Advertisement

Month: May 2024

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಜಾಹ್ನವಿ ಬಿ.ಟಿ. ಬರೆದ ಕತೆ

ಈ ಮನು ಹಾಗೇನೆ ತಲೆಗೇನಾದ್ರೂ ಬಂತಂದ್ರೇ ಪಟ್ಟು ಹಿಡಿದು ಮಾಡದೆ ಬಿಡೋನಲ್ಲ. ಅಷ್ಟೇ ಜಲ್ದಿನೂ ಯಾವಾಗ್ಲೂ. ಅವನು ಹೋದಲ್ಲೆಲ್ಲಾ ನಗುವಿನ ಬುಗ್ಗೆ. ಅವನಿದ್ದಲ್ಲೆಲ್ಲಾ ಗದ್ದಲ, ಖುಷಿ, ಸಂಭ್ರಮ ಯಾವತ್ತೂ. ಸಾಮಾನ್ಯ ನಾವಿಬ್ರೂ ಬೈಕ್ನಲ್ಲಿ ಹೊರಟರೆ ತನಗಿಷ್ಟವಾದ ಸಿನಿಮಾದ್ದೋ ಇಲ್ಲ ನಾಟಕದ್ದೋ ಡೈಲಾಗ್ಸ್ ಹೇಳ್ತಿರ್ತಾನೆ. ಇಲ್ಲಾಂದ್ರೆ ಆಯಾ ಸಿಚುಯೇಷನ್‌ಗೆ ತಕ್ಕನಾಗಿ ಹಾಡ್ತಾ ಇರ್ತಾನೆ, ಅದೂ ಇಲ್ಲ ಅಂದ್ರೆ ದಾರೀಲಿ ಹೋಗೋ ಬರೋರ್ನೆಲ್ಲಾ ಕಾಡೋಕೆ ಶುರು ಮಾಡ್ತಾನೆ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಜಾಹ್ನವಿ ಬಿ.ಟಿ. ಬರೆದ ಕಥೆ “ನೆರೆ ಹಾವಳಿ” ನಿಮ್ಮ ಈ ಭಾನುವಾರದ ಓದಿಗೆ

Read More

ಕದ್ದವರು, ಕಳಕೊಂಡವರು, ಕ್ಷಮಿಸಿ ಎಂದವರು

ವಸಾಹತುಶಾಹಿ-ಸಂಬಂಧಿತ ಅನ್ಯಾಯಗಳು ಮತ್ತು ತಾರತಮ್ಯಗಳು ಆಸ್ಟ್ರೇಲಿಯದಲ್ಲಿ ನಡೆಯುತ್ತಲೇ ಬಂದಿದೆ. ಆಸ್ಟ್ರೇಲಿಯಾದ ಅಬೊರಿಜಿನಲ್ ಜನರ ಕುಟುಂಬಗಳಿಂದ ಬಲವಂತವಾಗಿ ಅವರ ಮಕ್ಕಳನ್ನು ಬೇರ್ಪಡಿಸಿ ಬಿಳಿಯರ ಕುಟುಂಬಗಳಿಗೆ ಕೊಟ್ಟು ಬಿಳಿಯರ ಸಂಸ್ಕೃತಿ, ಶಿಕ್ಷಣ, ಕ್ರೈಸ್ತಧರ್ಮಗಳಿಗೆ ಅನುಗುಣವಾಗಿ ಮಕ್ಕಳು ಬೆಳೆಯುವಂತಾಗಿದ್ದು ಎರಡು ನೂರು ವರ್ಷಗಳಿಂದ ನಡೆದ ವಿಷಯ ಕಣ್ಣಿಗೆ ರಾಚುವಂತಿದೆ. ಅಂತಹ ‘ಸ್ಟೋಲನ್ ಜನರೇಶನ್’ ನ ದನಿಯಾಗಿದ್ದ ಅಂಕಲ್ ಆರ್ಚಿ ರೋಚ್ ಕಳೆದ ವಾರಾಂತ್ಯದಲ್ಲಿ ತೀರಿಕೊಂಡರು.  ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಪತ್ರ

Read More

ಅಸ್ಪೃಶ್ಯ ಆಕಾಶದ ಚಲನೆ

ಚಲುವರಾಜನ ತಮ್ಮ ಚಂದ್ರ ಹಾಸ್ಟಲಲ್ಲೆ ಇದ್ದ. ಇನ್ನು ಚಿಕ್ಕವನು. ಬಾರೋ ಎಂದು ಕರೆದೊಯ್ದು ಎಲ್ಲ ಕ್ಲೀನ್ ಮಾಡಿಸಿದೆ. ಆ ಬ್ಯಾಗಲ್ಲಿದ್ದ ಅಕ್ಕಿ ಎಂತಾವು ನೋಡು ಎಂದೆ. ಯೋಗ್ಯ ಇದ್ದರೆ ಕೊಂಡೊಯ್ಯುವ ಎನಿಸಿತ್ತು. ಕಲ್ಲು ಮಿಶ್ರತ ಹುಳು ಹಿಡಿದ ಬೂಸ್ಲು ನುಚ್ಚಕ್ಕಿಯಾಗಿದ್ದವು. ಆ ನಾಯಿಗೆ ಇದನ್ನು ಬೇಯಿಸಿ ಹಾಕುತ್ತಿದ್ದರೆ ಈ ಪ್ರಾಧ್ಯಾಪಕರು.. ‘ನೀನೂ ಅದನ್ನೆ ಊಟ ಮಾಡಪ್ಪ’ ಎಂದಿದ್ದನಲ್ಲ ಮಹಾಶಯ! ಆ ನಾಯಿ ಮನೆ ಬಿಟ್ಟು ಹೋಗಿರುವುದರಲ್ಲಿ ನಮ್ಮ ಪಾಲು ಎಷ್ಟಿದೆಯೊ ಏನೊ!
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ 32ನೇಯ ಕಂತು.

Read More

ದೇಮಾಜಿ ಎಂಬ ಸುಂದರ ತಾಣದಲ್ಲೊಂದು ತಂಗುದಾಣ

ಅಸ್ಸಾಮಿನ ಹಳ್ಳಿಗಳು, ತಾಲೂಕುಗಳು ಅರುಣಾಚಲ ಪ್ರದೇಶದಂತೆ ಅಲ್ಲ. ಟಾರು ಮೆತ್ತಿಸಿಕೊಂಡ ವಿಶಾಲ ರಸ್ತೆಗಳು ಪ್ರಯಾಣಿಗರಿಗೆ ಹಿತವಾಗಿವೆ. ಒಂದೊಂದೇ ಮರಗಿಡಗಳು ಕಿಟಿಕಿಯಿಂದಾಚೆಗೆ ನನ್ನಿಂದ ದೂರದೂರವಾಗುತ್ತಿರುವುದನ್ನು ನೋಡುತ್ತಲೇ ಮುಂದೆ ಹೋಗುತ್ತಿದ್ದೆ. ಅಸ್ಸಾಂ ಪೂರ್ತೀ ತುಂಬಾ ಖುಷಿ ನೀಡುವ ನೋಟವೆಂದರೆ ಅಲ್ಲಿನ ಹೆಣ್ಣು ಮಕ್ಕಳು ವಯೋಬೇಧವಿಲದೆ ಸೀರೆಗಳನ್ನುಟ್ಟು ಸೈಕಲ್‌ಗಳಲ್ಲಿ ಓಡಾಡುತ್ತಾರೆ. ರಸ್ತೆಯ, ಅಲ್ಲಿನ ಜನರ, ವಾಹನಗಳ, ಇಕ್ಕೆಲಗಳ ಹಸುರಿನ ಉಸಿರಿನಂಥಾ ಹೆಣ್ಣುಗಳು.
ಅಂಜಲಿ ರಾಮಣ್ಣ ಬರೆಯುವ ಪ್ರವಾಸ ಅಂಕಣ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ