಕೆಲಸವನ್ನು ಯಾರೂ ಜಾಸ್ತಿ ಮಾಡಿಲ್ಲ. ಬಹುಶಃ ಸಮ್ಮಿಶ್ರ ಸರ್ಕಾರ ರಚನೆಗಿಂತ ಹೆಚ್ಚಿನ ಕಸರತ್ತುಗಳನ್ನು ಮಾಡುವ ಅವಶ್ಯಕತೆಗಳು ಇಲ್ಲಿರಬಹುದೇನೋ.”
ಬರ್ಸಲೋರ್ ಬಾಬ್ರಾಯ: ಎಸ್.ವೆಂಕಟರಾಜ ಬರೆದ ಸಣ್ಣ ಕತೆ
”ಬಾಬ್ರಾಯನೇನೋ ಪಾರಾಗಿ ಬಂದ. ಬಂದು ತನ್ನವರು, ತನ್ನ ಜಾತಿಯವರು, ಮತದವರು ಎಂದು ತಿಳಿದುಕೊಂಡವರ ಬಳಿ ಬಂದು ಬಿದ್ದ. ಆದರೆ ಇದೇನು? ಯಾರೂ ಅವನನ್ನು ಕಣ್ಣೆತ್ತಿಯೂ ನೋಡಲಿಲ್ಲ! ಅವನ ದುಃಖ ದುರಂತಗಳನ್ನು ಯಾರೂ ವಿಚಾರಿಸಲಿಲ್ಲ. ಅವನನ್ನು ಮನುಷ್ಯ ಮನುಷ್ಯನೆಡೆಗೆ ನೋಡುವಂತೆಯೇ ನೋಡಲಿಲ್ಲ!”
“ಅಭಿರಾಮಿ”:ಶಾಂತಿ ಕೆ.ಅಪ್ಪಣ್ಣ ಬರೆದ ವಾರದ ಕಥೆ
”ಭಗವಂತನ ಸೃಷ್ಟಿಯಲಿ ಅತ್ಯಂತ ಅಪೂರ್ವವಾದದ್ದು ಈ ಕಿನ್ನರಿಗಳದ್ದೇ ಇರಬೇಕು. ಕಿನ್ನರಿಯ ದೇಹದಲ್ಲಿ ಗಂಡಿನ ಕಸುವು, ಹೆಣ್ಣಿನ ಲಾಲಿತ್ಯ ಎರಡೂ ಮೇಳೈಸಿ ಅದು ಸೃಷ್ಟಿಯ ಸೌಂದರ್ಯಕ್ಕೆ ಎಸೆದ ಸವಾಲಾಗಿತ್ತು. ಅದಕ್ಕೇ ಇರಬೇಕು, ಜಗತ್ತು ಅವರ ಪಾಲಿಗೆ ನಿರ್ದಯವಾಗಿ ನಡೆದುಕೊಳ್ಳುತ್ತಿರುವುದು!
’ದೊಡ್ಡಮನೆ ಈಶ್ವರಯ್ಯ’:ಬೇಕಲ ರಾಮನಾಯಕರು ಬರೆದ ಸಣ್ಣಕಥೆ.
”ಇಟ್ಟಲ ಪೇಟೆಯಿಂದ ಸುಮಾರು ಮೂರು ಹರದಾರಿ ಈಶಾನ್ಯಕ್ಕೆ ಪುಣಚೆ ಗ್ರಾಮವಿದೆ. ಇಟ್ಟಲ ಸೀಮೆಯ ಹದಿನೆಂಟು ದೇವಸ್ಥಾನಗಳಲ್ಲಿ ಒಂದಾದ ಮಹಿಷ ಮರ್ದಿನಿಯ ದೇಗುಲವು ಅಲ್ಲೆ ವಿರಾಜಿಸುತ್ತಿದೆ. ದೇವಿಯು ಉಟ್ಟ ಹಸುರು ಸೀರೆಯ ನೆರಿಗೆಗಳಂತೆ ತೆನೆಗಳಿಂದ ತೊನೆಯುವ ಹೊಲಗದ್ದೆಗಳು ಸುತ್ತಲೂ ಹರಡಿವೆ.









