Advertisement

Month: May 2024

ಬಿಡದೇ ಸುರಿವ ಮಳೆಯೂ.. ಜೊತೆಗೆ ಕೊಡೆಯೂ: ಸುಮಾವೀಣಾ ಸರಣಿ

ಮಧ್ಯಾಹ್ನ ಶಾಲೆಯಲ್ಲಿ ಮಕ್ಕಳು ಪಾಠ ಕೇಳಬೇಕು. ಆಗ ಈ ರೌದ್ರಮಳೆಯಾಗಮನವಾಗುತ್ತಿತ್ತು. ನಾವು ಶಾಲೆಗೆ ಹೊರಡುವ ಸಮಯಕ್ಕೆ ಸರಿಯಾಗಿ ಶಾಲೆ ಬಿಡುವ ಕಡೆಯ ಅವಧಿಯಲ್ಲಿ ಮಳೆ ಹಾಜರಿ ಹಾಕುತ್ತಿತ್ತು. ಜೊತೆಗೆ ಮೈ ಕೊರೆಯುವ ಚಳಿ. ಈ ಕಾರಣಕ್ಕೆ ಮೊದಲ ಬೆಂಚ್ ಬೇಡ ಅನ್ನಿಸುತ್ತಿತ್ತು ಹಿಂದಿನ ಬೆಂಚ್ ಆದರೆ ಕಾಲ ಮೇಲೆ ಕಾಲು ಹಾಕಿ ಚಳಿ ಕಡಿಮೆ ಮಾಡಿಕೊಳ್ಳಬಹುದಲ್ಲ ಅನ್ನುವ ಉಪಾಯ ಅಷ್ಟೇ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

Read More

ನಿವೇದಿತಾ ಎಚ್‌. ಅನುವಾದಿಸಿದ ರೂಮಿಯ ಒಂದು ಕವಿತೆ

“ನಿನ್ನಲ್ಲಿ ಗುರುತಿಸಿದೆ ಆತ್ಮಸಖ್ಯವನು
ನನ್ನ ಪ್ರತಿಬಿಂಬಿಸುವ ಖಚಿತ ಕನ್ನಡಿಯನು
ಒಲವು ಮಾಸದ ಸಾಮ್ರಾಜ್ಯದ ದ್ವಾರವೆಲ್ಲಿದೆ
ಹುಡುಕಬೇಕು ನಾವು ಒಡಗೂಡಿ”- ನಿವೇದಿತಾ ಎಚ್‌ ಅನುವಾದಿಸಿದ ರೂಮಿಯ ಒಂದು ಕವಿತೆ

Read More

ಜಾರುವ ಜಡೆಯ ಹುಡುಗಿಯ ಪಾತ್ರ!: ಮಾರುತಿ ಗೋಪಿಕುಂಟೆ ಸರಣಿ

ಈ ಸಲ ತಲೆಗೆ ಜೋಡಿಸಿಕಟ್ಟಿದ್ದ ಜಡೆಕುಚ್ಚು ಬಿಚ್ಚಿಕೊಳ್ಳುವ ಸಂಭವವೆ ಜಾಸ್ತಿ ಇತ್ತು. ಹೇಗೊ ನೃತ್ಯವಂತೂ ಮುಗಿದಿತ್ತು. ಆದರೆ ನಂತರದ್ದು ಇನ್ನೊಂದು ಸಂಕಟ ದೃಶ್ಯ ಮುಂದುವರಿದಿತ್ತು. ಜಡೆ ಬೀಳಬಾರದು ಬಿದ್ದರೆ ಅಸಹ್ಯವಾಗಿ ಕಾಣುತ್ತದೆ ಎಂಬ ಭಯದಿಂದಲೆ ನಿಂತ ಸ್ಥಳದಲ್ಲಿಯೇ ನಿಂತು ಸಂಭಾಷಣೆ ಹೇಳುವುದಕ್ಕೆ ಪ್ರಾರಂಭಿಸಿದೆ. ನನ್ನ ಎದುರಿನ ಪಾತ್ರಧಾರಿ ಈ ಕಡೆಯಿಂದ ಆ ಕಡೆಯಿಂದ ಓಡಾಡುತ್ತ ಸಂಭಾಷಿಸುತ್ತಿದ್ದಾನೆ. ಆತ ನೀನು ಓಡಾಡುತ್ತ ಸಂಭಾಷಿಸು ಎಂಬ ಕಣ್ಸನ್ನೆ ನೀಡುತ್ತಿದ್ದಾನೆ. ಆದರೆ ನನ್ನ ಕಷ್ಟ ಅವನಿಗೆ ಅರ್ಥವಾಗುತ್ತಿಲ್ಲ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಒಂಭತ್ತನೆಯ ಕಂತು ನಿಮ್ಮ ಓದಿಗೆ

Read More

ಅಳಿಸಲಾಗದ ನೋವುಗಳು: ಅಶೋಕ ಪವಾರರ ಆತ್ಮಕತೆಯ ಪುಟಗಳು

ಅಪ್ಪ, ಧೋಂಡಿ ಮಾಮಾ ಮತ್ತು ಲಮಾಣಿಗಳು ಪೋಲೀಸರ ಕಾಲಿಗೆ ಬಿದ್ದರು. ‘‘ಸರಕಾರ„„ ಧಣ್ಯಾರ, ನಾವು ಕಳ್ಳತನ ಮಾಡಿಲ್ಲರಿ. ಬೇಕಾದರ ಯಾವ ದ್ಯಾವರ ಮುಂದೂ ಕರ್ಕೊಂಡ ಹೋಗರಿ. ನಮ್ಗ ಏನೂ ಗೊತ್ತಿಲ್ಲರಿ.’’ ಸಾಯೇಬ ಸೊಂಟದ ಬೆಲ್ಟ ಬಿಚ್ಚಿದ. ಧೋಂಡು ಮಾಮಾನ ಮುಕಳಿಗೆ ಎರಡು ಜಡಿದ. ಲಮಾಣ್ಯಾರ ಮುಕುಳಿ ಮ್ಯಾಲೂ ಒದ್ದರು. ಅವರು ಜೋರ-ಜೋರಾಗಿ ಬೊಬ್ಬಿ ಹೊಡೀತ ಕಾಲಿಗೆ ಬಿದ್ದರು. ಮುಂದ ಅಪ್ಪನ ಬೆನ್ನಿಗೂ ಜೋರಾಗಿ ಗುದ್ದಿದರು. ಅಪ್ಪ ತಲಿಗೆ ಚಕ್ಕರ ಬಂದ ಬಿದ್ದ.
ಚಂದ್ರಕಾಂತ ಪೋಕಳೆ ಅನುವಾದಿಸಿದ ಮರಾಠಿ ಲೇಖಕ ಅಶೋಕ ಪವಾರರ ಆತ್ಮಕತೆ “ಬಿಡಾರ”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ