ಅಪ್ಪಂದಿರ ದಿನಕ್ಕೆ ರಾಘವೇಂದ್ರ ಈ ಹೊರಬೈಲು ಬರೆದ ಕಿರುಗವಿತೆಗಳು
“ನಗು ಅನ್ನೋ ಅಂಗಿ ಒಳಗೆ
ನೋವು ಮೋಸ ಕೋಪ
ಎಲ್ಲಾನೂ ಮುಚ್ಚಿಟ್ಕಂಡಿರ್ತಾರೆ
ಅಂದು ನಕ್ಕ ಅಪ್ಪನ ನಗುವಿನೊಳಗೆ
ಏನಿದೆ ಅನ್ನೋದೇ ಅರ್ಥ ಆಗಲಿಲ್ಲ” -ಅಪ್ಪಂದಿರ ದಿನಕ್ಕೆ ರಾಘವೇಂದ್ರ ಈ ಹೊರಬೈಲು ಬರೆದ ಕಿರುಗವಿತೆಗಳು
Posted by ಕೆಂಡಸಂಪಿಗೆ | Jun 16, 2025 | ದಿನದ ಕವಿತೆ |
“ನಗು ಅನ್ನೋ ಅಂಗಿ ಒಳಗೆ
ನೋವು ಮೋಸ ಕೋಪ
ಎಲ್ಲಾನೂ ಮುಚ್ಚಿಟ್ಕಂಡಿರ್ತಾರೆ
ಅಂದು ನಕ್ಕ ಅಪ್ಪನ ನಗುವಿನೊಳಗೆ
ಏನಿದೆ ಅನ್ನೋದೇ ಅರ್ಥ ಆಗಲಿಲ್ಲ” -ಅಪ್ಪಂದಿರ ದಿನಕ್ಕೆ ರಾಘವೇಂದ್ರ ಈ ಹೊರಬೈಲು ಬರೆದ ಕಿರುಗವಿತೆಗಳು
ಅದ್ಯಾವ ಪುಣ್ಯಾತಗಿತ್ತಿ ಅಬ್ಬರಿಸಿದಳೋ ಗೊತ್ತಿಲ್ಲ “ಯಲ್ಲವ್ವ ಬಂಗಾರದ ಮಳೆ ಹರಸಾಕತ್ತಾಳ ಯಾರಿಗೆ ಸಿಗತೈತಿ ಅವರ ಬಾಳು ಬಂಗಾರ ಆಗತೈತಿ” ಇದೊಂದು ಮಾತು ಬರಸಿಡಿಲು ಬಡಿದಂಗ ಆತು. ಸೀಟಿನ ಚಿಂತ್ಯಾಗ ಮುಕರಿಬಿದ್ದಿದ್ದ ಮಂದಿ ಹುಯ್ಯಂತ ಮ್ಯಾಲಕ್ಕೆತ್ತು. ಅವಳು ಇವಳು ಯಾರಿಗೂ ಯಾರು ಕಾಣಲಿಲ್ಲ. ಹಾರಾಡಿ ಬೀಳುತ್ತಿದ್ದ ಸರದ ಗುಂಡು ಆರಿಸಲಿಕ್ಕ ಮುಗಿಬಿದ್ದರು. ಅವರ ಮ್ಯಾಲ ಇವರು ಇವರ ಮ್ಯಾಲ ಅವರು ನೋಡ ನೋಡುವದ್ರೊಳಗ ಕಾಲ್ತುಳಿದ ಗದ್ದಲ ಬಸ್ಸನ್ನು ನುಂಗಿಕೊಂಡಿತು. ಬಿಸಲಿನ ಜಳದೊಳಗ ರಕ್ತದ ವಾಸನೆ ಬಡಿಯತೊಡಗಿತು.
ಆನಂದ ಭೋವಿ ಬರೆದ ಈ ಭಾನುವಾರದ ಕತೆ “ದೇವರಿಗೂ ಒಂದು ಟಿಕಿಟು”
Posted by ಡಾ. ವಿನತೆ ಶರ್ಮ | Jun 14, 2025 | ಅಂಕಣ |
ವಿಮಾನ ಡಿಕ್ಕಿ ಹೊಡೆದ ಆಸ್ಪತ್ರೆ, ಮೆಡಿಕಲ್ ಕಾಲೇಜು ಹಾಸ್ಟೆಲ್ನಲ್ಲಿದ್ದ ಕೆಲವರು ಏನಾಗುತ್ತಿದೆ ಎಂದು ಕೇಳುತ್ತಾ ಆ ಪ್ರಶ್ನೆಗೊಂದು ಕೊನೆ ಚುಕ್ಕೆ ಇಡದೆಯೆ ಹೋಗಿದ್ದಾರೆ. ರೆಸ್ಟ್ ಇನ್ ಪೀಸ್. ಆತ್ಮಕ್ಕೆ ಶಾಂತಿ ಸಿಗಲಿ. ಕಣ್ಣೀರು, ದಿಗ್ಭ್ರಮೆ, ಪುಂಖಾನುಪುಂಖ ಪ್ರಶ್ನೆಗಳು, ಎಲ್ಲರೂ ಹುಡುಕುತ್ತಿರುವ ಉತ್ತರಗಳ ಸಾಗರ ಅಪ್ಪಳಿಸಿದೆ. ಅದ್ಯಾವುದೊ ಕರುಣಾಳು ಬೆಳಕು ಒಬ್ಬನೇ ಒಬ್ಬ ಪ್ರಯಾಣಿಕನನ್ನು ಕೈಹಿಡಿದು ನಡೆಸಿ ಕಾಪಾಡಿದೆ. ಅವನ ಕಥೆ ಅಪನಂಬಿಕೆಗಳ ಲೋಕದಲ್ಲಿ ಉಳಿದ ಒಂದೇ ಒಂದು ಹುಲ್ಲುಕಡ್ಡಿ ಸತ್ಯವಾಗಿದೆ. ಇದೇನಿದು ಮಿಥ್ಯ-ಸತ್ಯಗಳ ಲೋಕವಿದು!
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
Posted by ಡಾ. ಎಂ. ವೆಂಕಟಸ್ವಾಮಿ | Jun 14, 2025 | ಸಾಹಿತ್ಯ |
ಮಣಿ, “ಸ್ವಾಮಿ ಇಲ್ಲೇ ಹುಟ್ಟಿದ್ದು. ಇಲ್ಲೇ ಸಾಯುವುದು. ಆ ಕಾಲದಲ್ಲಿ ನಾವು ಮೈನಿಂಗ್ ಕಾಲೋನಿಗಳನ್ನು ಬಿಟ್ಟು ಹೊರಕ್ಕೆ ಹೋಗ್ತಾ ಇರಲಿಲ್ಲ. ಈಗ ಆಗಲ್ಲವಲ್ಲ. ಕಾಲೋನಿಗಳಲ್ಲಿ ಇರುವವರೆಲ್ಲ ಕನ್ನಡ ಮಾತಾಡ್ತಾರೆ. ಕನ್ನಡ ಕಲಿತುಕೊಂಡಿದ್ದಾರೆ. ಸಾವಿರಾರು ಜನ ಬೆಂಗಳೂರಿನಲ್ಲಿ ಸೆಟ್ಲ್ ಆಗಿದ್ದಾರೆ. ಅದೇ ರೀತಿ ಸಾವಿರಾರು ಹೆಣ್ಣುಮಕ್ಕಳು ಗಂಡುಮಕ್ಕಳು ಕೆಜಿಎಫ್ನಿಂದ ಬೆಂಗಳೂರಿಗೆ ದಿನನಿತ್ಯ ರೈಲ್ಗಳಲ್ಲಿ ಕೆಲಸಕ್ಕೆ ಹೋಗಿಬರ್ತಾರೆ. ಕಾಲ ಬದಲಾಗಿದೆ ಸ್ವಾಮಿ” ಎಂದ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ತೇಳನೆಯ ಕಂತು ನಿಮ್ಮ ಓದಿಗೆ
Posted by ಡಾ. ಎಲ್.ಜಿ. ಮೀರಾ | Jun 13, 2025 | ಅಂಕಣ |
ನಮ್ಮ ಜೀವನವೆಂಬ ವಾಹನದ ಚಾಲಕಪೀಠದಲ್ಲಿ ಯಾರಿದ್ದಾರೆ? ನಾವೋ ಅಥವಾ ಬೇರೆ ಯಾರಾದರೂ ಅಧಿಕಾರಸ್ಥರೋ? ಗಂಡಾಳಿಕೆಯ ಸಮಾಜಗಳಲ್ಲಿ ಹೆಣ್ಣು ತನ್ನ ಜೀವನದ ಚಾಲಕ ಪೀಠದಲ್ಲಿ ಕುಳಿತಿದ್ದು ತೀರಾ ಅಪರೂಪ. ಅವಳು ಏನು ತಿನ್ನಬೇಕು, ಕುಡಿಯಬೇಕು, ಯಾವ ಬಟ್ಟೆ ತೊಡಬೇಕು ಮುಂತಾದ ಸಾಧಾರಣ, ದೈನಿಕ ಸಂಗತಿಗಳಿಂದ ಹಿಡಿದು ಓದು, ಕೆಲಸ, ಮದುವೆ, ಆಸ್ತಿಗಳಿಕೆಗಳಂತಹ ಮುಖ್ಯ ವಿಷಯಗಳ ತನಕ ಮನೆಯ ಗಂಡಸರೋ ಅಥವಾ ಅವರ ಪ್ರತಿನಿಧಿಗಳಾದವರೋ ನಿರ್ಧರಿಸುವ ಕಾಲ ಅನೇಕ ಶತಮಾನಗಳ ತನಕ ಇತ್ತಲ್ಲ?
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
