Advertisement

Month: May 2024

ಲಾರ್ಡ್ ಕಾರ್ನ್ ವಾಲಿಸ್ ಮತ್ತು ಕ್ವೀನ್ ಎಲಿಜಬೆತ್: ಅಬ್ದುಲ್ ರಶೀದ್ ಬರೆದ ಹೊಸ ಕಥೆಯ ಪೂರ್ಣರೂಪ

“ಈಗಲೂ ಹಾಗೆಯೇ. ಅವಳು ಮಣಿಸಬೇಕು. ನಾನು ತಣಿಯಬೇಕು. ಅವಳಿಗೆ ಅಷ್ಟೇ ಸಾಕು. `ನಾನು ಬೇಟೆಯ ನಾಯಿ, ನೀನು ಓಡುತ್ತಿರುವ ಜಿಂಕೆ’ ಎಂದು ಮೂವತ್ತು ವರ್ಷಗಳಿಂದ ಅಟ್ಟಿಸಿಕೊಂಡು ಬೇಟೆಯಾಡುತ್ತಲೇ ಇರುತ್ತಾಳೆ. ಅವಳು ನನ್ನ ಪಾಲಿನ ದೇವರು. ಇಷ್ಟು ಹೇಳಿದ ಮೇಲೆ ನನ್ನ ಮತ್ತು ಅವಳ ಹುಚ್ಚು ಬೇಟೆಯ ಕುರಿತು ಓದುಗರಾದ ನಿಮಗೆ ಕುತೂಹಲವೂ ಉದ್ರೇಕವೂ ಏಕಕಾಲದಲ್ಲಿ ಉಂಟಾಗುತ್ತಿರಬಹುದು.”

Read More

ಸಿಕ್ಕು ನುಣುಚಿಕೊಳ್ಳುವ ಮೀನು ಬರಹ….: ಆಶಾ ಜಗದೀಶ್ ಅಂಕಣ

“ಬರೆದದ್ದೆಲ್ಲಾ ಹೊನ್ನಾಗಬೇಕೆಂದು ಬಯಸುವುದು ತಪ್ಪಾಗುತ್ತದೆ. ಶ್ರೇಷ್ಠ ಬರಹವನ್ನು ಸೃಷ್ಟಿಸುವುದು ಸಾಧ್ಯವಿಲ್ಲ. ಅದು ತಾನಾಗೆ ಹುಟ್ಟುತ್ತದೆ. ಮತ್ತು ಹುಟ್ಟಬೇಕು ಸಹ. ಬುದ್ಧಿಯ ಚಾತುರ್ಯ ಹುಬ್ಬೇರಿಸುವಂತೆ ಮಾಡಬಲ್ಲದು. ಆದರೆ ನಿಜವಾದ ಬರಹ ಓದುಗರ ಹೃದಯವನ್ನು ತಟ್ಟಬಲ್ಲದು. ಬರಹಗಾರನಾದವನಿಗೆ ಇದರ ಅರಿವು ಮತ್ತು ತಾಳ್ಮೆ ಇರಲೇಬೇಕು. ತಾಳ್ಮೆ ಇಲ್ಲದೇ ಬರಹಗಾರನಾಗಲಾರ.”

Read More

ಮಂಜುಳ ಡಿ. ಬರೆದ ಈ ದಿನದ ಕವಿತೆ

“ಪಕ್ಕದ ಹಚ್ಚ ಹಸುರ ಬೇಲಿ ಏರಿಳಿತಗಳ ಮಣ್ಣಿನ ಹಾದಿ ನೇಸರ ಕಸೂತಿ
ಬೇವಿನೆಲೆಗಳ ಮರ್ಮರ ಅರಿವಿಲ್ಲದೇ ಹೊಮ್ಮುವ ರಾಗಗಳು ಸಜೀವ ಸ್ಪರ್ಶ
ಜೀವನ ಸಮರ್ಪಣದ ಹಾದಿಯಿದು ರೂಢಿಯ ಹಾದಿಯಲ್ಲ”- ಮಂಜುಳ ಡಿ. ಬರೆದ ಈ ದಿನದ ಕವಿತೆ

Read More

ಕೊನೆಯೇ ಇಲ್ಲದ ಉಪಸಂಹಾರವು…

“ನಾನಾದರೋ ಹುಣ್ಣಿಮೆ ಇರುಳಿನ ತಿಯದಿಯಂದು ಮಂಗಳೂರಿಗೆ ಹೊರಡುವ ಹಡಗಲ್ಲಿ ಪ್ರಯಾಣದ ಟಿಕೇಟು ಕೊಂಡುಕೊಂಡು ಹಡಗಿನ ದಕ್ಕೆಯಲ್ಲಿ ಆಕಾಶನೋಡುತ್ತಾ ಅಂಗಾತ ಮಲಗಿದ್ದೆ. ಬೆಳದಿಂಗಳಿನ ಸಣ್ಣಗಿನ ಬೆಳಕು ದುಪ್ಪಟ ಹೊದ್ದ ಈತನ ಮುಖದ ಮೇಲೂ ಬೀಳುತ್ತಿತ್ತು. ಮಧ್ಯಾಹ್ನದಿಂದಲೂ ಈತನನ್ನು ನೋಡುತ್ತಲೇ ಇದ್ದೆ. ಹಡಗಿನ ಓಟಕ್ಕೆ ಸಣ್ಣಗೆ ಅಲುಗುತ್ತಿದ್ದರೂ, ಒಳಗೊಳಗೆ ಸಣ್ಣಗೆ ಕೆಮ್ಮುತ್ತಿದ್ದರೂ…”

Read More

ದಿನಕರನ ಕೊನೆಯ ಸಿಪ್: ಪ್ರಜ್ಞಾ ಮತ್ತಿಹಳ್ಳಿ ಲೇಖನ

“ಮಹಾನಗರಗಳಲ್ಲಿ ಕಚೇರಿಗಳ ದುಡಿತ ಮುಗಿಸಿದ ಜನರು ಮೆಟ್ರೊ, ಬಸ್ಸುಗಳಲ್ಲಿ ತುಂಬಿಕೊಂಡು ನಿಂತಲ್ಲೇ ಕಿವಿಗಿರಿಸಿಕೊಂಡ ಸೆಲ್ ಫೋನುಗಳಲ್ಲಿ ತಲ್ಲೀನವಾಗಿರುತ್ತಾರೆ. ಮೈಗೆ ಮೈ ಹತ್ತುವಂತೆ ನಿಂತಿದ್ದರೂ ಪ್ರತಿಯೊಬ್ಬರೊಳಗೂ ಸುತ್ತಲಿನಿಂದ ತುಂಬ ದೂರವಾದ, ಪ್ರತ್ಯೇಕವಾದ ಮತ್ತು ಕೇವಲ ಅವರದ್ದಷ್ಟೇ ಆದ ಖಾಸಗಿ ಜಗತ್ತೊಂದು ಅರಳಿಕೊಂಡಿರುತ್ತದೆ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ