Advertisement

Month: May 2024

ಇದು ಆಸ್ಟ್ರೇಲಿಯನ್ ಮಹಿಳಾ ಕ್ರೀಡಾಪಟುಗಳಿಗೆ ಸೇರಿದ ವರ್ಷ!

ಇಪ್ಪತ್ತೊಂದನೇ ಶತಮಾನದಲ್ಲಿ ಕೂಡ ಹೊರದೇಶದವರಿಗೆ ಆಸ್ಟ್ರೇಲಿಯ ಅಂದರೆ ಆಂಗ್ಲೋ-ಆಸ್ಟ್ರೇಲಿಯಾ ಎಂಬ ಏಕತ್ವ ಮಾತ್ರ ಕಾಣುವುದು. ಎಲ್ಲವೂ ಆಂಗ್ಲೋ-ಯೂರೋಪಿಯನ್-ಅಮೇರಿಕನ್ ಆಗಿರುವ ಈ ದೇಶದಲ್ಲಿ ಈ ಮಣ್ಣಿನ ಮಕ್ಕಳಾದ ಅಬೊರಿಜಿನಲ್ ಜನರ ಸಂಸ್ಕೃತಿ ಮತ್ತು ತಿಳಿವಳಿಕೆಯ ಮಹತ್ವ ಬೆಳಕಿಗೆ ಬರಲು ಸಾಕಷ್ಟು ಅವಕಾಶವಾಗಿಲ್ಲ. ಇಂಥಾ ಸನ್ನಿವೇಶದಲ್ಲಿ ಮಹಿಳಾ ಕ್ರೀಡಾಪಟುವೊಬ್ಬರು ರೂಪುಗೊಳ್ಳುವುದು ಸರಳ ಮಾತಲ್ಲ.
ವಿನತೆ ಶರ್ಮಾ ಬರೆದ ‘ಆಸ್ಟ್ರೇಲಿಯ ಪತ್ರ’ ಇಲ್ಲಿದೆ.

Read More

ಕೋಮಲ ಗಾಂಧಾರ ಮತ್ತು ಪರ್ದಾ

ಕರೀಂ ಖಾನ್ ಮತ್ತು ಮಕ್ಕಳು ಬಳಸುವ ಸಿತಾರ್‌ನಲ್ಲಿ ೧೯ ಪರ್ದಾಗಳೇ ಇವೆ. ಯಾಕೆ ಇವರು ಇನ್ನೂ ಆಧುನಿಕತೆಯನ್ನು ಒಪ್ಪಿಕೊಂಡಿಲ್ಲ ಎಂದು ಎಲ್ಲರೂ ಕೇಳತೊಡಗಿದ್ದರು. ಕರೀಂ ಖಾನರಿಗೆ ಈ ಪ್ರಶ್ನೆ ಇಷ್ಟವಾಗುತ್ತಿರಲಿಲ್ಲ. ಆದರೆ ರಫೀಕ್ ಮತ್ತು ಶಫೀಕ್ ಈ ಕುರಿತು ಬಹಳಷ್ಟು ಚರ್ಚೆ, ಅಧ್ಯಯನ, ಪ್ರಯೋಗಗಳನ್ನು ಮಾಡಿದರು. ಹೊಸವಿಧಾನವನ್ನು ಒಪ್ಪಿಕೊಳ್ಳುವುದು ಸರಳವಾದ ವಿಚಾರ ಆಗಿರಲಿಲ್ಲ.
ಶೇಣಿ ಮುರಳಿ ಬರೆದ ರಫೀಕ್ ಖಾನ್ ಜೀವನ ಚರಿತ್ರೆ ‘ಖಾನ್ ಕಾಂಪೌಂಡ್’ ಕೃತಿಯ ಒಂದು ಅಧ್ಯಾಯ

Read More

ಪನೆಯಾಲ ರವಿರಾಜ ತೆಗೆದ ಈ ದಿನದ ಫೋಟೋ

ಈ ದಿನದ ಫೋಟೋ ತೆಗೆದವರು ಪನೆಯಾಲ ರವಿರಾಜ. ಯಕ್ಷಗಾನ ಕಲಾವಿದರಾಗಿದ್ದು ದಕ್ಷಿಣ ಕನ್ನಡದ  ಜೋಗಿಮೂಲೆ ಎಂಬಲ್ಲಿ ಕೃಷಿ ಮಾಡುತ್ತಿದ್ದಾರೆ. ಓದುವುದು ಮತ್ತು ಫೋಟೋಗ್ರಫಿ ಅವರ ಆಸಕ್ತಿ.‌ ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಫೋಟೋ ಕೂಡ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.
ನಮ್ಮ ಈ ಮೇಲ್‌ ವಿಳಾಸ: ks.kendasampige@gmail.com

Read More

ಜಿತೇಂದ್ರ ಬೇದೂರು ಬರೆದ ‘ಆಷಾಢ’ದ ಕವಿತೆ

“ಗೋಡೆ ಮೇಲೆ ತೆವಳುತಿದೆ ಬಸವನಹುಳು,
ಕೊನೆ ಕಾಣದ ಅಂಟು ರೇಖೆಯ ರಂಗವಲ್ಲಿ,
ಬಸವನ ಹುಳುವಿಗೆ ಸೆಡ್ಡು ಹೊಡೆದಂತೆ
ಆಷಾಢವೂ ತೆವಳುತಿದೆ.”- ಜಿತೇಂದ್ರ ಬೇದೂರು ಬರೆದ ಆಷಾಢದ ಕವಿತೆ

Read More

ಬೋನಿಗೆ ಬಂದನಾ ಇಲಿರಾಯನು

ನಮ್ಮೂರಿನಲ್ಲಿದ್ದಂತೆ ಈ ನಗರದಲ್ಲಿ ಗದ್ದೆ ಇದೆಯಾ? ಗೊಣಬೆ ಇದೆಯಾ? ಅಥವಾ ಭತ್ತದ ಕಣಜವೋ, ಅಕ್ಕಿ ಮೂಟೆಯೋ ಅವಕ್ಕೆ ಸಿಗುತ್ತಾ? ಅಂದ್ಮೇಲೆ ಯಾರಾದ್ರೂ ಚೂರುಪಾರು ತರಕಾರಿ ಬೆಳೆಯೋಣ ಅಂತ ಹೊರಟರೆ ಅದರಲ್ಲಿ ಬಿಡೋ ಕಾಯಿಗಳನ್ನುತಿನ್ನದೇ ಮತ್ತೇನು ಮಾಡಲು ಸಾಧ್ಯ. ಅಕ್ಕಿ ಭತ್ತ, ತರಕಾರಿ ಏನಾದರೂ ಸರಿ, ಹೊಟ್ಟೆಪಾಡು ನೋಡಿಕೊಳ್ಳಬೇಕು. ಆದರೂ ಈ ಸುಂಡಿಲಿಗಳು ಚಳ್ಳೇ ಹಣ್ಣು ತಿನ್ನಿಸುವುದರಲ್ಲಿ ಭಾರೀ ಹುಶಾರು.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ