Advertisement

Month: May 2024

ಡಾ.ನಾ.ಮೊಗಸಾಲೆ ಬರೆದ ಈ ದಿನದ ಕವಿತೆ: ಮುತ್ತು

“ಸಂಜೆ ಬೇಗನೆ ಬಂದು ಅಂಗಳದಲಿ ನಿಂತು
ನೋಡಿದೆನು ಇವಳು ಹೂ ಕೊಯ್ಯುವುದನು
ಕೊಯ್ಯುತ್ತ ಕೊಯ್ಯುತ್ತ ಬಿಟ್ಟಳು ಒಂದು ಮೊಗ್ಗು
ನಾಳೆ ಅರಳಲಿ ಅದು ನನಗೆ ಎಂದು!”- ಡಾ.ನಾ.ಮೊಗಸಾಲೆ ಬರೆದ ಈ ದಿನದ ಕವಿತೆ

Read More

ಒಂದು ನೆಲನೆಲ್ಲಿಯ ಕತೆ

“ಸಂಸ್ಕರಿಸಿ ಪೊಟ್ಟಣವಾಗಿಸಿದ ಆಹಾರದಲ್ಲಿ ಒಪ್ಪಿತ ಮಟ್ಟದಲ್ಲಿ ಪ್ರಿಸರ್ವೇಟಿವ್, ಎಸ್ಸೆನ್ಸ್ ಅಥವಾ ರಾಸಾಯನಿಕ ಬಣ್ಣ ಇರುತ್ತದೆ. ಒಟ್ಟಿನಲ್ಲಿ ಹತ್ತಾರು ವಿಧಗಳಲ್ಲಿ ಇವುಗಳೆಲ್ಲ ನಮ್ಮ ದೇಹವನ್ನು ಸೇರಿ ಘಾಸಿ ಮಾಡುತ್ತವೆ ಎಂಬ ಅಧ್ಯಯನಗಳನ್ನು ಓದುತ್ತ ನಾವು ಜಾಗೃತರಾಗಬೇಕು ಎಂದುಕೊಳ್ಳುತ್ತೇವೆ. ಸಾವಯವ ಬದುಕನ್ನು ಬಾಳಬೇಕು ಎಂದುಕೊಳ್ಳುತ್ತೇವೆ. ಆದರೆ ಮತ್ತೊಂದೆಡೆ ಬಹಳ ಸೌಜನ್ಯ ಮತ್ತು ಸಭ್ಯತೆಯಿಂದಲೇ ನಾವು ಗಿಡಗಳ ಮೇಲೆ ದಾಳಿ ಮಾಡುತ್ತೇವೆ.”

Read More

ಧನಪಾಲ ನಾಗರಾಜಪ್ಪ ಅನುವಾದಿಸಿದ ಪುಸ್ತಕದ ಕುರಿತು ಡಾ. ಮೈತ್ರೇಯಿಣಿ ಬರಹ

“ಸೃಜನಶೀಲ ಸಾಹಿತ್ಯದ ಭಾಗವಾಗಿ ಪರಿಗಣಿಸಲ್ಪಡುವ ಅಬಾಬಿಗಳು ಅಂತಃಕರಣ, ಶಾಂತಿ ಮತ್ತು ಸೌಹಾರ್ದತೆಯ ಮೈಲಿಗಲ್ಲುಗಳಾಗಿವೆ. ಆತ್ಮನೀರಿಕ್ಷಣೆ ಮಾದರಿಯ ಆತ್ಮಾವಲೋಕನ ಮತ್ತು ಆತ್ಮಾನುಸಂಧಾನದ ಮಾದರಿಗಳಾದ ಅಬಾಬಿಗಳು ಹೊಸ ಚೈತನ್ಯಶೀಲ ಬದುಕಿಗೆ ದಾರಿದೀಪಗಳಾಗಿವೆ. ಆತ್ಮೋನ್ನತಿಗೆ ಮತ್ತು ಆತ್ಮಗೌರವದ ಉತ್ಕರ್ಷಕ್ಕೆ ಹುರಿಗೊಳಿಸುವ ಮಾನವೀಯ ಜಿಜ್ಞಾಸೆಗಳಿಂದ ಆವೃತ್ತವಾದ ಅಬಾಬಿಗಳು ಸಾರ್ವಕಾಲಿಕ ಮೌಲ್ಯಗಳನ್ನು ಗರ್ಭಿಕರಿಸಿಕೊಂಡಿವೆ.”
ತೆಲುಗಿನ ಕವಿ ಷೇಕ್ ಕರೀಮುಲ್ಲಾ ಬರೆದ ಅಬಾಬಿಗಳನ್ನು ಧನಪಾಲ ನಾಗರಾಜಪ್ಪ ‘ಬದರ್ʼ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ಈ ಪುಸ್ತಕದ ಕುರಿತು ಡಾ. ಮೈತ್ರೇಯಿಣಿ ಬರಹ ನಿಮ್ಮ ಓದಿಗೆ.

Read More

ಜಾವಳಿ ನಾಟ್ಯಬಂಧದ ಅನಾವರಣ…

‘ಜಾವಳಿಯ ಪರಿಕಲ್ಪನೆಯು ಅಭಿನಯ ಪ್ರಧಾನವಾಗಿರುವುದಕ್ಕೆ ಇದೊಂದು ನಾಟ್ಯ ಬಂಧ. ಜಾವಳಿಯ ವಸ್ತು “ಶೃಂಗಾರ” ಮಧುರಭಾವ. ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಜಾವಳಿಗಳು ರಚಿತವಾಗಿವೆ. ಅವುಗಳ ವೈವಿಧ್ಯತೆಯೂ ರಮ್ಯಮನೋಹರವಾಗಿವೆ. ನೃತ್ಯಕ್ಷೇತ್ರದಲ್ಲಿ ಶೃಂಗಾರವೆಂದರೆ ಪರಿಪೂರ್ಣ ಅರ್ಪಣೆಯಲ್ಲದೆ ಮತ್ತೇನೂ ಅಲ್ಲ. ಅಷ್ಟೇ ಅಲ್ಲ. ನಾಯಕ-ನಾಯಕೀ ಭಾವವೇ ಜಾವಳಿಯ ಕೇಂದ್ರ ಬಿಂದು…’

Read More

ಹರೀಶ್ ಗೌಡ ತೆಗೆದ ಈ ದಿನದ ಚಿತ್ರ

ಈ ದಿನದ ಫೋಟೋ ತೆಗೆದವರು ಹರೀಶ್‌ ಗೌಡ. ಮೂಲತಃ ಕನಕಪುರದ ಹರೀಶ್‌ ಐಟಿ ಉದ್ಯೋಗಿಯಾಗಿದ್ದು, ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಪಕ್ಷಿ ವೀಕ್ಷಣೆ ಮತ್ತು ವನ್ಯಜೀವಿ ಛಾಯಾಗ್ರಹಣ ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ