ಇದು ಆಗುವುದೂ ಇಲ್ಲ, ಹೋಗುವುದೂ ಅಲ್ಲ…
ಹಾಗೆ ಆಡುವಾಗ ಅವನಲ್ಲಿ ಅಮ್ಮನಿಗೆ ತಾನು ಸುಳ್ಳು ಹೇಳುತ್ತಿದ್ದೇನೆ ಎಂಬ ಪಾಪಪ್ರಜ್ಞೆ ಇತ್ತು. ಅವನು ಆ ದಿನ ಮಧ್ಯಾಹ್ನ ಗೋವಿಂದಾಚಾರ್ಯರಲ್ಲಿ ಊಟ ಮುಗಿಸಿ ಒಂದರ್ಧ ಗಂಟೆ ಹರಟೆ ಹೊಡೆಯುತ್ತಾ ಕುಳಿತಾಗ ‘ಭಾವ, ನಾನು ಮಧ್ಯಾಹ್ನವೇ ಮನೆಗೆ ಊಟಕ್ಕೆ ಹೋಗಬೇಕಿತ್ತು. ಇನ್ನು ತಡಮಾಡಿದರೆ ಅಪ್ಪ ಅಮ್ಮನ ಮಾತು ಕೇಳುವುದು ಕಷ್ಟ’ ಎಂದು ಸುಮಾರು ಎರಡೂವರೆ ಗಂಟೆಯ ಸುಮಾರಿಗೇ ಗೋವಿಂದಾಚಾರ್ಯರ ಮನೆಯಿಂದ ಹೊರಟಿದ್ದ. ಹಾಗೆ ಹೊರಟವನು ನೇರವಾಗಿ ಮನೆಗೆ ಹೋಗದೆ ಮೇರಿಯ ಮನೆಗೆ ಹೋಗಿದ್ದ.
ಡಾ. ನಾ. ಮೊಗಸಾಲೆಯವರ “ಇದ್ದೂ ಇಲ್ಲದ್ದು” ಹೊಸ ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ