Advertisement

Month: May 2024

ಶಿದ್ದಲಿಂಗೇಶ್‌ ಮತ್ತೂರ್ ತೆಗೆದ ಈ ದಿನದ ಫೋಟೋ

ಈ ದಿನದ ಫೋಟೋ ತೆಗೆದವರು ಶಿದ್ದಲಿಂಗೇಶ್‌ ಮತ್ತೂರ್‌. ಮೂಲತಃ ಧಾರವಾಡದವರು. ಖಾಸಗಿ ಕಂಪನಿಯೊಂದರಲ್ಲಿ ರೋಬೋಟಿಕ್‌ ಎಂಜುನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವನ್ಯಜೀವಿ ಛಾಯಾಗ್ರಹಣದಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಫೋಟೋ ಕೂಡ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.

ನಮ್ಮ ಈ ಮೇಲ್‌ ವಿಳಾಸ: ks.kendasampige@gmail.com

Read More

ಡಾ.ಕೆ. ಷರೀಫಾ ಬರೆದ ಈ ಭಾನುವಾರದ ಕಥೆ “ಹೀಗೊಂದು ಖುಲಾಹ್”

ಇತ್ತೀಚೆಗೆ ಅವನು ಯಾಕೆ ಮಾತು ಮಾತಿಗೆ ತಲ್ಲಾಖ್ ಕೊಡುತ್ತೇನೆಂದು ಹೆದರಿಸುತ್ತಲೇ ಇರುತ್ತಿದ್ದ. ನಾನೂ ಸುಮ್ಮನೇ ಮನೆಯಲ್ಲಿ ಸುಮ್ಮನೆ ಕೂಡುತ್ತಿರಲಿಲ್ಲ. ಟೇಲರಿಂಗ್ ಸೆಂಟರ್‌ನಲ್ಲಿ ಕೆಲಸ ಮಾಡಿ ಸಂಪಾದಿಸುತ್ತಿದ್ದೆ. ಅತ್ತೆಯವರು ಮಕ್ಕಳನ್ನು ನೋಡಿಕೊಳ್ಳತ್ತಿದ್ದರು. ಗಂಡ ಮಗಳು ಸಲ್ಮಾಗೆ ಒಳ್ಳೆಯ ಶಾಲೆಗೆ ಸೇರಿಸಿದ್ದನು. ಶೋಯೇಬ್‌ಗೆ ಇನ್ನೂ ಶಾಲೆಗೆ ಹಾಕಿರಲಿಲ್ಲ. ಮಾತು ಮಾತಿಗೆ ಹೊಡಿಬಡಿ ಮಾಡುವುದು, ಕೂಗಾಡುತ್ತಿದ್ದುದೇ ಅವಳಿಗೊಂದು ಸಮಸ್ಯೆಯಾಗಿತ್ತು.

Read More

ಹಲವು ಬದುಕಿನ ಕಥೆಗಳ ಎಳೆಗಳು

ತನ್ನ ತಂದೆ ಹೀಗೆ ಸಾಹುಕಾರು ಹೇಳಿದ ಕೆಲಸ ಮಾಡುತ್ತಾರೆ ಎಂದು ಮಗ ಯೋಚಿಸಿಯೂ ಇರಲಿಲ್ಲ. ಮನೆಯಲ್ಲಿ ಅವರ ಗತ್ತು ಗಾಂಭೀರ್ಯ ನೋಡಿದ್ದ ಮಗನಿಗೆ ಅಪ್ಪನ ಮಾತುಗಳು ಅರಗಿಸಿಕೊಳ್ಳಲು ಕಷ್ಟವಾಗಿತ್ತು. ಆಷ್ಟರೊಳಗೆ ಸಾಹುಕಾರರ ಮನೆ ಬಂದಿತು. ಸಾಹುಕಾರನ ಹೆಂಡತಿಯ ಎದುರಿಗೆ ಅಪ್ಪ ಕೈ ಕಟ್ಟಿ ಸಾಹುಕಾರರ ಬಗ್ಗೆ ಕೇಳಿದ್ದು ನೋಡಿ ಮಗನಿಗೆ ಕರುಳು ಹಿಂಡಿದಂತಾಗಿತ್ತು. ತನ್ನ ಅಪ್ಪನಿಗಿಂತ ಚಿಕ್ಕವಯಸ್ಸಿನ ಆ ಸಾಹುಕಾರ ಬಂದಾಗ ಅಪ್ಪ ಕೈ ಮುಗಿದು ಬಗೆ ಬಗೆಯಾಗಿ ಕೇಳಿಕೊಂಡಿದ್ದು ನೋಡಿ ಎದೆಯಲ್ಲಿ ಕೆಂಡ ಸುರಿದಂತಾಗಿತ್ತು.
ಪ್ರಶಾಂತ್‌ ಬೀಚಿ ಅಂಕಣ

Read More

ಸರಳ ಬರವಣಿಗೆ ಸಾಧ್ಯವಾದರೆ ಓದುವಿಕೆಯೂ ಸುಲಲಿತ

ಒಂದೇ ಶಬ್ದವನ್ನು ಸರಿಯಾಗಿಯೇ ಬೇರೆ ಬೇರೆ ರೀತಿಯಲ್ಲಿ ಬರೆಯಲು ಸಾಧ್ಯವಿದ್ದರೂ, ನಮಗೆ ಗೊತ್ತಿಲ್ಲದಂತೆಯೇ ಕನ್ನಡದಲ್ಲಿ ಕನ್ನಡ ಶಬ್ದಗಳ ಸ್ಪೆಲಿಂಗ್ ಇದೆ. ‘ತಂದೆʼಯನ್ನು ‘ತನ್ದೆ‘ ಎಂದು ಬರೆದರೆ ಅದು ‘ತಂದೆ’ಯ ತಪ್ಪು ಸ್ಪೆಲಿಂಗ್ ಆಗುತ್ತದೆ. ಇತ್ತೀಚೆಗೆ ಬಹಳಷ್ಟು ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬರೆಯುವಾಗ ಎರಡು ಮೂರು ಒತ್ತಕ್ಷರ ಬಳಸಬೇಕಾಗುತ್ತದೆ. ಅದು ಓದುವುದಕ್ಕೆ ಸ್ವಲ್ಪ ಕಷ್ಟವಾಗುತ್ತದೆ.  ಆದ್ದರಿಂದ ಕನ್ನಡದಲ್ಲಿ ಸ್ಪೆಲಿಂಗಿನ ಏಕರೂಪವನ್ನು ತರುವ ಅವಶ್ಯಕತೆ ಇದೆ, ಇಲ್ಲದಿದ್ದರೆ ಒಬ್ಬಬ್ಬರೂ ಒಂದೊಂದು ರೀತಿ ಬರೆದು ಗೊಂದಲವೇರ್ಪಡುತ್ತದೆ.
‘ಇಂಗ್ಲೆಂಡ್ ಪತ್ರ’ದಲ್ಲಿ ಕೇಶವ ಕುಲಕರ್ಣಿ ಓದುವಿಕೆ ಮತ್ತು ಅಕ್ಷರ ಜೋಡಣೆಯ ಕುರಿತು ಬರೆದಿದ್ದಾರೆ. 

Read More

ನವೋದಯ ದೀಪಕ್ಕೆ ಎಣ್ಣೆ ಹೊಯ್ದ ಕವಿ

ಸೇಡಿಯಾಪು ಕೃಷ್ಣಭಟ್ಟರಿಗೆ ಮಂಗಳೂರಿನಲ್ಲಿ ಪಂಡಿತ ಮುಳಿಯ ತಿಮ್ಮಪ್ಪಯ್ಯನವರ ಮಾರ್ಗದರ್ಶನ ಮತ್ತು ತರುಣ ಕವಿ ಕಡೆಂಗೊಂಡ್ಲು ಶಂಕರಭಟ್ಟರ ಗೆಳೆತನದ ಲಾಭವಾಯಿತು. ಅವರಿಬ್ಬರಿಂದ ಪ್ರೇರಣೆ ಪಡೆದು, ಮದ್ದಿನಂಗಡಿಯಲ್ಲಿ ಕುಳಿತೇ ಕನ್ನಡ – ಸಂಸ್ಕೃತ ಭಾಷೆಗಳನ್ನು ಖಾಸಗಿಯಾಗಿ ಅಧ್ಯಯನ ನಡೆಸಿ, ಮದರಾಸು ಸರ್ಕಾರ ನಡೆಸುತ್ತಿದ್ದ ‘ವಿದ್ವಾನ್’ ಪರೀಕ್ಷೆಯಲ್ಲಿ ಪಾಸಾದರು. ಆ ಪದವಿಯ ಬಲದಿಂದ 1929 ರಲ್ಲಿ ಸೈಂಟ್ ಅಲೋಷಿಯಸ್ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ ಸೇರಿಕೊಂಡು ಸುಮಾರು ಇಪ್ಪತ್ತು ವರ್ಷಗಳ ಕಾಲ ಕೆಲಸ ಮಾಡಿದರು.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ