Advertisement

Month: May 2024

ಪ್ರೇಮ ಮತ್ತು ವೇದನೆಯ ಸುತ್ತ ಸಾಗುವ ಆಸ್ಟ್ರಿಯಾದ ʻಅಮೋರ್ʼ ಚಿತ್ರ

ಆನ್‌ಳ ಆರೋಗ್ಯ ಹೆಚ್ಚು ಸೂಕ್ಷ್ಮವಾಗುವ ಹಂತ ಬೇಗನೇ ತಲುಪಿಬಿಡುತ್ತದೆ. ಚಿತ್ರದ ಬಹುಪಾಲು ಜಾರ್ಜ್‌ ಆನ್‌ಗೆ ಮಾಡುವ ಸೇವಾಕ್ರಿಯೆಗಳನ್ನು ವಿಸ್ತಾರವಾಗಿ ದಾಖಲಿಸುವುದನ್ನು ಮಾತ್ರ ಕಾಣುತ್ತೇವೆ. ತಿನಿಸುವುದು, ಕುಡಿಸುವುದು, ಹಾಸಿಗೆ, ಹೊದಿಕೆ ಸರಿಪಡಿಸುವುದು, ಡೈಪರ್‌ಗಳನ್ನು ಬದಲು ಮಾಡುವುದು, ಕಮೋಡ್‌ ಬಳಿಗೆ ಕರೆದೊಯ್ಯುವುದು ಮುಂತಾದವು. ಜಾರ್ಜ್ ಅವಳಿಗೆ ಆಹಾರ ತಿನ್ನಿಸುವ ಅಥವಾ ಕಮೋಡ್ ನಲ್ಲಿ ಕುಳಿತವಳನ್ನು ಎಬ್ಬಿಸಿ ತರುವುದೂ ಸೇರುತ್ತದೆ.

Read More

ಆರ್.ದಿಲೀಪ್ ಕುಮಾರ್ ಹೊಸ ಪುಸ್ತಕದ ಕುರಿತು ರವೀಂದ್ರನಾಯಕ್‌ ಬರಹ

ಹಳೆಗನ್ನಡದ ಪಠ್ಯಗಳನ್ನು ಓದಬೇಕು ಎಂಬ ಆಸೆಗೆ ಪೂರಕವಾಗಿ ದೊರೆತುದು ಎಚ್.ಎಸ್. ವೆಂಕಟೇಶ ಮೂರ್ತಿಯವರ ‘ಕುಮಾರವ್ಯಾಸ ಕಥಾಂತರ’. ಇದು ಕುಮಾರವ್ಯಾಸನ ಕಾವ್ಯಕ್ಕೆ ಹೊಸಬರಿಗೆ ಪ್ರವೇಶ ಮಾಡಲಿಕ್ಕೊಂದು ಸುಲಭದ ದಾರಿ ಅಂತ ಅನ್ನಿಸಿ ಆ ಕೃತಿಯನ್ನು ಓದಿದೆ.  ಓದಿನ ನಂತರ ನಿಜಕ್ಕೂ ನನಗೆ  ಕುಮಾರವ್ಯಾಸ ಹತ್ತಿರನಾದ. ತನ್ನ ಕಾವ್ಯದ ಗುಟ್ಟುಗಳನ್ನು ಅರ್ಥಗಳನ್ನು ನನಗೆ ಈಗ ಬಿಟ್ಟುಕೊಟ್ಟು ನನ್ನ ದಿನನಿತ್ಯದ ಗೆಳೆಯನೇ ಆಗಿದ್ದಾನೆ.
ಆರ್.ದಿಲೀಪ್ ಕುಮಾರ್ ಹೊಸ ಪುಸ್ತಕ ಪಚ್ಚೆಯ ಜಗುಲಿ ಕುರಿತು  ಬರೆದಿದ್ದಾರೆ ರವೀಂದ್ರನಾಯಕ್‌ ಸಣ್ಣಕ್ಕಿಬೆಟ್ಟು 

Read More

ಮರುಚಿಂತನೆಯ ಹೊರಪದರವೇ ಬದಲಾವಣೆ

ರಂಗಭೂಮಿಯಲ್ಲಿ ಪ್ರತಿಯೊಂದು ಅಂಗಗಳು ಒಂದೊಂದು ಮಜಲುಗಳಾಗಿ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಈ ಕ್ಷೇತ್ರದಲ್ಲಿ ಮರುಚಿಂತನೆಯ ಅಗತ್ಯವಿದೆ ಎನ್ನುವುದು ಒಪ್ಪತಕ್ಕ ಮಾತು. ಆದರೆ ಮರುಚಿಂತನೆಯ ಹೊಣೆಗಾರಿಕೆಯನ್ನು ಒಬ್ಬರು ಮತ್ತೊಬ್ಬರ ಹೆಗಲಿಗೆ ವರ್ಗಾಯಿಸುತ್ತ ಕೂರುವುದರಿಂದ ಪ್ರಯೋಜನವಿಲ್ಲ.  ಮೂರು ದೃಷ್ಟಿಕೋನಗಳ ನಿಟ್ಟಿನಲ್ಲಿ ಮರುಚಿಂತನೆಯ ಅಗತ್ಯವಿದೆ. ರಂಗನಟ, ರಂಗತಂಡ ಮತ್ತು ರಂಗಕರ್ಮಿಗಳ ದೃಷ್ಟಿಕೋನಗಳನ್ನು ಇಲ್ಲಿ ಗಮನಿಸಬೇಕಾಗುತ್ತದೆ. -ಪ್ರಭಾಕರ ರಾವ್ ಬರಹ ಇಲ್ಲಿದೆ.

Read More

ಪ್ರಾಣಿಲೋಕದ ಪ್ರೀತಿಸುಧೆಯ ನೆನಪುಗಳು

ನನ್ನ ತಂದೆ ಹಾವು ಹೊಡೆಯುವುದನ್ನು ಕೂಡ ಸಹಿಸಿಕೊಳ್ಳುತ್ತಿರಲಿಲ್ಲ. ಆದರೆ ಕಂದೂರಿ ಒಂದು ಶ್ರದ್ಧೆಯಾಗಿದ್ದರಿಂದ ಮನೆತನದಲ್ಲಿ ತಲೆತಲಾಂತರದಿಂದ ಬಂದ, ಅವರದೇ ನಂಬಿಕೆಯಿಂದ ಕೂಡಿದ ಧಾರ್ಮಿಕ ಕರ್ತವ್ಯ ನಿರ್ವಹಣೆಯನ್ನು ನಿಷ್ಠೆಯಿಂದ ಮಾಡುತ್ತಿದ್ದರು. ನನ್ನ ದಲಿತ ಮಿತ್ರ ತುಕಾರಾಮ ನನಗಿಂತ ಆರುವರ್ಷ ದೊಡ್ಡವರಿದ್ದರು. ನಾನು ನಾಲ್ಕನೆಯ ಇಯತ್ತೆ ಓದುವಾಗ ಅವರು ಮ್ಯಾಟ್ರಿಕ್ ಇದ್ದರು. ನಮ್ಮ ಮನೆಯ ಹತ್ತಿರದ ಹರಿಜನ ಬೋರ್ಡಿಂಗ್‌ನಲ್ಲಿ ಇದ್ದು ಓದುತ್ತಿದ್ದರು.

Read More

‘ಕಾವ್ಯಾ ಓದಿದ ಹೊತ್ತಿಗೆʼ: ಪುಟ್ಟ ಜಗತ್ತಿನ ದೇವರು ಅವನು

ಇದು ಭಾರತದ ಯಾವುದೇ ಊರಿನಲ್ಲೂ ನಡೆಯಬಹುದಾದ ಕಥೆಯೇ ಆದರೂ ಕೇರಳದ ಸಣ್ಣ ಊರಿನ ಪರಿಸರ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ನದಿ, ಮುರಿದ ದೋಣಿಗಳು, ಪಾಳು ಬಿದ್ದ ಮನೆಗಳು, ಅಂಗಡಿ ಮುಂದಿನ ಕಟ್ಟೆಗಳು, ಮಳೆ, ಕಥಕಳಿ ನೃತ್ಯ, ಜನಪದ, ಕಮ್ಯುನಿಸ್ಟ್ ಪಾರ್ಟಿ, ನಕ್ಸಲ್ ಭಯ ಇಂಥ ನೂರಾರು ಸಂಗತಿಗಳ ಜೊತೆಗೆ ಕಾದಂಬರಿ ಕುಸುರಿಗೊಂಡಿದೆ. ಎಲ್ಲಿಯೂ, ಒಂದೂ ಶಬ್ದವನ್ನು ವಾಚ್ಯವಾಗಿಸದೇ, ಮೇಲು ಮೇಲಿನ ಒಂದೂ ಸಂಗತಿಯನ್ನು ಹೇಳದೇ…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ